ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಎಸ್‌ಐಟಿ ತನಿಖೆ! ಸೌಜನ್ಯ ಪ್ರಕರಣಕ್ಕೆ ಅಲ್ಲ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಗೃಹ ಸಚಿವ ಪರಮೇಶ್ವರ್ ತಿಳಿಸಿದಂತೆ ಈ ಪ್ರಕರಣದ ತನಿಖೆಗೆ ವಿಶೇಷ ತಂಡ (SIT) ರಚನೆಯಾಗಿದೆ, ಸೌಜನ್ಯ ಪ್ರಕರಣ ಸೇರಲ್ಲ.

  • ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಎಸ್‌ಐಟಿ ತನಿಖೆ
  • ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ: ಸೌಜನ್ಯ ಪ್ರಕರಣ ಇಲ್ಲ
  • ಹಿರಿಯ ಐಪಿಎಸ್‌ ಅಧಿಕಾರಿ ನೇತೃತ್ವದ ತನಿಖಾ ತಂಡ ರಚನೆ

ಧರ್ಮಸ್ಥಳದಲ್ಲಿ (Dharmasthala) ಶವಗಳನ್ನು ಗುಪ್ತವಾಗಿ ಹೂತಿಟ್ಟಿರುವ ಬಗ್ಗೆ ಬೆಳಕಿಗೆ ಬಂದ ಪ್ರಕರಣ ತೀವ್ರ ಚರ್ಚೆಗೆ ಕಾರಣವಾಗಿದ್ದು, ಈ ವಿಷಯದಲ್ಲಿ ಸರ್ಕಾರ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್ (G. Parameshwar) ಅವರು, ಈ ಪ್ರಕರಣವನ್ನು ಸೌಜನ್ಯ (Soujanya Case) ಹತ್ಯೆ ಪ್ರಕರಣದ ಜೊತೆಗೆ ಸೇರಿಸುವ ಪ್ರಶ್ನೆಗೆ ಸ್ಪಷ್ಟನೆ ನೀಡಿದರು. ಅವರು ಹೇಳಿದಂತೆ, “ಸೌಜನ್ಯ ಪ್ರಕರಣವನ್ನು ಈ ತನಿಖೆಯೊಳಗೆ ಸೇರಿಸುವ ಪ್ರಶ್ನೆಯೇ ಇಲ್ಲ. ನಾವು ಕೇವಲ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣವನ್ನು ಮಾತ್ರ ಎಸ್‌ಐಟಿ ತನಿಖೆಗೆ ಒಪ್ಪಿಸಿದ್ದೇವೆ.”

ಇದನ್ನೂ ಓದಿ: ರೈತರಿಗೆ ಹೊಸ ಸೌಲಭ್ಯ! ಜಮೀನಿನ ಸರ್ವೆ ನಂಬರ್ ಒಂದೇ ಕ್ಲಿಕ್‌ನಲ್ಲಿ ತಿಳಿಯಿರಿ

ಈ ವಿಶೇಷ ತನಿಖಾ ತಂಡವನ್ನು ಹಿರಿಯ ಐಪಿಎಸ್‌ ಅಧಿಕಾರಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ರಚಿಸಲಾಗಿದೆ. ಈ ತಂಡದಲ್ಲಿ ಅನುಚೇತ್, ಸೌಮ್ಯಲತಾ ಮತ್ತು ಜಿತೇಂದ್ರ ಕುಮಾರ್ ದಯಾಮಾ ಸೇರಿದಂತೆ ಐಪಿಎಸ್‌ ಅಧಿಕಾರಿಗಳು ಇದ್ದಾರೆ. ತನಿಖೆಯು ಸ್ಥಳದ ಸ್ಥಿತಿಗತಿ ಆಧಾರಿತವಾಗಿ ಮುಂದಾಗಲಿದೆ ಎಂದು ಅವರು ಹೇಳಿದರು.

ಪರಮೇಶ್ವರ್ ಅವರ ಮಾತಿನ ಪ್ರಕಾರ, “ಪ್ರಾಥಮಿಕವಾಗಿ ಠಾಣಾ ಮಟ್ಟದಲ್ಲಿ ಎಫ್‌ಐಆರ್ ದಾಖಲಾಗಿದೆ. ಆದರೆ ಪ್ರಕರಣ ತೀವ್ರ ಗಂಭೀರತೆಯನ್ನು ಪಡೆದುಕೊಂಡ ಹಿನ್ನೆಲೆಯಲ್ಲಿ, ಉನ್ನತ ಮಟ್ಟದ ತನಿಖೆ ಅವಶ್ಯಕವಾಗಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ಹಾಗೆಯೇ ಯಾವುದೇ ರಾಜಕೀಯ ಒತ್ತಡ ಇಲ್ಲದೆ ತನಿಖೆ ನಡೆಯಲಿದೆ.” ಎಂದಿದ್ದಾರೆ

ಇದನ್ನೂ ಓದಿ: ಇಂತಹ ರೇಷನ್ ಕಾರ್ಡುಗಳು ರದ್ದು! ರಾಜ್ಯ ಸರ್ಕಾರದಿಂದ ಕಠಿಣ ಕ್ರಮ

ಈ ಸಂಬಂಧ ಸರ್ಕಾರವು ಯಾವುದೇ ವಿಷಯವನ್ನು ಮುಚ್ಚಿಡುವ ಉದ್ದೇಶವಿಲ್ಲ. ಸಾರ್ವಜನಿಕರ ಪ್ರಶ್ನೆಗಳು, ಶಂಕೆಗಳಿಗೆ ಉತ್ತರ ನೀಡುವ ಹಾಗೂ ಸತ್ಯವನ್ನು ಹೊರ ತರಬೇಕೆಂಬ ಜವಾಬ್ದಾರಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈಗ ತನಿಖೆ ಹೇಗೆ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

SIT probe begins in Dharmasthala secret burial case

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories