ಇಂತಹವರ ಬಿಪಿಎಲ್ ಕಾರ್ಡ್ ಕೂಡಲೇ ರದ್ದುಗೊಳಿಸಿ; ಸಿಎಂ ಕಟ್ಟುನಿಟ್ಟಿನ ಆದೇಶ
Ration Card : ಅನರ್ಹರು ಕೂಡ ಬಿಪಿಎಲ್ ಪಡಿತರ ಚೀಟಿ ಹೊಂದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಂತವರ ಬಿಪಿಎಲ್ ಕಾರ್ಡ್ ರದ್ದತಿಗೆ ಸರ್ಕಾರ ಮುಂದಾಗಿದೆ.
- ಅನರ್ಹರ ಬಿಪಿಎಲ್ ಕಾರ್ಡ್ ಕೂಡಲೇ ರದ್ದುಗೊಳಿಸಿ ಎಂದು ಖಡಕ್ ಆದೇಶ
- ಆದಾಯ ತೆರಿಗೆ ಪಾವತಿಸುವ, ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದು
- ಅನರ್ಹರು ತಾವಾಗಿಯೇ ಬಿಪಿಎಲ್ ಕಾರ್ಡ್ ಸೆರೆಂಡರ್ ಮಾಡಲು ಅವಕಾಶ
Ration Card : ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಬಿಪಿಎಲ್ ಕಾರ್ಡ್ ಹೊಂದಿರುವ ಬಡತನ ರೇಖೆಗಿಂತ ಕೆಳಗಿರುವವರಿಗೆ ಮೂಲಸೌಕರ್ಯಗಳನ್ನು ಒದಗಿಸಿಕೊಡುತ್ತಿವೆ. ಅದರಲ್ಲೂ ಆಹಾರ ಧಾನ್ಯಗಳ ವಿತರಣೆ ಮಾಡಲಾಗುತ್ತಿದೆ.
ಸಾಕಷ್ಟು ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ ಇದು ಹೆಚ್ಚು ಅನುಕೂಲವಾಗಿದೆ. ಆದರೆ ನಿಜಕ್ಕೂ ಯಾರಿಗೆ ಈ ಪ್ರಯೋಜನ ಸಿಗಬೇಕೋ ಅವರಿಗೆ ಸಿಗುತ್ತಿಲ್ಲ ಅದರ ಬದಲು ಅನರ್ಹರು ಕೂಡ ಬಿಪಿಎಲ್ ಪಡಿತರ ಚೀಟಿ ಹೊಂದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಂತವರ ಬಿಪಿಎಲ್ ಕಾರ್ಡ್ ರದ್ದತಿಗೆ (Ration Card Cancellation) ಸರ್ಕಾರ ಮುಂದಾಗಿದೆ.
ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣದ ಬಗ್ಗೆ ಬಂತು ನೋಡಿ ಗುಡ್ ನ್ಯೂಸ್!
ಅನರ್ಹರ ಬಿಪಿಎಲ್ ಕಾರ್ಡ್ ರದ್ದುಪಡಿಸಲು ಸಿಎಂ ಖಡಕ್ ನಿರ್ಧಾರ
ಇತ್ತೀಚಿಗೆ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಸಮಾಲೋಚನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪಡಿತರ ಚೀಟಿಗೆ ಸಂಬಂಧಪಟ್ಟಂತೆ ಸಾಕಷ್ಟು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅವುಗಳಲ್ಲಿ ಅನರ್ಹರ ಬಿಪಿಎಲ್ ಕಾರ್ಡ್ ರದ್ದುಪಡಿ ಕೂಡ ಒಂದು.
ಹೌದು, ರಾಜ್ಯದಲ್ಲಿ ಕೋಟ್ಯಾಂತರ ಜನರು ಬಿಪಿಎಲ್ ಕಾರ್ಡ್ ಮೂಲಕ ಆಹಾರ ಧಾನ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ ಜೊತೆಗೆ ಸರ್ಕಾರದ ಹಲವು ಯೋಜನೆಗಳ ಪ್ರಯೋಜನವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅಂಥವರ ರೇಷನ್ ಕಾರ್ಡ್ ಅನ್ನು ಹಂತ ಹಂತವಾಗಿ ರದ್ದುಪಡಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಖಡಕ್ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಸರ್ಕಾರ ಸುಮಾರು 4,44,48,294 ಫಲಾನುಭವಿಗಳಿಗೆ 4692 ಕೋಟಿ ಗಳಷ್ಟು ಅನುದಾನ ನೀಡಿದೆ. ಅಂದರೆ ಅಕ್ಕಿಯ ಬದಲು ನಗದು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ.
ಈ ನಡುವೆ ಅನರ್ಹರು ಕೂಡ ಸರ್ಕಾರದ ಅನ್ನಭಾಗ್ಯ (Annabhagya Scheme) ಹಾಗೂ ಇತರ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿರುವುದು ಕಂಡುಬಂದಿದ್ದು, ಅಂತವರ ಕಾರ್ಡ್ ರದ್ದುಪಡಿಗೆ ತೀರ್ಮಾನಿಸಲಾಗಿದೆ.
ರೇಷನ್ ಕಾರ್ಡ್ ನಲ್ಲಿ ಕರೆಕ್ಷನ್ ಮಾಡೋಕೆ ಬಂತು ಬಿಗ್ ಅಪ್ಡೇಟ್! ಏನೆಲ್ಲಾ ಬೇಕು?
ರದ್ದುಪಡಿಸುವ ಮುಂಚೆ ನೋಟಿಸ್ ಕೊಡಿ?
ಇನ್ನು ಅನರ್ಹರು ತಾವಾಗಿಯೇ ಆಹಾರ ಇಲಾಖೆಗೆ ತಮ್ಮ ಬಿಪಿಎಲ್ ಕಾರ್ಡ್ ಸಲ್ಲಿಕೆ ಮಾಡಲು ಅವಕಾಶ ಕೊಡಬೇಕು ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿದ್ದು ಅದು ಸರ್ಕಾರದ ಗಮನಕ್ಕೆ ಬಂದಿದ್ದರೆ ತಕ್ಷಣ ಅಂತವರಿಗೆ ನೋಟಿಸ್ ಜಾರಿಗೊಳಿಸಿ ನಂತರ ಅವರ ಬಿಪಿಎಲ್ ಕಾರ್ಡ್ ರದ್ದು ಪಡಿಸಬೇಕು. ತಮ್ಮ ಬಳಿ ಇರುವ ಬಿಪಿಎಲ್ ಕಾರ್ಡನ್ನು ಸರ್ಕಾರಕ್ಕೆ ಒಪ್ಪಿಸಲು ಅವಕಾಶ ಕಲ್ಪಿಸಿ ಕೊಡಬೇಕು ಎಂಬುದಾಗಿಯೂ ತಿಳಿಸಿದ್ದಾರೆ.
ಸರ್ಕಾರದ ಮಾನದಂಡಗಳನ್ನು ಅನುಸರಿಸಿ ಬಿಪಿಎಲ್ ಕಾರ್ಡ್ ರದ್ದು
ಬಿಪಿಎಲ್ ಕಾರ್ಡ್ (BPL Card) ಅನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡಲಾಗುತ್ತದೆ. ಹಾಗಾಗಿ ರೇಷನ್ ಕಾರ್ಡ್ ವಿತರಣೆಯಲ್ಲಿ ಕೆಲವು ಮಾನದಂಡಗಳನ್ನು ಸರ್ಕಾರ ತಿಳಿಸಿದ್ದು ಅದರ ಅಡಿಯಲ್ಲಿ ಬಾರದೆ ಇರುವ ಅನರ್ಹರ ಪಡಿತರ ಚೀಟಿಯನ್ನು ರದ್ದು ಪಡಿ ಮಾಡಬೇಕು.
ಈಗಾಗಲೇ 4000ಕ್ಕೂ ಹೆಚ್ಚು ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡಲಾಗಿದೆ, ಇದರ ಜೊತೆಗೆ ಆದಾಯ ತೆರಿಗೆ ಪಾವತಿ ಮಾಡುವವರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅಂಥವರ ಕಾರ್ಡನ್ನು ಕೂಡ ರದ್ದು ಪಡಿ ಮಾಡಲಾಗುವುದು.
ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ನಡೆಸಿದ ಸಮಾಲೋಚನೆಯಂತೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅನರ್ಹರ ಬಿಪಿಎಲ್ ಕಾರ್ಡನ್ನು ರದ್ದುಪಡಿ ಮಾಡಲಾಗುವುದು ಎಂದು ಸಚಿವ ಕೆಎಚ್ ಮುನಿಯಪ್ಪ ಮಾಧ್ಯಮಕ್ಕೆ ತಿಳಿಸಿದ್ದಾರೆ.
Strict Order to Immediately Cancel Ineligible BPL Ration Cards