ಇಂದಿನಿಂದಲೇ ಶಾಲಾ ವಾಹನಗಳಿಗೆ ಹೊಸ ನಿಯಮ ಜಾರಿ ಮಾಡಿದ ಸರಕಾರ! ಕಡ್ಡಾಯ ಸೂಚನೆ

Story Highlights

ಶಾಲಾ ಆರಂಭದಿಂದಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಮುಖ್ಯ. ಇದಕ್ಕಾಗಿ ಶಾಲಾ ವಾಹನಕ್ಕೆ ಸರಕಾರ ಹೊಸ ನಿಯಮ (New Rules) ಜಾರಿ ಮಾಡಿದೆ.

ಇಂದು ಶಿಕ್ಷಣಕ್ಕೆ (Education) ಪ್ರತಿಯೊಬ್ಬರು ಒತ್ತು ನೀಡುತ್ತಾರೆ‌. ಅದೇ ರೀತಿ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ಕೊರತೆ ಯಾಗಬಾರದು ಎನ್ನುವ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಹೆಚ್ಚು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಾರೆ.

ಇಂದು ಶಾಲಾ ಮಕ್ಕಳು ಶಾಲೆಗೆ ತೆರಳುವಾಗ ವಾಹನದ ಅವಶ್ಯಕ ಹೆಚ್ಚು ಇರುತ್ತದೆ. ಹಾಗಾಗಿ ಇತರ ಖಾಸಗಿ ಬಸ್ (Private Bus) ಇತರ ವಾಹನಗಳಿಗೆ ಬೇಡಿಕೆ ಇಡದೇ ಶಾಲಾ ವಾಹನಕ್ಕೆ (School Vehicle) ಕಳುಹಿಸುವುದು ಇಂದು ಹೆಚ್ಚು.

ಇಂದು ಹಳ್ಳಿ ಪ್ರದೇಶದಲ್ಲಿ ಮಕ್ಕಳು ಸರಕಾರಿ ಬಸ್ಸುಗಳು, ಖಾಸಗಿ ಬಾಡಿಗೆ ರಿಕ್ಷಾ, ಜೀಪುಗಳನ್ನು ಅವಲಂಬಿಸಿದ್ದಾರೆ. ಇಂದು ಶಾಲಾ ವಾಹನಗಳ ಅಪಘಾತ, ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯ, ಚಾಲಕರ ನಿರ್ಲಕ್ಷ್ಯ ಸೇರಿದಂತೆ ಹಲವು ಕಾರಣಗಳಿಂದ ಪೋಷಕರಿಗೆ ಭಯ ಉಂಟುಮಾಡಿದೆ.

ಇಷ್ಟು ದಿನವಾದ್ರೂ ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ವಾ? ಹಾಗಾದ್ರೆ ಈ ದಾಖಲೆ ಕೊಟ್ಟು ಹಣ ಪಡೆಯಿರಿ

ಹಾಗಾಗಿ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಮತ್ತು ಅವುಗಳಲ್ಲಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸರಕಾರ ಹಾಗೂ ಮಕ್ಕಳ ಹೆತ್ತವರು ಶಾಲಾ ಆರಂಭದಿಂದಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಮುಖ್ಯ. ಇದಕ್ಕಾಗಿ ಶಾಲಾ ವಾಹನಕ್ಕೆ ಸರಕಾರ ಹೊಸ ನಿಯಮ (New Rules) ಜಾರಿ ಮಾಡಿದೆ.

ಹೌದು ಕರ್ನಾಟಕ ಸರ್ಕಾರ ಶಾಲಾ ವಾಹನಗಳಿಗೆ ಹೊಸ ನಿಯಮಗಳನ್ನು ಜಾರಿ ಮಾಡಿದ್ದು ಈ ನಿಯಮಗಳು ಶಾಲಾ ವಾಹನಗಳಿಗೆ ಅಷ್ಟೆ ಅಲ್ಲದೆ ಶಾಲಾ ಮಕ್ಕಳನ್ನು ಸಾಗಿಸುವ ಎಲ್ಲಾ ವಾಹನಗಳಿಗೂ ಅನ್ವಯವಾಗಲಿದೆ ಎನ್ನುವ ಕಡ್ಡಾಯ ಸೂಚನೆಯನ್ನು ನೀಡಿದೆ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವವರಿಗೆ ಸರ್ಕಾರದಿಂದ ಹೊಸ ಅಪ್ಡೇಟ್! ಇಲ್ಲಿದೆ ಡೀಟೇಲ್ಸ್

ಈ ನಿಯಮ ಕಡ್ಡಾಯ

ಹೌದು, ಶಾಲಾ ವಾಹನ ಸವಾರರು, ಕ್ಯಾಬ್‌ಗಳನ್ನು ಶಾಲಾ ಮಕ್ಕಳನ್ನು ಸಾಗಿಸಲು ಬಳಸಲಾಗುತ್ತಿದೆ ಎಂಬ ಪ್ರತ್ಯೇಕ ದಾಖಲೆಯನ್ನು ರಿಜಿಸ್ಟರ್‌ ಮಾಡಿಸಿಕೊಳ್ಳಬೇಕು. ಈ ದಾಖಲೆಯನ್ನು ಪೋಷಕರು ಶಾಲೆಯ ಆಡಳಿತ ಮಂಡಳಿಯಿಂದ ಪಡೆದುಕೊಳ್ಳಲು ಅವಕಾಶ ಇರಲಿದ್ದು ನಂತರ ಈ ಪತ್ರವನ್ನು ನೀಡಿ ತಮ್ಮ ವಾಹನವನ್ನು ನೋಂದಾಯಿಸಲು ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎನ್ನುವ ಸೂಚನೆ ಯನ್ನು ನೀಡಿದೆ. ಹೊಸ ನಿಯಮಗಳ ಮೂಲಕ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳು ಕರ್ನಾಟಕ ರಿಜಿಸ್ಟ್ರೇಷನ್‌ ಹೊಂದಿರಬೇಕು ಎಂದಿದೆ

ಮೋಟಾರು ವಾಹನಗಳ ಕಾಯಿದೆ, 1988 ರ ಸೆಕ್ಷನ್ 96(2) ಮತ್ತು 212 ರ ಅಧಿಕಾರದ ಅಡಿಯಲ್ಲಿ ಶಾಲಾ ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ತಿದ್ದುಪಡಿಗಳನ್ನು ಈಗ ಮಾಡಲಾಗಿದೆ.

ಉಚಿತ ಕರೆಂಟ್ ಇದ್ದು ಬಾಡಿಗೆ ಮನೆ ಬದಲಿಸಿದರೆ ಇನ್ಮುಂದೆ ಹೊಸ ರೂಲ್ಸ್! ಯೋಜನೆಯಲ್ಲಿ ಬದಲಾವಣೆ

ಹಾಗಾಗಿ ಈ ಹೊಸ ನಿಯಮ ಜಾರಿ ಮಾಡಿದ್ದು ಮಕ್ಕಳ ಸುರಕ್ಷತೆಗಾಗಿ , ಹಾಗಾಗಿ ಶಾಲೆ, ಶಾಲಾ ವಾಹನ, ಚಾಲಕರು ಹಾಗೂ ಪೋಷಕರು ಪಾಲಿಸಬೇಕಾದ ಕ್ರಮಗಳನ್ನು ಈ ಮೊದಲೇ ಪಾಲಿಸಬೇಕು.

The state government has implemented new rules for school vehicles, Mandatory notice

Related Stories