ಬೆಂಗಳೂರು: ಪತ್ನಿಯ ಖಾಸಗಿ ವಿಡಿಯೋ ಇಟ್ಟುಕೊಂಡು ಪತಿಯಿಂದಲೇ ಬೆದರಿಕೆ
ಬೆಂಗಳೂರಿನಲ್ಲಿ ವಿಚಿತ್ರ ಘಟನೆ ಪತ್ನಿ ಹಾಗೂ ಆಕೆಯ ಮಾಜಿ ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಡು ಪತಿಯಿಂದಲೇ ಬೆದರಿಕೆ
ಬೆಂಗಳೂರು (Bengaluru): ಪತ್ನಿ ಹಾಗೂ ಆಕೆಯ ಮಾಜಿ ಪ್ರಿಯಕರನ ಖಾಸಗಿ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಪತಿಯೊಬ್ಬ ಬೆದರಿಕೆ ಹಾಕಿರುವ ವಿಚಿತ್ರ ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗಿದೆ.
ಪತಿ ಪ್ರಸನ್ನ ವಿರುದ್ಧ ಪತ್ನಿ (25) ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ (Bengaluru Byadarahalli) ದೂರು ದಾಖಲಿಸಿದ್ದಾರೆ. ಪತಿ ಪ್ರಸನ್ನ ಯಾವುದೇ ಕೆಲಸ ಮಾಡದೆ ಕ್ರಿಕೆಟ್ ಬೆಟ್ಟಿಂಗ್, ಮದ್ಯಪಾನ ಮಾಡುತ್ತಾ ಸುತ್ತಾಡುವುದನ್ನೇ ಕಾಯಕ ಮಾಡಿಕೊಂಡಿದ್ದ, ಕುಡಿದು ಬಂದು ಮನೆಯಲ್ಲಿ ಹೆಂಡತಿಗೆ ಕಿರುಕುಳ ನೀಡಿ ಜಗಳವಾಡುತ್ತಿದ್ದ ಎನ್ನಲಾಗಿದೆ.
ಬೆಂಗಳೂರು ಟ್ಯಾನರಿ ರಸ್ತೆಯಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಹಲ್ಲೆ
ಆರೋಪಿ ತನ್ನ ಪತ್ನಿಯ ಮೊಬೈಲ್ ಫೋನ್ ನೋಡುತ್ತಿದ್ದಾಗ ಮಾಜಿ ಪ್ರಿಯಕರನೊಂದಿಗಿನ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳು ಸಿಕ್ಕಿವೆ. ಅವುಗಳನ್ನು ತನ್ನ ಫೋನ್‌ಗೆ ಕಳುಹಿಸಿಕೊಂಡ ಆರೋಪಿ ಪತಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಹೇಳಿ ಪತ್ನಿಗೆ ಕಿರುಕುಳ ನೀಡಿದ್ದಾನೆ.
ಅಷ್ಟೇ ಅಲ್ಲದೆ ಆ ವಿಡಿಯೋಗಳನ್ನು ಸ್ನೇಹಿತರಿಗೆ ಕಳುಹಿಸಿದ್ದಾನೆ. ನಿನ್ನನ್ನು ಮತ್ತು ನಿನ್ನ ಪ್ರಿಯಕರನನ್ನು ಸಾಯಿಸುವುದಾಗಿ ಹೆಂಡತಿಗೆ ಬೆದರಿಕೆ ಹಾಕಿದ್ದಾನೆ. ಪತ್ನಿ ಆತನ ವಿರುದ್ಧ ದೂರು ನೀಡಿದ ನಂತರ ಪೊಲೀಸರು ವಿಚಾರಣೆ ನಡೆಸಿದ್ದಾರೆ.
Threatened by the husband by keeping his wife’s private video in Bengaluru