Yuva Nidhi Scheme: ಯುವನಿಧಿ ಯೋಜನೆ ಅಪ್ಡೇಟ್, ಇನ್ಮುಂದೆ ಕಾಲೇಜಿನಲ್ಲಿಯೇ ಅರ್ಜಿ ಹಾಕಿ
Yuva Nidhi Scheme: ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಜನವರಿ 6 ರಿಂದ ಪ್ರಾರಂಭವಾಗಿ ಜನವರಿ 20ರ ವರೆಗೂ ಯುವನಿಧಿ ಯೋಜನೆ ಅಡಿಯಲ್ಲಿ ನೋಂದಾವಣೆ ಪ್ರಕ್ರಿಯೆ ಪ್ರಾರಂಭವಾಗಲಿದೆ.
- ಯುವನಿಧಿ ಯೋಜನೆಗೆ ಒಂದು ವರ್ಷದ ಸಂಭ್ರಮ.
- ಯುವನಿಧಿ ಯೋಜನೆಗೆ ನೋಂದಾವಣೆ ಮಾಡಿಕೊಳ್ಳುವುದಕ್ಕೆ ಹೊಸ ದಿನಾಂಕ ಘೋಷಣೆ.
- ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ನೋಂದಾವಣೆಗೆ ಅವಕಾಶ.
Yuva Nidhi Scheme: ಕರ್ನಾಟಕ ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಧಿಕಾರಕ್ಕೆ ಬಂದಾಗ ನೀಡಿರುವಂತಹ ಐದು ಯೋಜನೆಗಳಲ್ಲಿ ನಿರುದ್ಯೋಗಿ ಆಗಿರುವಂತಹ ವಿದ್ಯಾವಂತ ಯುವಕ ಹಾಗೂ ಯುವತಿಯರಿಗೆ ಭತ್ಯೆಯನ್ನು ನೀಡುವಂತಹ ಯುವನಿಧಿ ಯೋಜನೆ ಕೂಡ ಸಾಕಷ್ಟು ಸುದ್ದಿಯಲ್ಲಿದೆ.
ಸಿದ್ದರಾಮಯ್ಯ ಅವರು ಈ ಯೋಜನೆಗೆ ಚಾಲನೆ ನೀಡಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಇದು ಮೊದಲ ವರ್ಷವನ್ನು ಪೂರೈಸಲಿದೆ.
ಪದವಿಯನ್ನು ಪಡೆದಿರುವಂತಹ ನಿರುದ್ಯೋಗ ವಿದ್ಯಾವಂತರಿಗೆ ತಿಂಗಳಿಗೆ 3000 ಹಾಗೂ ಡಿಪ್ಲೋಮಾ ಪದವೀಧರರಿಗೆ ತಿಂಗಳಿಗೆ 1,500 ರೂಪಾಯಿಗಳನ್ನು ನೀಡುವಂತಹ ಯೋಜನೆಯ ಮುಂದುವರಿಸಿಕೊಂಡು ಬರಲಾಗುತ್ತಿದ್ದು ಈಗ ಒಂದು ವರ್ಷ ತುಂಬಿರುವಂತಹ ಹಿನ್ನೆಲೆಯಲ್ಲಿ ಈ ಯೋಜನೆಯ ನೊಂದಾವಣಿಯ ವಿಶೇಷ ಅಭಿಯಾನವನ್ನು ಮತ್ತೆ ಪ್ರಾರಂಭ ಮಾಡಲಾಗಿದೆ.
Ration Card: ರೇಷನ್ ಕಾರ್ಡ್ ವಿತರಣೆ ವಿಚಾರದಲ್ಲಿ ಸರ್ಕಾರದಿಂದ ಜನರಿಗೆ ಮತ್ತೊಂದು ಗುಡ್ ನ್ಯೂಸ್
ಯುವನಿಧಿ ಯೋಜನೆಯ ವಿಶೇಷ ನೊಂದಾವಣೆ ಅಭಿಯಾನ ಮತ್ತೆ ಪ್ರಾರಂಭ
ಉದ್ಯೋಗ ಇಲಾಖೆಯ ಆಯುಕ್ತರು ಜನವರಿ 2ರಂದು ಈ ಸುತ್ತೋಲೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಜನವರಿ 6 ರಿಂದ ಪ್ರಾರಂಭವಾಗಿ ಜನವರಿ 20ರ ವರೆಗೂ ಯುವನಿಧಿ ಯೋಜನೆ ಅಡಿಯಲ್ಲಿ ನೋಂದಾವಣೆ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಈ ಯೋಜನೆ ಅಡಿಯಲ್ಲಿ ತಮ್ಮನ್ನು ತಾವು ನೋಂದಾವಣೆ ಮಾಡಿಕೊಳ್ಳುವಂತಹ ಅರ್ಹ ಅಭ್ಯರ್ಥಿಗಳಿಗೆ ಅವರ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುವಂತಹ ಕೆಲಸವನ್ನು ಇಲಾಖೆ ಮಾಡಲಿದೆ. 5.27 ಲಕ್ಷಕ್ಕೂ ಹೆಚ್ಚಿನ ಅಭ್ಯರ್ಥಿಗಳು ಪೋರ್ಟಲ್ ನಲ್ಲಿ ಲೋಡ್ ಆಗಿದ್ರು ಕೂಡ ಯುವನಿಧಿ ಯೋಜನೆ ಅಡಿಯಲ್ಲಿ ಅವರು ನೋಂದಾವಣೆ ಆಗಿರುವುದಿಲ್ಲ.
ಹೀಗಾಗಿ ಈ ಅಭ್ಯರ್ಥಿಗಳಿಗೆ ಜನವರಿ 6 ರಿಂದ ಪ್ರಾರಂಭವಾಗುವಂತಹ ಈ ನೋಂದಾವಣೆ ಅಭಿಯಾನದಲ್ಲಿ ತಮ್ಮನ್ನು ತಾವು ನೋಂದಾವಣೆ ಮಾಡಿಕೊಳ್ಳುವ ಅವಕಾಶ ದೊರಕಲಿದೆ.
ಇನ್ಮುಂದೆ ಫ್ರೀ ಬಸ್ ಪ್ರಯಾಣಕ್ಕೆ ಬೇಕು ಸ್ಮಾರ್ಟ್ ಕಾರ್ಡ್, ಶಕ್ತಿ ಯೋಜನೆ ಅಡಿ ಹೊಸ ನಿಯಮ
ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆ
* ಆರು ವರ್ಷಗಳವರೆಗೆ ಪದವಿ, ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾ ವ್ಯಾಸಂಗವನ್ನು ಮಾಡಿರುವ ಕರ್ನಾಟಕದಲ್ಲಿ ವಾಸವಿರುವಂತಹ ನಿರುದ್ಯೋಗಿಗಳಿಗೆ.
* ಸ್ವಯಂ ಉದ್ಯೋಗವನ್ನು ಹೊಂದಿಲ್ಲದೆ ಇರುವಂತಹ ಅರ್ಹ ಅಭ್ಯರ್ಥಿಗಳಿಗೆ.
* ಉನ್ನತ ವಿದ್ಯಾಭ್ಯಾಸವನ್ನು ಮುಂದುವರಿಸದೆ ಇರುವವರು.
ಈ ರೀತಿ ಅರ್ಹ ನಿಯಮಾವಳಿಗಳು ಹಾಗೂ ಅರ್ಹತಾ ಮಾಪನದ ಅಡಿಯಲ್ಲಿ ಬರುವಂತಹ ನಿರುದ್ಯೋಗಿಗಳು ಯುವ ನಿಧಿ ಯೋಜನೆಗೆ ಜನವರಿ 6 ರಿಂದ ಅರ್ಜಿ ಸಲ್ಲಿಸಬಹುದಾಗಿದೆ.
Yuva Nidhi Scheme Update, Now Apply Directly from College