ಒಂದು ಲೀಟರ್ ₹100 ರೂಪಾಯಿ; ಈ ತಳಿಯ ಹಸು ಸಾಕಿದ್ರೆ ಗಳಿಸಬಹುದು, ಲಕ್ಷ ಲಕ್ಷ ಹಣ
ಈ ತಳಿಯ ಹಸು ಸಾಕಿದರೆ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಸಾಲ (Subsidy Loan) ಸೌಲಭ್ಯ ಕೂಡ ಸಿಗುತ್ತದೆ.
ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ತುಂಬಾ ಆತ್ಮೀಯವಾಗಿರುವುದು ತುಂಬಾ ಹತ್ತಿರವಾಗಿರುವುದು ಅಂದ್ರೆ ಶ್ವಾನಗಳು (Dog). ಆದ್ದರಿಂದಲೇ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ (village) ಪ್ರದೇಶಗಳಲ್ಲಿಯೂ ಕೂಡ ಶ್ವಾನ ಸಾಕುತ್ತಾರೆ.
ಇದು ಮನುಷ್ಯನ ಮಾತನ್ನು ಕೇಳುತ್ತದೆ ಜೊತೆಗೆ ಮನುಷ್ಯನೊಂದಿಗೆ ಬಹಳ ಪ್ರೀತಿಯಿಂದ ಇರುತ್ತದೆ ಎನ್ನುವ ಕಾರಣಕ್ಕೆ. ಆದರೆ ನಿಮಗೆ ಗೊತ್ತಾ ಈ ಒಂದು ತಳಿಯ ಹಸು ಮನುಷ್ಯನೊಂದಿಗೆ ಎಷ್ಟು ಪ್ರೀತಿಯಿಂದ ಇರಬಹುದು ಅಂದ್ರೆ, ಇದರ ಜೊತೆಗೆ ಇದ್ದರೆ ದೇಹದಲ್ಲಿ ಇರುವ ಕಾಯಿಲೆಗಳು ಕೂಡ ಮಾಯವಾಗುತ್ತೆ.
ಈ ತಳಿಯ ಹಸುವನ್ನ (cow) ಸಾಕಿದ್ರೆ ಲಕ್ಷ ಲಕ್ಷ ಆದಾಯವನ್ನು ಕೂಡ ಗಳಿಸಬಹುದು. ಹಾಗಾದ್ರೆ ಆ ಹಸು ಯಾವುದು ಅದನ್ನು ಸಾಕುವುದು (Dairy Farming) ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಕೋಳಿ ಸಾಕಾಣಿಕೆಗೆ ಸರ್ಕಾರವೇ ಕೊಡಲಿದೆ ಅರ್ಧದಷ್ಟು ಹಣ! ಸಬ್ಸಿಡಿ ಪಡೆಯಲು ಅರ್ಜಿ ಸಲ್ಲಿಸಿ
ಗಿರ್ ತಳಿಯ ಹಸು; (gir breed cow)
ಇತ್ತೀಚಿನ ದಿನಗಳಲ್ಲಿ ಜಾನುವಾರು ಸಾಕಾಣಿಕೆ ಅಥವಾ ಹೈನುಗಾರಿಕೆ (diary farming) ಉದ್ಯಮ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಜಾನುವಾರು ಸಾಕುವುದು ಅದರ ನಿರ್ವಹಣೆ ಎಲ್ಲವೂ ಬಹಳ ದುಬಾರಿಯಾಗಿದೆ.
ಆದರೆ ನೀವು ಸ್ವಲ್ಪ ಮುತುವರ್ಜಿಯಿಂದ ಹಸು (Cow) ಸಾಕಾಣಿಕೆ ಮಾಡಿದರೆ ಅದರಿಂದ ಬರುವ ಲಾಭ (Income) ಯಾವ ಐಟಿ ಕಂಪನಿಯಲ್ಲಿ ಕೆಲಸ ಮಾಡಿದ್ರು ಸಿಗದಷ್ಟು ಹಣ ಗಳಿಸಬಹುದು.
ಗುಜರಾತ್ (Gujarat) ಮೂಲದ ಗಿರ್ ತಳಿಯ ದೇಸಿ ಹಸು ಸಾಕಾಣಿಕೆ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ. ಈ ಹಸು ಒಂದು ಲಕ್ಷ ರೂಪಾಯಿಗಳಷ್ಟು ಬೆಲೆ ಬಾಳುತ್ತದೆ. ಒಮ್ಮೆ ಖರೀದಿಸಿ ತಂದು ಸಾಕಿದರೆ ತನ್ನ ಜೀವಿತಾವಧಿಯಲ್ಲಿ ಆ ಹಸು ಮನುಷ್ಯನಿಗೆ ನೀಡುವ ಆದಾಯ ಹಾಗೂ ಪ್ರಯೋಜನ ಅಷ್ಟಿಷ್ಟಲ್ಲ.
ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 35 ಸಾವಿರ ರೂಪಾಯಿಗಳ ಸ್ಕಾಲರ್ಶಿಪ್; ಇಂದೇ ಅಪ್ಲೈ ಮಾಡಿ
ಮಹಾಭಾರತದಲ್ಲಿಯೂ ಉಲ್ಲೇಖವಿದೆ;
ಗಿರ್ ತಳಿಯ ಹಸುವಿನ ಬಗ್ಗೆ ಮಹಾಭಾರತ (Mahabharat) ದಲ್ಲಿಯೂ ಕೂಡ ಉಲ್ಲೇಖವಿದೆ, ಈ ಹಸು ಹಾಲು (Milk) ನೀಡುವುದು ಮಾತ್ರವಲ್ಲದೆ ಹಸುವಿನ ಗಂಜಲ, ಸಗಣಿ ಮೊದಲಾದವು ಕೂಡ ಔಷಧಿ ವಸ್ತು ವಾಗಿ ಬಳಸಲ್ಪಡುತ್ತಿದೆ.
ಗಿರ್ ತಳಿಯ ಹಸು ಮನುಷ್ಯನೊಂದಿಗೆ ಬಹಳ ಪ್ರೀತಿಯಿಂದ ಹೊಂದಿಕೊಳ್ಳುತ್ತದೆ. ಇತೀಚಿನ ಸಂಶೋಧನೆಯ ಪ್ರಕಾರ ಈ ಹಸು ನಮ್ಮ ಜೊತೆಯಲ್ಲಿ ಇದ್ದರೆ ನಮ್ಮ ದೇಹದಲ್ಲಿ ಇರುವ ಅನಾರೋಗ್ಯವನ್ನು ದೂರ ಮಾಡುತ್ತದೆ.
ಗಿರ್ ಹಸುವಿನಲ್ಲಿ ಸಕಾರಾತ್ಮಕ ಎನರ್ಜಿ ಇರುತ್ತದೆ. ಈ ಹಸುವಿನ ಬೆನ್ನಿನ ಮೇಲೆ ಇರುವ ಸೂರ್ಯ ಕೇತು ನಾಡಿಯಿಂದಾಗಿ ಅದು ತನ್ನ ಎನರ್ಜಿಯನ್ನು ಇತರರಿಗೂ ವರ್ಗಾವಣೆ ಮಾಡುತ್ತದೆ. ಅಷ್ಟೇ ಅಲ್ಲ ಸೂರ್ಯನ ನೇರಳಾತಿತ ಕಿರಣವನ್ನು ಹಿಡಿದಿಟ್ಟುಕೊಳ್ಳುವಷ್ಟು ಪವರ್ ಫುಲ್ ಆಗಿರುತ್ತವೆ ಈ ಹಸುಗಳು.
10ನೇ ತರಗತಿ ಪಾಸ್ ಆಗಿದ್ರೆ ಸಾಕು, ಸಿಗುತ್ತೆ ಸರ್ಕಾರಿ ಉದ್ಯೋಗ; 63 ಸಾವಿರ ಸಂಬಳ! ಇಂದೇ ಅಪ್ಲೈ ಮಾಡಿ
ಗಿರ್ ಹಸುವಿನ ವೈಶಿಷ್ಟತೆ;
ಗುಜರಾತಿನಲ್ಲಿ ಹೆಚ್ಚಾಗಿ ಸಿಗುವ ಈ ಹಸುವಿನ ವಿಶೇಷ ಅಂದರೆ ಯಾವುದೇ ವಾತಾವರಣಕ್ಕೂ ಕೂಡ ಹೊಂದಿಕೊಳ್ಳುವ ಗುಣ ಇದಕ್ಕೆ ಇದೆ. ಸೂರ್ಯನ ಬೆಳಕಿಗೆ ಈ ಹಸುಗಳು ಚೆನ್ನಾಗಿ ಬೆಳೆಯುತ್ತವೆ.
ಗಿರ್ ಹಸು ಕಂದು ಕಪ್ಪು ಬಿಳಿ ಮೊದಲಾದ ಬಣ್ಣಗಳಲ್ಲಿ ಇರುತ್ತವೆ. ಒಂದಷ್ಟು ಪುಷ್ಟವಾಗಿ ಇರುವ ಈ ಹಸು ಸುಮಾರು 385 ಕೆಜಿ ನಿಂದ 550 ಕೆಜಿ ವರೆಗೂ ತೂಕ ಇರುತ್ತದೆ. ಒಂದು ಹಸುವಿಗೆ ಪ್ರತಿದಿನ 30 ಕೆಜಿ ಅಷ್ಟು ಆಹಾರ ಬೇಕು. ಶೇಂಗಾ, ಮೆಕ್ಕೆಜೋಳ, ಸಾಸಿವೆ ಮೊದಲಾದವುಗಳಿಂದ ತಯಾರಿಸಿದ ಪುಡಿ ಹಾಗೂ ಒಣ ಹುಲ್ಲು ಈ ಹಸುಗಳಿಗೆ ಮೇವಾಗಿ ತಿನ್ನಿಸಬಹುದು.
ಗಿರ್ ಹಸುಗಳಿಗೆ ಸುಲಭವಾಗಿ ಯಾವುದೇ ಕಾಯಿಲೆ ಬರುವುದಿಲ್ಲ ಜೊತೆಗೆ ಈ ಹಸುವಿನ ಹಾಲು ತುಪ್ಪ ಬೆಣ್ಣೆ ಎಲ್ಲವೂ ಬಹಳ ಪೌಷ್ಟಿಕತೆಯಿಂದ (nutrient) ಕೂಡಿರುತ್ತದೆ. ಗಿರ್ ಹಸು ಕೊಡುವ ಹಾಲು ಹೆಚ್ಚು ಕ್ಯಾಲ್ಸಿಯಂ (calcium) ಹೊಂದಿರುತ್ತದೆ. ಹಾಗಾಗಿ ಈ ತಳಿಯ ಹಸುವಿನ ಹಾಲಿಗೆ ಹೆಚ್ಚಿನ ಬೇಡಿಕೆ ಇದೆ.
ಎಷ್ಟು ಹಾಲು ಎಷ್ಟು ಆದಾಯ;
ಗಿರ್ ಹಸುಗಳು ದಿನಕ್ಕೆ 10 ಲೀಟರ್ ನಿಂದ 18 ಲೀಟರ್ ವರೆಗೆ ಹಾಲು ಕೊಡುತ್ತವೆ. ಬೆಳಿಗ್ಗೆ ಐದರಿಂದ ಆರು ಲೀಟರ್ ಹಾಗೂ ಸಂಜೆ ಕೂಡ ಅಷ್ಟೇ ಹಾಲು ನೀಡುವ ಸಾಮರ್ಥ್ಯ ಇದೆ. ಇನ್ನು ಗಿರ್ ಹಸುವಿನ ಹಾಲನ್ನು ಸೂರ್ಯೋದಯಕ್ಕೂ ಮೊದಲೇ ಕರೆದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.
ಅದೇ ರೀತಿ ಬ್ರಾಹ್ಮೀ ಮುಹೂರ್ತದಲ್ಲಿ ಗೋಮೂತ್ರ ಸಂಗ್ರಹಿಸಿ ಅದನ್ನು ಔಷಧಿಗೆ ಬಳಸಲಾಗುತ್ತದೆ. ಗಿರ್ ಹಸುವಿನ ಹಾಲಿಗೆ ಪ್ರತಿ ಲೀಟರ್ಗೆ 80 ರಿಂದ 100 ರೂಪಾಯಿಗಳ ವರೆಗೆ ಇದೆ.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗುಜರಾತ್ ನಿಂದ ಗಿರ್ ತಳಿಯ ಹಸುವನ್ನು ಖರೀದಿಸಿ ತಂದು ರೈತರು ಅದರ ಸಾಕಾಣಿಕೆ ಮಾಡುತ್ತಿದ್ದಾರೆ. ದೇಸಿ ಹಸುಗಳಿಗೆ ಹೆಚ್ಚು ಮಹತ್ವ ನೀಡಬೇಕು ಎನ್ನುವ ಕಾರಣಕ್ಕೆ ಈ ತಳಿಯ ಹಸು ಸಾಕಿದರೆ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಸಾಲ (Subsidy Loan) ಸೌಲಭ್ಯ ಕೂಡ ಸಿಗುತ್ತದೆ.
ಗಿರ್ ತಳಿಯ ಹಸುವನ್ನು ಸಾಕಿದರೆ ಅದರ ಹಾಲಿನಿಂದ ಸಿಗುವ ಆದಾಯ ಒಂದು ಕಡೆಯಾದರೆ, ಈ ಹಸುವಿನ ಬ್ರೀಡ್ ತಯಾರಿಸಿ ಮಾರಾಟ ಮಾಡುವುದು, ಹಸುವಿನ ಮಲ ಮೂತ್ರಗಳಿಂದ ಔಷಧಿ ತಯಾರಿಕೆ ಗೊಬ್ಬರ ತಯಾರಿಕೆ ಹೀಗೆ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಗಿರ್ ತಳಿಯ 10 ಹಸುಗಳು ನಿಮ್ಮ ಕೊಟ್ಟಿಗೆಯಲ್ಲಿ ಇದ್ದರೆ ತಿಂಗಳಿಗೆ ಲಕ್ಷದವರೆಗೂ ಆದಾಯ ಗಳಿಸಬಹುದು.
100 Rupees per liter, A cow of this breed can earn lakhs of rupees