ಗಂಡ ಹೆಂಡತಿಗೆ ₹11,000 ಮಾಸಿಕ ಪಿಂಚಣಿ! ಎಲ್ಐಸಿಯ ಬೆಸ್ಟ್ ಪ್ಲಾನ್ ಆಯ್ಕೆ ಮಾಡಿ
Pension Scheme : ವೃದ್ಧಾಪ್ದ ಪಿಂಚಣಿಗಾಗಿ ಅಂಚೆ ಕಚೇರಿ (post office) ಎಲ್ಐಸಿ (LIC) ಮ್ಯೂಚುವಲ್ ಫಂಡ್ (Mutual Fund) ಹೂಡಿಕೆ ಹೀಗೆ ಬೇರೆ ಬೇರೆ ಆಯ್ಕೆಗಳು ಸಿಗುತ್ತವೆ
Pension Scheme : ವೃದ್ಧಾಪ್ಯ (old age) ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಆದರೂ, ಅದರಲ್ಲೂ ಆರ್ಥಿಕ ತೊಂದರೆ (financial problem) ಉಂಟಾಗಬಾರದು ಅಂದ್ರೆ ಯಾವುದಾದರೂ ಉತ್ತಮ ಯೋಜನೆಯಲ್ಲಿ ಹೂಡಿಕೆ (Investment) ಮಾಡುವುದು ಬಹಳ ಮುಖ್ಯ
ನೀವು ಮಾಡುವ ಹೂಡಿಕೆ ಕಡಿಮೆ ಮೊತ್ತದ್ದು ಇರಬಹುದು ಅಥವಾ ಹೆಚ್ಚಿನ ಹಣಪಾವತಿ ಮಾಡುವ ಪ್ರೀಮಿಯಂ (premium) ಇರಬಹುದು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಸ್ವಲ್ಪ ಸ್ವಲ್ಪವಾದರೂ ಹೂಡಿಕೆ ಮಾಡುತ್ತಾ ಬಂದರೆ ವೃದ್ಧಾಪ್ಯ ಜೀವನವನ್ನು ಪತಿ-ಪತ್ನಿ ಒಟ್ಟಾಗಿ ಆರ್ಥಿಕ ಸಮಸ್ಯೆ ಇಲ್ಲದೆ ಸಾಗಿಸಲು ಸಹಾಯವಾಗುತ್ತದೆ.
ಇದಕ್ಕಾಗಿ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯ ಹೂಡಿಕೆ ಮಾಡಬಹುದು.
ವೃದ್ಧಾಪ್ದ ಪಿಂಚಣಿಗಾಗಿ ಅಂಚೆ ಕಚೇರಿ (post office) ಎಲ್ಐಸಿ (LIC) ಮ್ಯೂಚುವಲ್ ಫಂಡ್ (Mutual Fund) ಹೂಡಿಕೆ ಹೀಗೆ ಬೇರೆ ಬೇರೆ ಆಯ್ಕೆಗಳು ಸಿಗುತ್ತವೆ. ನೀವು ನಿಮ್ಮ ಅನುಕೂಲ ಹಾಗೂ ಸುರಕ್ಷತೆಯನ್ನು ನೋಡಿಕೊಂಡು ಹೂಡಿಕೆ ಮಾಡಬೇಕಾಗುತ್ತದೆ.
ಇದೀಗ ಎಲ್ಐಸಿ ಜೀವನ್ ಶಾಂತಿ (LIC Jeevan Shanti plan) ಯೋಜನೆ ಯನ್ನು ವಿಶೇಷವಾಗಿ ಪತಿ ಪತ್ನಿಯರಿಗೆ (husband and wife) ಜಂಟಿಯಾಗಿ ಖಾತೆ ತೆರೆದು (joint account) ಹೂಡಿಕೆ ಮಾಡಲು ಆರಂಭಿಸಿದ ಯೋಜನೆಯಾಗಿದೆ. ಯೋಜನೆಯ ಬಗ್ಗೆ ಎಲ್ಲಿದೆ ಇನ್ನಷ್ಟು ಮಾಹಿತಿ.
ಬ್ಯಾಂಕ್ ಸಾಲ ಮಾಡಿ, ತೀರಿಸಲು ಕಷ್ಟಪಡುತ್ತಿರುವವರಿಗೆ ಸಿಹಿ ಸುದ್ದಿ! ಹೊಸ ರೂಲ್ಸ್ ಜಾರಿ
ಎಲ್ಐಸಿ ಜೀವನ್ ಶಾಂತಿ ಯೋಜನೆ
ಯೋಜನೆಯಲ್ಲಿ ಗಂಡ ಹೆಂಡತಿ ಜಂಟಿಯಾಗಿ ಖಾತೆ ತೆರೆಯುವುದರ ಮೂಲಕ ಹೂಡಿಕೆ ಆರಂಭಿಸಬಹುದು. ನಿಮ್ಮ ಯೋಜನೆ ಮೆಚುರಿಟಿ ಪಡೆದುಕೊಂಡ ನಂತರ ಗಂಡ ಹೆಂಡತಿ ಇಬ್ಬರೂ 11,000ಗಳ ವರೆಗೆ ಪ್ರತಿ ತಿಂಗಳು ಪಿಂಚಣಿ (Monthly Pension Scheme) ಪಡೆದುಕೊಳ್ಳಲು ಸಾಧ್ಯವಿದೆ.
ಯೋಜನೆಯಲ್ಲಿ ಕನಿಷ್ಠ 1.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕು. 30 ವರ್ಷದಿಂದ 79 ವರ್ಷ ವಯಸ್ಸಿನವರು ಜೀವನ್ ಶಾಂತಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಆರಂಭಿಸಿದರೆ ಪ್ರೀಮಿಯಂ ಬದಲಾಗಿ ಪ್ರತಿ ತಿಂಗಳು ಪಿಂಚಣಿ ಹಣ ಬರುವಂತೆ ಮಾಡಿಕೊಳ್ಳಬಹುದು. ಇನ್ನು ಹೂಡಿಕೆಯ ಗರಿಷ್ಠ ಮಿತಿ ನಿಗದಿಪಡಿಸಿಲ್ಲ. ಹಾಗಾಗಿ ನೀವು ನಿಮ್ಮ ಬಳಿ ಸಾಧ್ಯವಾದಷ್ಟು ಹಣವನ್ನು ಹೂಡಿಕೆ ಮಾಡಬಹುದು.
ನೀವು ಎಷ್ಟು ಹೆಚ್ಚಿನ ಹಣವನ್ನು ಹೂಡಿಕೆ ಮಾಡುತ್ತಿರುವ ಅಷ್ಟು ಹೆಚ್ಚಿನ ಹಣವನ್ನು ಮಾಸಿಕ ಪಿಂಚಣಿಯಾಗಿ ಪಡೆದುಕೊಳ್ಳಬಹುದು. ವೃದ್ಧಾಪ್ಯದಲ್ಲಿ ಪ್ರತಿ ತಿಂಗಳು 11,000ರೂ. ಪಿಂಚಣಿ ಬರುವಂತೆ ಮಾಡಿಕೊಳ್ಳಲು ಮೂರು ತಿಂಗಳಿಗೊಮ್ಮೆ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಪಾವತಿ ಮಾಡುವ ಪ್ರೀಮಿಯಂ ಆಯ್ದು ಕೊಳ್ಳಬಹುದು.
ಯಮಹಾ ಬೈಕ್ ಮಾಡೆಲ್ ಗಳ ಮೇಲೆ ದೀಪಾವಳಿ ಹಬ್ಬಕ್ಕೆ ಬಾರೀ ಡಿಸ್ಕೌಂಟ್ ಹಾಗೂ ಕ್ಯಾಶ್‌ಬ್ಯಾಕ್
ಜೀವನ್ ಶಾಂತಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಸಿಗುವ ಬಡ್ಡಿ ದರ ಎಷ್ಟು? (Interest rate)
ಎಲ್ಐಸಿ ಜೀವನ್ ಶಾಂತಿ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ 6.1% ನಿಂದ 14.62% ವರೆಗೆ ಬಡ್ಡಿ ಪಡೆದುಕೊಳ್ಳಬಹುದು. ನೀವು ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿಗಳ ಪಿಂಚಣಿ (pension) ಪಡೆದುಕೊಳ್ಳಲು 12 ವರ್ಷಗಳವರೆಗೆ ಒಂದು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.
ಅದೇ ರೀತಿ 10 ಲಕ್ಷ ರೂಪಾಯಿಗಳ ಹೂಡಿಕೆಗೆ ಪ್ರತಿ ತಿಂಗಳು 11,000 ಪಿಂಚಣಿ ಬರುವಂತೆ ಮಾಡಿಕೊಳ್ಳಬಹುದು. ವೃದ್ಧಾಪ್ಯ ಸಮಯದಲ್ಲಿ ಆರ್ಥಿಕ ಪರಾವಲಂಬನೆಯ ಜೀವನವನ್ನು ಮುಕ್ತವಾಗಿಸಿ ಸ್ವಾವಲಂಬನೆಯ (independent life) ಜೀವನ ನಡೆಸಲು ನೀವು ಬಯಸಿದರೆ ಎಲ್ಐಸಿಯ ಜೀವನ ಶಾಂತಿ ಯೋಜನೆ ಹೂಡಿಕೆ ಉತ್ತಮವಾದ ಆಯ್ಕೆಯಾಗಿದೆ.
ದೀಪಾವಳಿ ಹಬ್ಬಕ್ಕೆ ಈ ಕಾರುಗಳ ಮೇಲೆ ಭಾರೀ ರಿಯಾಯಿತಿ, ಬರೋಬ್ಬರಿ 3.5 ಲಕ್ಷ ಡಿಸ್ಕೌಂಟ್
11,000 monthly pension for husband and wife, Choose LIC best plan