ರಿಲಯನ್ಸ್ ಜಿಯೋ (Reliance Jio) ಸಂಸ್ಥೆಯು ಒಂದೆರಡು ತಿಂಗಳುಗಳಿಂದ ಸಾಕಷ್ಟು ಗ್ರಾಹಕರನ್ನು ಕಳೆದುಕೊಂಡಿದೆ. ಇದಕ್ಕೆ ಕಾರಣ ಈ ಸಂಸ್ಥೆ ಇದ್ದಕ್ಕಿದ್ದ ಹಾಗೆ ರೀಚಾರ್ಜ್ ದರವನ್ನು (Prepaid Recharge) ಏರಿಕೆ ಮಾಡಿದ್ದು, ಹೌದು ಇದ್ದಕ್ಕಿದ್ದಂತೆ ಒಂದು ರೀಚಾರ್ಜ್ ಪ್ಲಾನ್ ನಲ್ಲಿ 50 ರಿಂದ 100 ರೂಪಾಯಿ ಬೆಲೆ ಏರಿಕೆ ಮಾಡಿದ ಕಾರಣ ಜನರು ಅಸಮಾಧಾನಗೊಂಡು ಬೇರೆ ನೆಟ್ವರ್ಕ್ ಗೆ ಹೋಗಬೇಕು ಎಂದು ನಿರ್ಧರಿಸಿ, ಹೆಚ್ಚು ಜನರು BSNL ಗೆ ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾರೆ.
ಹೌದು, ಈಗ ಬೇರೆ ನೆಟ್ವರ್ಕ್ ಗಳನ್ನು ಬಿಟ್ಟು ಕಡಿಮೆ ಬೆಲೆಯ ಪ್ಲಾನ್ ಹೊಂದಿರುವ BSNL ಗೆ ಹೆಚ್ಚಿನ ಜನರು ಹೋಗುತ್ತಿದ್ದು, ಇದರಿಂದ ಜಿಯೋ ಸಂಸ್ಥೆಯು ಮತ್ತೊಮ್ಮೆ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಇದೀಗ ಹೊಸದೊಂದು ರೀಚಾರ್ಜ್ ಪ್ಲಾನ್ ಅನ್ನು ಜಾರಿಗೆ ತಂದಿದೆ.
ಮನರಂಜನೆ ಇಷ್ಟಪಡುವವರಿಗೆ ಸರಿ ಹೊಂದುವಂಥ ಪ್ಲಾನ್ ಇದಾಗಿದ್ದು, ಗ್ರಾಹಕರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅಷ್ಟಕ್ಕೂ ಇದು ಯಾವ ಪ್ಲಾನ್? ಎಷ್ಟು ಕಡಿಮೆ ಬೆಲೆಗೆ ಸಿಗುತ್ತಿದೆ ಎಂದು ನೋಡುವುದಾದರೆ..
ಇಂತಹ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಸಿಗಲಿದೆ ₹1500 ರೂಪಾಯಿ ಸ್ಕಾಲರ್ಶಿಪ್! ಇಲ್ಲಿದೆ ಸಂಪೂರ್ಣ ಮಾಹಿತಿ
175 ರೂಪಾಯಿಯ ಹೊಸ ರೀಚಾರ್ಜ್ ಪ್ಲಾನ್:
ಜಿಯೋ ಸಂಸ್ಥೆ ಇದೀಗ 175 ರೂಪಾಯಿಗೆ ಈ ಒಂದು ಹೊಸ ರೀಚಾರ್ಜ್ ಪ್ಲಾನ್ ಅನ್ನು ಜಾರಿಗೆ ತಂದಿದೆ. ಈ ಒಂದು ಪ್ಲಾನ್ ನಲ್ಲಿ ಗ್ರಾಹಕರಿಗೆ ಸುಮಾರು 12 ಓಟಿಟಿಗಳ ಚಂದಾದಾರಿಕೆ ಸಿಗಲಿದ್ದು, ಇದು 28 ದಿನಗಳ ಅವಧಿಯ ಪ್ಲಾನ್ ಆಗಿದೆ. ಈ ಒಂದು ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನದ ಡೇಟಾ ಲಿಮಿಟ್ ಇರುವುದಿಲ್ಲ. ಇದರಲ್ಲಿ ನಿಮಗೆ ಒಟ್ಟು 10 GB ಡೇಟಾ ಉಚಿತವಾಗಿ ಸಿಗುತ್ತದೆ. ಜೊತೆಗೆ ಓಟಿಟಿ ಚಂದಾದಾರಿಕೆ , 28 ದಿನಗಳ ಅವಧಿಗೆ ಸಿಗುತ್ತದೆ ಎನ್ನುವುದು ತಿಳಿಯಿರಿ.
ಈ ಪ್ಲಾನ್ ನಲ್ಲಿ Sony LIV, Zee5, Jio Cinema Premium, Lionsgate Play, Discovery+, Sun NXT, Kanchha Lanka, Planet Marathi, Chaupal, DocuBay, Epic On Hoichoi ಇದಿಷ್ಟು ಓಟಿಟಿ ಪ್ಲಾಟ್ ಫಾರ್ಮ್ ಗಳ ಚಂದಾದಾರಿಕೆ ಸಿಗಲಿದ್ದು, ಒಮ್ಮೆ ರೀಚಾರ್ಜ್ ಮಾಡಿಸಿದರೆ, 28 ದಿನಗಳ ಕಾಲ ಈ ಅಪ್ಲಿಕೇಶನ್ ಗಳಲ್ಲಿ ಉಚಿತವಾಗಿ ಮನರಂಜನೆ ಪಡೆಯಬಹುದು. ಈ ಪ್ಲಾನ್ ನಲ್ಲಿ ನಿಮಗೆ ಫ್ರೀ ಕಾಲ್ಸ್ ಸೌಲಭ್ಯ ಇರುವುದಿಲ್ಲ, ಈಗಿರುವ ಪ್ಲಾನ್ ಜೊತೆಗೆ ಹೆಚ್ಚುವರಿ ಡೇಟಾ ಪ್ಲಾನ್ ಆಗಿ, ಈ ಆಫರ್ ಬಳಕೆ ಮಾಡಬಹುದು.
ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಧಿಡೀರ್ ಶಾಕ್! ಇನ್ಮುಂದೆ ದುಬಾರಿಯಾಗಲಿದೆ ಕಾರು, ಮನೆ ಮೇಲಿನ ಇಎಂಐ
ಇದೊಂದು ಪ್ಲಾನ್ ಮಾತ್ರವಲ್ಲದೇ ಇನ್ನು ಕೆಲವು ಹೊಸ ಪ್ಲಾನ್ ಗಳನ್ನು ಜಿಯೋ ಜಾರಿಗೆ ತಂದಿದೆ. 329, 1029 ಹಾಗೂ 1049 ರೂಪಾಯಿಗಳ ರೀಚಾರ್ಜ್ ಪ್ಲಾನ್ ಗಳಾಗಿದ್ದು, ಇವುಗಳಲ್ಲಿ Unlimited Free Calls, ಪ್ರತಿ ದಿನ ಉಚಿತ SMS, ಹಾಗೂ ಪ್ರತಿದಿನ ಉಚಿತ ಡೇಟಾ ಕೂಡ ಸಿಗುತ್ತದೆ. ಇವುಗಳನ್ನು ಕೂಡ ನೀವು ರೀಚಾರ್ಜ್ ಮಾಡಿಕೊಳ್ಳಬಹುದು.
12 OTT platform free with this Jio recharge
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.