Business News

ಇಂತಹ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಸಿಗಲಿದೆ ₹1500 ರೂಪಾಯಿ ಸ್ಕಾಲರ್ಶಿಪ್! ಇಲ್ಲಿದೆ ಸಂಪೂರ್ಣ ಮಾಹಿತಿ

Education scholarship : ಮೆಟ್ರಿಕ್ ಮುಗಿಸಿ ಉನ್ನತ ವಿದ್ಯಾಭ್ಯಾಸ ಮಾಡಬೇಕು ಎಂದುಕೊಂಡಿರುವ 2024-25ನೇ ಸಾಲಿನ ವಿದ್ಯುರ್ಥಿಗಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದ್ದು, ವಿದ್ಯಾಸಿರಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಕೆ ಶುರುವಾಗಿದೆ. ಆಸಕ್ತಿ ಇರುವ ಉನ್ನತ ಶಿಕ್ಷಣೆ ಪಡೆಯಲು ಬಯಸುವ ವಿದ್ಯಾರ್ಥಿಗಳು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು.

ವಿದ್ಯಾಸಿರಿ ಸ್ಕಾಲರ್ಶಿಪ್ ಎಂದರೆ ಏನು? ಇದರ ಮೂಲಕ ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ಸಿಗುತ್ತದೆ? ಇದರ ಪ್ರಯೋಜನ ಏನು? ಇದೆಲ್ಲವನ್ನು ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..

The central government brought a new scholarship scheme for students

ವಿದ್ಯಾಸಿರಿ ಸ್ಕಾಲರ್ಶಿಪ್ ಎಂದರೇನು?

ಇದು ಸರ್ಕಾರ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಲುವಾಗಿ ಜಾರಿಗೆ ತಂದಿರುವ ಸ್ಕಾಲರ್ಶಿಪ್ ಆಗಿದ್ದು, ಮೆಟ್ರಿಕ್ ಮುಗಿಸಿ ಉನ್ನತ ಶಿಕ್ಷಣಕ್ಕೆ ಸೇರಿಕೊಂಡು, ಹಾಸ್ಟೆಲ್ ಸೌಲಭ್ಯ ಸಿಗದ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ನ ಮೂಲಕ ಸರ್ಕಾರದ ಕಡೆಯಿಂದ ಆರ್ಥಿಕ ಸಹಾಯ ಸಿಗಲಿದೆ.

ಒಬ್ಬ ವಿದ್ಯಾರ್ಥಿಗೆ ಪ್ರತಿ ತಿಂಗಳು ₹1500 ರೂಪಾಯಿಯ ಹಾಗೆ, 10 ತಿಂಗಳ ಶೈಕ್ಷಣಿಕ ವರ್ಷದ ಅವಧಿಗೆ ₹15,000 ರೂಪಾಯಿಗಳ ಸ್ಕಾಲರ್ಶಿಪ್ ಅನ್ನು ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕೊಡಲಾಗುತ್ತದೆ. ಆಸಕ್ತಿ ಇರುವವರು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.

ಮಹಿಳೆಯರಿಗೆ ಬಂಪರ್ ಕೊಡುಗೆ, ಈ ಯೋಜನೆಯಲ್ಲಿ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ!

ವಿದ್ಯಾಸಿರಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ:

*ವಿದ್ಯಾರ್ಥಿಯು ಭಾರತದ ಪ್ರಜೆ ಹಾಗೂ ಕರ್ನಾಟಕ ರಾಜ್ಯದಲ್ಲಿ ಹುಟ್ಟಿ ಬೆಳೆದವರಾಗಿರಬೇಕು.

*SC/ST ಅಥವಾ OBC ವರ್ಗಕ್ಕೆ ಸೇರಿದ ವಿದ್ಯಾರ್ಥಿ ಆಗಿದ್ದು, ಅದರ ಕ್ಯಾಸ್ಟ್ ಸರ್ಟಿಫಿಕೇಟ್ ಇರಬೇಕು.

*2A, 3A ಅಥವಾ 3B OBC ವಿದ್ಯಾರ್ಥಿ ಆದರೆ ಅವರ ಕುಟುಂಬದ ವಾರ್ಷಿಕ ಆದಾಯ 1 ಲಕ್ಷದ ಒಳಗಿರಬೇಕು. ಪ್ರವರ್ಗ 1 ಕ್ಕೆ ಸೇರಿದ ವಿದ್ಯಾರ್ಥಿ ಆದರೆ, ಅವರ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷದ ಒಳಗಿರಬೇಕು.

*ಸುಮಾರು 7 ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಓದಿದ್ದು, 75% ಗಿಂತ ಜಾಸ್ತಿ ಮಾರ್ಕ್ಸ್ ಪಡೆದಿರಬೇಕು.

*ಕರ್ನಾಟಕದ ಯುನಿವರ್ಸಿಟಿ ಅಡಿಯಲ್ಲಿ ಬರುವ ಸರ್ಕಾರಿ, ಪ್ರೈವೇಟ್ ಅಥವಾ ಅನುದಾನಿತ ಕಾಲೇಜು ಅಥವಾ ಸಂಸ್ಥೆಯಲ್ಲಿ ಓದುತ್ತಿರಬೇಕು.

*ಹಾಸ್ಟೆಲ್ ಅಡ್ಮಿಷನ್, ಊಟ ವಸತಿ ಯೋಜನೆ ಇದಿಷ್ಟರಲ್ಲಿ ಒಂದು ಸೌಲಭ್ಯ ಪಡೆಯಲಿದ್ದಾರೆ ವಿದ್ಯಾರ್ಥಿಗಳು.

*ವಸತಿ ಕಾಲೇಜುಗಳು, ಸರ್ಕಾರದ ಹಾಸ್ಟೇಲ್ ಗಳು ಇವುಗಳಲ್ಲಿ ಅಡ್ಮಿಷನ್ ಸಿಗದೇ ಇರುವ ಮೆಟ್ರಿಕ್ ನಂತರದ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಸಿಗೋದು ಈ ಸೌಲಭ್ಯ.

*ಒಂದು ಊರಿನಿಂದ ಇನ್ನೊಂದು ಸಿಟಿಗೆ ವಿದ್ಯುಭ್ಯಾಸಕ್ಕಾಗಿ ಹೋಗುವ ವಿದ್ಯಾರ್ಥಿಗಳು, ಹಾಗೆಯೇ ಹಳ್ಳಿಗಳಲ್ಲಿ ವಾಸ ಮಾಡುತ್ತಾ, ಮನೆಯಿಂದ ಕಾಲೇಜು 5ಕಿಮೀ ಗಿಂತ ಹೆಚ್ಚು ದೂರ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು..

*ಒಂದೇ ಥರದ ಕೋರ್ಸ್ ನಲ್ಲಿ ಎರಡು ಸಾರಿ ಓದುವವರಿಗೆ ಈ ಸ್ಕಾಲರ್ಶಿಪ್ ಸಿಗೋದಿಲ್ಲ.

ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಧಿಡೀರ್ ಶಾಕ್​! ಇನ್ಮುಂದೆ ದುಬಾರಿಯಾಗಲಿದೆ ಕಾರು, ಮನೆ ಮೇಲಿನ ಇಎಂಐ

ಸಿಗುವ ಸ್ಕಾಲರ್ಶಿಪ್ ಮೊತ್ತ:

ವಿದ್ಯಾಸಿರಿ ಸ್ಕಾಲರ್ಶಿಪ್ ನಲ್ಲಿ ಎಷ್ಟು ಹಣ ಸಿಗುತ್ತದೆ ಎಂದರೆ, ಒಂದು ವರ್ಷಕ್ಕೆ ಪ್ರತೀ ತಿಂಗಳಿಗೆ ₹1500 ರೂಪಾಯಿ ಎನ್ನುವ ಹಾಗೆ,1 ವರ್ಷದ ಅವಧಿಗೆ ವಿದ್ಯಾರ್ಥಿಗಳಿಗೆ ₹15,000 ವರೆಗು ಸ್ಕಾಲರ್ಶಿಪ್ ಸಿಗುತ್ತದೆ. ಈ ಹಣ ನಿಮಗೆ ಸಿಗಬೇಕು ಎಂದರೆ, ಮುಖ್ಯವಾಗಿ ನಿಮ್ಮ ಬಳಿ ಆಕ್ಟಿವ್ ಆಗಿರುವ ಬ್ಯಾಂಕ್ ಅಕೌಂಟ್ ಇರಬೇಕು. ಇದೊಂದು ಇದ್ದರೆ, ಎಲ್ಲವೂ ಸುಲಭ ಆಗುತ್ತದೆ, ಸ್ಕಾಲರ್ಶಿಪ್ ಹಣ ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಸೇರುತ್ತದೆ.

ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

*10ನೇ ತರಗತಿ ಮಾರ್ಕ್ಸ್ ಕಾರ್ಡ್
*ಪಿಯುಸಿ ಮಾರ್ಕ್ಸ್ ಕಾರ್ಡ್
*ಆಧಾರ್ ಕಾರ್ಡ್
*ಬ್ಯಾಂಕ್ ಪಾಸ್ ಬುಕ್ ಕಾಪಿ
*ಕ್ಯಾಸ್ಟ್ ಸರ್ಟಿಫಿಕೇಟ್
*ಇನ್ಕಮ್ ಸರ್ಟಿಫಿಕೇಟ್
*ಪಾಸ್ ಪೋರ್ಟ್ ಸೈಜ್ ಫೋಟೋ
*ಅಡ್ಮಿಷನ್ ಫೀಸ್ ರೆಸಿಪ್ಟ್
*ವಾಸಸ್ಥಳ ದೃಢೀಕರಣ ಪತ್ರ.

ಲೋನ್‌ ತಗೊಂಡು EMI ಕಟ್ಟಲು ಆಗುತ್ತಿಲ್ಲ ಅಂತ ಚಿಂತೆ ಬೇಡ, ಈ ಟಿಪ್ಸ್ ಫಾಲೋ ಮಾಡಿ ಸಾಕು!

ಅರ್ಜಿ ಸಲ್ಲಿಕೆ ವಿಧಾನ:

ವಿದ್ಯಾರ್ಥಿಗಳು SSP ಪೋರ್ಟಲ್ ಮೂಲಕ ವಿದ್ಯಾಸಿರಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬೇಕು. ಈ ಸ್ಕಾಲರ್ಶಿಪ್ ಬಗ್ಗೆ ಹೆಚ್ಚು ಮಾಹಿತಿ ಪಡೆಯಲು, https://bcwd.karnataka.gov.in/info-2/Scholarships/Vidyasiri/kn ಈ ಲಿಂಕ್ ಓಪನ್ ಮಾಡಿ.

*ಮೊದಲಿಗೆ https://ssp.postmatric.karnataka.gov.in/ ಈ ಲಿಂಕ್ ಓಪನ್ ಮಾಡಿ, ಇಲ್ಲಿ ಬರುವ ಹೋಮ್ ಪೇಜ್ ನಲ್ಲಿ ಅಕೌಂಟ್ ಓಪನ್ ಮಾಡುವ ಆಪ್ಶನ್ ಸೆಲೆಕ್ಟ್ ಮಾಡಿ.

*ಆಧಾರ್ ಕಾರ್ಡ್ ನಲ್ಲಿ ಇರುವ ಹಾಗೆ ನಿಮ್ಮ ಹೆಸರನ್ನು ಹಾಕಿ, ಜೆಂಡರ್ ಆಯ್ಕೆ ಮಾಡಿ, ಓಟಿಪಿ ಆಪ್ಶನ್ ಸೆಲೆಕ್ಟ್ ಮಾಡಿ, ಕ್ಯಾಪ್ಚ ಕೋಡ್ ಹಾಕಿ, ಅಪ್ಲಿಕೇಶನ್ ಗೆ ಮುಂದುವರಿಯಿರಿ.

*ನಿಮ್ಮ ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್ ನಂಬರ್ ಹಾಕಿ, ಫೋನ್ ನಂಬರ್ ಹಾಕಿ, ಮುಂದುವರಿಯಿರಿ. ಬಳಿಕ Submit ಮಾಡಿದರೆ ನಿಮ್ಮ ಫೋನ್ ಗೆ OTP ಬರುತ್ತದೆ.

*OTP ಹಾಕಿದ ನಂತರ ನಿಮ್ಮ ID password ಲಾಗಿನ್ ಮಾಡುವುದಕ್ಕೆ ಸಿಗುತ್ತದೆ..

ಈ ಐಡಿ ಪಾಸ್ವರ್ಡ್ ಬಳಸಿ, SSP ಪೋರ್ಟಲ್ ಲಾಗಿನ್ ಮಾಡಬೇಕು, ಈಗ ಅಪ್ಲಿಕೇಶನ್ ನಲ್ಲಿ ನಿಮ್ಮ ಬಗ್ಗೆ ಕೇಳುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನೀಡಿ, ಭರ್ತಿ ಮಾಡಬೇಕು. ಹಾಗೆಯೇ ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.

ಈ ಮೂಲಕ ಅಪ್ಲಿಕೇಶನ್ ಸಲ್ಲಿಕೆ ಪ್ರಕ್ರಿಯೆ ಮುಗಿಸಿ, ನಂತರ ನೀವು ಅಪ್ಲಿಕೇಶನ್ ಸ್ಟೇಟಸ್ ಏನಿದೆ ಎನ್ನುವುದನ್ನ ಕೂಡ ssp ವೆಬ್ಸೈಟ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು. ಇದರಿಂದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲ ಇದೆ..ಅದನ್ನು ನೀವು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು.

Such students will get 1500 Education scholarship every month

Our Whatsapp Channel is Live Now 👇

Whatsapp Channel

Kannada News Today

Kannada News Today 🌐

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
FacebookX
We value your thoughts!
Send your feedback to us at kannadanewstoday@gmail.com

Related Stories