ಮಹಿಳೆಯರಿಗೆ ಬಂಪರ್ ಕೊಡುಗೆ, ಈ ಯೋಜನೆಯಲ್ಲಿ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ!
ಮಹಿಳೆಯರಿಗೆ ಸ್ವಂತ ಉದ್ಯೋಗ ಮಾಡಲು, ಉಚಿತ ಹೊಲಿಗೆ ಯಂತ್ರ ಕೊಡುವುದಕ್ಕೆ ಮುಂದಾಗಿದ್ದು, ಇದನ್ನು ಪಡೆಯಲು ಯಾರಿಗೆಲ್ಲಾ ಅರ್ಹತೆ ಇದೆ? ಅರ್ಜಿ ಸಲ್ಲಿಸುವುದು ಹೇಗೆ?
ಮಹಿಳೆಯರು ಸ್ವಾವಲಂಬಿಯಾಗಿ ಇರಬೇಕು ಎಂದು ಸರ್ಕಾರ ಹಲವು ಯೋಜನೆಗಳ ಸಹಾಯ ಮಾಡುತ್ತಿದೆ. ಇದೀಗ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಡೆಯಿಂದ ಇದೀಗ ಹಿಂದುಳಿದ ವರ್ಗದ ಮಹಿಳೆಯರಿಗೆ ಸ್ವಂತ ಉದ್ಯೋಗ ಮಾಡಲು, ಉಚಿತ ಹೊಲಿಗೆ ಯಂತ್ರ ಕೊಡುವುದಕ್ಕೆ ಮುಂದಾಗಿದ್ದು, ಇದನ್ನು ಪಡೆಯಲು ಯಾರಿಗೆಲ್ಲಾ ಅರ್ಹತೆ ಇದೆ? ಅರ್ಜಿ ಸಲ್ಲಿಸುವುದು ಹೇಗೆ? ಎಲ್ಲದರ ಪೂರ್ತಿ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ..
ಹೊಲಿಗೆ ಯಂತ್ರ ಪಡೆಯಲು ಅರ್ಹತೆ:
*ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸುವ ಮಹಿಳೆಯರು ಪ್ರವರ್ಗ 1, 2A, 3A ಅಥವಾ 3B ವರ್ಗದ ಮಹಿಳೆಯರಾಗಿರಬೇಕು.
*ಮಹಿಳೆಯ ಮನೆಯವರ ವಾರ್ಷಿಕ ಆದಾಯ ಹಳ್ಳಿಯ ಮಹಿಳೆ ಆದರೆ 98 ಸಾವಿರದ ಒಳಗಿರಬೇಕು, ಸಿಟಿ ಮಹಿಳೆಯರಿಗೆ ಮನೆಯವರ ವಾರ್ಷಿಕ ಆದಾಯ 1.20 ಲಕ್ಷದ ಒಳಗಿರಬೇಕು.
*18 ರಿಂದ 55 ವರ್ಷಗಳ ಒಳಗಿರುವ ಮಹಿಳೆಯರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು. ಎಲ್ಲಾ ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬಹುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಉಚಿತ ಹೊಲಿಗೆ ಯಂತ್ರ ಪಡೆಯುವ ಈ ಯೋಜನೆಗೆ ಅರ್ಜಿ ಸಲಿಸಿವುದಕ್ಕೆ ಕೊನೆಯ ದಿನಾಂಕ ಯಾವುದು ಎಂದು ನೋಡುವುದಾದರೆ, ಆಗಸ್ಟ್ 31 ಕೊನೆಯ ದಿನಾಂಕ ಆಗಿದ್ದು, ಆ ದಿನಾಂಕದ ಒಳಗೆ ಆಸಕ್ತಿ ಇರುವ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಕೆ ಆನ್ಲೈನ್ ಪ್ರಕ್ರಿಯೆಯ ಮೂಲಕ ಅರ್ಜಿ ಸಲ್ಲಿಸಬಹುದು.
ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಧಿಡೀರ್ ಶಾಕ್! ಇನ್ಮುಂದೆ ದುಬಾರಿಯಾಗಲಿದೆ ಕಾರು, ಮನೆ ಮೇಲಿನ ಇಎಂಐ
ಬೇಕಾಗುವ ದಾಖಲೆಗಳು:
*ಆಧಾರ್ ಕಾರ್ಡ್
*ರೇಷನ್ ಕಾರ್ಡ್
*ಬ್ಯಾಂಕ್ ಪಾಸ್ ಬುಕ್
*ಪಾಸ್ ಪೋರ್ಟ್ ಸೈಜ್ ಫೋಟೋ
*ಹೊಲಿಗೆ ಕಲಿತಿರುವ ಸರ್ಟಿಫಿಕೇಟ್
*ಕ್ಯಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್
*ಫೋನ್ ನಂಬರ್
ವಿಶೇಷ ಸೂಚನೆಗಳು:
*ಈಗಾಗಲೇ ಈ ನಿಗಮದ ಸೌಲಭ್ಯ ಪಡೆದಿರುವವರು ಅರ್ಜಿ ಸಲ್ಲಿಸುವ ಹಾಗಿಲ್ಲ.
*2023-24ರಲ್ಲಿ ಸೌಲಭ್ಯ ಸಿಕ್ಕಿಲ್ಲ ಎಂದರೆ, ಅವರು ಮತ್ತೆ ಅರ್ಜಿ ಸಲ್ಲಿಸಬೇಕಿಲ್ಲ.
*ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರಬೇಕು. ಆಧಾರ್ ಕಾರ್ಡ್ ನಲ್ಲಿ ಇರುವ ಹಾಗೆ ನಿಮ್ಮ ಹೆಸರು ಬೇರೆ ಎಲ್ಲಾ ದಾಖಲೆಗಳಲ್ಲಿ ಇರಬೇಕು.
*ಇದೆಲ್ಲವೂ ಸರಿ ಇದ್ದರೆ, ಸೇವಾಸಿಂಧು ಪೋರ್ಟಲ್ ಮೂಲಕ ನೀವು ಅರ್ಜಿ ಸಲ್ಲಿಸಬಹುದು.
ಲೋನ್ ತಗೊಂಡು EMI ಕಟ್ಟಲು ಆಗುತ್ತಿಲ್ಲ ಅಂತ ಚಿಂತೆ ಬೇಡ, ಈ ಟಿಪ್ಸ್ ಫಾಲೋ ಮಾಡಿ ಸಾಕು!
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಲು ಬಯಸುವವರು http://sevasindhu.karnataka.gov.in ಈ ಲಿಂಕ್ ಗೆ ಭೇಟಿ ನೀಡಿ ನಿಮ್ಮ ಮನೆಯಿಂದ ಅರ್ಜಿ ಸಲ್ಲಿಸಬಹುದು. ಅಥವಾ ನಿಮಗೆ ಹತ್ತಿರ ಇರುವ ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆನ್ಲೈನ್ ಮೂಲಕ ಮಾಡಬೇಕಾಗುತ್ತದೆ. ಹೆಚ್ಚಿನ ಮಾಹಿತಿ ಪಡೆಯಲು 8022374832 ಅಥವಾ 8050770004 ಅಥವಾ 8050770000 ಈ ನಂಬರ್ ಗೆ ಕಾಲ್ ಮಾಡಿ ಕೇಳಬಹುದು.
Application invited for free sewing machine distribution in this scheme