Loan Scheme : ಕೋವಿಡ್ ನಂತರದ ದಿನದಲ್ಲಿ ಹೆಚ್ಚಿನ ಯುವಕರು ಸ್ವ-ಉದ್ಯೋಗದತ್ತ ಮನಸ್ಸು ಮಾಡಿದ್ದಾರೆ. ಆದರೆ ಕೆಲವೊಬ್ಬರಿಗೆ ಆರ್ಥಿಕ ಸಮಸ್ಯೆಯಿಂದ ಪ್ರತಿಭೆ ಇದ್ದರೂ ಯಾವುದೇ ಉದ್ಯೋಗ ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ.
ಇನ್ನು ಕೆಲವೊಂದು ಸಂಘ ಸಂಸ್ಥೆಗಳು, ಸ್ವ-ಸಹಾಯ ಗುಂಪುಗಳು, ರೈತ ಉತ್ಪಾದಕ ಕಂಪನಿಗಳು ಸಹ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುತ್ತವೆ. ಇವುಗಳ ಆರ್ಥಿಕ ಸಮಸ್ಯೆ ನಿವಾರಿಸಿ ಅವರಿಗೆ ಬಲ ತುಂಬುವ ಉದ್ದೇಶದಿಂದ ಪಿಎಂಎಫ್ಎಂಇ (PMFME) ಯೋಜನೆ ಅಡಿಯಲ್ಲಿ ಸಾಲ (Loan) ನೀಡಲಾಗುತ್ತಿದೆ. ಈ ಸಾಲದಲ್ಲಿ ಶೇ. 50ರಷ್ಟು ಸಹಾಯಧನ ನೀಡಲಾಗುತ್ತದೆ.
ಹಾಗಾದರೆ ಯಾವ ಯಾವ ಉದ್ಯೋಗ ಆರಂಭಿಸಲು ಸಾಲ (Loan Scheme) ನೀಡಲಾಗುತ್ತದೆ ಎಂದು ತಿಳಿದುಕೊಳ್ಳೋಣ.
ಕೇವಲ 29 ರೂಪಾಯಿಗೆ ರೈಸ್, ಭಾರತ್ ಅಕ್ಕಿಗೆ ಮುಗಿಬಿದ್ದ ಜನ! ಎಲ್ಲಿ ಸಿಗುತ್ತೆ ಗೊತ್ತಾ?
ಅಡಿಕೆಗೆ ಸಂಬಂಧಿಸಿದಂತೆ ಹಸಿ ಹಾಗೂ ಒಣ ಅಡಿಕೆ ಸುಲಿಯುವ ಯಂತ್ರ ಖರೀದಿ, ಅಡಿಕೆ ಬೇಯಿಸುವ ಪಾತ್ರೆ ಖರೀದಿ, ಅಡಿಕೆಗೊನೆ ಬಿಡಿಸುವ ಯಂತ್ರ, ಡ್ರೈಯರ್, ತಕ್ಕಡಿ ಇತ್ಯಾದಿ ಕೊಂಡುಕೊಳ್ಳಬಹುದು.
ಕಾಳು ಮೆಣಸಿಗೆ ಸಂಬಂಧಿಸಿದಂತೆ ಕಾಳು ಮೆಣಸು ಬೇರ್ಪಡಿಸುವ ಯಂತ್ರ, ಸ್ಪೈರಲ್ ಕ್ಲೀನರ್, ಬೋಳುಕಾಳು ಮಾಡುವ ಯಂತ್ರ ಖರೀದಿ, ಗ್ರೇಡಿಂಗ ಯಂತ್ರ ಖರೀದಿಗೆ ಹಣ ನೀಡಲಾಗುತ್ತದೆ.
ಬಾಳೆಗೆ ಸಂಬಂಧಪಟ್ಟಂತೆ ಚಿಪ್ಸ್ ತಯಾರಿಕೆ ಯಂತ್ರ ಖರೀದಿ, ಹಪ್ಪಳ ತಯಾರಿಕಾ ಯಂತ್ರ, ಸುಕ್ಕೇಳಿ ತಯಾರಿಕಾ ಯಂತ್ರ, ಹಿಟ್ಟು ತಯಾರಿಕಾ ಯಂತ್ರ ಖರೀದಿಗೆ ಸಾಲ ನೀಡಲಾಗುತ್ತದೆ.
ತೆಂಗಿನಕಾಯಿಗೆ ಸಂಬಂಧಪಟ್ಟಂತೆ ಎಣ್ಣೆ ತೆಗೆಯುವ ಯಂತ್ರ, ತೆಂಗಿನ ತುರಿ ತಯಾರಿಸುವ ಯಂತ್ರ, ತೆಂಗಿನ ಹಾಲು ತಯಾರಿಸುವ ಯಂತ್ರ ಖರೀದಿಗೆ ಸಾಲ ನೀಡಲಾಗುತ್ತದೆ.
ಬೆಂಗಳೂರಿನ ಈ ಏರಿಯಾಗಳಲ್ಲಿ ಸಿಗುತ್ತೆ ಕಡಿಮೆ ಬಾಡಿಗೆಯಲ್ಲಿ ಬಾಡಿಗೆ ಮನೆಗಳು
ಹಲಸಿನ ಕಾಯಿಗೆ ಸಂಬಂಧಿಸಿದಂತೆ ಚಿಪ್ಸ್ ತಯಾರಿಕಾ ಯಂತ್ರ, ಹಪ್ಪಳ ತಯಾರಿಕಾ ಯಂತ್ರ, ಜ್ಯೂಸ್ ತಯಾರಿಕಾ ಯಂತ್ರ, ಪಲ್ಫ ತೆಗೆಯುವ ಯಂತ್ರ ಖರೀದಿಗೆ ಹಣ ನೀಡಲಾಗುತ್ತದೆ.
ಅರಿಶಿಣ ಮತ್ತು ಶುಂಠಿಗೆ ಸಂಬಂಧಿಸಿದಂತೆ ಅರಿಶಿನ ಹಾಗೂ ಶುಂಠಿ ತೊಳೆಯುವ ಯಂತ್ರ, ಕೊಚ್ಚುವ ಯಂತ್ರ, ಡ್ರೈಯರ್ ಹಾಗೂ ಪ್ಯಾಕಿಂಗ್ ಯಂತ್ರ, ಅರಿಶಿಣ ಹಿಟ್ಟು ತಯಾರಿಕಾ ಯಂತ್ರ ಖರೀದಿಗೆ ಹಣ ನೀಡಲಾಗುತ್ತದೆ.
ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ; ಕಲಿಕಾ ಭಾಗ್ಯ ಯೋಜನೆ
ಪಶು ಆಹಾರ ತಯಾರಿಕೆ, ಸೈಲೇಜ್, ಟೊಮೆಟೋ ಸಾಸ್, ಕೆಚಪ್, ಜ್ಯಾಮ್, ಜೆಲ್ಲಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕಷಾಯ ಪುಡಿ, ಮಸಾಲಾ ಪುಡಿ, ಬೇಕರಿ ಉತ್ಪನ್ನಗಳ ತಯಾರಿಕೆ, ಉಪ್ಪಿನಕಾಯಿ, ಉದ್ದಿನ ಹಪ್ಪಳ, ಜ್ಯೂಸ್, ಅಕ್ಕಿ, ಗೋದಿ, ರಾಗಿ ಧಾನ್ಯಗಳ ಹಿಟ್ಟು ತಯಾರಿಕೆ, ಮೆಣಸಿನ ಹಿಟ್ಟು, ಬಟಾಟೆ, ಗೆಣಸಿನ ಚಿಪ್ಸ್ ತಯಾರಿಕೆ, ಚಕ್ಕುಲಿ, ರೊಟ್ಟಿ, ಪರಾಟಾ, ಹೋಳಿಗೆ, ಚಾಕೋಲೇಟ್, ಲಸ್ಸಿ, ಹಾಲಿನ ಸಿಹಿ ಪದಾರ್ಥಗಳ ತಯಾರಿಕೆ, ಲಾಡು, ಚಿಕ್ಕಿ ಹಲ್ವಾ ಸೇರಿದಂತೆ ವಿವಿಧ ಬಗೆಯ ಆಹಾರ ಉದ್ಯಮಗಳ ಸ್ಥಾಪನೆಗೆ 15 ಲಕ್ಷ ರೂ.ಗಳ ವರೆಗೆ ಸಾಲ ನೀಡಲಾಗುತ್ತದೆ. ಇದರಲ್ಲಿ ಶೇ.50 ಸಹಾಯಧನವಾಗಿರುತ್ತದೆ.
ಆಸಕ್ತರು ಕೂಡಲೇ ಪಿಎಂಎಫ್ಎಂಇ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಇಲ್ಲವೇ ಜಿಲ್ಲಾ ಸಂಪನ್ಮೂಲ ಅಧಿಕಾರಿಯನ್ನು ಭೇಟಿಯಾಗಿ ಅರ್ಜಿ ಸಲ್ಲಿಸಬಹುದು.
15 lakh subsidy Loan for Your own business, Know the Details