ಕೇವಲ 29 ರೂಪಾಯಿಗೆ ರೈಸ್, ಭಾರತ್ ಅಕ್ಕಿಗೆ ಮುಗಿಬಿದ್ದ ಜನ! ಎಲ್ಲಿ ಸಿಗುತ್ತೆ ಗೊತ್ತಾ?
ನಮ್ಮ ದೇಶದಲ್ಲಿ ಬೆಲೆ (rate) ಗಳು ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿವೆ. ಅದರಲ್ಲೂ ದಿನಸಿ ಪದಾರ್ಥಗಳ ಬೆಲೆಗಳು ನಿಯಂತ್ರಣ ತಪ್ಪಿದೆಯೋ ಎನ್ನುವಂತೆ ದರ ಏರಿಕೆ ಆಗುತ್ತಿದೆ. ಇದರಿಂದ ಬಡವರು ಬದುಕಲು ಸಾಧ್ಯವಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ.
ಈ ಸಮಸ್ಯೆ ಕೇಂದ್ರ ಸರ್ಕಾರ (Central government) ದ ಗಮನಕ್ಕೂ ಬಂದಿದೆ. ಹಾಗಾಗಿ ದಿನಸಿ ಪದಾರ್ಥಗಳ ಬೆಲೆ ತಗ್ಗಿಸಲು ಕೇಂದ್ರ ಸರ್ಕಾರವು ಕಡಿಮೆ ಬೆಲೆಯಲ್ಲಿ ದಿನಸಿ ಪೂರೈಕೆಗೆ ಮುಂದಾಗಿದೆ.

ಈಗಾಗಲೇ ದೇಶದ ಸುಮಾರು 8೦ ಕೋಟಿ ಜನರಿಗೆ ಪ್ರತಿ ತಿಂಗಳು ಅಕ್ಕಿ, ಗೋದಿ, ಜೋಳ, ರಾಗಿ ಸೇರಿದಂತೆ ವಿವಿಧ ಪಡಿತರ ನೀಡಲಾಗುತ್ತಿದೆ. ಈಗ ಕಡಿಮೆ ಬೆಲೆಯಲ್ಲಿ ಉಳಿದ ದಿನಸಿಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿ ಜಾರಿಗೆ ತಂದಿದೆ.
ಆಸ್ತಿ, ಜಮೀನು ಖರೀದಿ ಮಾಡುವವರಿಗೆ ಹೊಸ ನಿಯಮ; ಶುಲ್ಕ ಇನ್ನಷ್ಟು ಹೆಚ್ಚಳ!
ಪ್ರತಿಯೊಬ್ಬರು ಗುಣಮಟ್ಟದ ಅಕ್ಕಿಯಿಂದ ಅನ್ನ ಮಾಡಲು ಬಯಸುತ್ತಾರೆ. ಗುಣಮಟ್ಟದ ಅಕ್ಕಿಗೆ ಕನಿಷ್ಟ ಎಂದರೂ 5೦ ರೂ. ಇದೆ. ಇದರಿಂದ ಅಕ್ಕಿ ಖರೀದಿಸಲು ಹಿಂದೆ ಮುಂದೆ ಆಲೋಚನೆ ಮಾಡುವ ಹಾಗಾಗಿದೆ. ಆದರೆ ಇನ್ನು ಮುಂದೆ ಚಿಂತೆ ಬೇಡ. ಕೇವಲ 29 ರೂ.ಗೆ ಒಂದು ಕೆ.ಜಿ. ಅಕ್ಕಿಯನ್ನು ಕೇಂದ್ರ ಸರ್ಕಾರವು ಭಾರತ್ ಬ್ರ್ಯಾಂಡ್ (Bharat brand) ಅಡಿಯಲ್ಲಿ ನೀಡುತ್ತಿದೆ. ಹಾಗಾದರೆ ಬೆಂಗಳೂರಿನಲ್ಲಿ ಈ ಅಕ್ಕಿ ಎಲ್ಲೆಲ್ಲಿ ಸಿಗುತ್ತದೆ ಎಂದು ತಿಳಿದುಕೊಳ್ಳೋಣ.
ಉತ್ತಮವಾದ ದಿನಸಿ ಪದಾರ್ಥಗಳನ್ನು ಸರ್ಕಾರವೇ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದರಿಂದ ಬೆಲೆಏರಿಕೆಗೆ ಕಡಿವಾಣ ಬೀಳಲಿದೆ. ಈಗಾಗಲೇ ಭಾರತ್ ದಾಲ್, ಭಾರತ್ ಅಟ್ಟಾ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ ಇದೀಗ ಭಾರತ್ ರೈಸ್ ಬಿಡುಗಡೆ ಮಾಡಿದೆ.
ಭಾರತ್ ದಾಲ್ಗೆ ಕೆ.ಜಿ.ಗೆ 6೦ ರೂ. ಭಾರತ್ ಅಟ್ಟಾಗೆ ಕೆ.ಜಿ.ಗೆ 27 ರೂ. ನಂತೆ ಮಾರಾಟ ಮಾಡಲಾಗುತ್ತಿದೆ. ಈ ಯೋಜನೆಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕಳೆದ 2023ರ ಅಗಷ್ಟನಿಂದ 2024 ಜನೆವರಿ ವರೆಗೆ ಬೆಂಗಳೂರಿನಲ್ಲಿ 2,81,572 ಕೆ.ಜಿ. ಕಡಲೆ ಬೇಳೆ, 1,22,19೦ ಕೆ.ಜಿ. ಗೋಧಿ ಹಿಟ್ಟು ಮಾರಾಟವಾಗಿದೆ.
ರೈತರಿಗೆ ಗುಡ್ ನ್ಯೂಸ್; ಸಿಗಲಿದೆ 3000 ಪಿಂಚಣಿ ಹಾಗೂ ಕೃಷಿಗಾಗಿ ಇನ್ನಷ್ಟು ಸೌಲಭ್ಯ!
ಜನರಿಂದ ಉತ್ತಮ ಸ್ಪಂದನೆ:
ವಿಧಾನ ಸೌಧದ ಮುಂಭಾಗ ವ್ಯಾನಿನಲ್ಲಿ ತಂದು ಮಾರಾಟ ಮಾಡಲಾಗುತ್ತದೆ. ವ್ಯಾನ್ ಬಂದು ನಿಲ್ಲುವುದೇ ತಡ ಜನರು ತಾ ಮುಂದು ನಾ ಮುಂದು ಎಂದು ಮುಗಿ ಬಿದ್ದು ಖರೀದಿಸುತ್ತಿದ್ದಾರೆ. ಈ ಪದಾರ್ಥಗಳು ಬೇಗ ಕೆಡದ ಕಾರಣ ಎರಡು ಮೂರು ತಿಂಗಳಿಗೆ ಆಗುವಷ್ಟನ್ನು ಒಬ್ಬರೇ ಖರೀದಿ ಮಾಡುತ್ತಿದ್ದಾರೆ. ಎಷ್ಟು ಬೇಡಿಕೆ ಇದೆ ಎಂದರೆ ಕೇವಲ 3೦ ನಿಮಿಷದಲ್ಲಿ ಒಂದು ಟನ್ ಗೋದಿ ಹಿಟ್ಟು ಹಾಗೂ ಕಡಲೆ ಬೇಳೆ ಮಾರಾಟವಾಗಿದೆ.
ಅಲ್ಲದೆ ನೀಡುತ್ತಿರುವ ಗೋದಿ ಹಿಟ್ಟು ಹಾಗೂ ಕಡಲೆ ಬೇಳೆ, ಅಕ್ಕಿಯ ಗುಣಮಟ್ಟವೂ ತುಂಬಾ ಚೆನ್ನಾಗಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.
ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕ ಘೋಷಣೆ
ಬೆಂಗಳೂರಿನಲ್ಲಿ ಮನೆ ಮನೆಗೆ ವಿತರಣೆ:
ಬೆಂಗಳೂರಿ (Bengaluru) ನಲ್ಲಿ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ ಮೂಲಕ ಅಕ್ಕಿ ಮಾರಾಟ ಮಾಡಲಾಗುತ್ತಿದೆ.ಫೆ.6 ರಿಂದ ಯಶವಂತಪುರದ ಎನ್ಸಿಸಿಎಫ್ ಮುಖ್ಯ ಗೋದಾಮಿನಿಂದ 5೦ ಏರಿಯಾಗಳಿಗೆ ವ್ಯಾನಿನ ಮೂಲಕ ತೆಗೆದುಕೊಂಡು ಹೋಗಿ ಮಾರಾಟ ಮಾಡಲಾಗುತ್ತದೆ.
ಈ ಭಾರತ್ ಬ್ರ್ಯಾಂಡ್ನ ಪದಾರ್ಥಗಳು ಆನ್ಲೈನ್ ವ್ಯಾಪಾರಿ (Online Retail Stores) ಜಾಗಗಳಾದ ಅಮೇಜಾನ್ (Amazon), ಫ್ಲಿಪ್ ಕಾರ್ಟ್ಗಳಲ್ಲೂ (Flipkart) ಲಭ್ಯವಿದೆ. ಇದರಿಂದ ಮನೆ ಮನೆಗೆ ಡಿಲೆವರಿ ನೀಡಲಾಗುತ್ತದೆ.
Rice for only 29 rupees, Demand increased for Bharat rice