ಈ ಬ್ಯಾಂಕ್ ನ 17,000 ಕ್ರೆಡಿಟ್ ಕಾರ್ಡ್ ಗಳು ಬ್ಲಾಕ್ ಆಗಿವೆ! ನಿಮ್ಮ ಕಾರ್ಡ್ ಇದಿಯಾ ನೋಡಿಕೊಳ್ಳಿ

Credit Card : ಐಸಿಐಸಿಐ ನ 17,000 ಕ್ರೆಡಿಟ್ ಕಾರ್ಡ್ ಗಳು ಬ್ಲಾಕ್ ಆಗಿವೆ, ಇದರಲ್ಲಿ ನಿಮ್ಮ ಕಾರ್ಡ್ ಕೂಡ ಇದೆಯೇ? ಕಾರಣ ತಿಳಿದರೆ ಇನ್ನೂ ಶಾಕ್ ಆಗುತ್ತೀರಿ.

Credit Card : ನಿಮ್ಮ ಮೊಬೈಲಿಗೆ ಯಾರಾದರೂ ಅಪ್ಪಿ ತಪ್ಪಿ ಬೇರೆಯವರಿಗೆ ಮಾಡಬೇಕಾದ ಕರೆಗಳನ್ನು ಮಾಡಿರುತ್ತಾರೆ. ನೀವು ಕೂಡ ರಾಂಗ್ ನಂಬರ್ ಎಂದು ಹೇಳಿ ಕರೆಯನ್ನು ಡಿಸ್ಕನೆಕ್ಟ್ ಮಾಡಿರುತ್ತೀರಾ.. ಇದೇ ರೀತಿ ಯಾವುದೋ ಒಂದು ಸಂದರ್ಭದಲ್ಲಿ ನಿಮ್ಮ ಮನೆಗೆ ನಿಮ್ಮದಲ್ಲದ ವಿಳಾಸದ ಕೊರಿಯರ್ ಕೂಡ ಬಂದಿರಬಹುದು. ಇದು ಕೂಡ ಸಾಮಾನ್ಯ. ಆದರೆ ಇಂದು ನಾವು ಹೇಳುವ ಒಂದು ಸನ್ನಿವೇಶ ನೀವು ಈ ಹಿಂದೆ ಕೇಳಿರಲಿಕ್ಕಿಲ್ಲ.

ಯಾವುದೇ ಒಂದು ಮನುಷ್ಯನಿಂದ ತಪ್ಪಾಗುವುದು ಸಾಮಾನ್ಯ ಇಂತಹ ತಪ್ಪು ನಡೆದಾಗ ಅದನ್ನು ಸರಿಪಡಿಸುವುದು ಕೂಡ ಅಷ್ಟೇ ಮಹತ್ವದ್ದು. ಈಗ ಐಸಿಐಸಿಐ ಬ್ಯಾಂಕ್ (ICICI Bank) ಕೂಡ ಇದೇ ತರಹದ ತಪ್ಪು ಮಾಡಿ ಸರಿ ಪಡಿಸುವ ದಾರಿಯಲ್ಲಿದೆ. ಹಾಗಾದರೆ ಐಸಿಐಸಿಐ ಮಾಡಿರುವ ಪ್ರಮಾದವಾದರೂ ಏನು ನೋಡೋಣ.

ಈ ಕಾರ್ಡ್ ಇದ್ದರೆ ನಿಮ್ಮ ಮಕ್ಕಳಿಗೂ ಸಿಗುತ್ತೆ 11 ಸಾವಿರ ರೂಪಾಯಿ ಎಜುಕೇಶನ್ ಸ್ಕಾಲರ್ಶಿಪ್!

ಈ ಬ್ಯಾಂಕ್ ನ 17,000 ಕ್ರೆಡಿಟ್ ಕಾರ್ಡ್ ಗಳು ಬ್ಲಾಕ್ ಆಗಿವೆ! ನಿಮ್ಮ ಕಾರ್ಡ್ ಇದಿಯಾ ನೋಡಿಕೊಳ್ಳಿ - Kannada News

ತಪ್ಪು ವಿಳಾಸಕ್ಕೆ ಕ್ರೆಡಿಟ್ ಕಾರ್ಡ್ – Credit Card

ಐಸಿಐಸಿಐ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಗಳನ್ನು (ICICI Credit Card) ಕೊರಿಯರ್ ಮಾಡಬೇಕಾದಾಗ ತಪ್ಪು ವಿಳಾಸಕ್ಕೆ ಕಾರ್ಡ್ಗಳನ್ನು ಕಳುಹಿಸಿದೆ. ಅದು ಯಾವುದೋ 100 – 200 ಕಾರ್ಡುಗಳನ್ನು ಕಳುಹಿಸಿಲ್ಲ. ಐಸಿಐಸಿಐನಿಂದ ತಪ್ಪಾಗಿ ಕಳುಹಿಸಲಾದ ಕ್ರೆಡಿಟ್ ಕಾರ್ಡ್ ಗಳ ಸಂಖ್ಯೆ 17,000.

ನಿಮಗೂ ಕೂಡ ಈ ಸಂಖ್ಯೆ ನೋಡಿ ಗಾಬರಿ ಆಗಿರಬಹುದು. ಆದರೆ ಇದು ನಿಜ. ಯಾವುದೋ ಒಂದೆರಡು ಗ್ರಾಹಕರು ಈ ಬಗ್ಗೆ ದೂರು ನೀಡಿದಾಗ ಐಸಿಐಸಿಐ ಬ್ಯಾಂಕ್ ಎಚ್ಚೆತ್ತುಕೊಂಡಿದೆ, ಈ ತರಹ ಆಗಿರುವ ಕಾರ್ಡ್ ಗಳ ಸಂಖ್ಯೆ ಎಷ್ಟು ಎಂದು ತಾನೇ ಅವಲೋಕನ ಮಾಡಿ 17,000 ಕಾರ್ಡುಗಳು ಈ ರೀತಿ ಆಗಿವೆ ಎಂದು ನಿರ್ಧರಿಸಿ ಆ ಎಲ್ಲಾ ಕಾರ್ಡ್ಗಳನ್ನು ಬ್ಲಾಕ್ ಮಾಡಿದೆ.

ಈ ಯೋಜನೆ ಅಡಿ ಯಾವುದೇ ಬಡ್ಡಿ ಇಲ್ಲದೆ ಸಿಗಲಿದೆ 2 ಲಕ್ಷ ರೂಪಾಯಿ! ಅರ್ಜಿ ಸಲ್ಲಿಸಿ

Credit Cardಹೊಸ ಕ್ರೆಡಿಟ್ ಕಾರ್ಡ್ ಕೊಡುವ ಭರವಸೆ

ಮ್ಯಾಪ್ ಮಾಡಿ ಕಾರ್ಡ್ಗಳನ್ನು ಕಳುಹಿಸಬೇಕಾದರೆ ತಪ್ಪಾಗಿ ಕಳುಹಿಸಲಾಗಿದೆ ಇದು ನಮ್ಮ ಗಮನಕ್ಕೆ ಈಗಾಗಲೇ ಬಂದಿದ್ದು ತಕ್ಷಣದ ಕ್ರಮವಾಗಿ ನಾವು ಕ್ರೆಡಿಟ್ ಕಾರ್ಡ್ಗಳನ್ನು ನಿರ್ಬಂಧಿಸಿದ್ದೇವೆ ಹಾಗೂ ಅರ್ಹ ಗ್ರಾಹಕರ ಹೆಸರಿನಲ್ಲಿ ಹೊಸ ಕಾರ್ಡ್ಗಳನ್ನು ಶೀಘ್ರದಲ್ಲಿ ನೀಡಲಾಗುತ್ತದೆ, ಗ್ರಾಹಕರಿಗೆ ಆಗಿರುವ ಅನಾನುಕೂಲಕ್ಕಾಗಿ ನಾವು ವಿಷಾದಿಸುತ್ತೇವೆ ಎಂದು ಬ್ಯಾಂಕ್ ಹೇಳಿದೆ.

ಯಾರಿಗೆ ಸಿಕ್ಕಿದೆ ಈ ವರ್ಷದ ಗ್ಯಾಸ್ ಸಬ್ಸಿಡಿ, ಲಿಸ್ಟ್ ಬಿಡುಗಡೆ! ನಿಮ್ಮ ಹೆಸರು ಚೆಕ್ ಮಾಡಿ

ಯಾವುದೇ ಹಣದ ದುರುಪಯೋಗ ನಡೆದಿಲ್ಲ. ನಡೆದರೂ ಬ್ಯಾಂಕ್ ಇದಕ್ಕೆ ಜವಾಬ್ದಾರಿ

ತಪ್ಪು ವಿಳಾಸಕ್ಕೆ ಕಳುಹಿಸಲಾದ ಕ್ರೆಡಿಟ್ ಕಾರ್ಡ್ ಗಳ (Credit Cards) ಸಂಖ್ಯೆಯು ಒಟ್ಟು ಕ್ರೆಡಿಟ್ ಕಾರ್ಡ್ ಪೋರ್ಟ್ಪೋಲಿಯೋದ ಶೇಕಡಾ 0.01 ಎಂದು ಬ್ಯಾಂಕ್ ಹೇಳಿದೆ ಇದುವರೆಗೆ ಯಾವುದೇ ಕಾರ್ಡ್ ಗಳಲ್ಲಿ ಹಣದ ದುರುಪಯೋಗ ಆದ ಬಗ್ಗೆ ವರದಿಗಳು ಬಂದಿಲ್ಲ ಈ ಬಗ್ಗೆ ವರದಿಗಳು ಬಂದಲ್ಲಿ ಬ್ಯಾಂಕ್ ಗ್ರಾಹಕರಿಗೆ ಸಮರ್ಪಕವಾದ ಪರಿಹಾರವನ್ನು ನೀಡುತ್ತದೆ.

ಟೆಕ್ನೋಫಿನೋ ಫೋರಂ ನಲ್ಲಿ ಹಲವು ಗ್ರಾಹಕರು ಈ ಬಗ್ಗೆ ತಮ್ಮ ಅನುಭವಗಳನ್ನು ಹಾಕುತ್ತಿದ್ದಾರೆ. ಐ ಮೊಬೈಲ್ ಆಪ್ ನಲ್ಲಿ ಕಾರ್ಡ್ ನ ವಿವರಗಳು ಸಿವಿವಿ ಹಾಗೂ ಎಕ್ಸ್ಪೈರಿ ಡೇಟ್ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಹಾಗೂ ಅಪರಿಚಿತ ವ್ಯಕ್ತಿಗಳಿಗೆ ಈ ಮಾಹಿತಿ ಸಿಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ತಿಂಗಳಿಗೆ 1 ಲಕ್ಷ ಪಡೆಯಲು ಈ ಎಲ್ಐಸಿ ಪಾಲಿಸಿಯಲ್ಲಿ ಹೂಡಿಕೆ ಮಾಡಿ! ಬಂಪರ್ ಸ್ಕೀಮ್

ಇನ್ನೂ ಕೆಲವರು ದೇಶಿ ವಹಿವಾಟುಗಳನ್ನು ಅಷ್ಟೇ ನಿರ್ಬಂಧಿಸಲಾಗಿದೆ ಅಂತರರಾಷ್ಟ್ರೀಯ ವಹಿವಾಟುಗಳನ್ನು ಇನ್ನೂ ಕೂಡ ಇಂತಹ ತಪ್ಪಾದ ಕಾರ್ಡ್ ಹೊಂದಿದವರು ಮಾಡಬಹುದಾಗಿದೆ ಎಂದು ಹೇಳಿದ್ದಾರೆ. ಏನೇ ಆಗಿದ್ದರು ಇಂತಹ ತಪ್ಪಾದ ಕಾರ್ಡ್ ಹೋಗಿರುವುದರಿಂದ ಯಾವುದೇ ತರಹದ ನಷ್ಟ ಆಗದೆ ಬೇಗನೆ ಎಲ್ಲವೂ ಸುಧಾರಿಸಿದರೆ ಒಳ್ಳೆಯದು.

17,000 credit cards of this bank are blocked

Follow us On

FaceBook Google News