ಈ ಕಾರ್ಡ್ ಇದ್ದರೆ ನಿಮ್ಮ ಮಕ್ಕಳಿಗೂ ಸಿಗುತ್ತೆ 11 ಸಾವಿರ ರೂಪಾಯಿ ಎಜುಕೇಶನ್ ಸ್ಕಾಲರ್ಶಿಪ್!
ಕಾರ್ಮಿಕ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ಶಿಪ್ (Education scholarships) ನೀಡಲು ಸರ್ಕಾರ ನಿರ್ಧರಿಸಿದೆ.
ಕಟ್ಟಡ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ (labours) ಸರ್ಕಾರ ಬೇರೆ ಬೇರೆ ಯೋಜನೆಗಳ ಮೂಲಕ ಅವರ ಸಾಮಾಜಿಕ ಭದ್ರತೆಯನ್ನು ಕಾಯ್ದುಕೊಳ್ಳಲು ಹಾಗೂ ಆರ್ಥಿಕವಾಗಿ ಅವರ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸುತ್ತಿದೆ.
ಇದೀಗ ಕಟ್ಟಡ ಕಾರ್ಮಿಕರಿಗಾಗಿಯೇ ಮತ್ತೊಂದು ಇನಿಶಿಯೇಟಿವ್ ತೆಗೆದುಕೊಂಡಿದ್ದು ಕಾರ್ಮಿಕ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ಶಿಪ್ (Education scholarships) ನೀಡಲು ಸರ್ಕಾರ ನಿರ್ಧರಿಸಿದೆ. ಕಾರ್ಮಿಕ ಕಾರ್ಡು ಹೊಂದಿರುವವರು ಅಪ್ಲೈ ಮಾಡಿ ಸ್ಕಾಲರ್ಶಿಪ್ ಪಡೆದುಕೊಳ್ಳಿ.
ಈ ಯೋಜನೆ ಅಡಿ ಯಾವುದೇ ಬಡ್ಡಿ ಇಲ್ಲದೆ ಸಿಗಲಿದೆ 2 ಲಕ್ಷ ರೂಪಾಯಿ! ಅರ್ಜಿ ಸಲ್ಲಿಸಿ
ಕಾರ್ಮಿಕ ಕಾರ್ಡ್ ಹೊಂದಿರುವವರ ಮಕ್ಕಳಿಗೆ ಸಿಗುತ್ತೆ ಸ್ಕಾಲರ್ಶಿಪ್!
ಹೌದು, ವಾರ್ಷಿಕವಾಗಿ 1100 ಗಳಿಂದ ಹನ್ನೊಂದು ಸಾವಿರ ರೂಪಾಯಿಗಳವರೆಗಿನ ಸ್ಕಾಲರ್ಶಿಪ್ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು. ಲೇಬರ್ ಕಾರ್ಡ್ (labour card) ಹೊಂದಿರುವ ಕುಟುಂಬದ ಮಕ್ಕಳಿಗೆ ಯಾವ ಹಂತದಲ್ಲಿ ಎಷ್ಟು ಸ್ಕಾಲರ್ಶಿಪ್ ಸಿಗುತ್ತದೆ ಎನ್ನುವುದನ್ನು ನೋಡುವುದಾದರೆ,
ಒಂದನೇ ತರಗತಿಯಿಂದ ಪದವಿಯವರೆಗೆ 1100 ರೂಪಾಯಿಗಳಿಂದ 6,000 ರೂಪಾಯಿಗಳವರೆಗಿನ ಸ್ಕಾಲರ್ಶಿಪ್ ಸಿಗುತ್ತದೆ. ಅದೇ ರೀತಿ ಸ್ನಾತಕೋತ್ತರ ಪದವಿಗೆ 10,000 ಸ್ಕಾಲರ್ಶಿಪ್ ಪಡೆಯಬಹುದು. ಪಿ ಹೆಚ್ ಡಿ ಮಾಡುವವರಿಗೆ 11000 ಸ್ಕಾಲರ್ಶಿಪ್ ಸಿಗುತ್ತೆ.
ಯಾರಿಗೆ ಸಿಕ್ಕಿದೆ ಈ ವರ್ಷದ ಗ್ಯಾಸ್ ಸಬ್ಸಿಡಿ, ಲಿಸ್ಟ್ ಬಿಡುಗಡೆ! ನಿಮ್ಮ ಹೆಸರು ಚೆಕ್ ಮಾಡಿ
ಸ್ಕಾಲರ್ಶಿಪ್ ಪಡೆಯಲು ಬೇಕಾಗಿರುವ ದಾಖಲೆಗಳು!
ವಿದ್ಯಾರ್ಥಿಗಳ ಆಧಾರ್ ಕಾರ್ಡ್
ಪೋಷಕರ ಆಧಾರ್ ಕಾರ್ಡ್
ಪೋಷಕರ ಲೇಬರ್ ಕಾರ್ಡ್
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಬ್ಯಾಂಕ್ ಖಾತೆಯ ವಿವರ (Bank Account)
ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ
ಶಾಲೆ ಅಥವಾ ಕಾಲೇಜಿಗೆ ದಾಖಲಾತಿ ಪಡೆದುಕೊಂಡಿದ್ದರೆ ದಾಖಲಾತಿಯ ರಿಸಿಪ್ಟ್
ತಿಂಗಳಿಗೆ 1 ಲಕ್ಷ ಪಡೆಯಲು ಈ ಎಲ್ಐಸಿ ಪಾಲಿಸಿಯಲ್ಲಿ ಹೂಡಿಕೆ ಮಾಡಿ! ಬಂಪರ್ ಸ್ಕೀಮ್
ಯಾರಿಗೆ ಸಿಗುತ್ತೆ ಲೇಬರ್ ಕಾರ್ಡ್ ಸ್ಕಾಲರ್ಶಿಪ್!
* ಪೋಷಕರು ಆದಾಯ ಪ್ರತಿ ತಿಂಗಳು 35 ಸಾವಿರಕ್ಕಿಂತ ಕಡಿಮೆ ಇರಬೇಕು.
* ಇನ್ನು ಸಾಮಾನ್ಯ ಲೇಬರ್ ವಿದ್ಯಾರ್ಥಿಗಳು ಕನಿಷ್ಠ 50% ಹಾಗೂ ಎಸ್ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳು 45% ಅಂಕ ಪಡೆದಿರಬೇಕು.
* ವಿದ್ಯಾರ್ಥಿಯ ಪೋಷಕರು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ನೋಂದಾಯಿತ ಸದಸ್ಯರಾಗಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ? (How to apply)
KLWB ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಓಟಿಪಿ ಮೂಲಕ ಲಾಗಿನ್ ಆಗಬೇಕು. ಬಳಿಕ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸು ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.
ಆಯುಷ್ಮಾನ್ ಕಾರ್ಡ್ ಹೊಸ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ
ಅಗತ್ಯ ಇರುವ ಮಾಹಿತಿ ಮತ್ತು ದಾಖಲೆಗಳನ್ನು ನೀಡಿ ಸ್ಕಾಲರ್ಷಿಪ್ ಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳಿಸಿ. ನಂತರ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.
If you have this card, your children will get Education scholarship