ಆಯುಷ್ಮಾನ್ ಕಾರ್ಡ್ ಹೊಸ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ
ಆಯುಷ್ಮಾನ್ ಕಾರ್ಡ್ ಹೊಸ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ, ನಿಮ್ಮ ಹೆಸರು ಚೆಕ್ ಮಾಡುವುದು ಹೇಗೆ? ತಿಳಿಯಿರಿ
ಕೇಂದ್ರ ಸರ್ಕಾರ ಸಾರ್ವಜನಿಕರ ಹಿತ ದೃಷ್ಟಿಯಿಂದ ಆರ್ಥಿಕ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವುದು ಮಾತ್ರವಲ್ಲದೆ, ಜನರ ಆರೋಗ್ಯ ಸುಧಾರಣೆಗೂ ಕೂಡ ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ.
ಅವುಗಳಲ್ಲಿ ಜನ ಆರೋಗ್ಯ ಯೋಜನೆ ಕೂಡ ಒಂದು. ಈ ಯೋಜನೆಯ ಅಡಿಯಲ್ಲಿ ಆಯುಷ್ಮಾನ್ ಕಾರ್ಡ್ ಪಡೆದುಕೊಂಡವರಿಗೆ 5 ಲಕ್ಷಗಳವರೆಗೆ ಮೆಡಿಕಲ್ ಟ್ರೀಟ್ಮೆಂಟ್ ಉಚಿತವಾಗಿ ಸಿಗುತ್ತದೆ.
ಎಸ್‌ಬಿಐ ಬ್ಯಾಂಕ್ ಅಕೌಂಟ್ ಇರುವ ಮಹಿಳೆಯರಿಗೆ ಭರ್ಜರಿ ಯೋಜನೆ! ಇನ್ನಷ್ಟು ಬೆನಿಫಿಟ್
ಆಯುಷ್ಮಾನ್ ಕಾರ್ಡ್ ಹೊಂದಿದ್ದೀರಾ?
ರಾಷ್ಟ್ರೀಯ ಆರೋಗ್ಯ ಅಧಿಕಾರ ಆಯುಷ್ಮಾನ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಫಲಾನುಭವಿಗಳ ಹೊಸ ಪಟ್ಟಿ ಬಿಡುಗಡೆ ಮಾಡಿದೆ. ನೀವು ನಿಮ್ಮ ಮೊಬೈಲ್ ಮೂಲಕ ಹೊಸ ಪೋರ್ಟಲ್ ನಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಬಹುದು.
ನಿಮ್ಮ ಬಳಿ ಆಧಾರ್ ಕಾರ್ಡ್ (Aadhaar Card) ಮತ್ತು ಮೊಬೈಲ್ ಸಂಖ್ಯೆ (Mobile Number) ಇದ್ದರೆ ಆಯುಷ್ಮಾನ್ ಕಾರ್ಡನ್ನು ಆನ್ಲೈನ್ ನಲ್ಲಿ ಡೌನ್ಲೋಡ್ ಮಾಡಿ ಕೊಳ್ಳಲು ಈಗ ಅವಕಾಶವಿದೆ.
ಆಯುಷ್ಮಾನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
ಆಯುಷ್ಮಾನ್ ಭಾರತ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ. ಅಲ್ಲಿ ಕಾಣಿಸುವ ಬೆನಿಫಿಶಿಯರಿ ಐಡೆಂಟಿಫಿಕೇಶನ್ ಸಿಸ್ಟಮ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಆಯುಷ್ಮಾನ್ ಕಾರ್ಡ್ ಡೌನ್ಲೋಡ್ (Download) ಮಾಡಲು ಆಯ್ಕೆ ಕಾಣಿಸುತ್ತದೆ.
ಅದನ್ನು ಕ್ಲಿಕ್ ಮಾಡಿ. ಈಗ ನಿಮ್ಮ ಆಧಾರ್ ಸಂಖ್ಯೆ ಹಾಗೂ ಅದಕ್ಕೆ ಕನೆಕ್ಟ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಿ.
ಈಗ ನಿಮ್ಮ ಹೆಸರಿನಲ್ಲಿ ಇರುವ ಆಯುಷ್ಮಾನ್ ಕಾರ್ಡ್ ಕಾಣಿಸುತ್ತದೆ. ಅದನ್ನ ಡೌನ್ ಲೋಡ್ ಮಾಡಿಕೊಳ್ಳಬಹುದು. ಪಿಡಿಎಫ್ ಫಾರ್ಮೆಟ್ ನಲ್ಲಿ (PDF Format) ಇರುವ ಆಯುಷ್ಮಾನ್ ಕಾರ್ಡ್ ಪ್ರಿಂಟ್ ತೆಗೆದುಕೊಳ್ಳಬಹುದು.
ಉಚಿತ ಮನೆ ಯೋಜನೆಗೆ ಅರ್ಜಿ ಆಹ್ವಾನ! ಈ ಕೂಡಲೇ ನೋಂದಣಿ ಮಾಡಿಕೊಳ್ಳಿ
ಮೊಬೈಲ್ ನಲ್ಲಿ ಆಯುಷ್ಮಾನ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ?
ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಗೆ ಹೋಗಿ ಆಯುಷ್ಮಾನ್ ಭಾರತ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ. ನಂತರ ನೀವು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಬಳಿಕ ಲಾಗಿನ್ ಆಗಬೇಕು.
ನಂತರ ನೀವು ಫಲಾನುಭವಿಗಳಾಗಿದ್ದರೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ಆಯುಷ್ಮಾನ್ ಕಾರ್ಡ್ ಪಟ್ಟಿ ಚೆಕ್ ಮಾಡಬಹುದು. ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಿ ನಂತರ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಿ.
ಬ್ಯಾಂಕ್ ಖಾತೆ, ಗ್ಯಾಸ್ ಸಿಲಿಂಡರ್ ಸೇರಿದಂತೆ ಮೇ 1ರಿಂದ ಹೊಸ ಹೊಸ ರೂಲ್ಸ್ ಜಾರಿ
ಬಳಿಕ ನಿಮ್ಮ ಆಯುಷ್ಮಾನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಲು ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ನಿಮಗೆ ಬೇಕಾಗಿರುವ ಪಿಡಿಎಫ್ ಅಥವಾ ಜೆಪಿಜಿ ಫಾರ್ಮೆಟ್ ನಲ್ಲಿ ಆಯುಷ್ಮಾನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳ ಬಹುದು.
ಆಯುಷ್ಮಾನ್ ಕಾರ್ಡನ್ನು ಹತ್ತಿರದ ಸಹಕಾರಿ ಸೊಸೈಟಿಯಲ್ಲಿ ಪಡೆದುಕೊಳ್ಳಬಹುದು ವರ್ಷಕ್ಕೆ ಒಮ್ಮೆ ರಿನಿವಲ್ ಮಾಡಬೇಕು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸೊಸೈಟಿಗೆ ಹೋಗಿ ಮಾಹಿತಿ ಪಡೆಯಿರಿ.
Ayushman card new list released, check your name