ಎಸ್‌ಬಿಐ ಬ್ಯಾಂಕ್ ಅಕೌಂಟ್ ಇರುವ ಮಹಿಳೆಯರಿಗೆ ಭರ್ಜರಿ ಯೋಜನೆ! ಇನ್ನಷ್ಟು ಬೆನಿಫಿಟ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಅನ್ನಪೂರ್ಣ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ 50,000 ಸಾಲ (Loan) ಸೌಲಭ್ಯ ಒದಗಿಸುತ್ತದೆ
ಇನ್ನು ಮುಂದೆ ಮಹಿಳೆಯರನ್ನ ಮನೆಯಲ್ಲಿ ಅಡುಗೆ ಮಾಡಿಕೊಂಡು ಇರುವವರು ಎಂದು ಯಾರು ಹೀಯಾಳಿಸುವಂತೆ ಇಲ್ಲ. ಯಾಕೆಂದರೆ ಸ್ವಾವಲಂಬಿ ಮಹಿಳೆ (independence women) ಬೆಂಬಲಿಸುವ ಉದ್ದೇಶದಿಂದ ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದೆ, ಇದರ ಮೂಲಕ ಚೆನ್ನಾಗಿ ಅಡುಗೆ ಮಾಡುವ ಮಹಿಳೆಯರಿಗೆ ಸಿಗುತ್ತೆ ಸಾಕಷ್ಟು ಬೆನಿಫಿಟ್.
ಅನ್ನಪೂರ್ಣ ಯೋಜನೆ (Annapurna Yojana)
ನಿಮಗೆ ರುಚಿರುಚಿಯಾಗಿ ಅಡುಗೆ ಮಾಡಲು ಬರುತ್ತಾ? ಹಾಗಾದ್ರೆ ಇನ್ನು ಮುಂದೆ ನಿಮ್ಮದೇ ಆಗಿರುವ ಸ್ವಂತ ಉದ್ಯಮ (Own Business) ಆರಂಭಿಸಬಹುದು. ಆರ್ಥಿಕ ನೆರವು ನೀಡುತ್ತಿದ್ದು 50,000ಗಳವರೆಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಹಣಕಾಸಿನ ನೆರವನ್ನು ಒದಗಿಸುತ್ತದೆ. ಈ ಮೂಲಕ ಸ್ವಂತ ಉದ್ಯಮ ಮಾಡಿ ಹಣ ಸಂಪಾದನೆ ಮಾಡಬಹುದು.
ಉಚಿತ ಮನೆ ಯೋಜನೆಗೆ ಅರ್ಜಿ ಆಹ್ವಾನ! ಈ ಕೂಡಲೇ ನೋಂದಣಿ ಮಾಡಿಕೊಳ್ಳಿ
ಯಾರಿಗೆ ಸಿಗುತ್ತೆ ಅನ್ನಪೂರ್ಣ ಯೋಜನೆಯ ಪ್ರಯೋಜನ?
* ಅನ್ನಪೂರ್ಣ ಯೋಜನೆಯಡಿಯಲ್ಲಿ ಗ್ರಾಮೀಣ ಮತ್ತು ನಗರ ಭಾಗದ ಎಲ್ಲಾ ಮಹಿಳೆಯರು ಪ್ರಯೋಜನ ಪಡೆದುಕೊಳ್ಳಬಹುದು.
* ಎಸ್ ಬಿ ಐ ನಲ್ಲಿ ಲೋನ್ (SBI Loan) ಪಡೆದು ಹೋಟೆಲ್ ಉದ್ಯಮ ಆರಂಭಿಸಲು ಬೇಕಾಗಿರುವ ಎಲ್ಲಾ ಇಕ್ವಿಕ್ಮೆಂಟ್ ಖರೀದಿ ಮಾಡಬಹುದು.
* ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಈ ಯೋಜನೆಯ ಪ್ರಯೋಜನ ಮಹಿಳೆಯರಿಗೆ ಸಿಗಲಿದೆ.
ಬ್ಯಾಂಕ್ ಖಾತೆ, ಗ್ಯಾಸ್ ಸಿಲಿಂಡರ್ ಸೇರಿದಂತೆ ಮೇ 1ರಿಂದ ಹೊಸ ಹೊಸ ರೂಲ್ಸ್ ಜಾರಿ
ಎಸ್ ಬಿ ಐ ನಲ್ಲಿ ಲೋನ್ ಪಡೆಯುವುದು ಹೇಗೆ? – SBI Loan
ಸದ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಅನ್ನಪೂರ್ಣ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ 50,000 ಸಾಲ (Loan) ಸೌಲಭ್ಯ ಒದಗಿಸುತ್ತದೆ. ಇದು ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದು ಮಹಿಳೆಯರ ಖಾತೆಗೆ ಹಣ ಜಮಾ ಮಾಡಲಾಗುವುದು.
ರಾಜ್ಯದಿಂದ ರಾಜ್ಯಕ್ಕೆ ಬಡ್ಡಿ ದರದಲ್ಲಿ ವ್ಯತ್ಯಾಸ ಆಗಬಹುದು, ಸದ್ಯ ಕರ್ನಾಟಕದಲ್ಲಿ ನೋಡುವುದಾದರೆ 50,000 ಗಳಿಗೆ 1,388 ರೂಪಾಯಿಗಳ ತಿಂಗಳ EMI ಪಾವತಿಸಬೇಕು.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಬಡ್ಡಿಯೇ 20,500 ರೂಪಾಯಿ ಸಿಗುತ್ತೆ! ಹೊಸ ಸ್ಕೀಮ್
ಉತ್ತಮವಾಗಿ ಅಡುಗೆ ಮಾಡುವ ಮಹಿಳೆಯರಿಗೆ ಇದೊಂದು ಬಹಳ ಪ್ರಯೋಜನಕಾರಿಯಾದ ಯೋಜನೆಯಾಗಿದ್ದು ಸುಲಭವಾಗಿ ಸಾಲ ಸೌಲಭ್ಯ ಪಡೆದು ತಮ್ಮದೇ ಆಗಿರುವ ಸ್ವಂತ ಉದ್ಯಮ ಆರಂಭಿಸಬಹುದು. ಹೆಚ್ಚಿನ ಮಾಹಿತಿಗಾಗಿ sbi ಬ್ಯಾಂಕ್ ಗೆ ಭೇಟಿ ನೀಡಿ.
Great scheme for women with SBI bank account