ಬ್ಯಾಂಕ್ ಖಾತೆ, ಗ್ಯಾಸ್ ಸಿಲಿಂಡರ್ ಸೇರಿದಂತೆ ಮೇ 1ರಿಂದ ಹೊಸ ಹೊಸ ರೂಲ್ಸ್ ಜಾರಿ
ಮೇ 1ರಿಂದ ಬದಲಾಗಲಿದೆ ಸರ್ಕಾರದ ನಿಯಮ; ಯಾರ ಮೇಲೆ ಪರಿಣಾಮ ಬೀರುತ್ತೆ ನೋಡಿ!
ಸರ್ಕಾರ (government) ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರತಿ ತಿಂಗಳು ಆರಂಭದಲ್ಲಿಯೇ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ, ಈ ನಿಯಮಗಳು ಹೆಚ್ಚಾಗಿ ಬ್ಯಾಂಕ್ ಖಾತೆ (Bank Account) ಹೊಂದಿರುವವರಿಗೆ, ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಮೊದಲಾದ ವಿಷಯಗಳಿಗೆ ಸಂಬಂಧಪಟ್ಟಂತೆ ಇರುತ್ತದೆ
ಹೀಗಾಗಿ ಸಾರ್ವಜನಿಕರಿಗೆ ಇದರಿಂದ ಹೆಚ್ಚು ಎಫೆಕ್ಟ್ ಆಗುತ್ತೆ ಎನ್ನಬಹುದು. ರಾಜ್ಯ ಸರ್ಕಾರ ಒಂದರಿಂದ ಹೊಸ ರೂಲ್ಸ್ ಅನ್ನು ಕೆಲವು ಕ್ಷೇತ್ರಗಳಲ್ಲಿ ಜಾರಿಗೆ ತರಲಿದ್ದು ಅವುಗಳ ಬಗ್ಗೆ ಇಲ್ಲಿದೆ ವಿವರ.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಬಡ್ಡಿಯೇ 20,500 ರೂಪಾಯಿ ಸಿಗುತ್ತೆ! ಹೊಸ ಸ್ಕೀಮ್
ಮೇ, ಒಂದರಿಂದ ಬದಲಾಗಲಿದೆ ಈ ಎಲ್ಲ ರೂಲ್ಸ್!
ಮೇ 1ರಿಂದ ಬದಲಾಗುವ ಕೆಲವು ನಿಯಮಗಳು ಗ್ರಾಹಕರ ಮೇಲೆ ನೇರವಾಗಿ ಪರಿಣಾಮ ಬೀರಲಿದೆ, ಉದಾಹರಣೆಗೆ ಬ್ಯಾಂಕ್ ಕ್ಷೇತ್ರವನ್ನು ತೆಗೆದುಕೊಂಡರೆ ಎಸ್ ಬಿಐ ಹಾಗೂ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರ ಡಿಪೋಸಿಟ್ (ICICI Bank deposit) ಹಣದ ಮೇಲೆ ಹೆಚ್ಚಿನ ಶುಲ್ಕ ವಿಧಿಸುತ್ತದೆ ಎಂದು ವರದಿಯಾಗಿದೆ. ಈ ಬ್ಯಾಂಕುಗಳಲ್ಲಿ ಉಳಿತಾಯ ಖಾತೆಗೆ (Savings Account) ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತರಲಾಗುವುದು.
ಐಸಿಐಸಿಐ ಬ್ಯಾಂಕ್ ನ ಗ್ರಾಹಕರು ನೀವಾಗಿದ್ರೆ ಡೆಬಿಟ್ ಕಾರ್ಡ್ (debit card) ಮೇಲೆ ವಾರ್ಷಿಕ ಶುಲ್ಕವನ್ನು ಹೆಚ್ಚಿಸಲಾಗಿದೆ ಎಂಬುದನ್ನು ಗಮನಿಸಿ. ಗ್ರಾಮೀಣ ಪ್ರದೇಶದ ಜನರಿಗೆ 99 ರೂಪಾಯಿ ಹಾಗೂ ನಗರ ಪ್ರದೇಶದ ಜನರಿಗೆ 200 ರೂಪಾಯಿಗಳನ್ನು ವಾರ್ಷಿಕ ಶುಲ್ಕ ವಿಧಿಸಲಾಗುವುದು. ಇನ್ನು ಇದರ ಜೊತೆಗೆ 25 ಪುಟಗಳ ಚೆಕ್ ಬುಕ್ ಗೆ ಯಾವುದೇ ರೀತಿಯ ಶುಲ್ಕವನ್ನು ಈ ಬ್ಯಾಂಕು ವಿಧಿಸುವುದಿಲ್ಲ.
ಈ ಯೋಜನೆಯಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ 10,000 ರೂಪಾಯಿ! ಬಂಪರ್ ಸ್ಕೀಮ್
ಹೆಚ್ ಡಿ ಎಫ್ ಸಿ ಉಳಿತಾಯ ಯೋಜನೆಯ ಅವಧಿ ವಿಸ್ತರಣೆ! (HDFC Bank saving scheme)
ಹೆಚ್ ಡಿ ಎಫ್ ಸಿ ಬ್ಯಾಂಕ್ ಹಿರಿಯ ನಾಗರಿಕರಿಗಾಗಿ ಎಫ್ಡಿ ಯೋಜನೆಯನ್ನು (Fixed Deposit) ಆರಂಭಿಸಿತ್ತು. ಇದರ ಅಡಿಯಲ್ಲಿ ಸಾಕಷ್ಟು ಗ್ರಾಹಕರು ಹಣ ಹೂಡಿಕೆ ಮಾಡಿದ್ದಾರೆ. ಯಾಕೆಂದರೆ ಇದರಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿ ನೀಡಲಾಗುತ್ತದೆ.
ಇನ್ನು ಗ್ರಾಹಕರ ಒತ್ತಾಯದ ಮೇರೆಗೆ ಮೇ ಹತ್ತರವರೆಗೆ ಈ ಯೋಜನೆಯನ್ನು ವಿಸ್ತರಿಸಲಾಗುವುದು. ಡಿಪಾಸಿಟ್ ಇಡಲು ಬಯಸುವವರು ಮೇ 10ನೇ ತಾರೀಖಿನ ಒಳಗೆ ಹಣ ಠೇವಣಿ ಮಾಡಬೇಕು.
ಇಂತಹ ವಿದ್ಯಾರ್ಥಿಗಳಿಗೆ ಸಿಗುತ್ತೆ 20,000 ವರೆಗೆ ಸ್ಕಾಲರ್ಶಿಪ್; ಇವತ್ತೇ ಅರ್ಜಿ ಸಲ್ಲಿಸಿ!
ಎಲ್ ಪಿ ಜಿ ಸಿಲಿಂಡರ್ ಬೆಲೆ ಏರಿಕೆ!
ತೈಲ ಕಂಪನಿಗಳು ಮೇ 1ನೇ ತಾರೀಖಿನಿಂದಲೇ ಎಲ್ಪಿಜಿ ಸಿಲಿಂಡರ್ (LPG cylinder) ನ ಬೆಲೆ ಏರಿಸುವ ಸಾಧ್ಯತೆ ಇದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿಲಿಂಡರ್ ದರ ಏರಿಕೆ, ದೇಶಿಯ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಬಹುದು.
ಪ್ರತಿ ತಿಂಗಳು 1,000 ನಿಮ್ಮ ಖಾತೆಗೆ ಬರಬೇಕಾ? ಹಾಗಾದ್ರೆ ಈ ಯೋಜನೆಗೆ ಅಪ್ಲೈ ಮಾಡಿ!
ಅದೇ ರೀತಿ ಡಾಲರ್ ಬೆಲೆ ಏರಿಳಿತಗಳು ಕೂಡ ಎಲ್‌ಪಿಜಿ ಆಮದು ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ, ಹಾಗಾಗಿ ಇದು ಕೂಡ ಬೆಲೆ ಏರಿಕೆಗೆ ನೇರವಾಗಿ ಕಾರಣವಾಗಬಹುದು. ಹೀಗಾಗಿ ಎಲ್ ಪಿ ಜಿ ಸಿಲಿಂಡರ್ ದರ ಹೆಚ್ಚಳವಾಗುವ ಬಗ್ಗೆ ವರದಿಯಾಗಿದೆ ಆದರೆ ಒಂದನೇ ತಾರೀಕಿನ ನಂತರ ಇದು ಸ್ಪಷ್ಟವಾಗಲಿದೆ.
Implementation of new rules from May 1 including bank account, gas cylinder