ಇಂತಹ ವಿದ್ಯಾರ್ಥಿಗಳಿಗೆ ಸಿಗುತ್ತೆ 20,000 ವರೆಗೆ ಸ್ಕಾಲರ್ಶಿಪ್; ಇವತ್ತೇ ಅರ್ಜಿ ಸಲ್ಲಿಸಿ!

Education scholarship : ಒಂದು ಕುಟುಂಬದಿಂದ ಒಬ್ಬ ಸ್ಟೂಡೆಂಟ್ ಗೆ ಮಾತ್ರ ಈ ಸ್ಕಾಲರ್ಶಿಪ್ ನೀಡಲಾಗುತ್ತದೆ ಹಾಗೂ ಅರ್ಜಿ ಸಲ್ಲಿಸುವ ಮೂಲಕ ಸ್ಕಾಲರ್ಶಿಪ್ ಪಡೆದುಕೊಳ್ಳಬಹುದಾಗಿದೆ.

Education scholarship : ಕರ್ನಾಟಕ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಉತ್ತಮ ಶಿಕ್ಷಣದ ಹಿನ್ನೆಲೆಯಲ್ಲಿ ಸ್ಕಾಲರ್ಶಿಪ್ ನೀಡುವಂತಹ ಕೆಲಸವನ್ನು ಕೂಡ ಮಾಡುತ್ತಿದೆ. ಈ ಹಣದಿಂದ ಅವರ ಶೈಕ್ಷಣಿಕ ಪ್ರಕ್ರಿಯೆಗಳಿಗೆ ಇನ್ನಷ್ಟು ಆರ್ಥಿಕ ಸಹಾಯ ಆಗಲಿ ಎನ್ನುವ ಕಾರಣಕ್ಕಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದು ಆಸಕ್ತಿ ಇರುವವರು ಸ್ಕಾಲರ್ಶಿಪ್ ಯೋಜನೆ (scholarship scheme) ಯಲ್ಲಿ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ.

ಕಾರ್ಮಿಕ ಕುಟುಂಬದ ಮಕ್ಕಳಿಗೆ ಈ ಯೋಜನೆಯನ್ನು ನೀಡಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದ್ದು, ಆ ಕುಟುಂಬದ ತಿಂಗಳ ವೇತನ 35,000ಗಳಿಗಿಂತ ಹೆಚ್ಚಾಗಿರಬಾರದು. ಒಂದು ಕುಟುಂಬದಿಂದ ಒಬ್ಬ ಸ್ಟೂಡೆಂಟ್ ಗೆ ಮಾತ್ರ ಈ ಸ್ಕಾಲರ್ಶಿಪ್ ನೀಡಲಾಗುತ್ತದೆ ಹಾಗೂ ಅರ್ಜಿ ಸಲ್ಲಿಸುವ ಮೂಲಕ ಸ್ಕಾಲರ್ಶಿಪ್ ಪಡೆದುಕೊಳ್ಳಬಹುದಾಗಿದೆ. 6,000 ಗಳಿಂದ 20000 ವರೆಗೆ ಸ್ಕಾಲರ್ಶಿಪ್ ದೊರಕಲಿದೆ.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 10 ಸಾವಿರ ಇಟ್ಟರೆ ಎಷ್ಟು ಸಿಗುತ್ತೆ ಗೊತ್ತಾ? ಬಂಪರ್ ಕೊಡುಗೆ

ಇಂತಹ ವಿದ್ಯಾರ್ಥಿಗಳಿಗೆ ಸಿಗುತ್ತೆ 20,000 ವರೆಗೆ ಸ್ಕಾಲರ್ಶಿಪ್; ಇವತ್ತೇ ಅರ್ಜಿ ಸಲ್ಲಿಸಿ! - Kannada News

ಈ ಸ್ಕಾಲರ್ಶಿಪ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು (eligibilities to get scholarship)

* ಈ ಯೋಜನೆಯ ಮೂಲಕ ಕಾರ್ಮಿಕ ಮಂಡಳಿಯ ಸಂಘಟಿತ ಕಾರ್ಮಿಕರ ಮಕ್ಕಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಬಹುದಾಗಿದೆ.

* ಸ್ಕಾಲರ್ಶಿಪ್ ಗಾಗಿ ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿ 50 ಪ್ರತಿಶತ ಅಂಕವನ್ನು ಪಡೆದುಕೊಂಡಿರಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು 45 ಪ್ರತಿಶತ ಅಂಕವನ್ನು ಈ ಹಿಂದಿನ ಸಬ್ಜೆಕ್ಟ್ ನಲ್ಲಿ ಪಡೆದುಕೊಂಡಿರಬೇಕಾಗಿರುತ್ತದೆ.

ಮೊಬೈಲ್ ನಲ್ಲಿಯೇ ಕ್ಷಣಮಾತ್ರದಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಆಯುಷ್ಮಾನ್ ಕಾರ್ಡ್!

Education Scholarshipಸ್ಕಾಲರ್ಶಿಪ್ ಯಾವ ರೀತಿ ಸಿಗುತ್ತೆ?

* ಎಂಟರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ 6,000 ರೂಪಾಯಿಗಳ ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತದೆ.

* ಪಿಯುಸಿ ಡಿಪ್ಲೋಮಾ ಹಾಗೂ ಐಟಿಐ ವಿದ್ಯಾರ್ಥಿಗಳಿಗೆ ಸಿಗುವಂತಹ ಸ್ಕಾಲರ್ಶಿಪ್ ಮೊತ್ತ 8,000 ರೂಪಾಯಿ ಆಗಿರುತ್ತದೆ.

* ಡಿಗ್ರಿಯ ವಿದ್ಯಾರ್ಥಿಗಳಿಗೆ ಹತ್ತು ಸಾವಿರ ರೂಪಾಯಿಗಳ ವರೆಗೆ ಸಹಾಯಧನ ಸಿಗುತ್ತದೆ.

* ಪದವಿ ಪಡೆದಿರುವಂತಹ ವಿದ್ಯಾರ್ಥಿಗಳಿಗೆ 12,000ಗಳ ವರೆಗೆ ಮೊತ್ತ ಹಾಗೂ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ವಿದ್ಯಾರ್ಥಿಗಳಿಗೆ 20,000ಗಳ ವರೆಗೆ ಈ ಯೋಜನೆ ಅಡಿಯಲ್ಲಿ ಸ್ಕಾಲರ್ಶಿಪ್ ದೊರಕಲಿದೆ.

ಈ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಹತ್ತು ನಿಮಿಷದಲ್ಲಿ ಸಿಗಲಿದೆ 10 ಲಕ್ಷ ರೂಪಾಯಿ ಲೋನ್

080-234751888,277291175, 8277120505, 9141585402,9141602562 ಈ ನಂಬರ್ಗಳಿಗೆ ನೀವು ಕರೆ ಮಾಡುವ ಮೂಲಕ ಈ ಸ್ಕಾಲರ್ಶಿಪ್ ಯೋಜನೆ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಇದರ ಅವಶ್ಯಕತೆ ಇರುವಂತಹ ಅರ್ಹ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಈ ಮಾಹಿತಿಯನ್ನು ಶೇರ್ ಮಾಡಿಕೊಳ್ಳುವುದರ ಮೂಲಕ ಅವರಿಗೂ ಕೂಡ ಈ ಯೋಜನೆಯ ಲಾಭ ಪಡೆದುಕೊಳ್ಳುವ ಸಹಾಯವನ್ನು ನೀವು ಮಾಡಬಹುದಾಗಿದೆ.

ಕಾರ್ಮಿಕ ವಲಯದ ಕೆಲಸಗಾರರ ಕುಟುಂಬಗಳಿಗೆ ಈ ರೀತಿ ಸರ್ಕಾರಿ ಸಂಸ್ಥೆಗಳು ಸ್ಕಾಲರ್ಶಿಪ್ ನೀಡುವ ಮೂಲಕ ಆ ಕುಟುಂಬದ ಮಕ್ಕಳಿಗೆ ಅರ್ಹ ಆಗಿರುವಂತಹ ಆರ್ಥಿಕ ಸಹಾಯವನ್ನು ನೀಡುವಂತಹ ಕೆಲಸವನ್ನು ಮಾಡುತ್ತಿವೆ.

ಖಂಡಿತವಾಗಿ ಇದು ಅವರ ವಿದ್ಯಾಭ್ಯಾಸದಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಕಾರಣವಾಗಬಹುದಾಗಿದೆ. ಈ ಚಿಕ್ಕ ಸಹಾಯ ಕೂಡ ಅವರ ಶೈಕ್ಷಣಿಕ ಜೀವನದಲ್ಲಿ ದೊಡ್ಡಮಟ್ಟದ ಪ್ರಭಾವವನ್ನು ಬೀರುವಂತಹ ಸಾಧ್ಯತೆ ಇರುತ್ತದೆ.

ಮನೆ ಇಲ್ಲದ ಬಡವರಿಗೆ ಉಚಿತ ವಸತಿ ಯೋಜನೆಯ ಬಗ್ಗೆ ಅಪ್ಡೇಟ್ ನೀಡಿದ ಸರ್ಕಾರ!

ಹೀಗಾಗಿ ಅಂತಹ ವಿದ್ಯಾರ್ಥಿಗಳಿಗೆ ಅಥವಾ ಕುಟುಂಬಗಳಿಗೆ ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೀಡುವ ಮೂಲಕ ಅವರು ಕೂಡ ಈ ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಸಹಾಯ ಮಾಡಿ.

Such students will get a Education scholarship of up to 20,000

Follow us On

FaceBook Google News

Such students will get a Education scholarship of up to 20,000