ಬಡವರ ಸ್ವಂತ ಮನೆ ಕನಸು ನನಸಾಗಿಸಲು ಹೊರಟ ಕೇಂದ್ರ; 2,67 ಲಕ್ಷ ಸಾಲ, ಬಡ್ಡಿಯಲ್ಲೂ ಸಬ್ಸಿಡಿ

Story Highlights

ಬಡ ಕುಟುಂಬದವರು ಕೈಗೆಟುಕುವ ದರದಲ್ಲಿ ಸಾಲ ಸೌಲಭ್ಯ (Subsidy Loan) ಪಡೆದುಕೊಂಡು 2022ರ ವೇಳೆಗೆ ಲಕ್ಷಾಂತರ ಕುಟುಂಬಗಳು ಮನೆ ಪಡೆದುಕೊಳ್ಳುವಂತೆ ಆಗಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು

ತಮ್ಮ ಸ್ವಂತ ಸೂರು (own house) ನಿರ್ಮಾಣ ಮಾಡಿಕೊಳ್ಳಬೇಕು ಎನ್ನುವವರ ಕನಸು ನನಸಾಗಿಸಲು ಕೇಂದ್ರ ಸರ್ಕಾರ (central government) ಕೆಲವು ಪ್ರಮುಖ ಯೋಜನೆಗಳನ್ನು ಪರಿಚಯಿಸಿದೆ

ಈ ಯೋಜನೆಯ ಅಡಿಯಲ್ಲಿ ಬಡ ಕುಟುಂಬದವರಿಂದ ಹಿಡಿದು ಮಧ್ಯಮ ವರ್ಗದ ಕುಟುಂಬದವರು (middle class family) ಕೂಡ ಬಹಳ ಕಡಿಮೆ ದರದ ಬಡ್ಡಿಯಲ್ಲಿ ಸರ್ಕಾರದಿಂದ ಸಾಲ ಸೌಲಭ್ಯ (loan facility) ಪಡೆದುಕೊಂಡು ವಸತಿ ನಿರ್ಮಾಣ ಮಾಡಿಕೊಳ್ಳಬಹುದಾಗಿದೆ. ಆ ಯೋಜನೆಯ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.

ಕಡಿಮೆ ಕ್ರೆಡಿಟ್ ಸ್ಕೋರ್ ಇದ್ರೂ ಪರ್ಸನಲ್ ಲೋನ್ ಪಡೆಯೋದು ಹೇಗೆ! ಇಲ್ಲಿದೆ ಟ್ರಿಕ್ಸ್

ಪ್ರಧಾನ ಮಂತ್ರಿ ಆವಾಸ್ ಯೋಜನೆ! (Pradhanmantri aawas Yojana)

2015ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi ji) ನೇತೃತ್ವದ ಬಿಜೆಪಿ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಆರಂಭಿಸಿತು. (ಹಿಂದಿನ ಇಂದಿರಾ ಗಾಂಧಿ ಆವಾಸ್ ಯೋಜನೆಯನ್ನು ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದು ಮರು ನಾಮಕರಣ ಮಾಡಲಾಗಿದೆ)

ದೇಶದಲ್ಲಿ ಬಡ ಕುಟುಂಬದವರು ಕೈಗೆಟುಕುವ ದರದಲ್ಲಿ ಸಾಲ ಸೌಲಭ್ಯ (Subsidy Loan) ಪಡೆದುಕೊಂಡು 2022ರ ವೇಳೆಗೆ ಲಕ್ಷಾಂತರ ಕುಟುಂಬಗಳು ಮನೆ ಪಡೆದುಕೊಳ್ಳುವಂತೆ ಆಗಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಯೋಜನೆ ಅಡಿಯಲ್ಲಿ ಎರಡು ಕೋಟಿ ಮನೆಗಳನ್ನು ದೇಶದಲ್ಲಿ ನಿರ್ಮಾಣ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.

ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‌ಗಳು! ಕಡಿಮೆ ಬಡ್ಡಿ, ಅರ್ಧಕ್ಕೆ ಅರ್ಧದಷ್ಟು ಹಣ ಉಳಿತಾಯ

ಪಿ ಎಂ ಎ ವೈ ಪ್ರಯೋಜನ ಪಡೆದುಕೊಳ್ಳುವುದು ಹೇಗೆ? (How to get PMAY loan facility)

PMAY loan Schemeಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ 6.50% ಬಡ್ಡಿ ದರದಲ್ಲಿ ಸಾಲ ಸೌಲಭ್ಯ (Govt Loan) ನೀಡಲಾಗುತ್ತದೆ. ಈ ಸಾಲ ತೀರಿಸಲು 20 ವರ್ಷಗಳ ಅವಧಿ ನೀಡಲಾಗುತ್ತದೆ. ಅಪಾರ್ಟ್ಮೆಂಟ್ ಮಾದರಿಯಲ್ಲಿ ಮನೆ ನಿರ್ಮಾಣ ಮಾಡಲಾಗುವುದು.

ನೆಲಮಹಡಿಯ ಮನೆಗಳಲ್ಲಿ ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಮೀಸಲಿಡಲಾಗುವುದು. ಗ್ರಹ ನಿರ್ಮಾಣದಲ್ಲಿ ಸುಸ್ಥಿರ ಹಾಗೂ ಪರಿಸರ ಸ್ನೇಹಿ ತಂತ್ರಜ್ಞಾನವನ್ನು (environment friendly technology) ಬಳಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ

ದೇಶದ ಎಲ್ಲಾ ಗ್ರಾಮೀಣ ಮತ್ತು ನಗರ ಭಾಗದ ಜನರಿಗೆ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅವಕಾಶವಿದೆ, ನಗರ ಪ್ರದೇಶದಲ್ಲಿ ಮೂರು ಹಂತಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.

ಈ ಬ್ಯಾಂಕ್ ಅಕೌಂಟ್ ಇರೋ ಗ್ರಾಹಕರಿಗೆ ಫಿಕ್ಸೆಡ್ ಡೆಪಾಸಿಟ್ ಮೇಲೆ ಸಿಗುತ್ತಿದೆ ಹೆಚ್ಚಿನ ಬಡ್ಡಿ

ಯಾರಿಗೆ ಸಿಗುತ್ತೆ ಪಿಎಂಎವೈ ಯೋಜನೆಯ ಪ್ರಯೋಜನ? (Beneficiaries)

ಜನರ ವಾರ್ಷಿಕ ಆದಾಯದ ಆಧಾರದ ಮೇಲೆ ಗುಂಪುಗಳಾಗಿ ವರ್ಗೀಕರಿಸಿ ಅಂಥವರಿಗೆ ಆವಾಸ್ ಯೋಜನೆಯ ಪ್ರಯೋಜನ ಸಿಗುತ್ತದೆ, ಯಾವ ರೀತಿ ಸರ್ಕಾರ ವರ್ಗೀಕರಿಸಿದೆ ಎಂಬುದನ್ನು ನೋಡೋಣ.

*ಆರ್ಥಿಕವಾಗಿ ಹಿಂದುಳಿದ ವರ್ಗ (EWS): 3 ಲಕ್ಷ ಸಾಲ.

*ಕಡಿಮೆ ಆದಾಯದ ಗುಂಪು (LIG) : 3 ಲಕ್ಷದಿಂದ 6 ಲಕ್ಷ ರೂ. ಸಾಲ

*ಮಧ್ಯಮ ಆದಾಯ 1 ನೇ ವರ್ಗ (MIG1): 6 ಲಕ್ಷದಿಂದ 12 ಲಕ್ಷ ರೂ ಸಾಲ

*ಮಧ್ಯಮ ಆದಾಯ 2ನೇ ವರ್ಗ (MIG2): 12 ಲಕ್ಷದಿಂದ 18 ಲಕ್ಷ ರೂ ಸಾಲ ಪಡೆಯಬಹುದು.

ಇನ್ನು ಫಲಾನುಭವಿಗಳು ಕ್ರೆಡಿಟ್ ಲಿಂಕ್ ಸಬ್ಸಿಡಿ (credit linked subsidy) ಘಟಕದ ಅಡಿಯಲ್ಲಿ ಸಾಲ ಸೌಲಭ್ಯ ಪಡೆಯುವುದಾದರೆ 2.67 ಲಕ್ಷ ರೂಪಾಯಿ ಬಡ್ಡಿ ಮೇಲೆ ಸಬ್ಸಿಡಿ (Subsidy Loan) ಪಡೆಯುತ್ತಾರೆ. ಮನೆ ಖರೀದಿ (Buy Home) ಅಥವಾ ನಿರ್ಮಾಣದ ಸಮಯದಲ್ಲಿ ಈ ಹಣವನ್ನು ಪಾವತಿಸಲಾಗುತ್ತದೆ.

ಬ್ಯಾಂಕಿನಿಂದ ಸಾಲ ಪಡೆದ ವ್ಯಕ್ತಿ ಮೃತಪಟ್ಟರೆ, ಸಾಲ ಯಾರು ತೀರಿಸಬೇಕು? ಇಲ್ಲಿದೆ ಮಾಹಿತಿ

ಪ್ರಧಾನಮಂತ್ರಿಯ ಆವಾಸ್ ಯೋಜನೆಯನ್ನು ಗ್ರಾಮೀಣ ಪ್ರದೇಶದ ಹಾಗೂ ನಗರ ಪ್ರದೇಶದ ಯೋಜನೆ ಎಂದು ಎರಡು ವಿಭಾಗವಾಗಿ ವರ್ಗೀಕರಿಸಲಾಗಿದೆ, ಯೋಜನೆಯ ಪ್ರಯೋಜನ ಪಡೆದುಕೊಂಡರೆ 12% ನಷ್ಟು ಇರುವ ಜಿಎಸ್‌ಟಿಯನ್ನು 8% ಗೆ ಇಳಿಕೆ ಮಾಡಲಾಗಿದೆ. ಬಡವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಉಪಯುಕ್ತವಾಗಿರುವ ಯೋಜನೆ ಇದಾಗಿದ್ದು ಕೂಡಲೇ ಪ್ರಯೋಜನ ಪಡೆದುಕೊಳ್ಳಿ.

2.67 lakh loan to buy own house, Subsidy on Loan interest Rate

Related Stories