ಬ್ಯಾಂಕಿನಿಂದ ಸಾಲ ಪಡೆದ ವ್ಯಕ್ತಿ ಮೃತಪಟ್ಟರೆ, ಸಾಲ ಯಾರು ತೀರಿಸಬೇಕು? ಇಲ್ಲಿದೆ ಮಾಹಿತಿ

ಸಣ್ಣಪುಟ್ಟ ಸಾಲ ತೆಗೆದುಕೊಂಡರೆ ಅದನ್ನ ಬಹಳ ಬೇಗ ಮರುಪಾವತಿ (Loan Re Payment) ಮಾಡಬಹುದು, ಆದರೆ ಗೃಹ ಸಾಲ (Home Loan) ಅಥವಾ ವಾಹನ ಸಾಲ (Vehicle Loan) ತೆಗೆದುಕೊಂಡಿದ್ದರೆ ಅದು ದೀರ್ಘಾವಧಿಯ ಸಾಲವಾಗಿರುತ್ತದೆ

ಕೆಲವೊಮ್ಮೆ ಎಷ್ಟೇ ಹಣ ದುಡಿದರು ಸಾಕಾಗುವುದಿಲ್ಲ. ಕೆಲವೊಂದು ಅನಿವಾರ್ಯ ಸಂದರ್ಭದಲ್ಲಿ ಬ್ಯಾಂಕ್ ನಿಂದ ಸಾಲ (bank loan) ಸೌಲಭ್ಯ ಪಡೆದುಕೊಳ್ಳುವುದು ಸಹಜ.

ಸಣ್ಣಪುಟ್ಟ ಸಾಲ ತೆಗೆದುಕೊಂಡರೆ ಅದನ್ನ ಬಹಳ ಬೇಗ ಮರುಪಾವತಿ (Loan Re Payment) ಮಾಡಬಹುದು, ಆದರೆ ಗೃಹ ಸಾಲ (Home Loan) ಅಥವಾ ವಾಹನ ಸಾಲ (Vehicle Loan) ತೆಗೆದುಕೊಂಡಿದ್ದರೆ ಅದು ದೀರ್ಘಾವಧಿಯ ಸಾಲವಾಗಿರುತ್ತದೆ.

ಆಸ್ತಿ, ಜಮೀನು ಪತ್ರ ಅಡವಿಟ್ಟು ಬ್ಯಾಂಕ್ ಸಾಲ ಮಾಡಿರೋ ಎಲ್ಲರಿಗೂ ಹೊಸ ರೂಲ್ಸ್ ಜಾರಿ

ಬ್ಯಾಂಕಿನಿಂದ ಸಾಲ ಪಡೆದ ವ್ಯಕ್ತಿ ಮೃತಪಟ್ಟರೆ, ಸಾಲ ಯಾರು ತೀರಿಸಬೇಕು? ಇಲ್ಲಿದೆ ಮಾಹಿತಿ - Kannada News

ಹೀಗೆ ದೀರ್ಘಾವಧಿಯ ಸಾಲ (long term loan) ವನ್ನು ಬ್ಯಾಂಕ್ ನಲ್ಲಿ ಮಾಡಿದ ವ್ಯಕ್ತಿ ಅಕಾಲಿಕ ಮರಣ ಹೊಂದಿದರೆ ಉಳಿದಿರುವ ಬ್ಯಾಂಕ್ ಸಾಲವನ್ನ ಯಾರು ತೀರಿಸಬೇಕು ಎನ್ನುವ ಗೊಂದಲದಲ್ಲಿ ಇರುತ್ತದೆ, ಇದಕ್ಕೆ ಉತ್ತರ ಕೊಡುವ ಕೆಲಸ ಮಾಡಿದ್ದೇವೆ ಲೇಖನವನ್ನು ಸಂಪೂರ್ಣವಾಗಿ ಓದಿ.

ಬ್ಯಾಂಕಿಂಗ್ ಲೋನ್ ವಿಧಗಳು

Loan

ನಿಮ್ಮ ನೆಚ್ಚಿನ ಯಾವುದೇ ಬೈಕ್ ಖರೀದಿಗೆ ಈ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿಗೆ ಸಿಗುತ್ತೆ ಲೋನ್

ಬ್ಯಾಂಕ್ ಗಳಲ್ಲಿ ಎರಡು ರೀತಿಯ ಸಾಲವನ್ನು ನೀಡಲಾಗುತ್ತದೆ, ಒಂದು ಸೆಕ್ಯೂರ್ಡ್ ಸಾಲ (secured loan) ಇನ್ನೊಂದು ಅನ್ ಸೆಕ್ಯೂರ್ಡ್ ಸಾಲ (unsecured loan). ಅಂದರೆ ಸುರಕ್ಷಿತ ಸಾಲ ಹಾಗೂ ಅಸುರಕ್ಷಿತ ಸಾಲ.

ಗೃಹ ಸಾಲ (Home Loan) ವಾಹನ ಸಾಲ (Vehicle Loan), ಚಿನ್ನದ ಸಾಲ (gold loan) ಮೊದಲಾದ ಸಾಲುಗಳು ಸುರಕ್ಷಿತ ಸಾಲದ ಅಡಿಯಲ್ಲಿ ಬರುತ್ತವೆ. ಅಂದ್ರೆ ಈ ಸಾಲಗಳನ್ನು ಕೊಡುವಾಗ ನಮ್ಮ ಆಸ್ತಿ ಪತ್ರವನ್ನು ಅಡವಿಡಬೇಕು.

ಎರಡನೆಯದಾಗಿ ಅಸುರಕ್ಷಿತ ಸಾಲ. ವೈಯಕ್ತಿಕ ಸಾಲವನ್ನು (Personal Loan) ಅಸುರಕ್ಷಿತ ಸಾಲ ಎಂದು ಹೇಳಲಾಗುತ್ತದೆ, ಇದರಲ್ಲಿ ನಾವು ಹಣ ತೆಗೆದುಕೊಳ್ಳುವುದಕ್ಕೆ ಯಾವುದೇ ಶ್ಯೂರಿಟಿ (no surety) ಕೊಟ್ಟಿರುವುದಿಲ್ಲ. ಹಾಗಾಗಿ ವೈಯಕ್ತಿಕ ಸಾಲದಲ್ಲಿ ಬ್ಯಾಂಕ್ ಬಾಳ ದೊಡ್ಡ ರಿಸ್ಕ್ ತೆಗೆದುಕೊಂಡಿರುತ್ತದೆ ಎನ್ನಬಹುದು.

ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಸಿಹಿಸುದ್ದಿ! ವಿ-ಕೇರ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ಗಡುವು ವಿಸ್ತರಣೆ

ವ್ಯಕ್ತಿ ಮೃತಪಟ್ಟರೆ ಸಾಲದ ಹೊಣೆ ಯಾರದ್ದು?

Bank Loanಗೃಹ ಸಾಲ (Home loan)

ಬ್ಯಾಂಕ್ ನಲ್ಲಿ ದೀರ್ಘಾವಧಿಗೆ ಗೃಹ ಸಾಲ ಮಾಡಬಹುದು ಇದಕ್ಕೆ ನಮ್ಮ ಆಸ್ತಿ ಪತ್ರ ಅಡವಿಡಬೇಕಾಗುತ್ತದೆ. ಒಂದು ವೇಳೆ ಗೃಹ ಸಾಲ ತೆಗೆದುಕೊಂಡ ವ್ಯಕ್ತಿ ಅಕಾಲಿಕ ಮರಣ ಹೊಂದಿದರೆ ಆ ಸಾಲ ತೀರಿಸುವ ಜವಾಬ್ದಾರಿ ಆತನ ಮನೆಯವವರದ್ದೇ ಆಗಿರುತ್ತದೆ. ಒಂದು ವೇಳೆ ಮನೆಯವರು ಗೃಹ ಸಾಲ ತೀರಿಸಲು ನಿರಾಕರಿಸಿದರೆ ಆಸ್ತಿ ಪತ್ರವನ್ನು ಮಾರಾಟ ಮಾಡಿ ತಮಗೆ ಬೇಕಾಗಿರುವ ಹಣವನ್ನು ಬ್ಯಾಂಕ್ ಗಳು ವಸೂಲಿ ಮಾಡಿಕೊಳ್ಳುತ್ತವೆ

ಸ್ಟೇಟ್ ಬ್ಯಾಂಕ್​ನಲ್ಲಿ 96 ಹುದ್ದೆಗಳ ನೇಮಕಾತಿ, 45,000 ಸಂಬಳ; ಇಂದೇ ಅರ್ಜಿ ಸಲ್ಲಿಸಿ

ವಾಹನ ಸಾಲ (vehicle loan)

ಇನ್ನು ವಾಹನ ಸಾಲವನ್ನು ಮಾಡಿದ ವ್ಯಕ್ತಿ ಅಕಾಲಿಕ ಮರಣ ಹೊಂದಿದಾಗಲೂ ಕೂಡ ಬ್ಯಾಂಕ್ ಗಳು ವ್ಯಕ್ತಿಯ ಮನೆಯವರ ಬಳಿ ಸಾಲ ತೀರಿಸಲು ಹೇಳಬಹುದು. ಒಂದು ವೇಳೆ ಹೀಗೆ ತೀರಿಸದೆ ಇದ್ದ ಪಕ್ಷದಲ್ಲಿ ಆ ವ್ಯಕ್ತಿಯ ವಾಹನವನ್ನು ಬ್ಯಾಂಕ್ ಮುಟ್ಟುಗೋಲು ಹಾಕಿಕೊಳ್ಳುತ್ತದೆ.

3 ಲಕ್ಷ ಬಡ್ಡಿ ರಹಿತ ಸಾಲ ಪಡೆಯಿರಿ, ಇದು ಸರ್ಕಾರದ ಮತ್ತೊಂದು ಮಹತ್ವದ ಯೋಜನೆ

ವಯಕ್ತಿಕ ಸಾಲ (personal loan)

ವೈಯಕ್ತಿಕ ಸಾಲಕ್ಕೆ ಸಾಲ ಮಾಡುವ ವ್ಯಕ್ತಿಯಿಂದ ಯಾವುದೇ ಅಡಮಾನವನ್ನು ಬ್ಯಾಂಕ್ ಇರಿಸಿಕೊಳ್ಳುವುದಿಲ್ಲ. ಇದನ್ನು ರಿಸ್ಕಿ ಸಾಲ ಎಂದೇ ಹೇಳಬಹುದು ಹಾಗಾಗಿ ಸಾಲ ಮಾಡಿದ ವ್ಯಕ್ತಿ ಅಕಾಲಿಕ ಮರಣಕ್ಕೆ ತುತ್ತಾದರೆ ವೈಯಕ್ತಿಕ ಸಾಲ ತೀರಿಸುವಂತೆ ಆತನ ಮನೆಯವರನ್ನು ಬ್ಯಾಂಕ್ ಕೇಳುವಂತಿಲ್ಲ. ಹೀಗಾಗಿ ಇಂತಹ ಸಾಲವನ್ನು ಎನ್ ಪಿ ಎ (NPA) ಖಾತೆಗೆ ಬ್ಯಾಂಕ್ ಸೇರಿಸುತ್ತದೆ.

If a person who has taken a loan from the bank dies, who will repay the loan

Follow us On

FaceBook Google News

If a person who has taken a loan from the bank dies, who will repay the loan