Business News

3 ಲಕ್ಷ ಬಡ್ಡಿ ರಹಿತ ಸಾಲ ಪಡೆಯಿರಿ, ಇದು ಸರ್ಕಾರದ ಮತ್ತೊಂದು ಮಹತ್ವದ ಯೋಜನೆ

Loan Scheme : ದೇಶದಲ್ಲಿ ವಾಸಿಸುವ ಎಲ್ಲಾ ವರ್ಗದ ಜನರಿಗೂ ಕೂಡ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ (Central government schemes) ತಂದಿದೆ.

ಸರ್ಕಾರದಿಂದ ಸಾಲ ಸೌಲಭ್ಯದ ಜೊತೆಗೆ ಸಬ್ಸಿಡಿ (Subsidy Loan) ಕೂಡ ನೀಡಲಾಗುತ್ತದೆ, ಏಕೆಂದರೆ ಉದ್ಯಮ ಮಾಡುವವರಿಗೆ ಕೃಷಿ ಮಾಡುವವರಿಗೆ ಸಾಕಷ್ಟು ಅನುಕೂಲವಾಗಿದೆ ಎನ್ನಬಹುದು.

Those who have to do their own business will get a loan of 20 lakh

ಆಸ್ತಿ ಖರೀದಿಗೂ ಹೊಸ ನಿಯಮ! ಇನ್ಮುಂದೆ ಇಂತಹ ಆಸ್ತಿ, ಜಮೀನು ಮಾತ್ರ ಖರೀದಿ ಮಾಡಬೇಕು

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ (Pradhanmantri Vishwakarma Yojana)

ಇತ್ತೀಚಿಗಷ್ಟೇ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರು ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದ್ದಾರೆ ಈ ಯೋಜನೆಯ ಅಡಿಯಲ್ಲಿ ಕರಕುಶಲ ಕೆಲಸ ಮಾಡುವ ಸಾಂಪ್ರದಾಯಿಕ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿರುವ ವರ್ಗಕ್ಕೆ ಯಾವುದೇ ಮೇಲಾಧಾರವು (without guarantee) ಇಲ್ಲದೆ ಬಡ್ಡಿರಹಿತ ಸಾಲವನ್ನು (without interest loan) ನೀಡಲಾಗುವುದು

ಅಷ್ಟೇ ಅಲ್ಲದೆ ಉಚಿತ ತರಬೇತಿಯನ್ನು (free training) ಕೂಡ ನೀಡಿ ಅವರ ಕೌಶಲ್ಯವನ್ನು ಇನ್ನಷ್ಟು ಹೆಚ್ಚಿಸಿ ವೃತ್ತಿ ಜೀವನವನ್ನು ಇನ್ನಷ್ಟು ಆರ್ಥಿಕವಾಗಿ ಬಲಪಡಿಸಿಕೊಳ್ಳುವಂತೆ ಮಾಡುವುದು ಈ ಯೋಜನೆಯ ಉದ್ದೇಶ.

ಇವು ಮಹಿಳೆಯರಿಗಾಗಿಯೇ ಇರುವಂತಹ ಸರ್ಕಾರಿ ಯೋಜನೆಗಳು! ಬಹುತೇಕರಿಗೆ ಗೊತ್ತಿಲ್ಲ

ಏನಿದು ಪಿಎಂ ವಿಶ್ವಕರ್ಮ ಯೋಜನೆ!

Loan Schemeಸಣ್ಣ ಕುಶಲಕರ್ಮಿಗಳಿಗೆ ಹಣಕಾಸು ನೆರವು (Loan), ತರಬೇತಿ, ಮಾರ್ಕೆಟಿಂಗ್ (Marketing) ಮೊದಲಾದವುಗಳನ್ನು ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ (Subsidy Loan) ನೀಡಲಾಗುತ್ತದೆ. ಕಮ್ಮಾರ, ಅಕ್ಕಸಾಲಿಗ, ಬಡಿಗ, ಚಮ್ಮಾರ, ಕುಂಬಾರ, ದೋಣಿ ನಿರ್ಮಾಣ ಮಾಡುವವರು ಹೀಗೆ ಮೊದಲಾದ ಸಾಂಪ್ರದಾಯಿಕ ವೃತ್ತಿಯನ್ನು ಅನುಸರಿಸಿಕೊಂಡು ಬರುತ್ತಿರುವವರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಈ ಕಾರ್ಡ್ ಇರುವ 7 ಲಕ್ಷ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ; ಇಂದೇ ಅರ್ಜಿ ಸಲ್ಲಿಸಿ

ಪಿಎಂ ವಿಶ್ವಕರ್ಮ ಯೋಜನೆಯ ಪ್ರಯೋಜನಗಳು (Benefits of Vishwakarma Yojana)

ಮೊದಲನೇದಾಗಿ ಸಾಂಪ್ರದಾಯಿಕ ವೃತ್ತಿ ಅವಲಂಬಿಸಿರುವವರಿಗೆ ಪಿಎಮ್ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಐಡಿಯನ್ನು ನೀಡಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ನೋಂದಾಯಿಸಿಕೊಂಡಿದ್ದರೆ ವಿಶ್ವಕರ್ಮ ಸರ್ಕಾರಿ ಐಡಿ ಜೊತೆಗೆ ಯಾವುದೇ ಸ್ಥಳದಲ್ಲಿ ನಿಮ್ಮ ಕುಶಲ ಕರ್ಮಿ ವಸ್ತುಗಳ ಮಾರಾಟ ಮಾಡಬಹುದು.

ಕುಶಲ ಕರ್ಮಿ ಕೆಲಸ ಮಾಡುವವರಿಗೆ ಆರ್ಥಿಕ ಸಹಾಯ ನೀಡಲು ಈ ಯೋಜನೆಯನ್ನು ಆರಂಭಿಸಲಾಗಿದ್ದು ಸರ್ಕಾರ ಇದಕ್ಕಾಗಿಯೇ 13,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.

ಯೋಜನೆಯಡಿಯಲ್ಲಿ ಸ್ವಂತ ಉದ್ಯಮ (Own Business) ಆರಂಭಿಸುವುದಿದ್ದರೆ ಅಥವಾ ಸಾಂಪ್ರದಾಯಿಕ ವೃತ್ತಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳುದಿದ್ದರೆ 3 ಲಕ್ಷ ರೂಪಾಯಿಗಳ ವರೆಗೆ ಸಾಲ (Govt Loan) ಸೌಲಭ್ಯ ಸಿಗುತ್ತದೆ.

ಸಾಲ ತೆಗೆದುಕೊಂಡವರು ಎಷ್ಟು ಬೇಗ ಹಿಂತಿರುಗಿಸುತ್ತಾರೋ (Loan Re Payment) ಅದರ ಆಧಾರದ ಮೇಲೆ ಮರು ಸಾಲವನ್ನು ಪಡೆದುಕೊಳ್ಳಬಹುದು. ಇನ್ನು ಅಗತ್ಯ ಇರುವವರಿಗೆ ಕುಶಲ ಕೌಶಲ್ಯ ತರಬೇತಿಯನ್ನು ಕೂಡ ನೀಡಲಾಗುತ್ತದೆ ಹಾಗೂ ಕೌಶಲ್ಯ ತರಬೇತಿಯ ಸಮಯದಲ್ಲಿ ಪ್ರತಿದಿನ 500 ರೂಪಾಯಿಗಳನ್ನು ಕೊಡಲಾಗುತ್ತದೆ ಹಾಗೂ 15,000 ರೂ.ಗಳ ಟೂಲ್ ಕಿಟ್ (tool kit) ನೀಡಲಾಗುತ್ತದೆ.

ಎಲ್ಲಾ ರೈತರ ಮನೆಗೆ ತಲುಪಲಿದೆ ಕಿಸಾನ್ ಕ್ರೆಡಿಟ್ ಕಾರ್ಡ್; ಸಿಗಲಿದೆ ಕೃಷಿಗೆ ಬೇಕಾದಷ್ಟು ಸಾಲ

ವಿಶ್ವಕರ್ಮ ಯೋಜನೆಯನ್ನು ಯಾರು ಪಡೆದುಕೊಳ್ಳಬಹುದು?

*ಸಾಂಪ್ರದಾಯಿಕ ವೃತ್ತಿ ಜೀವನ ಮುಂದುವರಿಸಿಕೊಂಡು ಹೋಗುವವರಾಗಿರಬೇಕು.
*ಸಾಲ ಸೌಲಭ್ಯ ಪಡೆದುಕೊಳ್ಳಲು 18 ವರ್ಷ ದಾಟಿದವರಾಗಿರಬೇಕು
*ಕೌಶಲ್ಯ ಅಭಿವೃದ್ಧಿ ಮಿಷನ್ ನ 18 ಟ್ರೇಡ್ ಪರಂಪರಾ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುವವರಾಗಿರಬೇಕು.
ಸಣ್ಣ ಉದ್ಯಮ ಮಾಡಲು ತಮ್ಮದೇ ಆಗಿರುವ ಚಿಕ್ಕ ಅಂಗಡಿಯನ್ನು ಹಾಕಿ ಕುಶಲ ಕೆಲಸವನ್ನು ಮುಂದುವರಿಸಲು ಬಯಸುವವರು ವಿಶ್ವಕರ್ಮ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಇದಕ್ಕಾಗಿ ಪಿ ಎಂ ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

Get 3 lakh interest free loan, another important Scheme of government

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories