ಕೇಂದ್ರ ಸರ್ಕಾರವಾಗಿರಲಿ (central government) ಅಥವಾ ರಾಜ್ಯ ಸರ್ಕಾರವಾಗಿರಲಿ ದೇಶದ ಹಾಗೂ ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ಆರ್ಥಿಕ ಭದ್ರತೆ (financial stability) ಒದಗಿಸಿ ಕೊಡುವುದಕ್ಕಾಗಿ ಸಾಕಷ್ಟು ಉಪಯುಕ್ತವಾದ ಯೋಜನೆಗಳನ್ನು ಜಾರಿಗೆ ತಂದಿದೆ
ಅವುಗಳಲ್ಲಿ ಕೆಲವು ಯೋಜನೆಗಳು ಉತ್ತಮ ಹೂಡಿಕೆ ಯೋಜನೆಗಳಾಗಿದ್ದು (Investment plans) ಮಹಿಳೆಯರು ಸಾಸಿವೆ ಡಬ್ಬಿಯಲ್ಲಿ ಅಥವಾ ಅಕ್ಕಿ ಡಬ್ಬಿಯಲ್ಲಿ ಅಡಗಿಸಿಟ್ಟ ಹಣವನ್ನು ಇಂತಹ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಆ ಹಣ ದುಪ್ಪಟ್ಟಾಗುತ್ತೆ.
ಹಾಗಾಗಿ ಬಹಳ ಬುದ್ಧಿವಂತಿಕೆಯಿಂದ ನೀವು ಸರ್ಕಾರದ ಈ ಕೆಲವು ಅಪಾಯ ಮುಕ್ತ ಯೋಜನೆಗಳಲ್ಲಿ ಹೂಡಿಕೆ ಮಾಡಿ ಅತಿ ಹೆಚ್ಚು ಲಾಭ ಗಳಿಸಿ.
ಈ ಕಾರ್ಡ್ ಇರುವ 7 ಲಕ್ಷ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ; ಇಂದೇ ಅರ್ಜಿ ಸಲ್ಲಿಸಿ
ಮಹಿಳಾ ಉಳಿತಾಯ ಯೋಜನೆ (MSSC)
ಪ್ರಸ್ತುತ ಹಣಕಾಸು ಸಚಿವೆ ಆಗಿರುವ ನಿರ್ಮಲಾ ಸೀತಾರಾಮನ್ (Nirmala sitaraman) ಅವರು 2023ರ ಕೇಂದ್ರ ಬಜೆಟ್ (Central budget) ನಲ್ಲಿ ಮಹಿಳಾ ಉಳಿತಾಯ ಯೋಜನೆಯ ಬಗ್ಗೆ ಪ್ರಸ್ತಾವನೆ ಮಾಡಿ ಈ ಯೋಜನೆಯ ಬಗ್ಗೆ ಬಜೆಟ್ ಮಂಡನೆ ಮಾಡಿದ್ದಾರೆ.
ಬ್ಯಾಂಕುಗಳಲ್ಲಿ (Banks) ಅಥವಾ ಅಂಚೆ ಕಚೇರಿಯಲ್ಲಿ (post office) ಮಹಿಳಾ ಉಳಿತಾಯ ಯೋಜನೆಯಲ್ಲಿ (Savings Schemes) ಹೂಡಿಕೆ ಆರಂಭಿಸಬಹುದು. ಇಲ್ಲಿ ಕೇವಲ ಸಾವಿರ ರೂಪಾಯಿಗಳಿಂದ ಎರಡು ಲಕ್ಷ ರೂಪಾಯಿಗಳವರೆಗೂ ಕೂಡ ಮಹಿಳೆಯರು ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಪಡೆದುಕೊಳ್ಳಲು ಸಾಧ್ಯವಿದೆ.
ಎಲ್ಲಾ ರೈತರ ಮನೆಗೆ ತಲುಪಲಿದೆ ಕಿಸಾನ್ ಕ್ರೆಡಿಟ್ ಕಾರ್ಡ್; ಸಿಗಲಿದೆ ಕೃಷಿಗೆ ಬೇಕಾದಷ್ಟು ಸಾಲ
ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆ (NSC)
ಸಣ್ಣ ಉಳಿತಾಯಕ್ಕೆ ಅತ್ಯುತ್ತಮ ಆಯ್ಕೆ ಇದಾಗಿದ್ದು, ಅಂಚೆ ಕಚೇರಿಯಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆಯ ಅಡಿಯಲ್ಲಿ ಖಾತೆಯನ್ನು ತೆರೆಯಬಹುದು. ಇಲ್ಲಿ ಮಹಿಳೆಯರು ಕನಿಷ್ಠ 250 ರೂಪಾಯಿಗಳಿಂದ 1.5 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು ಈ ಯೋಜನೆಗೆ 7.7% ನಷ್ಟು ವಾರ್ಷಿಕ ಬಡ್ಡಿ (yearly interest) ಲಭ್ಯವಾಗುತ್ತದೆ.
ಈ ಯೋಜನೆಯ ಅವಧಿ ಐದು ವರ್ಷಗಳು. ನಿಮ್ಮ ಹೂಡಿಕೆಯ ಮೊತ್ತದ ಆಧಾರದ ಮೇಲೆ ಯೋಜನೆ ಮುಗಿಯುವ ಹೊತ್ತಿಗೆ ಉತ್ತಮ ಆದಾಯ ಗಳಿಸಿಕೊಳ್ಳಬಹುದು. ಸರ್ಕಾರದಿಂದ ಬೆಂಬಲಿತರವಾಗಿರುವ ಈ ಯೋಜನೆ ಅಪಾಯ ಮುಕ್ತವಾಗಿದ್ದು ತೆರಿಗೆ ಪಾವತಿಯಿಂದ ರಿಯಾಯಿತಿ ಕೂಡ ಪಡೆದುಕೊಳ್ಳಬಹುದು.
ಈ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ದುಪ್ಪಟ್ಟು ಆದಾಯ
ಟೈಮ್ ಠೇವಣಿ (Time deposit)
ಇಂಡಿಯಾ ಪೋಸ್ಟ್ (India Post) ಪ್ರಚುರ ಪಡಿಸಿರುವ ಅತ್ಯಂತ ಉತ್ತಮ ಉಳಿತಾಯ ಯೋಜನೆ ಇದಾಗಿದೆ. ಅವಧಿ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮಹಿಳೆಯರಿಗೆ ವಾರ್ಷಿಕ 7.5% ನಷ್ಟು ಬಡ್ಡಿ ನೀಡಲಾಗುವುದು. ಅಂಚೆ ಕಚೇರಿಯಲ್ಲಿ ನೀವು ಈ ಖಾತೆಯನ್ನು ತೆರೆಯಬಹುದು, ಮಹಿಳೆಯರು ತಮ್ಮ ಆರ್ಥಿಕ ಸಬಲೀಕರಣಕ್ಕಾಗಿ ಟೈಮ್ ಠೇವಣಿ ಖಾತೆಯನ್ನು ಆರಂಭಿಸಬಹುದು.
ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ (PPF)
ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ 7.1% ಬಡ್ಡಿ ನೀಡಲಾಗುತ್ತದೆ, ಕನಿಷ್ಠ ಹೂಡಿಕೆ 500 ರೂಪಾಯಿಗಳು ಹಾಗೂ ಗರಿಷ್ಠ ಹೂಡಿಕೆಯ ಮಿತಿ 1.5 ಲಕ್ಷ ರೂಪಾಯಿಗಳು. ಟ್ಯಾಕ್ಸ್ ಮುಕ್ತ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (public provident fund) ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಪಡೆದುಕೊಳ್ಳಬಹುದು.
ಒಂದು ವರ್ಷಕ್ಕೆ ₹1 ಲಕ್ಷ ರೂಪಾಯಿ ಪಿಂಚಣಿ ಪಡೆಯೋಕೆ ಇಷ್ಟು ಹೂಡಿಕೆ ಮಾಡಿದ್ರೆ ಸಾಕು!
ಈ ಮೇಲೆ ತಿಳಿಸಿದ ಎಲ್ಲ ಯೋಜನೆಗಳಲ್ಲಿ ಮಹಿಳೆಯರೇ ಖುದ್ದಾಗಿ ತಮ್ಮ ಕೈಲಾದಷ್ಟು ಹಣವನ್ನು ಹಂತ ಹಂತವಾಗಿ ಹೂಡಿಕೆ (Savings Scheme) ಮಾಡುತ್ತಾ ಬಂದರೆ ಭವಿಷ್ಯದಲ್ಲಿ ಆರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲದೆ ಜೀವನ ನಡೆಸಲು ಸಾಧ್ಯವಾಗುತ್ತದೆ, ಅಲ್ಲದೆ ಈ ಎಲ್ಲಾ ಯೋಜನೆಗಳು ಸರ್ಕಾರದಿಂದ ಮಾನ್ಯತೆ ಪಡೆದಿದ್ದು ಅಪಾಯ ಮುಕ್ತವಾಗಿದೆ.
These are government schemes for women, Low investment high return
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.