Business News

ಎಲ್ಲಾ ರೈತರ ಮನೆಗೆ ತಲುಪಲಿದೆ ಕಿಸಾನ್ ಕ್ರೆಡಿಟ್ ಕಾರ್ಡ್; ಸಿಗಲಿದೆ ಕೃಷಿಗೆ ಬೇಕಾದಷ್ಟು ಸಾಲ

Kisan Credit Card : ದೇಶದ ಕೃಷಿಕರ (farmers) ಮನೆ ಬಾಗಿಲಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ (Kisan credit card) ತಲುಪಿಸುವ ಅಭಿಯಾನ (Campaign) ಆರಂಭವಾಗಿದೆ. 31ರವರೆಗೆ ನಡೆಯಲಿರುವ ಅಭಿಯಾನದ ಮೂಲಕ ದೇಶದಲ್ಲಿ ಇರುವ ಲಕ್ಷಾಂತರ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಪ್ರಧಾನ್ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆ

ಈ ಯೋಜನೆಯ ಅಡಿಯಲ್ಲಿ ಪ್ರತಿ ವರ್ಷ 6,000ಗಳನ್ನು ನಾಲ್ಕು ಕಂತುಗಳಲ್ಲಿ ಪ್ರತಿ ಕಂತುಗಳಿಗೆ ಸಾವಿರ ರೂಪಾಯಿಗಳಂತೆ ಫಲಾನುಭವಿ ರೈತರ ಖಾತೆಗೆ ಕೇಂದ್ರ ಸರ್ಕಾರ ನೇರವಾಗಿ ಹಣ ಜಮಾ ಮಾಡುತ್ತಿದೆ. ಇತ್ತೀಚಿಗಷ್ಟೇ 15ನೇ ಕಂತಿನ ಹಣವು ಬಿಡುಗಡೆಯಾಗಿದೆ.

Kisan Credit Card

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ಒಂದು ಕೋಟಿ ರೈತರು ನೋಂದಾವಣೆ (registered farmers) ಮಾಡಿಕೊಂಡಿದ್ದು 2.6 ಲಕ್ಷ ಕೋಟಿ ರೂಪಾಯಿ ರೈತರ ಖಾತೆಗೆ (Bank Account) ಹಣ ಜಮಾ ಆಗಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) 7.35 ಕೋಟಿ ರೈತರಿಗೆ ಅಷ್ಟೇ ಲಭ್ಯವಾಗಿದ್ದು, ಈ ಕಾರ್ಡ್ ಹೊಂದಿರುವವರಿಗೆ 8.85 ಲಕ್ಷ ಕೋಟಿ ರೂಪಾಯಿಗಳ ಸಾಲ ನೀಡಲಾಗಿದೆ.

ಈ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ದುಪ್ಪಟ್ಟು ಆದಾಯ

ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ (Kisan credit card Distribution)

Kisan Credit Card For Farmersಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರು ಕೂಡ ಸಾಕಷ್ಟು ರೈತರ ಬಳಿ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಇಲ್ಲ. ಹಾಗಾಗಿ ಕೆಸಿಸಿ ಹೊಂದಿರದ 3.65 ಕೋಟಿ ರೈತರ ಮನೆಗಳಿಗೆ ಹೋಗಿ ಕೆಸಿಸಿ ವಿತರಣೆ ಮಾಡುವ ಅಭಿಯಾನವನ್ನು ಸರ್ಕಾರ ಆರಂಭಿಸಿದೆ.

ಒಂದು ವರ್ಷಕ್ಕೆ ₹1 ಲಕ್ಷ ರೂಪಾಯಿ ಪಿಂಚಣಿ ಪಡೆಯೋಕೆ ಇಷ್ಟು ಹೂಡಿಕೆ ಮಾಡಿದ್ರೆ ಸಾಕು!

ರಾಜ್ಯದಲ್ಲಿಯೂ ಸಾಲ ವಿತರಣೆ (loan distribution)

ರೈತರ ಮನೆ ಬಾಗಿಲಿಗೆ ಸಾಲದ ಹಣ (Loan) ತಲುಪಿಸುವ ಕೆಸಿಸಿ ಅಭಿಯಾನ ರಾಜ್ಯದಲ್ಲಿಯೂ ಕೂಡ ಆರಂಭವಾಗಿದೆ. ನಮ್ಮ ರಾಜ್ಯದಲ್ಲಿ ಒಟ್ಟು 47. 80 ಲಕ್ಷ ಕಿಸಾನ್ ಸಮ್ಮಾನ್ ರೈತರಿದ್ದು, 35 ಲಕ್ಷ ರೈತರಿಗೆ ಕೆಸಿಸಿ ಸಾಲ ಸೌಲಭ್ಯ (Loan Facility) ನೀಡಲಾಗಿದೆ.

ಕೇವಲ ಕೃಷಿ ಭೂಮಿಯಲ್ಲಿ ಕೃಷಿ ಮಾಡುವ ರೈತರಿಗೆ ಮಾತ್ರವಲ್ಲದೆ ಹೈನುಗಾರಿಕೆ ಮೀನುಗಾರಿಕೆ ಮಾಡುವವರಿಗೂ ಕೂಡ ಸಾಲ ವಿತರಣೆಯನ್ನು 2020 ರಿಂದ ಸರ್ಕಾರ ಆರಂಭಿಸಿದೆ.

ಕೆಸಿಸಿ ಅಡಿಯಲ್ಲಿ ಸಾಲ ಪಡೆದುಕೊಂಡವರು ಎರಡು ವರ್ಷದ ಅವಧಿಯಲ್ಲಿ ಸಾಲು ತೀರಿಸಬೇಕು, 7% ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದ್ದು ಸರ್ಕಾರದಿಂದ 2% ಬಡ್ಡಿ ರಿಯಾಯಿತಿ ಸಿಗುತ್ತದೆ.

ಇನ್ನು ಒಂದು ವರ್ಷದ ಒಳಗೆ ಸಾಲವನ್ನು ಪಾವತಿ (Loan Re Payment) ಮಾಡಿದರೆ, 2% ನಷ್ಟು ರಿಯಾಯಿತಿ ಸಿಗುತ್ತದೆ. ರೈತರು ವಾಣಿಜ್ಯ ಬ್ಯಾಂಕ್ ನಿಂದ ಸಾಲ ಪಡೆದುಕೊಂಡರೆ 2% ಬಡ್ಡಿ ರಿಯಾಯಿತಿಯನ್ನು ರಾಜ್ಯ ಸರ್ಕಾರ ನೀಡಲಿದೆ. ಸಹಕಾರಿ ಸಂಘಗಳಿಂದ ಕೆಸಿಸಿ ಸಾಲ ಪಡೆದುಕೊಂಡಿದ್ದರೆ 3% ಬಡ್ಡಿ ರಿಯಾಯಿತಿಯನ್ನು ಸರ್ಕಾರವೇ ನೀಡುತ್ತದೆ. ಒಟ್ಟಾರೆಯಾಗಿ ರೈತರಿಗೆ ಇದು ಶೂನ್ಯ ಬಡ್ಡಿ ದರದ ಸಾಲ (without interest loan) ಎನ್ನಬಹುದು

ರೆಂಟ್ ಅಗ್ರಿಮೆಂಟ್ ನಲ್ಲಿ ಏನೆಲ್ಲಾ ಇರಬೇಕು? ಮನೆ ಮಾಲೀಕರು, ಬಾಡಿಗೆದಾರರಿಗೆ ಹೊಸ ರೂಲ್ಸ್

ಯಾರಿಗೆ ಎಷ್ಟು ಸಾಲ? – Loan

Kisan Loanಹೈನುಗಾರಿಕೆ ಅಥವಾ ಪಶು ಸಂಗೋಪನೆ ಮಾಡುವವರಿಗೆ ಎರಡು ಲಕ್ಷ ರೂಪಾಯಿಗಳ ಸಾಲ ಸೌಲಭ್ಯ ಸಿಗುತ್ತದೆ. ಮೀನುಗಾರಿಕೆಗೆ ದೋಣಿ ಕಟ್ಟಿಕೊಳ್ಳುವವರಿಗೆ ದೋಣಿ ಗಾತ್ರದ ಆಧಾರದ ಮೇಲೆ ಎರಡರಿಂದ ಆರು ಲಕ್ಷ ರೂಪಾಯಿಗಳವರೆಗೂ ಸಾಲ ಪಡೆದುಕೊಳ್ಳಬಹುದು. ಕೆರೆ ಕೊಳ್ಳಗಳಲ್ಲಿ ಮೀನುಗಾರಿಕೆ ಮಾಡುವವರಿಗೆ ಮೀನು ಸಾಕಾಣಿಕೆ ಸಣ್ಣ ಪ್ರಮಾಣದಲ್ಲಿ ಆರಂಭಿಸುವವರೆಗೂ ಕೆಸಿಸಿ ಸಾಲ ಸೌಲಭ್ಯ ಸಿಗಲಿದೆ.

ಸ್ವಂತ ಉದ್ಯಮ ಆರಂಭಕ್ಕೆ ಹಣ ಬೇಕಾ? ಸರ್ಕಾರವೇ ಕೊಡುತ್ತೆ ಕಡಿಮೆ ಬಡ್ಡಿ ದರದ ಸಾಲ

ಕೆಸಿಸಿ ವಿತರಿಸುವ ಅಭಿಯಾನ! (KCC distribution campaign)

ರೈತರಿಗೆ ಕೆಸಿಸಿ ವಿತರಿಸುವ ಅಭಿಯಾನವನ್ನು ಬ್ಯಾಂಕ್ನಿಂದ (Banks) ಆರಂಭ ಮಾಡಲಾಗುತ್ತದೆ. ಅಂದರೆ ಬ್ಯಾಂಕ್ ಗಳಲ್ಲಿ ಕಿಸಾನ್ ಸಮ್ಮಾನ್ ನಿಧಿ ಹಣ ಪಡೆದುಕೊಳ್ಳುವ ರೈತರ ಲಿಸ್ಟ್ ಪಡೆದುಕೊಂಡು, ಯಾಕೆ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಂಡಿಲ್ಲ ಎಂಬುದನ್ನು ವಿಮರ್ಶೆ ಮಾಡಲಾಗುತ್ತದೆ. ರೈತರು ಈ ಕಾರ್ಡ್ ಬೇಡ ಎಂದರೆ ಅವರನ್ನು ಬಲವಂತ ಮಾಡುವಂತಿಲ್ಲ. ಆದರೆ ಕೆಸಿಸಿ ಪಡೆದುಕೊಳ್ಳಲು ರೈತರು ಕನಿಷ್ಠ 15 ಸೆಂಟ್ಸ್ ಜಾಗವನ್ನು ಹೊಂದಿರಲೇಬೇಕು ಎನ್ನುವ ನಿಯಮವು ಇದೆ.

ಸ್ವಂತ ಮನೆ ಕನಸು ನನಸಾಗಿಸಿಕೊಳ್ಳಿ; ಈ ಬ್ಯಾಂಕುಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿಗೆ ಗೃಹ ಸಾಲ

Kisan Credit Card to farmers, get enough loan for agriculture

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories