ಸ್ವಂತ ಮನೆ ಕನಸು ನನಸಾಗಿಸಿಕೊಳ್ಳಿ; ಈ ಬ್ಯಾಂಕುಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿಗೆ ಗೃಹ ಸಾಲ

Home Loan : ಹಣ ಇಲ್ಲದೆ ಇದ್ದರೂ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ (Bank loan) ಪಡೆದುಕೊಂಡು ನಿಮ್ಮ ಸ್ವಂತ ಮನೆಯ ಕನಸು ನನಸು ಮಾಡಿಕೊಳ್ಳಬಹುದು

Bengaluru, Karnataka, India
Edited By: Satish Raj Goravigere

Home Loan : ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಮಾತನ್ನು ನೀವು ಕೇಳಿರಬಹುದು. ಈ ಎರಡು ವಿಚಾರಗಳು ಕೂಡ ಬಹಳ ಕಷ್ಟಕರವಾದುದ್ದೆ. ಅದರಲ್ಲೂ ಹಣ ಇಲ್ಲದೆ ಇರುವವರಿಗೆ ಒಂದು ಮನೆ ಕಟ್ಟುವುದು (build a house) ಅಥವಾ ಸಾಕಷ್ಟು ಹಣ ಖರ್ಚು ಮಾಡಿ ಒಂದು ಮದುವೆ ಮಾಡುವುದು ಬಹಳ ಕಷ್ಟದ ವಿಚಾರ.

ಆದರೆ ಇತ್ತೀಚಿನ ದಿನಗಳಲ್ಲಿ ಕಾಲ ಬದಲಾವಣೆ ಆಗಿರುವ ಹಿನ್ನೆಲೆಯಲ್ಲಿ ಮನೆ ಕಟ್ಟಿಕೊಳ್ಳುವುದಕ್ಕೆ ಕೈಯಲ್ಲಿ ಹಣ ಇಲ್ಲದೆ ಇದ್ದರು ಅಥವಾ ಮದುವೆ ಮಾಡುವುದಕ್ಕೆ ಹಣ ಇಲ್ಲದೆ ಇದ್ದರೂ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ (Bank loan) ಪಡೆದುಕೊಂಡು ನಿಮ್ಮ ಈ ಕೆಲಸಗಳನ್ನು ನಿಭಾಯಿಸಿಕೊಳ್ಳಬಹುದು

Housing Scheme

ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಗೂ ಸಿಗುತ್ತೆ ಲೋನ್; ಸೂಪರ್ ಕಂಡೀಶನ್ ಕಾರುಗಳು ಖರೀದಿಸಿ

ಗೃಹ ಸಾಲದ ಬಗ್ಗೆ (home loan) ಮಾತನಾಡುವುದಾದರೆ ಬೇರೆ ಬೇರೆ ಬ್ಯಾಂಕುಗಳಲ್ಲಿ ಬೇರೆ ಬೇರೆ ಬಡ್ಡಿ ದರದಲ್ಲಿ ನೀವು ಗೃಹ ಸಾಲವನ್ನು ಪಡೆದುಕೊಳ್ಳಬಹುದು.

ಇತರ ಸಾಲಗಳಿಗೆ ಹೋಲಿಸಿದರೆ ಗೃಹ ಸಾಲದ ಬಡ್ಡಿ ದರ ತುಸು ಕಡಿಮೆ (interest Rates on home loan) ಎನ್ನಬಹುದು. ಇನ್ನು ನೀವು ಕೂಡ ನಿಮ್ಮ ಸ್ವಂತ ಮನೆ ನಿರ್ಮಾಣಕ್ಕೆ ಹಣ ಹೊಂದಿಸುವುದಕ್ಕೆ ಪ್ರಯತ್ನಿಸುತ್ತಿದ್ದರೆ ಯಾವ ಬ್ಯಾಂಕ್ ನಲ್ಲಿ ಗೃಹ ಸಾಲ ತೆಗೆದುಕೊಳ್ಳುವುದು ಸೂಕ್ತ ಎಂಬುದನ್ನು ನಾವು ಈ ಲೇಖನದಲ್ಲಿ ತಿಳಿಸಿದ್ದೇವೆ ಮುಂದೆ ಓದಿ.

₹70 ಸಾವಿರಕ್ಕೆ ಮಾರಾಟಕ್ಕಿದೆ 73 ಕಿ.ಮೀ ಮೈಲೇಜ್ ಕೊಡುವ ಹೀರೋ ಸ್ಪ್ಲೆಂಡರ್ ಬೈಕ್

Home Loanಎಚ್ ಡಿ ಎಫ್ ಸಿ ಬ್ಯಾಂಕ್ (HDFC Bank)

ಉದ್ಯೋಗಿಗಳು ಹಾಗೂ ಸ್ವಂತ ಉದ್ಯೋಗ ಹೊಂದಿರುವವರಿಗೆ 8.50% ನಷ್ಟರಲ್ಲಿ ಸಾಲ ನೀಡಲಾಗುತ್ತದೆ. ಆದಾಗ್ಯೂ ಇದು ಸಾಲ ತೆಗೆದುಕೊಳ್ಳುವ ವ್ಯಕ್ತಿಯ ಸಿಬಿಲ್ ಸ್ಕೋರ್ (CIBIL score) ಹಾಗೂ ಸಾಲದ ಅವಧಿಯನ್ನು ಅವಲಂಬಿಸಿರುತ್ತದೆ. ಉತ್ತಮ ಸಿಬಿಲ್ ಸ್ಕೂಲ್ ಹೊಂದಿರುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಸಿಗುತ್ತದೆ. ಇನ್ನು ಸಿಬಿಲ್ ಸ್ಕೋರ್ ಕಡಿಮೆ ಇದ್ದರೆ 8.75% ನಿಂದ 9.4% ವರೆಗೆ ಬಡ್ಡಿ ಪಾವತಿ ಮಾಡಬೇಕು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India)

SBI ಬ್ಯಾಂಕ್ ನಲ್ಲಿ ನೀವು ಗೃಹ ಸಾಲ ತೆಗೆದುಕೊಂಡರೆ 8.60% ನಿಂದ 9.45% ವರೆಗೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ. ಇನ್ನು ಪ್ರೊಸೆಸಿಂಗ್ 0.17% ನಿಗದಿಪಡಿಸಲಾಗಿದೆ. ಇದೀಗ ಎಸ್ ಬಿ ಐ ನಲ್ಲಿ ವಿಶೇಷ ಗೃಹ ಸಾಲ ಅಭಿಯಾನ ಆರಂಭವಾಗಿದ್ದು 2023 ಡಿಸೆಂಬರ್ 31ರ ಒಳಗೆ ಈ ಬ್ಯಾಂಕಿನಲ್ಲಿ ಗೃಹ ಸಾಲ ತೆಗೆದುಕೊಂಡರೆ 0.60% ನಷ್ಟು ರಿಯಾಯಿತಿ ಸಿಗಲಿದೆ. ಕನಿಷ್ಠ ಬಡ್ಡಿದರ ಇದಾಗಿದ್ದು ನೀವು ಈ ಬ್ಯಾಂಕಿನಲ್ಲಿ ಗೃಹ ಸಾಲ ತೆಗೆದುಕೊಳ್ಳುವುದಕ್ಕೆ ಪ್ರಯತ್ನಿಸಬಹುದು.

ನಿಮ್ಮ ಮನೆ, ಆಸ್ತಿ, ಜಮೀನಿನ ಮೇಲೆ ಯಾವುದಾದ್ರೂ ಸಾಲ ಇದೆಯೇ? ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ

ಐಸಿಐಸಿಐ ಬ್ಯಾಂಕ್ (ICICI Bank)

ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿರುವ ಐಸಿಐಸಿಐ ಬ್ಯಾಂಕ್ ನಲ್ಲಿ ಗೃಹ ಸಾಲ ಪಡೆದುಕೊಳ್ಳುವುದಾದರೆ 9.25% ನಿಂದ 9.9% ವರೆಗೆ ಬಡ್ಡಿದರ ನಿಗದಿಪಡಿಸಲಾಗಿದೆ. ಇನ್ನು ವ್ಯಕ್ತಿಯ ಸಿಬಿಲ್ ಸ್ಕೋರ್ (CIBIL Score) 750 ಪಾಯಿಂಟ್ಗಿಂತಲೂ ಹೆಚ್ಚಿದ್ದರೆ 9 ಶೇ. ಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆದುಕೊಳ್ಳಲು ಅವಕಾಶವಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank)

ಈ ಬ್ಯಾಂಕ್ ನಲ್ಲಿ ಗೃಹ ಸಾಲ ಪಡೆದುಕೊಂಡರೆ ವಾರ್ಷಿಕ 8.75% ನಿಂದ 9.35% ವರೆಗೆ ಬಡ್ಡಿದರ ನಿಗದಿಪಡಿಸಲಾಗಿದೆ. ಉದ್ಯೋಗಿಗಳು ಹಾಗೂ ಸ್ವಯಂ ಉದ್ಯೋಗ ಹೊಂದಿರುವವರು ಈ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬಹುದು. ಇದರ ಬ್ಯಾಂಕುಗಳಂತೆ ಈ ಬ್ಯಾಂಕ್ ನಲ್ಲಿಯೂ ಕೂಡ ಸಿಬಿಲ್ ಸ್ಕೋರ್ ಆಧಾರದ ಮೇಲೆ ಬಡ್ಡಿ ದರದಲ್ಲಿ ಕಡಿಮೆ ಅಥವಾ ಹೆಚ್ಚಳವಾಗಬಹುದು. ಉತ್ತಮ ಸಿಬಿಲ್ ಸ್ಕೋರ್ (Credit Score) ಹೊಂದಿದ್ದರೆ 8.75% ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ ಇಲ್ಲವಾದರೆ ಬಡ್ಡಿದರ ಹೆಚ್ಚಾಗುತ್ತದೆ.

ಐ ಡಿ ಎಫ್ ಸಿ ಫಸ್ಟ್ ಬ್ಯಾಂಕ್ (IDFC first bank)

ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿರುವ ಐಡಿಎಫ್ಸಿ ಫಸ್ಟ್ ಬ್ಯಾಂಕ್ ನಲ್ಲಿ ಗೃಹ ಸಾಲ ಪಡೆದುಕೊಳ್ಳುವವರಿಗೆ ವಾರ್ಷಿಕ 8.85% ನಿಂದ 9.25% ವರೆಗೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಉದ್ಯೋಗಿಗಳಿಗೆ 8.85% ಹಾಗೂ ಸ್ವಂತ ಉದ್ಯೋಗ ಹೊಂದಿರುವವರಿಗೆ 9.25% ಬಡ್ಡಿದರ ನಿಗದಿಪಡಿಸಲಾಗಿದೆ.

ಇವಿಷ್ಟು ಬ್ಯಾಂಕಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ಪಡೆದುಕೊಳ್ಳಬಹುದು. ಆದ್ದರಿಂದ ನೀವು ಕೂಡ ಮನೆ ಕಟ್ಟುವ ಕನಸು ನನಸಾಗಿಸಿಕೊಳ್ಳಲು ಗೃಹ ಸಾಲಕ್ಕಾಗಿ ಈ ಬ್ಯಾಂಕ್ಗಳನ್ನು ನೇರವಾಗಿ ಸಂಪರ್ಕಿಸಿ.

Make your own House dream come true, these banks Gives Low interest home loans