ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಗೂ ಸಿಗುತ್ತೆ ಲೋನ್; ಸೂಪರ್ ಕಂಡೀಶನ್ ಕಾರುಗಳು ಖರೀದಿಸಿ

ಸೆಕೆಂಡ್ ಹ್ಯಾಂಡ್ ಕಾರಿನ ಮಾರಾಟ (second hand car sale) ಜೋರಾಗಿದೆ. ಇದಕ್ಕೆ ಮುಖ್ಯ ಕಾರಣ ಉತ್ತಮ ಕಂಡಿಶನ್ (good condition) ನಲ್ಲಿ ಇರುವ ಕಾರುಗಳನ್ನು ಕೂಡ ಕಡಿಮೆ ಬೆಲೆಗೆ (Low Cost) ಲೋನ್ ಮೂಲಕ (Loan) ಖರೀದಿ ಮಾಡಬಹುದಾಗಿದೆ.

Bengaluru, Karnataka, India
Edited By: Satish Raj Goravigere

ಇತ್ತೀಚಿನ ದಿನಗಳಲ್ಲಿ ಸೆಕೆಂಡ್ ಹ್ಯಾಂಡ್ ಕಾರಿನ ಮಾರಾಟ (second hand car sale) ಜೋರಾಗಿದೆ. ಇದಕ್ಕೆ ಮುಖ್ಯ ಕಾರಣ ಉತ್ತಮ ಕಂಡಿಶನ್ (good condition) ನಲ್ಲಿ ಇರುವ ಕಾರುಗಳನ್ನು ಕೂಡ ಕಡಿಮೆ ಬೆಲೆಗೆ (Low Cost) ಲೋನ್ ಮೂಲಕ (Loan) ಖರೀದಿ ಮಾಡಬಹುದಾಗಿದೆ.

ಕಾರುಗಳು ಪಕ್ಕ ಹೊಸತರಂತೆ ಇರುತ್ತದೆ. ಹಾಗಾಗಿ ದುಬಾರಿ ಬೆಲೆಗೆ ಹೊಸ ಕಾರು ಖರೀದಿ ಮಾಡಲು ಸಾಧ್ಯವಾಗದೆ ಇರುವವರು ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ಮಾಡಬಹುದು.

A loan is also available for buying a second hand car, Plan to buy a car today

₹70 ಸಾವಿರಕ್ಕೆ ಮಾರಾಟಕ್ಕಿದೆ 73 ಕಿ.ಮೀ ಮೈಲೇಜ್ ಕೊಡುವ ಹೀರೋ ಸ್ಪ್ಲೆಂಡರ್ ಬೈಕ್

ಕಾರು ಖರೀದಿಗೆ ಸಾಲ (Car loan)

ನಮಗೆಲ್ಲರಿಗೂ ಗೊತ್ತಿರುವ ಹಾಗೆ ನಾವು ಯಾವುದೇ ರೀತಿಯ ವಾಹನ ಖರೀದಿ ಮಾಡುವುದಿದ್ದರೆ ಅದಕ್ಕೆ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ (Bank Loan) ಸಿಗುತ್ತದೆ. ಆದರೆ ಹೊಸ ಕಾರು (New Car)  ಖರೀದಿ ಮಾಡುವುದಕ್ಕೆ ಸಾಲ ಸಿಗುತ್ತದೆ ಹೊರತು ಸೆಕೆಂಡ್ ಹ್ಯಾಂಡ್ ಕಾರು (Second Hand Car) ಖರೀದಿ ಮಾಡಲು ಬ್ಯಾಂಕಗಳಲ್ಲಿ ಸಾಲ ಸೌಲಭ್ಯ ಸಿಗುವುದಿಲ್ಲ. ಆದರೆ ಚಿಂತೆ ಬೇಡ ಈಗ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವುದಿದ್ದರೂ ಕೂಡ ನೀವು ಸಾಲ ಪಡೆದುಕೊಂಡು ಕಾರು ಖರೀದಿ ಮಾಡಬಹುದು.

ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸಲು ಬ್ಯಾಂಕ್ ಲೋನ್ (Bank loan for second hand car purchase)

ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸಲು ಬ್ಯಾಂಕ್ ಲೋನ್ ನೀಡುತ್ತದೆಯಾದರೂ ನೀವು ಮೂರು ವರ್ಷಗಳ ಮೇಲ್ಪಟ್ಟ ಹಳೆಯದಾದ ಕಾರು ಖರೀದಿಗೆ ಬ್ಯಾಂಕ್ ಸಾಲ ನೀಡುವುದಿಲ್ಲ. ಇನ್ನು ಹೊಸ ಕಾರು ಖರೀದಿಗೆ ಸಿಗುವಷ್ಟು ಕಡಿಮೆ ಬಡ್ಡಿ ದರದಲ್ಲಿ ಸೆಕೆಂಡ್ ಹ್ಯಾಂಡ್ ಕಾರಿನ ಸಾಲಕ್ಕೆ ಬಡ್ಡಿ ಕಡಿಮೆ ಇರುವುದಿಲ್ಲ ಇದು ತುಸು ಜಾಸ್ತಿ (interest rate) ಎನ್ನಬಹುದು.

ಇನ್ನು ನೀವು ಯಾವ ಬೆಲೆಯ ಕಾರನ್ನು ಖರೀದಿ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ನಿಮಗೆ ಸಾಲದ ಮೊತ್ತ ನಿರ್ಧಾರವಾಗುತ್ತದೆ. ಇದರಲ್ಲಿ ಸಾಲದ ಮೊತ್ತ ಸಂಪೂರ್ಣವಾಗಿ ಲಭ್ಯವಾಗುವುದಿಲ್ಲ ಹಾಗಾಗಿ ಹೆಚ್ಚುವರಿ ಹಣವನ್ನು ನೀವು ಕೈಯಿಂದ ಭರಿಸಬೇಕಾಗುತ್ತದೆ.

ನಿಮ್ಮ ಮನೆ, ಆಸ್ತಿ, ಜಮೀನಿನ ಮೇಲೆ ಯಾವುದಾದ್ರೂ ಸಾಲ ಇದೆಯೇ? ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ

ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಸಾಲ ನೀಡುವ ಬ್ಯಾಂಕುಗಳು!

Second Hand Carಕೆನರಾ ಬ್ಯಾಂಕ್- ಕೆನರಾ ಬ್ಯಾಂಕ್ (Canara Bank) ನಲ್ಲಿ 8.9% ಇಂದ 9.9% ವರೆಗೆ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಗೆ ಬಡ್ಡಿ ದರ ನಿಗದಿಪಡಿಸಲಾಗಿದೆ. ಐದು ವರ್ಷಗಳ ಅವಧಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.

ಕೋಟಕ್ ಮಹಿಂದ್ರ ಬ್ಯಾಂಕ್- (Kotak Mahindra Bank) ಈ ಬ್ಯಾಂಕ್ ನ ನೀವು ಕೂಡ ಹೊಸ ಕಾರು ಖರೀದಿಗೆ ಮಾತ್ರವಲ್ಲದೆ ಸೆಕೆಂಡ್ ಹ್ಯಾಂಡ್ ಕಾರು ಅಥವಾ ಇತರ ವಾಹನ ಖರೀದಿಗೂ ಹಣಕಾಸಿನ ಸೌಲಭ್ಯ ನೀಡಲಾಗುತ್ತದೆ.

ಬ್ಯಾಂಕ್ ಆಫ್ ಬರೋಡ- (Bank of Baroda) ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಬ್ಯಾಂಕ್ ಆಫ್ ಬರೋಡ ಕೂಡ ವಾರ್ಷಿಕವಾಗಿ 8.45% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತದೆ. ಇನ್ನು ಈ ಬಡ್ಡಿದರ ಗ್ರಾಹಕರ ಸಿಬಿಲ್ ಸ್ಕೋರ್ (CIBIL Score) ಅನ್ನು ಆಧರಿಸಿರುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್- (Punjab National Bank) ಫಿಕ್ಸ್ಡ್ ರೇಟ್ ಬಡ್ಡಿದರವನ್ನು ಆಯ್ಕೆ ಮಾಡಿಕೊಳ್ಳುವುದಾದರೆ 9.30% ಗೆ ಲೋನ್ ಸಿಗುತ್ತದೆ. ಇನ್ನು ವಾರ್ಷಿಕ 8.40% ನಿಂದ 8.80% ವರೆಗೆ ಸಾಲ ಪಡೆದುಕೊಳ್ಳಬಹುದು.

ಇನ್ಮುಂದೆ ಫೋನ್‌ಪೇ, ಗೂಗಲ್ ಪೇ ಬಳಸಲು ಸಾಧ್ಯವಿಲ್ಲ; ರದ್ದಾಗಲಿದೆ ಯುಪಿಐ ಐಡಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ- (State Bank of India) ಎಸ್ ಬಿ ಐ ನಲ್ಲಿ ಸಾಲ ಬಡ್ಡಿ ದರದ ಮೊತ್ತ ತುಸು ಜಾಸ್ತಿ ಎನ್ನುವುದು. ಇಲ್ಲಿ ವಾರ್ಷಿಕ 9.50% ಇಂದ 10.50% ವರೆಗೆ ಸೆಕೆಂಡ್ ಹ್ಯಾಂಡ್ ಕಾರುಗಳ ಲೋನ್ (Second Hand Car Loan) ಲಭ್ಯವಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ- (union Bank of India) ಮೂರು ವರ್ಷಗಳ ಒಳಗಿನ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವುದಾದರೆ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ 10.40% ನಿಂದ 10.50% ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಹೀಗೆ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಬೇರೆ ಬೇರೆ ಬಡ್ಡಿ ದರದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಲು ಲೋನ್ ಸೌಲಭ್ಯವಿದ್ದು ನೀವು ಬ್ಯಾಂಕ್ ಶಾಖೆಯನ್ನು ನೇರವಾಗಿ ಸಂಪರ್ಕಿಸಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.

A loan is also available for buying a second hand car, Plan to buy a car today