Business News

ರೆಂಟ್ ಅಗ್ರಿಮೆಂಟ್ ನಲ್ಲಿ ಏನೆಲ್ಲಾ ಇರಬೇಕು? ಮನೆ ಮಾಲೀಕರು, ಬಾಡಿಗೆದಾರರಿಗೆ ಹೊಸ ರೂಲ್ಸ್

ಇಂದು ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ (Bengaluru City) ಅದೆಷ್ಟೋ ಜನ ಮನೆಯನ್ನು ಕಟ್ಟಿಸಿ ಅದನ್ನ ಬಾಡಿಗೆ ಕೊಡುವುದಕ್ಕಾಗಿಯೇ ಮನೆ ಕಟ್ಟಿಸುವವರು ಸಾಕಷ್ಟು ಜನ ಇದ್ದಾರೆ, ಬಾಡಿಗೆ ಕೊಡುವುದು ಒಂದು ತಿಂಗಳ ಆದಾಯಕ್ಕೆ ಕೂಡ ಸಹಾಯವಾಗುವ ಕಾರಣಗಳಿಂದಾಗಿ ಕಟ್ಟಿಸಲಾಗುತ್ತದೆ.

ಮನೆ ಮಾಲೀಕರು ಬಾಡಿಗೆ ಕೊಟ್ಟ ನಂತರ ಮುಂದೆ ಯಾವುದೇ ರೀತಿಯ ಸಮಸ್ಯೆಗಳು ಬಾಡಿಗೆದಾರನಿಂದ ಆಗದಂತೆ ತಡೆಗಟ್ಟುವಲ್ಲಿ ಮುಖ್ಯವಾಗಿ ಮಾಡಬೇಕಾಗಿರುವ ಕೆಲಸವೇ ರೆಂಟ್ ಅಗ್ರಿಮೆಂಟ್ (rent agreement).

rent agreement

ಹೌದು ಭೂಮಾಲಿಕ ಹಾಗೂ ಹಿಡುವಳಿದಾರನ ನಡುವೆ ರೆಂಟ್ ಅಗ್ರಿಮೆಂಟ್ ಎನ್ನುವುದು ಬಹಳ ಮುಖ್ಯವಾಗಿರುವ ವಿಚಾರ, ನೀವು ನಿಮ್ಮ ರೆಂಟ್ ಅಗ್ರಿಮೆಂಟ್ ನಲ್ಲಿ ಸಾಕಷ್ಟು ವಿಚಾರಗಳನ್ನು ನಮೂದಿಸಿ ಬಾಡಿಗೆದಾರನಿಂದ (tenant) ಸಹಿ ಪಡೆದುಕೊಂಡಿದ್ದರೆ ಯಾವುದೇ ಕಾರಣಕ್ಕೂ ಆತ ಅಗ್ರಿಮೆಂಟ್ ಮೀರಿ ನಿಮ್ಮ ಆಸ್ತಿಗೆ (Property) ಹಾನಿ ಮಾಡುವಂತಿಲ್ಲ. ಮಾಡಿದರೆ ನೀವು ನೇರವಾಗಿ ಕಾನೂನು ಸಹಾಯ ಪಡೆದುಕೊಳ್ಳಬಹುದಾಗಿದೆ.

ಸ್ವಂತ ಉದ್ಯಮ ಆರಂಭಕ್ಕೆ ಹಣ ಬೇಕಾ? ಸರ್ಕಾರವೇ ಕೊಡುತ್ತೆ ಕಡಿಮೆ ಬಡ್ಡಿ ದರದ ಸಾಲ

ರೆಂಟ್ ಅಗ್ರಿಮೆಂಟ್ ನಲ್ಲಿ ಇರಬೇಕಾದ ವಿಷಯಗಳು (Rent agreement)

ಮೊದಲನೇದಾಗಿ ಬಾಡಿಗೆದಾರ ಸರಿಯಾದ ಸಮಯಕ್ಕೆ ಬಾಡಿಗೆ ಪಾವತಿ ಮಾಡಬೇಕು, ಒಂದು ವೇಳೆ ನಿಗದಿತ ಅವಧಿಗೆ ಬಾಡಿಗೆ ಪಾವತಿ ಮಾಡದೆ ಇದ್ದರೆ ಬಡ್ಡಿ ಸಮೇತ ಹಣ ತೀರಿಸಬೇಕು ಎನ್ನುವುದು ರೆಂಟ್ ಅಗ್ರಿಮೆಂಟ್ ನಲ್ಲಿ ಇದ್ದರೆ ಒಳ್ಳೆಯದು.

ಬಾಡಿಗೆದಾರ ಯಾವುದೇ ಕಾರಣಕ್ಕೂ ಬಾಡಿಗೆ ಮನೆಯ ವಸ್ತುಗಳನ್ನು ಅಥವಾ ಬಾಡಿಗೆ ಮನೆಗೆ ಹಾನಿಯಾಗುವ ಅಂತಹ ಕೆಲಸ ಮಾಡಬಾರದು ಗೋಡೆಗೆ ಮೊಳೆ ಹೊಡೆಯುದಿದ್ದರೂ ಕೂಡ ಬಹುಮಾಲೀಕರ ಅನುಮತಿ ಪಡೆದುಕೊಳ್ಳಬೇಕು.

ಮನೆ ಮಾಲೀಕ ಬಾಡಿಗೆ ಕೊಡುವಾಗ ಮನೆಗೆ ವೈಟ್ ವಾಶ್ (whitewash) ಹೊಡೆಸಿ ಕ್ಲೀನ್ ಮಾಡಿ ಕೊಟ್ಟಿರಬಹುದು ಇನ್ನೂ ಮನೆ ಬಿಟ್ಟು ಹೋಗುವಾಗ ಪೇಂಟಿಂಗ್ ಚಾರ್ಜ್ ನೀಡಬೇಕು ಎನ್ನುವುದನ್ನು ಅಗ್ರಿಮೆಂಟ್ ನಲ್ಲಿ ಬರೆಸಿದ್ದರೆ ಉತ್ತಮ.

ಮನೆಯ ಮಾಲಿಕ ಮನೆಗೆ ಬೇಕಾಗಿರುವ ಅಗತ್ಯ ದುರಸ್ತಿ ಕಾರ್ಯಗಳನ್ನು ಮಾಡಿಕೊಡಬೇಕು ಆದರೆ ದೈನಂದಿನ ದುರಸ್ತಿ ಕೆಲಸಕ್ಕೆ ಅಥವಾ ಸಣ್ಣಪುಟ್ಟ ದುರಸ್ತಿ ಕೆಲಸಕ್ಕೆ ಮನೆ ಮಾಲೀಕರನ್ನು ಬಾಡಿಗೆದಾರರು ಸಂಪರ್ಕಿಸದೆ ತಾವಾಗಿಯೇ ಸರಿಪಡಿಸಿಕೊಳ್ಳಬೇಕು, ಇದಕ್ಕೆ ಮತ್ತೆ ಭೂ ಮಾಲೀಕರಿಂದ ಹಣ ಕೇಳುವಂತಿಲ್ಲ.

ಆಧಾರ್ ಕಾರ್ಡ್ ಲಿಂಕ್ ಆಗಿರೋ ಮೊಬೈಲ್ ಸಂಖ್ಯೆ ತಿಳಿಯೋದು ಹೇಗೆ? ಇಲ್ಲಿದೆ ಸುಲಭ ವಿಧಾನ

Rent Houseಬಾಡಿಗೆ ಕೊಟ್ಟ ನಂತರ ಅಲ್ಲಿ ಉಳಿದಿರುವ ಸ್ಥಳದಲ್ಲಿ ಬಾಡಿಗೆದಾರ ವಾಣಿಜ್ಯ ಕಾರಣಗಳಿಗಾಗಿ ಆ ಸ್ಥಳವನ್ನು ಬಳಸಿಕೊಳ್ಳುವಂತಿಲ್ಲ, ಉದಾಹರಣೆಗೆ ಟೆರೆಸ್ ಅಥವಾ ಬಾಲ್ಕನಿಯಲ್ಲಿ ಜಾಗ ಇದ್ದರೆ ಅದನ್ನು ಯಾವುದೇ ಕಾರಣಕ್ಕೂ ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳಬಾರದು.

ಕರೆಂಟ್ ಬಿಲ್ (Electricity Bill) ಹಾಗೂ ಮತ್ತೆ ಇತರ ಬಿಲ್ ಗಳನ್ನು ಯಾರು ಪಾವತಿ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಅಗ್ರಿಮೆಂಟ್ ನಲ್ಲಿ ತಿಳಿಸಿರಬೇಕು.

ಮನೆ ಬಾಡಿಗೆ ಪಡೆದುಕೊಂಡ ಮೇಲೆ ವ್ಯಕ್ತಿ ಕಾನೂನುಬಾಹಿರ ಯಾವ ಚಟುವಟಿಕೆಯನ್ನು ನಡೆಸಬಾರದು, ಒಂದು ವೇಳೆ ಇದು ಮನೆ ಮಾಲೀಕನ ಗಮನಕ್ಕೆ ಬಂದರೆ ತಕ್ಷಣವೇ ಕ್ರಮ ಕೈಗೊಳ್ಳಬಹುದು ಎಂಬುದನ್ನು ನಮೂದಿಸಬೇಕು.

ಸ್ವಂತ ಮನೆ ಕನಸು ನನಸಾಗಿಸಿಕೊಳ್ಳಿ; ಈ ಬ್ಯಾಂಕುಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿಗೆ ಗೃಹ ಸಾಲ

ಎಷ್ಟು ರೆಂಟ್ ಪಾವತಿ ಮಾಡುತ್ತೀರಿ? ಯಾವ ವಿಧದಲ್ಲಿ ಪಾವತಿ ಮಾಡುತ್ತೀರಿ? ಯಾವ ದಿನಾಂಕ ಕರೆಂಟ್ ಹಣವನ್ನು ನೀಡುತ್ತೀರಿ? ಎಂಬಿತ್ಯಾದಿ ಮಾಹಿತಿಗಳು ಕೂಡ ಅಗ್ರಿಮೆಂಟ್ ನಲ್ಲಿ ಇರಬೇಕು.

ಅಗ್ರಿಮೆಂಟ್ ಮುಗಿಯುವ ವರೆಗೂ ಬಾಡಿಗೆದಾರ ಮನೆಯನ್ನು (Rent House) ಬಿಟ್ಟು ಹೋಗುವಂತಿಲ್ಲ. ಒಂದು ವೇಳೆ ಹಾಗೆ ಬಿಟ್ಟು ಹೋಗುವುದಕ್ಕೆ ಹೆಚ್ಚುವರಿ ಹಣ ಪಾವತಿ ಮಾಡಬೇಕು ಎಂದು ಅಗ್ರಿಮೆಂಟ್ ನಲ್ಲಿ ನಮೂದಿಸಿ.

ಅಗ್ರಿಮೆಂಟ್ ರಿಜಿಸ್ಟ್ರೇಷನ್! (Agreement registration)

ನಿಮ್ಮ ಬಾಡಿಗೆ ಮನೆಗೆ ಬಾಡಿಗೆದಾರ ಬಂದು ಇಬ್ಬರ ಒಪ್ಪಂದದ ಮೇರೆಗೆ ರೆಂಟ್ ಅಗ್ರಿಮೆಂಟ್ ಮಾಡಿಕೊಂಡ ನಂತರ ಅದನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಹೀಗೆ ನೋಂದಣಿ ಮಾಡಿಕೊಂಡು ರೆಂಟ್ ಅಗ್ರಿಮೆಂಟ್ ಗೆ ಮಾತ್ರ ವ್ಯಾಲ್ಯೂ ಇರುತ್ತದೆ. ಇನ್ನು ರೆಂಟ್ ಅಗ್ರಿಮೆಂಟ್ ನ ಅವಧಿ ಯಾವಾಗಲೂ 11 ತಿಂಗಳಿಗೆ ಇರಬೇಕು ಎಂಬುದನ್ನು ನೆನಪಿಟ್ಟುಕೊಳ್ಳಿ.

ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಗೂ ಸಿಗುತ್ತೆ ಲೋನ್; ಸೂಪರ್ ಕಂಡೀಶನ್ ಕಾರುಗಳು ಖರೀದಿಸಿ

What should be in the rent agreement, New Rules for Home Owners, Tenants

Our Whatsapp Channel is Live Now 👇

Whatsapp Channel

Related Stories