ಆಧಾರ್ ಕಾರ್ಡ್ ಲಿಂಕ್ ಆಗಿರೋ ಮೊಬೈಲ್ ಸಂಖ್ಯೆ ತಿಳಿಯೋದು ಹೇಗೆ? ಇಲ್ಲಿದೆ ಸುಲಭ ವಿಧಾನ
ನಿಮ್ಮ ಆಧಾರ್ ಕಾರ್ಡ್ ಗೆ (Aadhaar Card) ಯಾವ ಮೊಬೈಲ್ ಸಂಖ್ಯೆ (Mobile Number) ಹಾಗೂ ಇಮೇಲ್ ಐಡಿ (E-Mail ID) ಲಿಂಕ್ ಆಗಿದೆ ಎಂಬುದನ್ನ ನೀವೇ ಪರಿಶೀಲಿಸಿಕೊಳ್ಳಬಹುದು
ಆಧಾರ್ ಕಾರ್ಡ್ (Aadhaar Card) ಹೊಂದಿದ್ರೆ ನಾವು ಎಲ್ಲಾ ಹಣಕಾಸಿನ ವ್ಯವಹಾರಗಳು ಅಥವಾ ಸರ್ಕಾರಿ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು
ಇನ್ನು ನೀವು ಆಧಾರ್ ಕಾರ್ಡ್ ಬಳಸಿ ಯಾವುದೇ ರೀತಿಯ ಕೆಲಸ ಮಾಡುವುದಿದ್ದರು ಆಧಾರ್ ಕಾರ್ಡ್ ಗೆ ಹೊಂದಿಕೆಯಾಗಿರುವ ಮೊಬೈಲ್ (mobile number) ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ. ಅದು ನಮೂದಿಸಿದರೆ ಮಾತ್ರ ನೀವು ಇತರ ಕೆಲಸಗಳನ್ನು ಮಾಡಿಕೊಳ್ಳಬಹುದು.
ಆದರೆ ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ನಮ್ಮದೇ ಆಗಿದ್ದರು ಓಟಿಪಿ ಮಾತ್ರ ನಮ್ಮ ಮೊಬೈಲ್ ಗೆ ಬರುತ್ತಿಲ್ಲ ಎನ್ನುವ ದೂರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಪರಿಹಾರವನ್ನು ಸೂಚಿಸಿದೆ.
ಸ್ವಂತ ಮನೆ ಕನಸು ನನಸಾಗಿಸಿಕೊಳ್ಳಿ; ಈ ಬ್ಯಾಂಕುಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿಗೆ ಗೃಹ ಸಾಲ
ಹೌದು, ಆಧಾರ್ ಕಾರ್ಡ್ ಗೆ ಯಾವ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ (email ID) ನೀಡಲಾಗಿದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಇನ್ನು ಮುಂದೆ ನಿಮ್ಮ ಆಧಾರ್ ಕಾರ್ಡ್ ಗೆ ಯಾವ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ ಲಿಂಕ್ ಆಗಿದೆ ಎಂಬುದನ್ನ ನೀವೇ ಪರಿಶೀಲಿಸಿಕೊಳ್ಳಬಹುದು ಎಂದು ಯುಐಡಿಎಐ ತಿಳಿಸಿದೆ.
ಹಾಗಾದ್ರೆ ಇದನ್ನ ಪರಿಶೀಲನೆ ಮಾಡುವುದು ಹೇಗೆ ನೋಡೋಣ.
ಈ ಹಂತಗಳನ್ನು ಅನುಸರಿಸಿ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಮಾಹಿತಿ ತಿಳಿದುಕೊಳ್ಳಿ!
ನಂತರ ನಿಮ್ಮ ಆಧಾರ್ ಸಂಖ್ಯೆ ಇ-ಮೇಲ್ ಐಡಿ ಮೊಬೈಲ್ ನಂಬರ್ ಅನ್ನು ಹಾಕಿ ಸೆಂಡ್ ಓಟಿಪಿ (send OTP) ಎನ್ನುವ ಬಟನ್ ಕ್ಲಿಕ್ ಮಾಡಿ. ಆಗ ನಿಮ್ಮ ಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಗೆ ಓಟಿಪಿ ಕಳುಹಿಸಲಾಗುತ್ತಿದೆ.
ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಗೂ ಸಿಗುತ್ತೆ ಲೋನ್; ಸೂಪರ್ ಕಂಡೀಶನ್ ಕಾರುಗಳು ಖರೀದಿಸಿ
ಓಟಿಪಿ ಬಂದಿದ್ದರೆ ಅದನ್ನು ನಮೂದಿಸಿ ವೇರಿಫೈ ಎಂದು ಕೊಡಬೇಕು. ಓಟಿಪಿ ಬಾರದೆ ಎಂದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಆಗಿಲ್ಲ ಎಂದು ಅರ್ಥ. ನಿಮ್ಮ ಆಧಾರ್ ಕಾರ್ಡ್ ಗೆ ಕನೆಕ್ಟ್ ಆಗಿರುವ ಮೊಬೈಲ್ ಸಂಖ್ಯೆ ಯಾವುದು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.
ಇನ್ನು ನಿಮ್ಮ ಮೊಬೈಲ್ ಸಂಖ್ಯೆ ನಿಮಗೆ ನೆನಪಿಲ್ಲದೆ ಇದ್ದಲ್ಲಿ ವೆರಿಫೈ ಆಧಾರ್ (verify Aadhaar) ಎನ್ನುವ ಆಯ್ಕೆಯನ್ನು ಮಾಡಿ ಅಲ್ಲಿ ನೀವು ಹಿಂದೆ ಬಳಸುತ್ತಿದ್ದ ಮೊಬೈಲ್ ಸಂಖ್ಯೆಗಳನ್ನು ನಮೂದಿಸಿದರು ಕೂಡ ಆಧಾರ್ ಮತ್ತು ಮೊಬೈಲ್ ಸಂಖ್ಯೆ ಪರಿಶೀಲಿಸಿಕೊಳ್ಳಬಹುದು.
ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಕನೆಕ್ಟ್ ಆಗದೆ ಇದ್ದಲ್ಲಿ ಅಪ್ಡೇಟ್ ಮಾಡಿಕೊಳ್ಳಲು ನಿಮಗೆ ಸ್ಕ್ರೀನ್ ಮೇಲೆ ಸಂದೇಶ ಬರುತ್ತದೆ ಆಗ ನೀವು ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬಹುದು.
₹70 ಸಾವಿರಕ್ಕೆ ಮಾರಾಟಕ್ಕಿದೆ 73 ಕಿ.ಮೀ ಮೈಲೇಜ್ ಕೊಡುವ ಹೀರೋ ಸ್ಪ್ಲೆಂಡರ್ ಬೈಕ್
ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಲಿಂಕ್ ಆಗಿರುವುದು ಕಡ್ಡಾಯವಾಗಿದೆ ಇಲ್ಲದಿದ್ದರೆ ನೀವು ಆಧಾರ್ ಕಾರ್ಡ್ ಬಳಸಿ ಯಾವುದೇ ರೀತಿಯ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಮೊಬೈಲ್ ಸಂಖ್ಯೆ ಮತ್ತು ಮೇಲ್ ಐಡಿ ಲಿಂಕ್ ಆಗದೆ ಇದ್ದಲ್ಲಿ ತಕ್ಷಣವೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅಪ್ಡೇಟ್ ಮಾಡಿಸಿಕೊಳ್ಳಿ.
How to know mobile number linked with Aadhaar card, Here’s an easy way
Follow us On
Google News |