ಸ್ವಂತ ಉದ್ಯಮ ಆರಂಭಕ್ಕೆ ಹಣ ಬೇಕಾ? ಸರ್ಕಾರವೇ ಕೊಡುತ್ತೆ ಕಡಿಮೆ ಬಡ್ಡಿ ದರದ ಸಾಲ

ಯಾವುದೇ ರೀತಿಯ ಸ್ಟಾರ್ಟಪ್ ಗಾಗಿ ಸಾಲ ಸೌಲಭ್ಯ (Loan) ಪಡೆದುಕೊಳ್ಳಬಹುದು. ನೀವು ತಿಳಿಸುವ ಉದ್ಯೋಗದ ಐಡಿಯಾದ ಆಧಾರದ ಮೇಲೆ ನಿಮಗೆ ಸಿಗುವ ಸಾಲದ ಮೊತ್ತ (Loan Amount) ನಿಗದಿಯಾಗುತ್ತದೆ

ಸಾಕಷ್ಟು ಜನರಿಗೆ ಸ್ವಂತ ಉದ್ಯಮ (own business) ಆರಂಭಿಸಬೇಕು ಎನ್ನುವ ಆಸೆ ಇರುತ್ತದೆ, ಆದರೆ ಸ್ಟಾರ್ಟ್ ಅಪ್ (start up) ಮಾಡುವುದಕ್ಕೆ ಸರಿಯಾದ ಬಂಡವಾಳ (investment) ಕೂಡ ಬೇಕು.. ನಿಮ್ಮ ಸ್ಮಾರ್ಟ್ ವರ್ಕ್ ಜೊತೆಗೆ ಬಂಡವಾಳವು ಇದ್ರೆ ಸುಲಭವಾಗಿ ಒಂದು ಉದ್ಯಮವನ್ನು ಆರಂಭಿಸಬಹುದು

ಸರ್ಕಾರದ ಕೆಲವು ಯೋಜನೆಗಳು ನಿಮಗೆ ಬೇಕಾಗಿರುವ ಬಂಡವಾಳದ ವ್ಯವಸ್ಥೆಯನ್ನು ಮಾಡುತ್ತವೆ. ಹೊಸದಾಗಿ ಉದ್ಯೋಗ ಆರಂಭಿಸುವವರಿಗೆ ಅಥವಾ ಹೀಗಿರುವ ಉದ್ಯೋಗವನ್ನು ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳಲು ಬಯಸುವವರಿಗೆ ಸರ್ಕಾರದ ಕೆಲವು ಯೋಜನೆಗಳು ಅತಿ ಉತ್ತಮ ಬಡ್ಡಿ ದರದಲ್ಲಿ ಸಾಲ ಸೌಲಭ್ಯ (loan facility) ನೀಡುತ್ತವೆ

ಅಂತ ಯೋಜನೆಗಳು ಯಾವವು ನೋಡೋಣ.

ಸ್ವಂತ ಉದ್ಯಮ ಆರಂಭಕ್ಕೆ ಹಣ ಬೇಕಾ? ಸರ್ಕಾರವೇ ಕೊಡುತ್ತೆ ಕಡಿಮೆ ಬಡ್ಡಿ ದರದ ಸಾಲ - Kannada News

ಆಧಾರ್ ಕಾರ್ಡ್ ಲಿಂಕ್ ಆಗಿರೋ ಮೊಬೈಲ್ ಸಂಖ್ಯೆ ತಿಳಿಯೋದು ಹೇಗೆ? ಇಲ್ಲಿದೆ ಸುಲಭ ವಿಧಾನ

ಎಂಎಸ್ಎಂಇ ಸಾಲ! (MSME loan)

ಸರ್ಕಾರದಿಂದ ಆರಂಭವಾಗಿರುವ ಅತಿ ಉತ್ತಮ ಯೋಜನೆ ಇದಾಗಿದ್ದು, ಯಾವುದೇ ರೀತಿಯ ಸ್ಟಾರ್ಟಪ್ ಗಾಗಿ ಸಾಲ ಸೌಲಭ್ಯ (Loan) ಪಡೆದುಕೊಳ್ಳಬಹುದು. ನೀವು ತಿಳಿಸುವ ಉದ್ಯೋಗದ ಐಡಿಯಾದ ಆಧಾರದ ಮೇಲೆ ನಿಮಗೆ ಸಿಗುವ ಸಾಲದ ಮೊತ್ತ ನಿಗದಿಯಾಗುತ್ತದೆ.

ಒಂದು ಕೋಟಿ ರೂಪಾಯಿಗಳವರೆಗೂ ಕೂಡ ಸಾಲ ಸೌಲಭ್ಯ (MSME loan) ಪಡೆದುಕೊಳ್ಳಬಹುದು. ನೀವು ಸಾಲಕ್ಕೆ ಅರ್ಹರಾಗಿದ್ದರೆ ಎಂಟರಿಂದ ಹನ್ನೆರಡು ದಿನಗಳ ಒಳಗೆ ಸಾಲ ಮಂಜೂರಾಗುತ್ತದೆ. ಯೋಜನೆ ಅಡಿಯಲ್ಲಿ ಸಾಲ ಪಡೆದುಕೊಳ್ಳಲು ನೀವು ಅನರ್ಹರು ಎಂದಾಗಿದ್ದರೆ ಅರ್ಜಿ ಸಲ್ಲಿಸಿದ ಕೇವಲ 59 ನಿಮಿಷಗಳಲ್ಲಿ ನಿಮಗೆ ಉತ್ತರ ಸಿಗುತ್ತದೆ.

ಸ್ವಂತ ಮನೆ ಕನಸು ನನಸಾಗಿಸಿಕೊಳ್ಳಿ; ಈ ಬ್ಯಾಂಕುಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿಗೆ ಗೃಹ ಸಾಲ

Loan Schemeಕ್ರೆಡಿಟ್ ಗ್ಯಾರಂಟಿ ಫಂಡ್ ಯೋಜನೆ (Credit guarantee fund scheme)

ಮೈಕ್ರೋ ಮತ್ತು ಸ್ಮಾಲ್ ಎಂಟರ್ಪ್ರೈಸಸ್ (micro and small enterprises) ಗಳಿಗೆ ಸಾಲ ಸೌಲಭ್ಯ ನೀಡುವ ಯೋಜನೆ ಇದಾಗಿದ್ದು, ಇಲ್ಲಿ ಯಾವುದೇ ಗ್ಯಾರೆಂಟಿ ನೀಡದೆ, ಅಂದರೆ ಮೇಲಾಧಾರವಿಲ್ಲದೆ (no surety) 10 ಲಕ್ಷ ರೂಪಾಯಿಗಳ ವರೆಗೆ ವರ್ಕಿಂಗ್ ಕ್ಯಾಪಿಟಲ್ ಸಾಲ ಸೌಲಭ್ಯ (working capital loan facility) ಪಡೆದುಕೊಳ್ಳಬಹುದು.

ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಗೂ ಸಿಗುತ್ತೆ ಲೋನ್; ಸೂಪರ್ ಕಂಡೀಶನ್ ಕಾರುಗಳು ಖರೀದಿಸಿ

ಪ್ರಧಾನ ಮಂತ್ರಿ ಮುದ್ರಾ ಯೋಜನೆ (Pradhanmantri mudra Loan scheme)

ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಮುದ್ರಾ ಯೋಜನೆ ವರದಾನವಾಗಿದೆ. ಯಾವುದೇ ಗ್ಯಾರಂಟಿ ಇಲ್ಲದೆಯೂ ಕೂಡ ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ (Mudra Loan) ಪಡೆದುಕೊಳ್ಳಬಹುದು. ಮುದ್ರಾ ಯೋಜನೆಯನ್ನು ಮೂರು ಹಂತಗಳಲ್ಲಿ ನೀಡಲಾಗುತ್ತದೆ ಒಂದು ಶಿಶು ಸಾಲ ಯೋಜನೆ ಎರಡು ಕಿಶೋರ ಸಾಲ ಯೋಜನೆ ಹಾಗೂ ಮೂರು ತರುಣ ಸಾಲ ಯೋಜನೆ.

ಶಿಶು ಮುದ್ರಾ ಯೋಜನೆಯ ಅಡಿಯಲ್ಲಿ 1-2% ಬಡ್ಡಿ ದರದಲ್ಲಿ 50,000 ವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.

ಕಿಶೋರ ಮುದ್ರಾ ಸಾಲ- ಈಶ್ವರ ಮುದ್ರಾ ಸಾಲ ಯೋಜನೆಯಲ್ಲಿ 8.60% ನಿಂದ 11.15% ದರದಲ್ಲಿ 5 ಲಕ್ಷಗಳವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.

ತರುಣ್ ಮುದ್ರಾ ಸಾಲ- ಈ ಸಲ ಯೋಜನೆಯಲ್ಲಿ 11.15% ನಿಂದ 20% ವರೆಗೆ ಬಡ್ಡಿ ನಿಗದಿಪಡಿಸಲಾಗುತ್ತದೆ. ವಾರ್ಷಿಕ ಈ ಬಗ್ಗೆ ದರದಲ್ಲಿ ಐದರಿಂದ ಹತ್ತು ಲಕ್ಷ ರೂಪಾಯಿಗಳ ವರೆಗೂ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಇಂದಿನ ದಿವಾಕರು ಆರಂಭಿಸಲು ಬಯಸುವ ಸ್ವಂತ ಉದ್ಯೋಗಕ್ಕೆ ಅಗತ್ಯ ಇರುವ ಬಂಡವಾಳ ನೀಡುವ ಉತ್ತಮ ಯೋಜನೆಗಳಲ್ಲಿ ಮುದ್ರಾ ಯೋಜನೆ ಒಂದು.

₹70 ಸಾವಿರಕ್ಕೆ ಮಾರಾಟಕ್ಕಿದೆ 73 ಕಿ.ಮೀ ಮೈಲೇಜ್ ಕೊಡುವ ಹೀರೋ ಸ್ಪ್ಲೆಂಡರ್ ಬೈಕ್

ಸ್ವಂತ ಉದ್ಯಮ ಆರಂಭಿಸಲು ಬಂಡವಾಳ ಒದಗಿಸುವ ಇತರ ಸರ್ಕಾರಿ ಯೋಜನೆಗಳು!

*ಕ್ರೆಡಿಟ್ ಲಿಂಕ್ ಕ್ಯಾಪಿಟಲ್ ಸಬ್ಸಿಡಿ
*ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ ಯೋಜನೆ
*ಮಾರ್ಕೆಟಿಂಗ್ ಅಸಿಸ್ಟೆಂಟ್ಸ್ ಸ್ಕೀಮ್
*ಕ್ರೆಡಿಟ್ ಅಸಿಸ್ಟೆಂಟ್ ಸ್ಕೀಮ್
SIDBI ಸಾಲ ಯೋಜನೆ

ಈ ಮೇಲಿನ ಎಲ್ಲ ಯೋಜನೆಗಳು ಯಾವುದೇ ರೀತಿಯ ಸ್ವಂತ ಉದ್ಯಮ (Own Business) ಮಾಡಿ ಹಣ ಗಳಿಸಬೇಕು ಎಂದುಕೊಳ್ಳುವವರಿಗೆ ಸೂಕ್ತವಾದ ಬಂಡವಾಳ ಒದಗಿಸುವ ಯೋಜನೆಗಳಾಗಿದ್ದು, ಬ್ಯಾಂಕ್ಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

The government provides low interest rate loans for Own Business

Follow us On

FaceBook Google News

The government provides low interest rate loans for Own Business