ಭಾರತದಲ್ಲಿ ಹೂಡಿಕೆ (investment) ಮಾಡಲು ಸಾಕಷ್ಟು ಬೇರೆಬೇರೆ ಅವಕಾಶಗಳು ಇವೆ, ಬ್ಯಾಂಕ್ಗಳಲ್ಲಿ (Banks), ಮ್ಯೂಚುವಲ್ ಫಂಡ್ (Mutual Funds), ಎಸ್ ಎಸ್ ಪಿ (SSP), ಪೋಸ್ಟ್ ಆಫೀಸ್ (Post Office) ಸೇರಿದಂತೆ ಬೇರೆ ಬೇರೆ ರೀತಿಯ ಹೂಡಿಕೆಯನ್ನು ಆಯ್ದುಕೊಳ್ಳಬಹುದು
ಆದರೆ ಅತ್ಯಂತ ಸುರಕ್ಷಿತವಾದ ಹಾಗೂ ಹೆಚ್ಚು ಲಾಭವನ್ನು ತಂದುಕೊಡಬಲ್ಲ ಹೂಡಿಕೆ ಎಂದರೆ ಅದು ಪೋಸ್ಟ್ ಆಫೀಸ್ ಸ್ಕೀಮ್ಗಳಲ್ಲಿ (post office schemes) ಹೂಡಿಕೆ ಮಾಡುವುದು.
ಒಂದು ವರ್ಷಕ್ಕೆ ₹1 ಲಕ್ಷ ರೂಪಾಯಿ ಪಿಂಚಣಿ ಪಡೆಯೋಕೆ ಇಷ್ಟು ಹೂಡಿಕೆ ಮಾಡಿದ್ರೆ ಸಾಕು!
ಪೋಸ್ಟ್ ಆಫೀಸ್ ಸ್ಕೀಮ್ (Post office schemes)
ಇತ್ತೀಚಿನ ದಿನಗಳಲ್ಲಿ ಪೋಸ್ಟ್ ಆಫೀಸ್ ನಲ್ಲಿ ಹೊಸ ಹೊಸ ಹೂಡಿಕೆ ಯೋಜನೆಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು ಹಿರಿಯ ನಾಗರಿಕರಿಗೆ ಈ ಯೋಜನೆಗಳಿಂದ ಹೆಚ್ಚಿನ ಬೆನಿಫಿಟ್ ಸಿಗುತ್ತಿದೆ
ಸಾಮಾನ್ಯ ಗ್ರಾಹಕರಿಗಿಂತ ಹಿರಿಯ ನಾಗರಿಕರಿಗೆ ಸಿಗುವ ಬಡ್ಡಿ ದರದಲ್ಲಿಯೂ ಕೂಡ ಹೆಚ್ಚಳ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪೋಸ್ಟ್ ಆಫೀಸ್ನಲ್ಲಿ ಸಿಗುವ ಅತ್ಯುತ್ತಮ 5 ಹೂಡಿಕೆ ಯೋಜನೆಗಳು ಯಾವವು ನೋಡೋಣ.
ರೆಂಟ್ ಅಗ್ರಿಮೆಂಟ್ ನಲ್ಲಿ ಏನೆಲ್ಲಾ ಇರಬೇಕು? ಮನೆ ಮಾಲೀಕರು, ಬಾಡಿಗೆದಾರರಿಗೆ ಹೊಸ ರೂಲ್ಸ್
ಅಂಚೆ ಕಚೇರಿ ಆರ್ ಡಿ ಸ್ಕೀಮ್! (RD scheme)
ಪೋಸ್ಟ್ ಆಫೀಸ್ನಲ್ಲಿ ರಿಕರಿಂಗ್ ಡಿಪಾಸಿಟ್ (recurring deposit) ಅನ್ನು ಇಡಬಹುದು, ಇದಕ್ಕೆ 6.20% ನಷ್ಟು ಬಡ್ಡಿ ಸಿಗುತ್ತದೆ. ಐದು ವರ್ಷಗಳ ಅವಧಿಗೆ ಇಲ್ಲಿ ಹೂಡಿಕೆ ಮಾಡಬಹುದು.
ಅಂಚೆ ಕಚೇರಿಯ ಅವಧಿ ಠೇವಣಿ ಯೋಜನೆ (Time deposit scheme)
7.5% ಬಡ್ಡಿ ದರದಲ್ಲಿ ಅಂಚೆ ಕಚೇರಿಯ ಟೈಮ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡಬಹುದು. ಒಂದು ವರ್ಷ, ಎರಡು ವರ್ಷ ಅಥವಾ ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಿ ಹೆಚ್ಚು ಆದಾಯ ಗಳಿಸಬಹುದು, ಆದರೆ ಕಡಿಮೆ ಅವಧಿಯ ಹೂಡಿಕೆಗೆ ಬಡ್ಡಿ ದರ ಕಡಿಮೆ ಇರುತ್ತದೆ.
ಸ್ವಂತ ಉದ್ಯಮ ಆರಂಭಕ್ಕೆ ಹಣ ಬೇಕಾ? ಸರ್ಕಾರವೇ ಕೊಡುತ್ತೆ ಕಡಿಮೆ ಬಡ್ಡಿ ದರದ ಸಾಲ
ನ್ಯಾಷನಲ್ ಸೇವಿಂಗ್ಸ್ ಸ್ಕೀಮ್ (National savings scheme)
ಯೋಜನೆಗೆ 7.7% ನಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ, ಯಾರು ಬೇಕಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಒಂದು ವರ್ಷದಲ್ಲಿ ಕನಿಷ್ಠ ನೂರು ರೂಪಾಯಿಗಳಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳ ವರೆಗೆ ಹೂಡಿಕೆ ಮಾಡಬಹುದು.
ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana)
ಹತ್ತು ವರ್ಷಗಳಿಗಿಂತ ಸಣ್ಣ ವಯಸ್ಸಿನ ಹೆಣ್ಣು ಮಕ್ಕಳಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಳಿತಾಯ ಯೋಜನೆ ಇದಾಗಿದೆ, 8% ನಷ್ಟು ಬಡ್ಡಿ ದರವನ್ನು ಮೀಸಲಿಡಲಾಗಿದೆ. ಮಗುವಿಗೆ 18 ವರ್ಷ ತುಂಬಿದ ನಂತರ ದೊಡ್ಡ ಪ್ರಮಾಣದಲ್ಲಿ ಆದಾಯ ಹಿಂಪಡೆಯಬಹುದು.
ಸ್ವಂತ ಮನೆ ಕನಸು ನನಸಾಗಿಸಿಕೊಳ್ಳಿ; ಈ ಬ್ಯಾಂಕುಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿಗೆ ಗೃಹ ಸಾಲ
ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ (senior citizens savings)
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಐದು ವರ್ಷಗಳ ಅವಧಿಯ ಹೂಡಿಕೆ ಯೋಜನೆ ಇದಾಗಿದ್ದು 8.2% ನಷ್ಟು ಬಡ್ಡಿ ದರ ನೀಡಲಾಗುತ್ತದೆ.
ಅವಧಿ ಮುಗಿದ ನಂತರ ಪ್ರತಿ ಮೂರು ವರ್ಷಗಳಿಗೆ ಒಮ್ಮೆ ರಿನಿವಲ್ ಮಾಡುತ್ತಾ ಹೋಗಬಹುದು.
ಈ ಮೇಲಿನ ಎಲ್ಲಾ ಯೋಜನೆಗಳು ಅತಿ ಉತ್ತಮ ಆದಾಯ ನೀಡುವ ಯೋಜನೆಗಳಾಗಿದ್ದು ಇಲ್ಲಿ ಹೂಡಿಕೆ ಮಾಡಿದರೆ ಆದಾಯ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ, ಅಷ್ಟೇ ಅಲ್ಲದೆ ನೀವು ಮಾಡುವ ಹೂಡಿಕೆಯ ಮೇಲೆ ಸಾಲ ಸೌಲಭ್ಯವನ್ನು (Loan) ಪಡೆದುಕೊಳ್ಳಬಹುದು.
Double income if you invest in these post office savings schemes
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.