ಆಸ್ತಿ ಖರೀದಿಗೂ ಹೊಸ ನಿಯಮ! ಇನ್ಮುಂದೆ ಇಂತಹ ಆಸ್ತಿ, ಜಮೀನು ಮಾತ್ರ ಖರೀದಿ ಮಾಡಬೇಕು
ಸೈಟ್ಗಳಲ್ಲಿ ಅಪ್ಪ್ರೋಡ್ ಲೇಔಟ್ (approved layout Property) ಸೈಟ್, ರೆವೆನ್ಯೂ ಸೈಟ್ (revenue site) ಡಿಸಿ ಕನ್ವರ್ಷನ್ ಸೈಟ್ (DC conversion site) ಹೀಗೆ ಬೇರೆ ಬೇರೆ ವಿಧದಲ್ಲಿ ಸೈಟುಗಳನ್ನು ವಿಭಾಗ ಮಾಡಿರಲಾಗುತ್ತೆ.
ಸಾಮಾನ್ಯವಾಗಿ ನಗರ ಭಾಗದಲ್ಲಿ ಅಥವಾ ಪಟ್ಟಣ ಭಾಗದಲ್ಲಿ ವಾಸಿಸುವವರು ಬಾಡಿಗೆ ಮನೆಯಲ್ಲಿ (rented house) ವಾಸಿಸುತ್ತಾರೆ. ಆದರೆ ಬಾಡಿಗೆ ದರ ವರ್ಷದಿಂದ ವರ್ಷಕ್ಕೆ ಇರುತ್ತದೆ, ಈ ಕಾರಣಕ್ಕಾಗಿ ಸಾಕಷ್ಟು ಜನ ಬಾಡಿಗೆ ಹಣವನ್ನ ಕೊಡಲು ಸಾಧ್ಯವಾಗದೆ ಸ್ವಂತ ಮನೆ (Own House) ಹೊಂದಿದ್ದರೆ ಒಳ್ಳೆಯದು ಎಂದು ಭಾವಿಸುವುದು ಉಂಟು.
ಹೀಗೆ ಮನೆ ಕಟ್ಟುವ ನಿರ್ಧಾರ ಮಾಡಿದವರು ಕೆಲವೊಮ್ಮೆ ಸೈಟ್ ಖರೀದಿ (site purchase) ಮಾಡಿ ಮೋಸ ಹೋಗುವ ಸಾಧ್ಯತೆಗಳು ಹೆಚ್ಚು. ಜನರು ಮೋಸ ಹೋಗಬಾರದು ಎನ್ನುವ ಕಾರಣಕ್ಕೆ ಬೆಂಗಳೂರಿನ ಜಿಲ್ಲಾಧಿಕಾರಿ ಕೆ ಎ ದಯಾನಂದ (KA Dayanand) ಅವರು ಸೋಶಿಯಲ್ ಮೀಡಿಯಾದಲ್ಲಿ ಸುಧೀರ್ಘವಾದ ಲೇಖನ ಒಂದನ್ನು ಬರೆದಿದ್ದು ಸದ್ಯ ಇದು ವೈರಲ್ ಆಗುತ್ತಿದೆ.
ಯಾವ ಸೈಟ್ ಖರೀದಿ (Land Purchase) ಮಾಡಬೇಕು ಯಾವ ಸೈಟ್ ಖರೀದಿ ಮಾಡಿದರೆ ಮೋಸ ಹೋಗುತ್ತೀರಿ ಎಂಬ ವಿಷಯಗಳ ಬಗ್ಗೆ ಸರಿಯಾದ ಮಾಹಿತಿ ನೀಡಿದ್ದಾರೆ.
ಸೈಟ್ಗಳಲ್ಲಿ ಅಪ್ಪ್ರೋಡ್ ಲೇಔಟ್ (approved layout Property) ಸೈಟ್, ರೆವೆನ್ಯೂ ಸೈಟ್ (revenue site) ಡಿಸಿ ಕನ್ವರ್ಷನ್ ಸೈಟ್ (DC conversion site) ಹೀಗೆ ಬೇರೆ ಬೇರೆ ವಿಧದಲ್ಲಿ ಸೈಟುಗಳನ್ನು ವಿಭಾಗ ಮಾಡಿರಲಾಗುತ್ತೆ.
ಇಲ್ಲಿ ರೆವೆನ್ಯೂ ಸೈಟ್ ಸ್ವಲ್ಪ ಕಡಿಮೆ ಬೆಲೆಗೆ ಲಭ್ಯ ಆದರೆ, ಡಿಸಿ ಕನ್ವರ್ಷನ್ ಸೈಟ್ ಸ್ವಲ್ಪ ಜಾಸ್ತಿ. ಅದೇ ರೀತಿ ಅಪ್ಪ್ರೋಡ್ ಲೇಔಟ್ ಸೈಟ್ ಹೆಚ್ಚು ದುಬಾರಿಯದಾಗಿರುತ್ತದೆ.
ಜನರು ಕಡಿಮೆ ಬೆಲೆಗೆ ಸಿಗುವ ಸೈಟ್ ಖರೀದಿ ಮಾಡಲು ಹೋಗಿ ವಂಚನೆಗೆ ಒಳಗಾಗುತ್ತಿದ್ದಾರೆ. ಎಷ್ಟೋ ಬಾರಿ ಸೈಟ್ ಮಾರಾಟ ಮಾಡುವವರ ಹೆಸರಿನಲ್ಲಿ ಆ ಸೈಟ್ ಇರುವುದಿಲ್ಲ, ಆದರೂ ಅವರು ದುಡ್ಡು ತೆಗೆದುಕೊಂಡು ಇದನ್ನು ನಿಮ್ಮ ಹೆಸರಿಗೆ ಮಾಡಿಸುತ್ತೇವೆ ಎಂದು ಹೇಳಿ ಮೋಸ ಮಾಡುವ ಸಾಧ್ಯತೆ ಹೆಚ್ಚು.
ಇಂತಹ ಸಂದರ್ಭದಲ್ಲಿ ಕಷ್ಟಪಟ್ಟು ದುಡಿದ ಹಣವು ಇಲ್ಲ, ತಮ್ಮ ಹೆಸರಿನಲ್ಲಿ ಸೈಟ್ ಕೂಡ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಎಷ್ಟೋ ಬಾರಿ ಸರ್ಕಾರಿ ಜಮೀನನ್ನೇ ಕಬಳಿಸಿ ಮಾರಾಟ ಮಾಡುತ್ತಾರೆ. ಜನಸಾಮಾನ್ಯರು ನಂಬಿ ಅದನ್ನು ಖರೀದಿ ಮಾಡುತ್ತಾರೆ
ನಂತರ ನೋಂದಣಿ ಸಮಯದಲ್ಲಿ ಆ ಸೈಟ್ ಬಗ್ಗೆ ತಿಳಿಯುತ್ತದೆ. ನಂತರ ಎಷ್ಟೇ ಕೋರ್ಟು ಕಚೇರಿ ಎಂದು ಅಲೆದು ಹಣ ಖರ್ಚು ಮಾಡಿದರು ಸೈಟ್ ಮಾತ್ರ ನಿಮ್ಮ ಕೈ ಸೇರುವುದಿಲ್ಲ. ಇದಕ್ಕಾಗಿ ಜಿಲ್ಲಾಧಿಕಾರಿಗಳು ಯಾವ ರೀತಿಯ ಸೈಟ್ ಖರೀದಿ ಮಾಡಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಒಂದು ಸೈಟ್ ನಿರ್ಮಾಣವಾಗಬೇಕಾದರೆ ಅಷ್ಟು ಸುಲಭವಾಗಿ ಕೃಷಿ ಭೂಮಿ (Agriculture Property) ಆಗಿದ್ದರೆ ಅದನ್ನು ಭೂ ಪರಿವರ್ತನೆ ಕಾಯ್ದೆಯ ಅಡಿಯಲ್ಲಿ ಪರಿವರ್ತಿಸಿ ನಂತರ ಜಿಲ್ಲಾಧಿಕಾರಿಗಳ ಅನುಮೋದನೆಯೊಂದಿಗೆ ಗ್ರಾಮ ಪಂಚಾಯತ್ ಅಥವಾ ನಗರ ಪಂಚಾಯತ್ ಅಥವಾ ಬಿಬಿಎಂಪಿ ಗೆ 45% ನಷ್ಟು ಬಿಟ್ಟುಕೊಟ್ಟು ಉಳಿದದ್ದನ್ನು ಮಾರಾಟ ಮಾಡಬಹುದು. ಅನುಮೋದಿತ ಸೈಟ್ ನಕ್ಷೆಯಲ್ಲಿ ಪಾರ್ಕ್, ರಸ್ತೆ ಮೊದಲಾದವುಗಳನ್ನು ಹೊಂದಿರಬೇಕು.
ಇಂತಹ ನಿವೇಶನ ಖರೀದಿ ಮಾಡುವವರು ಭೂ ಪರಿವರ್ತನಾ ಆದೇಶ ಹಾಗೂ ನಕ್ಷೆಯನ್ನು ಪರಿಶೀಲಿಸಿ ನಂತರ ಮಾರಾಟಗಾರರಿಂದ ನಿವೇಶನ ಖರೀದಿ ಮಾಡಿದರೆ ಮಾತ್ರ ಅದಕ್ಕೆ ಅನುಮೋದನೆ ಸಿಗುತ್ತದೆ ಹಾಗೂ ಆ ಸೈಟ್ ನಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಲ್ಯಾಂಡ್ ಲೇ ಔಟ್ ನಲ್ಲಿ ಸೈಟ್ ಖರೀದಿ ಮಾಡುವುದಾದರೆ ಅದು ತುಸು ದುಬಾರಿಯೇ ಆಗಿರುತ್ತದೆ. ಯಾಕಂದ್ರೆ ಸೈಟ್ ನಿರ್ಮಾಣ ಮಾಡುವವರು ನಕ್ಷೆಯ ಪ್ರಕಾರ ಅನುಮೋದನೆಯಂತೆ ಸೈಟ್ ನಿರ್ಮಾಣ ಮಾಡಬೇಕು ಹಾಗಾಗಿ ಇದರ ವೆಚ್ಚವು ಅಧಿಕ ಆದರೆ ಇಂತಹ ಸೈಟ್ ಖರೀದಿ ಮಾಡಿದರೆ ಮುಂದೆ ಯಾವುದೇ ರೀತಿಯ ಕಾನೂನಿನ ಪ್ರಕಾರ ಸಮಸ್ಯೆಗಳು ಉಂಟಾಗುವುದಿಲ್ಲ.
ಜಿಲ್ಲಾಧಿಕಾರಿಗಳ ಅನುಮೋದನೆ ಯೊಂದಿಗೆ ಕೃಷಿ ಭೂಮಿಯನ್ನು ಇದು ಪರಿವರ್ತನೆ ನಿಯಮದ ಅಡಿಯಲ್ಲಿ ಪರಿವರ್ತನೆ ಮಾಡಿ ನಂತರ ಸಂಬಂಧಿತ ಪ್ರಾಧಿಕಾರದಿಂದ ಬಡಾವಣೆಯ ನಕ್ಷೆ ನಿರ್ಮಾಣಕ್ಕೆ ಅನುಮತಿ ಪಡೆದು ನಂತರ ಡಿಸಿ ಕನ್ವರ್ಷನ್ ಸೈಟ್ ನಿರ್ಮಾಣ ಮಾಡಲಾಗುತ್ತದೆ.
ಈ ಸೈಟ್ ನಿರ್ಮಾಣ ಮಾಡುವವರು ಸರ್ಕಾರಕ್ಕೆ ಭೂಮಿಯನ್ನು ನೀಡಬೇಕಾದ ಅನಿವಾರ್ಯತೆ ಇರುವುದರಿಂದ ಅನುಮೋದನೆ ಪಡೆಯದೆ ನಕ್ಷೇ ತಯಾರಿಸಿ ಅದನ್ನು ಕಡಿಮೆ ಬೆಲೆಗೆ ಸೈಟ್ ನಿರ್ಮಾಣ ಮಾಡಿ ಮಾರಾಟ ಮಾಡುತ್ತಾರೆ. ಇಲ್ಲಿ ನಿವೇಶನ, ವಸತಿ ನಿರ್ಮಾಣದ ಸಲುವಾಗಿ ಭೂ ಪರಿವರ್ತನೆ ಆಗಿದೆ ಎಂದು ಭಾವಿಸಿ ಕಡಿಮೆ ಬೆಲೆಗೆ ಸಿಗುವ ಸೈಟ್ ಅನ್ನು ಜನ ಖರೀದಿ ಮಾಡಿ ಮೋಸ ಹೋಗುತ್ತಿದ್ದಾರೆ.
ಸೈಟ್ಗೆ ಎ ಖಾತ ಮಾಡಿಸುವುದು ಅಥವಾ ಮನೆ ನಿರ್ಮಾಣ ಮಾಡುವುದಕ್ಕೆ ಪ್ರಾಧಿಕಾರದ ಅನುಮತಿ ಇರುವುದಿಲ್ಲ. ಇಲ್ಲಿ ಮನೆ ನಿರ್ಮಾಣ ಮಾಡುವುದು ಕಾನೂನು ಬಾಹಿರವೇ ಆಗಿರುತ್ತದೆ. ಹಾಗಾಗಿ ಸಾಕಷ್ಟು ಬಾರಿ ಸೈಟ್ ಖರೀದಿ ಮಾಡಿದವರು ಮನೆ ನಿರ್ಮಾಣ (House Construction) ಮಾಡಿಕೊಳ್ಳಲು ಸಾಧ್ಯವಾಗದೆ ಪರದಾಡುವಂತಹಾಗುತ್ತದೆ.
ಎಷ್ಟೋ ಬಾರಿ ಸ್ಥಳೀಯ ಪ್ರಾಧಿಕಾರದ ಅಧಿಕಾರಿಗಳು ಈ ವಿಷಯ ಗೊತ್ತಿದ್ದರೂ ಕೂಡ ತಮಗೆ 45 ಪರ್ಸೆಂಟ್ ನಷ್ಟು ಭೂಮಿ ಪಡೆದುಕೊಳ್ಳುವ ಸಲುವಾಗಿ ಆರಂಭದಲ್ಲಿ ಯಾವುದೇ ತಕರಾರು ಮಾಡುವುದಿಲ್ಲ ಹಾಗಾಗಿ ಇದನ್ನು ನಂಬಿ ಜನ ಖರೀದಿ ಮಾಡಿದ್ರೆ ನಂತರ ಕಾನೂನಿನ ಸಮಸ್ಯೆಯಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ.
ಕೃಷಿ ಭೂಮಿಯನ್ನು ಪರಿವರ್ತನೆ ಮಾಡದೆ ಹಾಗೆ ಬಡಾವಣೆ ನಿರ್ಮಾಣ (Housing Layout) ಮಾಡಲು ಕೆಲವರು ಮುಂದಾಗುತ್ತಾರೆ, ಕಂದಾಯ ಇಲಾಖೆ ಕೃಷಿ ಭೂಮಿಗೆ ಪಹಣಿಯನ್ನು ನೀಡುತ್ತದೆ. ಅಧಿಕಾರಿಗಳಿಂದ ಭೂ ಪರಿವರ್ತನೆಗೆ ಅನುಮೋದನೆ ಪಡೆದುಕೊಳ್ಳದೆ ಹಾಗೆಯೇ ಕೃಷಿ ಭೂಮಿಯನ್ನು ಕಡಿಮೆ ಬೆಲೆಗೆ ಸೈಟುಗಳನ್ನಾಗಿ ಮಾರಾಟ ಮಾಡುವುದಕ್ಕೆ ರವೆನ್ಯೂ ಸೈಟ್ ಎನ್ನಲಾಗುತ್ತದೆ
ಇದಕ್ಕೆ ಸರ್ಕಾರದಿಂದ ಯಾವುದೇ ಮಾನ್ಯತೆ ಇರುವುದಿಲ್ಲ. ಗ್ರಾಮ ಪಂಚಾಯತ್, ಪ್ರಾಧಿಕಾರ, ಬಿ ಬಿ ಎಂ ಪಿ ಕೂಡ ಇಂತಹ ಸೈಡ್ ಗೆ ನಿಮ್ಮ ಹೆಸರಿಗೆ ಖಾತ ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ಮಾಡಿಕೊಂಡರು ಎ ಖಾತ ಸಿಗುವುದಿಲ್ಲ. ಇದು ಕಾನೂನುಬಾಹಿರವಾಗಿರುವ ಸೈಟ್ ಆಗಿದೆ.
ಹೆಸರಿನಲ್ಲಿ ಕೃಷಿ ಭೂಮಿಯ ಪಹಣಿ ಇರುತ್ತದೆಯೋ ಅಂತವರು ಇನ್ನೊಬ್ಬ ಹಣ ಇರುವ ವ್ಯಕ್ತಿಗೆ ಅದನ್ನು ಮಾರಾಟ ಮಾಡಬಹುದು ಆದರೆ ಆ ಭೂಮಿಯನ್ನು ತೆಗೆದುಕೊಂಡು ಮಾರಾಟ ಮಾಡಿ ಜನಸಾಮಾನ್ಯರಿಗೆ ಮೋಸ ಮಾಡಬಹುದು.
ಪಹಣಿ ಇರುವ ಜಾಗಕ್ಕೆ ಖರೀದಿ ಮಾಡಿರುವ ವ್ಯಕ್ತಿಯ ಹೆಸರು ಮಾತ್ರ ಇರುತ್ತದೆ ಅದನ್ನ ಜನಸಾಮಾನ್ಯರು ಸೈಟ್ ಆಗಿ ಖರೀದಿ ಮಾಡಿದರು ಅವರ ಹೆಸರಿನಲ್ಲಿ ಪಡೆದುಕೊಳ್ಳಲು ಸಾಧ್ಯವಿಲ್ಲ
ಒಂದು ವೇಳೆ ಕಾನೂನು ಹೋರಾಟಕ್ಕೆ ಮುಂದಾದರೆ ಅದು ಯಾರ ಹೆಸರಿನಲ್ಲಿ ಇದೆಯೋ ಅದೇ ವ್ಯಕ್ತಿಗೆ ಸೇರುತ್ತದೆಯೇ ಹೊರತು ಹಣಕೊಟ್ಟು ಸೈಟ್ ಖರೀದಿ ಮಾಡಿದವನಿಗೆ ಸೇರುವುದಿಲ್ಲ. ಆದ್ದರಿಂದ ನೀವು ಯಾವುದೇ ಸೈಟ್ ಖರೀದಿ ಮಾಡುವುದಕ್ಕಿಂತ ಮೊದಲು ಆ ಸೈಟ್ ಬಗ್ಗೆ ಸರಿಯಾದ ಕಾನೂನಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು
ಯಾವ ಸೈಟ್ ವಿಭಾಗದ ಅಡಿಯಲ್ಲಿ ನಿರ್ಮಾಣವಾಗಿದೆ ಭೂ ಪರಿವರ್ತನೆ ಆಗಿದೆಯೋ ಇಲ್ಲವೋ ಎಂಬುದನ್ನು ಮೊದಲು ಅರಿತುಕೊಳ್ಳಬೇಕು ಇಲ್ಲವಾದರೆ ನೀವು ಹಣ ಕೊಟ್ಟು ಸೈಟ್ ಖರೀದಿ ಮಾಡಿ ಆ ಜಾಗ ಅಲ್ಲಿಯೇ ಇರುತ್ತದೆ ಹೊರತು ನಿಮ್ಮ ಹೆಸರಿಗೆ ಜಾಗ ಬರೆದು ಕೊಡುವುದಿಲ್ಲ ಹಾಗೆ ಅಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಸೈಟ್ ಖರೀದಿ ಮಾಡುವ ಮುಂಚೆ ಬಹಳ ಜಾಗೃತೆ ವಹಿಸಿ.
New rule for property purchase, only such property and land should be purchased
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
New rule for property purchase, only such property and land should be purchased