State Bank of India Recruitment : ಯಾವುದೇ ಬ್ಯಾಂಕ್ ನಲ್ಲಿ ಕೆಲಸ (bank job) ಸಿಕ್ಕರೆ ಅದನ್ನ ಸುರಕ್ಷಿತ ಕೆಲಸ ಎಂದೇ ಹೇಳಬಹುದು, ಇದು ಸರ್ಕಾರಿ ನೌಕರಿ ಅಂತೆ ಸುರಕ್ಷಿತ ಕೆಲಸವಾಗಿದ್ದು ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನಲ್ಲಿ ಖಾಲಿ (SBI vacancy) ಇರುವ 96 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದುಕೊಂಡು ತಕ್ಷಣವೇ ಅರ್ಜಿ ಸಲ್ಲಿಸಿ.
ಎಸ್ ಬಿ ಐ ನಲ್ಲಿ ಖಾಲಿ ಇರುವ ಹುದ್ದೆಗಳ ವಿವರ (Job information)
96 ಹುದ್ದೆಗಳು. ಹುದ್ದೆಯ ಹೆಸರು ರಿಸಾಲ್ವರ್. ಬೆಂಗಳೂರಿನಲ್ಲಿ (Bengaluru) ಆರು ಹಾಗೂ ದೇಶದ ವಿವಿಧ ಭಾಗಗಳಲ್ಲಿ ಉಳಿದ ಹುದ್ದೆಗಳು ಖಾಲಿ ಇವೆ.
ವಯೋಮಿತಿ (Applicant age)
ಎಸ್ ಬಿ ಐ ಅದಿ ಸೂಚನೆಯ ಪ್ರಕಾರ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು ನವೆಂಬರ್ 1, 2023 ಕ್ಕೆ 65 ವರ್ಷ ಮೀರಬಾರದು. ಮಿಸಲಾತಿಯ ಅನುಸಾರ ವಯೋಮಿತಿಯ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ ಮತ್ತು ವೇತನ (Application feel and salary)
ಎಸ್‌ಬಿಐ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಒಂದು ರೂಪಾಯಿಗಳನ್ನು ಕೂಡ ಶುಲ್ಕವಾಗಿ ಕೊಡಬೇಕಾಗಿಲ್ಲ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ವಿವಿಧ ಭಾಗದಲ್ಲಿ ಕೆಲಸ ನಿರ್ವಹಿಸಲು ಸಿದ್ಧರಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ 40 ರಿಂದ 45,000 ಮಾಸಿಕ ವೇತನ ನೀಡಲಾಗುವುದು.
ಮೊದಲಿಗೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ ನಂತರ ಮೆರಿಟ್ ಟೆಸ್ಟ್ ಇರುತ್ತದೆ. ಅದರಲ್ಲಿ ತೇರ್ಗಡೆ ಹೊಂದಿದರೆ ನೇರ ಸಂದರ್ಶನ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Last date for apply)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇಂದು, ನವೆಂಬರ್ 21 2023 ಕೊನೆಯ ದಿನಾಂಕವಾಗಿದೆ ಎಸ್ ಬಿ ಐ ನ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು. ಮತ್ತು ಆಸಕ್ತ ಅಭ್ಯರ್ಥಿಗಳು ಈ ಲೇಖನ ನೋಡಿದ ತಕ್ಷಣವೇ ಅರ್ಜಿ ಸಲ್ಲಿಸಿ ನಿಮ್ಮ ಹೆಸರು ಶಾರ್ಟ್ ಲಿಸ್ಟ್ ನಲ್ಲಿ ಬಂದರೆ ಉತ್ತಮ ಹುದ್ದೆ ಗಳಿಸಿಕೊಳ್ಳುವ ಅವಕಾಶವಿದೆ.
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
Recruitment of 96 posts in State Bank of India, Apply today