ಆಸ್ತಿ, ಜಮೀನು ಪತ್ರ ಅಡವಿಟ್ಟು ಬ್ಯಾಂಕ್ ಸಾಲ ಮಾಡಿರೋ ಎಲ್ಲರಿಗೂ ಹೊಸ ರೂಲ್ಸ್ ಜಾರಿ

ಅನಿವಾರ್ಯ ಕಾರಣಗಳಿಗೆ ಬ್ಯಾಂಕ್ ನಲ್ಲಿ ಸಾಲ (bank loan) ತೆಗೆದುಕೊಳ್ಳಬೇಕಾಗುತ್ತದೆ, ಅದು ಗೃಹಸಾಲ (Home Loan) ಇರಬಹುದು, ವಯಕ್ತಿಕ ಸಾಲ (Personal Loan) ಇರಬಹುದು ಅಥವಾ ವಾಹನ (Vehicle Loan) ಹಾಗೂ ಚಿನ್ನದ ಮೇಲಿನ (Gold Loan) ಸಾಲವೇ ಆಗಿರಬಹುದು.

“ನಾನು ಬ್ಯಾಂಕ್ನಿಂದ ಸಾಲ (Bank Loan) ತೆಗೆದುಕೊಂಡಿದ್ದೆ ಅದನ್ನ ಸರಿಯಾದ ಸಮಯಕ್ಕೆ ಮರುಪಾವತಿ (Loan Re Payment) ಮಾಡಿದ್ದೇನೆ, ಆದರೆ ನಾನು ಅಡವಿಟ್ಟ ಆಸ್ತಿ ಪತ್ರ ಮಾತ್ರ ನನ್ನ ಕೈ ಸೇರಿಲ್ಲ!” ಈ ರೀತಿ ಸಂದೇಶವನ್ನು ಹೊಂದಿರುವ ಮೇಲ್ ಅಥವಾ ಮನವಿ ಪತ್ರಗಳು ಆರ್‌ಬಿಐಗೆ (Reserve Bank of India) ಸಾಕಷ್ಟು ಸಂದಾಯವಾಗಿದೆ.

ಇದೆಲ್ಲವೂ ಗ್ರಾಹಕರ ಮನವಿಗಳಾಗಿದ್ದು ಆರ್‌ಬಿಐ (RBI) ಇದೀಗ ಗ್ರಾಹಕರ ಪರವಾಗಿ ಹೊಸ ನೀತಿಯನ್ನು ಜಾರಿಗೆ ತಂದಿದೆ.

ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಸಿಹಿಸುದ್ದಿ! ವಿ-ಕೇರ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ಗಡುವು ವಿಸ್ತರಣೆ

ಆಸ್ತಿ, ಜಮೀನು ಪತ್ರ ಅಡವಿಟ್ಟು ಬ್ಯಾಂಕ್ ಸಾಲ ಮಾಡಿರೋ ಎಲ್ಲರಿಗೂ ಹೊಸ ರೂಲ್ಸ್ ಜಾರಿ - Kannada News

ಎಷ್ಟೋ ಬಾರಿ ಅನಿವಾರ್ಯ ಕಾರಣಗಳಿಗೆ ಬ್ಯಾಂಕ್ ನಲ್ಲಿ ಸಾಲ (bank loan) ತೆಗೆದುಕೊಳ್ಳಬೇಕಾಗುತ್ತದೆ, ಅದು ಗೃಹಸಾಲ (Home Loan) ಇರಬಹುದು, ವಯಕ್ತಿಕ ಸಾಲ (Personal Loan) ಇರಬಹುದು ಅಥವಾ ವಾಹನ (Vehicle Loan) ಹಾಗೂ ಚಿನ್ನದ ಮೇಲಿನ (Gold Loan) ಸಾಲವೇ ಆಗಿರಬಹುದು.

ತುರ್ತು ಪರಿಸ್ಥಿತಿ ಇದ್ದಾಗ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಳ್ಳುವುದು ಸಹಜ, ಅದೇ ರೀತಿ ಬ್ಯಾಂಕುಗಳು ಕೂಡ ಬೇರೆ ಬೇರೆ ಸಾಲಕ್ಕೆ ಬೇರೆ ಬೇರೆ ಬಡ್ಡಿ ದರದಲ್ಲಿ ಗ್ರಾಹಕರಿಗೆ ಹಣವನ್ನು ಒದಗಿಸುತ್ತವೆ.

ಆರ್ ಬಿ ಐ ನ ಹೊಸ ನಿಯಮ! (RBI new rules)

Property Documentsಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡ ಮೇಲೆ ಗ್ರಾಹಕರು ಸರಿಯಾದ ಸಮಯಕ್ಕೆ ಸಾಲವನ್ನು ಬಡ್ಡಿ ಸಮೇತ ಮರುಪಾವತಿ (loan represent) ಮಾಡಬೇಕು. ಸರಿಯಾಗಿ ಸಾಲ ಮರುಪಾವತಿ ಮಾಡಿ ಕ್ಲೀನ್ ಚಿಟ್ ಸಿಕ್ಕ ನಂತರ ಆ ಗ್ರಾಹಕ ಸಾಲ ತೆಗೆದುಕೊಳ್ಳುವಾಗ ಅಡವಿಟ್ಟ ಚರ ಅಥವಾ ಸ್ಥಿರಾಸ್ತಿ (property documents) ಪತ್ರವನ್ನು ಅವರಿಗೆ ಬ್ಯಾಂಕ್ ಹಿಂತಿರುಗಿಸಬೇಕು.

ಆದರೆ ಮೇಲೆ ಹೇಳಿರುವ ಉದಾಹರಣೆಯಂತೆ ಸಾಕಷ್ಟು ಗ್ರಾಹಕರು ಸಾಲ ಮರುಪಾವತಿ ಮಾಡಿದ ನಂತರವೂ ಅಡವಿಟ್ಟ ಆಸ್ತಿ ಪತ್ರವನ್ನು ಪಡೆದುಕೊಳ್ಳದೆ ಕಂಗಾಲಾಗಿದ್ದಾರೆ.

ನಿಮ್ಮ ನೆಚ್ಚಿನ ಯಾವುದೇ ಬೈಕ್ ಖರೀದಿಗೆ ಈ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿಗೆ ಸಿಗುತ್ತೆ ಲೋನ್

ಆರ್‌ಬಿಐ ಇತರ ಬ್ಯಾಂಕ್ ಗೆ ಕಟ್ಟುನಿಟ್ಟಿನ ಆದೇಶವನ್ನು ಜಾರಿಗೆ ತಂದಿದ್ದು, ನಿಗದಿತ ಸಮಯದ ಒಳಗೆ ಗ್ರಾಹಕರು ಸಾಲ ಮರುಪಾವತಿ ಮಾಡಿದ ನಂತರ ಅವರ ಆಸ್ತಿ ಪತ್ರವನ್ನು ಇಟ್ಟುಕೊಳ್ಳುವಂತಿಲ್ಲ. ಒಂದು ತಿಂಗಳ ಒಳಗೆ ಅಂದರೆ 30 ದಿನಗಳಲ್ಲಿ ಸಾಲಗಾರ ಮರುಪಾವತಿ ಮಾಡಿದ ನಂತರ ಆತನ ಆಸ್ತಿ ಪತ್ರವನ್ನು ಹಿಂತಿರುಗಿಸಬೇಕು.

ಬ್ಯಾಂಕ್ ಗಳಿಗೆ ಬೀಳುತ್ತೆ ಬಾರಿ ದಂಡ (Bank must pay penalty)

ಸಾಮಾನ್ಯವಾಗಿ ಗ್ರಾಹಕರಿಗೆ ಸಾಲಕ್ಕೆ ಅಥವಾ ಖಾತೆ ನಿರ್ವಹಣೆಗೆ ಒಂದಲ್ಲ ಒಂದು ಕಾರಣಕ್ಕೆ ಬ್ಯಾಂಕುಗಳು ಬೇರೆ ಬೇರೆ ರೀತಿಯ ಶುಲ್ಕವನ್ನು ವಿಧಿಸುತ್ತವೆ. ಆದರೆ ಈಗ ಆರ್ ಬಿ ಐ ಹೊಸ ನಿಯಮದ ಪ್ರಕಾರ ಟ್ವಿಸ್ಟ್ ಸಿಕ್ಕಿದ್ದು ಬ್ಯಾಂಕುಗಳೇ ಗ್ರಾಹಕರಿಗೆ ದಂಡ ಪಾವತಿಸುವಂತೆ ಆಗಿದೆ.

ಹೌದು, ಗ್ರಾಹಕರು ಸಾಲ ತೀರಿಸಿದ 30 ದಿನಗಳ ಒಳಗೆ ಅವರ ಆಸ್ತಿ ಪತ್ರವನ್ನು ಹಿಂತಿರುಗಿಸದೆ ಇದ್ದರೆ ಆ ಆಸ್ತಿ ಪತ್ರವನ್ನು ಕೊಡುವವರೆಗೂ ಗ್ರಾಹಕನಿಗೆ ಪ್ರತಿದಿನ 5000ಗಳನ್ನು ಬ್ಯಾಂಕ್ ದಂಡವಾಗಿ ಪಾವತಿಸಬೇಕು.

ನಿಮ್ಮ ಆಸ್ತಿ, ಮನೆ, ಜಮೀನು ಹೆಚ್ಚಿನ ಬೆಲೆಗೆ ಮಾರಾಟವಾಗಬೇಕಾ? ಹಾಗಾದ್ರೆ ಈ ಟ್ರಿಕ್ಸ್ ಅನುಸರಿಸಿ

ಇನ್ನು ಅಡವಿಟ್ಟ ಆಸ್ತಿ ಪತ್ರ ಹಾನಿಗೆ ಒಳಗಾಗಿದ್ದರೆ ಅಥವಾ ಕಳೆದು ಹೋಗಿದ್ದರೆ ಹೆಚ್ಚುವರಿ 30 ದಿನಗಳ ಅವಧಿಯನ್ನು ತೆಗೆದುಕೊಂಡು ಅಂದರೆ ಎರಡು ತಿಂಗಳ ಅವಧಿಯ ಒಳಗೆ ಬ್ಯಾಂಕ್ ಗ್ರಾಹಕ ಅಡವಿಟ್ಟ ಆಸ್ತಿ ಪತ್ರವನ್ನು ಸರಿಪಡಿಸಿ ಹಿಂತಿರುಗಿಸಿ ಕೊಡಬೇಕು

ಇಲ್ಲವಾದರೆ ಮತ್ತೆ ಹೆಚ್ಚುವರಿ ದಂಡವನ್ನು ಪಾವತಿಸಬೇಕಾಗುತ್ತದೆ. ಕೊನೆಗೂ ಗ್ರಾಹಕರ ನೋವಿಗೆ ಸ್ಪಂದಿಸಿರುವ ಆರ್ಬಿಐ ಬ್ಯಾಂಕುಗಳಿಗೆ ಆಸ್ತಿ ಪತ್ರ ಹಿಂತಿರುಗಿಸುವ ಬಗ್ಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಹೀಗಾಗಿ ಬ್ಯಾಂಕ್ ಗಳು ಯಾವುದೇ ಸಬೂಬೂ ನೀಡದೆ ಸಾಲ ತೀರಿಸಿದ ನಂತರ ಗ್ರಾಹಕರ ಆಸ್ತಿ ಪತ್ರವನ್ನು ಹಿಂತಿರುಗಿಸಬೇಕು.

New rules for all those who have taken a bank loan through Property Documents

Follow us On

FaceBook Google News

New rules for all those who have taken a bank loan through Property Documents