ನಾವು ಒಂದು ಆಸ್ತಿಯನ್ನು ಖರೀದಿ (property purchase) ಮಾಡುವಾಗ ಎಷ್ಟು ಮುಂಜಾಗರೂಕತೆಯಿಂದ ಇದ್ದರು ಸಾಲದು. ನಾವು ಸಾಕಷ್ಟು ಮುಂದಾಲೋಚನೆಯನ್ನು ಮಾಡಿ ಆಸ್ತಿ ಖರೀದಿ ಮಾಡಿದರು ಕೂಡ ವಂಚನೆ ಆಗುವ ಸಾಧ್ಯತೆ ಇರುತ್ತದೆ.
ಅದೇ ರೀತಿ ನಾವು ನಮ್ಮ ಬಳಿ ಇರುವ ಆಸ್ತಿ ಮಾರಾಟ (property sale) ಮಾಡುವುದಿದ್ದರೂ ಕೂಡ ಅಷ್ಟೇ ಜಾಗೃತರಾಗಿರಬೇಕು. ಇಲ್ಲವಾದರೆ ಅತ್ಯುತ್ತಮ ಬೆಲೆಗೆ ಮಾರಾಟವಾಗುವ ನಿಮ್ಮ ಆಸ್ತಿಯನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದೀತು.
ಇದಕ್ಕಾಗಿ ನೀವು ಕೆಲವು ಸ್ಮಾರ್ಟ್ ವರ್ಕ್ ಮಾಡಿದರೆ ಅತಿ ಹೆಚ್ಚು ಬೆಲೆಗೆ ನಿಮ್ಮ ಆಸ್ತಿಯನ್ನು ಮಾರಾಟ ಮಾಡಬಹುದು. ಅಂತ ಕೆಲವು ಸ್ಮಾರ್ಟ್ ಟ್ರಿಕ್ಸ್ ಇಲ್ಲಿವೆ.
ಪೆಟ್ರೋಲ್ ಕಲಬೆರಕೆ ಆಗಿದೆಯೋ ಇಲ್ಲವೋ ಕ್ವಾಲಿಟಿ ಚೆಕ್ ಮಾಡಲು ಇಲ್ಲಿದೆ ಸಿಂಪಲ್ ಟ್ರಿಕ್ಸ್
ಮಾರುಕಟ್ಟೆಯ ಬೆಲೆ ತಿಳಿದುಕೊಳ್ಳಿ (Know market rate)
ನಿಮ್ಮ ಬಳಿ ಮಾರಾಟ ಮಾಡಲು ಜಮೀನು (Property) ಅಥವಾ ಮನೆ (House) ಅಥವಾ ಸೈಟ್ (site) ಇದೆ ಎಂದಾದರೆ ಅದನ್ನು ಬಹಳ ದುಬಾರಿ ಬೆಲೆಗೆ ಮಾರಾಟ ಮಾಡಲು ಸಾಧ್ಯವಿಲ್ಲ ಯಾಕೆಂದರೆ ನೀವು ಬೆಲೆ ಏರಿಕೆ ಮಾಡಿದಷ್ಟು ನಿಮ್ಮ ಬಳಿ ಖರೀದಿ ಮಾಡುವ ಗ್ರಾಹಕರು ಬರುವ ಸಂಖ್ಯೆ ಕಡಿಮೆಯಾಗಬಹುದು.
ಹಾಗಾಗಿ ಮೊದಲು ಮಾರುಕಟ್ಟೆಯಲ್ಲಿ ನಿಮ್ಮ ಆಸ್ತಿಗೆ ಎಷ್ಟು ರೇಟ್ ಸಿಗಬಹುದು ಎಂಬುದನ್ನು ತಿಳಿದುಕೊಳ್ಳಿ, ರಿಯಲ್ ಎಸ್ಟೇಟ್ ಆನ್ಲೈನ್ ಪೋರ್ಟಲ್ (real estate online portal) ನಲ್ಲಿ ಆಸ್ತಿಯ ದೈನಂದಿನ ಬೆಲೆಯ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ
ಇನ್ನು ನಿಮ್ಮ ಅಕ್ಕಪಕ್ಕದವರ ಸೈಟ್ ಅಥವಾ ಮನೆಗೆ ಎಷ್ಟು ದರ ಇರಬಹುದು ಎಂಬುದನ್ನು ವಿಚಾರಿಸಿ, ಯಾವುದೇ ಆಸ್ತಿ ಮಾರಾಟ ಕಿಂತ ಮುಂಚೆ ನಿಮ್ಮ ಸುತ್ತಮುತ್ತಲು ಇರುವವರ ಬಳಿ ಅಭಿಪ್ರಾಯ ಸಂಗ್ರಹಿಸುವುದು ಕೂಡ ಅಷ್ಟೇ ಮುಖ್ಯ.
ಸ್ಟೇಟ್ ಬ್ಯಾಂಕ್ನಲ್ಲಿ 96 ಹುದ್ದೆಗಳ ನೇಮಕಾತಿ, 45,000 ಸಂಬಳ; ಇಂದೇ ಅರ್ಜಿ ಸಲ್ಲಿಸಿ
ರಿಯಲ್ ಎಸ್ಟೇಟ್ ಏಜೆಂಟ್ ಆಯ್ಕೆ (Select correct real estate agent)
ಈಗ ಬೀದಿಗೆ ಒಂದು ಎಂಬಂತೆ ರಿಯಲ್ ಎಸ್ಟೇಟ್ ಕಂಪನಿಗಳನ್ನು ಕಾಣಬಹುದು ಆದರೆ ನೀವು ನಿಮ್ಮ ಆಸ್ತಿ ಉತ್ತಮ ಬೆಲೆಗೆ ಹಾಗೂ ಬಹಳ ಬೇಗ ಮಾರಾಟವಾಗಬೇಕು ಅಂದರೆ ನೀವು ಆಯ್ದುಕೊಳ್ಳುವ ರಿಯಲ್ ಎಸ್ಟೇಟ್ ಏಜೆಂಟ್ ಕೂಡ ಅಷ್ಟೇ ಚಾಕಚಕ್ಯತೆಯಿಂದ ಇರುವವರಾಗಿರಬೇಕು.
ಯಾವುದೇ ಒಬ್ಬ ಏಜೆಂಟ್ ಗೆ ನಿಮ್ಮ ಆಸ್ತಿ ಮಾರಾಟದ ಜವಾಬ್ದಾರಿ ಕೊಡುವುದಕ್ಕೂ ಮೊದಲು ಆತ ಎಷ್ಟು ಕಮಿಷನ್ ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಿ ನಂತರ ನಾಲ್ಕೈದು ಏಜೆಂಟ್ ಗಳನ್ನು ಸಂಪರ್ಕಿಸಿ.
ಅವರು ಆನ್ಲೈನ್ ಪ್ಲಾಟ್ಫಾರ್ಮ್ ನಲ್ಲಿ ಇದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಿ. ಮಾರಾಟ ಮಾಡಿರುವ ಆಸ್ತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಿ ಯಾರಿಗೆ ಆಸ್ತಿ ಮಾರಾಟ ಮಾಡಿದ್ದಾರೋ ಅಥವಾ ಯಾರಿಂದ ಆಸ್ತಿ ಖರೀದಿಸಿದ್ದದ್ದಾರೋ ಅವರ ಬಳಿಗೂ ಹೋಗಿ ಮಾತನಾಡಿ ಏಜೆಂಟ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವುದು ಒಳ್ಳೆಯದು.
3 ಲಕ್ಷ ಬಡ್ಡಿ ರಹಿತ ಸಾಲ ಪಡೆಯಿರಿ, ಇದು ಸರ್ಕಾರದ ಮತ್ತೊಂದು ಮಹತ್ವದ ಯೋಜನೆ
ಆಸ್ತಿ ಮಾರಾಟಕ್ಕೆ ಸೂಕ್ತ ಸಮಯ (best time to sell your property)
ಸಾಮಾನ್ಯವಾಗಿ ಎಲ್ಲಾ ಸಮಯದಲ್ಲಿಯೂ ಆಸ್ತಿ ಖರೀದಿ ಮಾಡಲು ಗ್ರಾಹಕರು ಇರುವುದಿಲ್ಲ, ಆಸ್ತಿ ಖರೀದಿ ಮಾಡುವವರಿಗಿಂತಲೂ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾದರೆ ಬೆಲೆಯು ಕೂಡ ಕುಸಿತ ಕಾಣಬಹುದು. ಹಾಗಾಗಿ ಮಾರಾಟ ಮಾಡುವುದಕ್ಕೆ ಸರಿಯಾದ ಸಮಯ ಅಂದರೆ ಹಬ್ಬದ ಸೀಸನ್. ಈ ಸಮಯದಲ್ಲಿ ಹೊಸ ಮನೆ ಅಥವಾ ನಿವೇಶನ ಖರೀದಿ ಮಾಡಲು ಜನ ಬಯಸುತ್ತಾರೆ ಹಾಗಾಗಿ ಅಂತಹ ಸಮಯವನ್ನೇ ನೋಡಿ ನಿಮ್ಮ ಆಸ್ತಿ ಮಾರಾಟವನ್ನು ಘೋಷಣೆ ಮಾಡಿ.
ದುರಸ್ತಿ ಕಾರ್ಯ (Repair your house)
ನಿಮ್ಮ ಮನೆ ಮಾರಾಟ ಮಾಡುವುದಿದ್ದರೆ ಅದರ ವಾಸ್ತು ಹಾಗೂ ವಿನ್ಯಾಸವನ್ನು ಖರೀದಿ ಮಾಡುವವರು ಹೆಚ್ಚಾಗಿ ಗಮನಿಸುತ್ತಾರೆ. ಹಾಗಾಗಿ ನಿಮ್ಮ ಮನೆ ಮಾರಾಟದ ಸಮಯದಲ್ಲಿ ಮನೆಗೆ ಸುಂದರವಾದ ಪೇಂಟ್ ಮಾಡಿಸುವುದು ಸಣ್ಣಪುಟ್ಟ ಬಿರುಕುಗಳು ಇದ್ದರೆ ಅವುಗಳನ್ನು ಸರಿಪಡಿಸುವುದು ಬಹಳ ಮುಖ್ಯ. ಖರೀದಿದವರಿಗೆ ನಿಮ್ಮ ಮನೆಯನ್ನು ನೋಡಿದ ತಕ್ಷಣವೇ ಇಷ್ಟ ಆಗುವಂತೆ ವಿನ್ಯಾಸವಿದ್ದರೆ ನೀವು ಕೇಳಿದ ಬೆಲೆಗೆ ಖರೀದಿ ಮಾಡುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ.
ಆಸ್ತಿ ಖರೀದಿಗೂ ಹೊಸ ನಿಯಮ! ಇನ್ಮುಂದೆ ಇಂತಹ ಆಸ್ತಿ, ಜಮೀನು ಮಾತ್ರ ಖರೀದಿ ಮಾಡಬೇಕು
ಆನ್ಲೈನ್ ಫ್ಲ್ಯಾಟ್ ಫಾರ್ಮ್ ಬಳಸಿಕೊಳ್ಳಿ (Property Sell – Online platform)
ನಂಬಿಕಾರ್ಹ ಆನ್ಲೈನ್ ವೆಬ್ ಪೋರ್ಟಲ್ ಗಳ ಸಹಾಯವನ್ನು ಆಸ್ತಿ ಮಾರಾಟಕ್ಕೆ ಪಡೆದುಕೊಳ್ಳಬಹುದು. ಆನ್ಲೈನ್ ನಲ್ಲಿ ಬೇರೆ ಬೇರೆ ರೀತಿಯ ರಿಯಲ್ ಎಸ್ಟೇಟ್ ವೆಬ್ ಪೋರ್ಟಲ್ ಗಳು ಇದ್ದು ನಿಮ್ಮ ಆಸ್ತಿಗೆ ಬೆಸ್ಟ್ ಪ್ರೈಸ್ ಗಳನ್ನು ಸೂಚಿಸುತ್ತಾರೆ.
ಇದರ ಆಧಾರದ ಮೇಲೆ ನೀವು ನಿಮ್ಮ ಆಸ್ತಿ ಮಾರಾಟ ಮಾಡಲು ಇನ್ನಷ್ಟು ಸುಲಭವಾಗುತ್ತದೆ. ಒಟ್ಟಿನಲ್ಲಿ ಬುದ್ಧಿವಂತಿಕೆಯಿಂದ ಆಸ್ತಿ ಮಾರಾಟ ಮಾಡಿದರೆ ನೀವು ಖರೀದಿ ಮಾಡಿದ್ದಕ್ಕಿಂತ ದುಪ್ಪಟ್ಟು ಬೆಲೆಗೆ ಆಸ್ತಿ ಮಾರಾಟ ಮಾಡಬಹುದು.
Want to sell your property, house, land at a higher price, Then follow these tricks
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.