Business News

ಪೆಟ್ರೋಲ್ ಕಲಬೆರಕೆ ಆಗಿದೆಯೋ ಇಲ್ಲವೋ ಕ್ವಾಲಿಟಿ ಚೆಕ್ ಮಾಡಲು ಇಲ್ಲಿದೆ ಸಿಂಪಲ್ ಟ್ರಿಕ್ಸ್

Petrol Quality : ಇತ್ತೀಚಿನ ದಿನಗಳಲ್ಲಿ ವಾಹನಕ್ಕೆ ಪೆಟ್ರೋಲ್ (petrol) ಅಥವಾ ಡೀಸೆಲ್ (diesel) ತುಂಬಿಸುವುದೇ ಗ್ರಾಹಕರಿಗೆ ದೊಡ್ಡ ಕೆಲಸವಾಗಿದೆ ಯಾಕೆಂದರೆ ತೈಲಗಳ ಬೆಲೆ ಜಾಸ್ತಿ ಆಗಿರುವ ಹಿನ್ನೆಲೆಯಲ್ಲಿ ಡೀಸೆಲ್ ಅಥವಾ ಪೆಟ್ರೋಲ್ ದರ ಹಚ್ಚಳವಾಗಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ಮೊದಲೇ ತೈಲ ಬೆಲೆ ದುಬಾರಿ, ಅಂತದ್ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಗಳಲ್ಲಿ (Petrol and Diesel) ಕಲಬೆರಕೆ ಆಗುತ್ತಿರುವುದು ಗಮನಕ್ಕೆ ಬಂದಿದೆ.

Do you know how much commission petrol station owners get on 1 liter of petrol or diesel

ಹೌದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಜಾಸ್ತಿ ಆಗುತ್ತಿದೆ, ಇದರ ಜೊತೆಗೆ ಪೆಟ್ರೋಲ್ ನಲ್ಲಿ ಅಥವಾ ಡೀಸೆಲ್ ನಲ್ಲಿ ನೀರು ಹಾಗೂ ಸೀಮೆಎಣ್ಣೆ ಮಿಶ್ರಣ ಮಾಡುತ್ತಿರುವ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದೆ.

ಸ್ಟೇಟ್ ಬ್ಯಾಂಕ್​ನಲ್ಲಿ 96 ಹುದ್ದೆಗಳ ನೇಮಕಾತಿ, 45,000 ಸಂಬಳ; ಇಂದೇ ಅರ್ಜಿ ಸಲ್ಲಿಸಿ

ನಾವು ಪೆಟ್ರೋಲ್ ಪಂಪ್ (petrol bunk) ಗೆ ಹೋಗಿ ಒಂದಿಷ್ಟು ಹಣವನ್ನು ಕೊಟ್ಟು ನಮ್ಮ ವಾಹನದ ಟ್ಯಾಂಕ್ ಫುಲ್ ಮಾಡಿಸುತ್ತೇವೆ, ಆದರೆ ನಮಗೆ ಇಲ್ಲಿ ಕಲಬೆರಕೆ (mixing) ಆಗಿದೆಯೋ ಅಥವಾ ಶುದ್ಧವಾದ ಪೆಟ್ರೋಲ್ (pure petrol) ಸಿಗುತ್ತಿದೆಯೋ ಎನ್ನುವ ಅರಿವು ಇರುವುದಿಲ್ಲ

ಹಾಗೇನಾದರೂ ಕಲಬೆರಕೆ ಆಗಿದ್ದರೆ ನಿಮ್ಮ ವಾಹನ (Vehicle) ಬೇಗ ಹಾಳಾಗಬಹುದು ಜೊತೆಗೆ ಮೈಲೇಜ್ (Mileage) ಕೂಡ ಬಹಳ ಕಡಿಮೆ ಇರಬಹುದು.

ಕಲಬೆರಕೆ ಆಗಿರುವುದನ್ನು ತಿಳಿದುಕೊಳ್ಳುವುದು ಹೇಗೆ? (How to check petrol quality)

Check Petrol Qualityನೀವು ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸುವಾಗಲೇ ನೀವು ಹಾಕಿಸುವ ಪೆಟ್ರೋಲ್ ಕಲಬೆರಕೆ ಆಗಿದೆಯೋ ಇಲ್ಲವೋ ಎಂಬುದನ್ನು ಕಂಡುಹಿಡಿಯಬಹುದು.

ಒಂದು ಫಿಲ್ಟರ್ ಪೇಪರ್ (filter paper) ಮೇಲೆ ಒಂದು ಹನಿ ಪೆಟ್ರೋಲ್ ಅನ್ನು ಹಾಕಿ ಆ ಫಿಲ್ಟರ್ ಪೇಪರ್ ಬಣ್ಣ ಬದಲಾಯಿಸದೆ ಇದ್ದರೆ ಪೆಟ್ರೋಲ್ ನಲ್ಲಿ ಕಲಬೆರಿಕೆ ಆಗಿಲ್ಲ ಎಂದು ಅರ್ಥ ಒಂದು ವೇಳೆ ಫಿಲ್ಟರ್ ಪೇಪರ್ ಬದಲಾದರೆ ಆಗ ಪೆಟ್ರೋಲ್ ಕಲಬೆರಿಕೆ ಆಗಿದೆ ಎಂದು ತಿಳಿಯುತ್ತದೆ. ಈ ಫಿಲ್ಟರ್ ಪೇಪರ್ ಅನ್ನು ನೀವು ಪೆಟ್ರೋಲ್ ಬಂಕ್ನಲ್ಲಿಯೇ ಕೇಳಿ ಪಡೆಯಬಹುದು.

3 ಲಕ್ಷ ಬಡ್ಡಿ ರಹಿತ ಸಾಲ ಪಡೆಯಿರಿ, ಇದು ಸರ್ಕಾರದ ಮತ್ತೊಂದು ಮಹತ್ವದ ಯೋಜನೆ

ಇನ್ನು ಎರಡನೆಯದಾಗಿ ಹೈಡ್ರೋಮೀಟರ್ (hydrometer) ಮತ್ತು ತಾಪಮಾನ ಮೀಟರ್ ಬಳಸಿ ಪೆಟ್ರೋಲ್ ಸಾಂದ್ರತೆಯನ್ನು ತಿಳಿದುಕೊಳ್ಳಲಾಗುತ್ತದೆ. ಪೆಟ್ರೋಲ್ ಬಂಕ್ ನಲ್ಲಿ ತಾಪಮಾನ ಮೀಟರ್ ಬಳಸಿ ಪರಿಶೀಲಿಸಿದಾಗ 745 ಗ್ರಾಂ ಹಾಗೂ ತಾಪಮಾನ 27 ಡಿಗ್ರಿ ಇದೆ ಎಂದು ಭಾವಿಸಿ. ಈ ಅಂಕಿ ಅಂಶವನ್ನು ಕಂಪನಿಯಿಂದ ಪಡೆದ ಲ್ಯಾಬ್ (testing lab) ಮೌಲ್ಯಮಾಪನದ ಜೊತೆಗೆ ಪರಿಶೀಲಿಸಿದಾಗ ಸಾಂದ್ರತೆ 755.5 ಬರುತ್ತದೆ.

ಮನೆಯ ಪ್ರಕಾರ ಸಾಂದ್ರತೆ 755.8 ಇರಬೇಕು. ಈ 0.3 ಪರ್ಸೆಂಟ್ ವ್ಯತ್ಯಾಸ ಬಂದಿದೆ. 0.3ರಿಂದ 0.30ರ ವರೆಗೆ ವ್ಯತ್ಯಾಸ ಬಂದರೆ ಅದು ತಾಪಮಾನದ ಎರಿಳಿತದಿಂದ ಸಾಂದ್ರತೆಯಲ್ಲಿ ವ್ಯತ್ಯಾಸವಾಗುತ್ತದೆ ಎಂದು ಗಮನಿಸಬೇಕು

ಇದಕ್ಕಿಂತ ಹೆಚ್ಚಿಗೆ ವ್ಯತ್ಯಾಸ ಕಂಡು ಬಂದರೆ ಆಗ ಕಲಬೆರಕೆ ಆಗಿದೆ ಎಂದು ತೀರ್ಮಾನಿಸಬಹುದು. ಈ ರೀತಿಯಾಗಿ ದುಬಾರಿ ಪೆಟ್ರೋಲ್ ಅನ್ನು ನಿಮ್ಮ ವಾಹನಕ್ಕೆ ತುಂಬಿಸುವ ಮೊದಲು ಆ ಪೆಟ್ರೋಲ್ ಎಷ್ಟು ಶುದ್ಧವಾಗಿದೆ ಎಂಬುದನ್ನು ತಿಳಿದುಕೊಳ್ಳಿ.

ಆಸ್ತಿ ಖರೀದಿಗೂ ಹೊಸ ನಿಯಮ! ಇನ್ಮುಂದೆ ಇಂತಹ ಆಸ್ತಿ, ಜಮೀನು ಮಾತ್ರ ಖರೀದಿ ಮಾಡಬೇಕು

Here is a simple trick to check petrol Quality

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories