ಮೂರು ದಿನ ಬ್ಯಾಂಕ್ ಹಾಲಿಡೇ, ಗ್ರಾಹಕರಿಗೆ ಬಿಗ್ ಅಲರ್ಟ್! ರಜೆ ಪಟ್ಟಿ ಗಮನಿಸಿ - Bank Holiday

ಆಗಸ್ಟ್ ತಿಂಗಳಲ್ಲಿ ಮೂರು ದಿನಗಳ ಬ್ಯಾಂಕ್ ರಜೆ ಇದ್ದು, ಬ್ಯಾಂಕ್ ಕೆಲಸವಿರುವವರು ಮುಂಚಿತವಾಗಿ ಪ್ಲಾನ್ ಮಾಡಿಕೊಂಡು ವಹಿವಾಟಿಗೆ ತೊಂದರೆ ಆಗದಂತೆ ಗಮನಿಸುವುದು ಅತ್ಯಂತ ಅಗತ್ಯ.

  • ಆಗಸ್ಟ್‌ನಲ್ಲಿ ಮೂರು ದಿನ ಬ್ಯಾಕ್ ಹಾಲಿಡೇ
  • 8ರಿಂದ 10ರ ವರೆಗೆ ಬ್ಯಾಂಕ್ ಸೇವೆಗಳು ಲಭ್ಯವಿಲ್ಲ
  • ಪ್ರತಿ ತಿಂಗಳು RBI ಬಿಡುಗಡೆ ಮಾಡುವ ಬ್ಯಾಂಕ್ ರಜೆ ಪಟ್ಟಿ ಗಮನಿಸಿ

Bank Holiday : ಒಬ್ಬ ಸಾಮಾನ್ಯ ಗ್ರಾಹಕನಿಗೆ ತಿಂಗಳಲ್ಲಿ ಕನಿಷ್ಠ 3–4 ಬಾರಿ ಬ್ಯಾಂಕ್ ಭೇಟಿ ಅಗತ್ಯವಾಗುತ್ತೆ. ಕೆಲವೊಮ್ಮೆ ಆನ್‌ಲೈನ್‌ನಿಂದ ಮಾಡಬಹುದಾದ ಕೆಲಸ ಇದ್ದರೂ ಕೆಲವೊಂದು banking ಕಾರ್ಯಗಳಿಗೆ ಪರ್ಸನಲ್ ಆಗಿ ಬ್ಯಾಂಕ್‌ಗೆ ಹೋಗಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ ರಜೆ ದಿನಗಳ ವಿಷಯ ಮುಂಚಿತವಾಗಿ ಗೊತ್ತಿದ್ದರೆ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು.

ಆಗಸ್ಟ್ ತಿಂಗಳಲ್ಲಿ ಗ್ರಾಹಕರು ಎಚ್ಚರಿಕೆಯಿಂದ ಬ್ಯಾಂಕ್ ಕಾರ್ಯಗಳನ್ನು ಪ್ಲಾನ್ ಮಾಡಿಕೊಳ್ಳಬೇಕು. ಏಕೆಂದರೆ ಈ ತಿಂಗಳಲ್ಲಿ ನಿರಂತರವಾಗಿ ಮೂರು ದಿನಗಳ ರಜೆ ಇದೆ. ಆಗಸ್ಟ್ 8 ರಂದು ಸಿಕ್ಕಿಂ ಮತ್ತು ಒಡಿಶಾ ರಾಜ್ಯಗಳಲ್ಲಿ ಗಿರಿಜನ ಹಬ್ಬ ಹಾಗೂ ವರಮಹಾಲಕ್ಷ್ಮಿ ವ್ರತ ಇರುವ ಕಾರಣ ಬ್ಯಾಂಕ್ ಬಂದ್ ಇರುತ್ತವೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ಮಾಡ್ತೀರಾ? ಹಾಗಾದ್ರೆ ಈ ನಷ್ಟದ ಬಗ್ಗೆ ಗೊತ್ತಿರಲಿ

ಮರುದಿನ ಆಗಸ್ಟ್ 9 ರಂದು ಎರಡನೇ ಶನಿವಾರದ ಕಾರಣ ದೇಶದಾದ್ಯಾಂತ ಬ್ಯಾಂಕ್‌ಗಳಿಗೆ ನಿಯಮಿತ ರಜೆ. ಇದರ ಜೊತೆಗೆ ಆ ದಿನವೇ ರಕ್ಷಾ ಬಂಧನ ಹಬ್ಬವೂ ಇದ್ದು, ಕೆಲ ರಾಜ್ಯಗಳಲ್ಲಿ ಹೆಚ್ಚುವರಿ ರಜೆ ಇದೆ.

ಇದರ ಬಳಿಕ ಆಗಸ್ಟ್ 10, ಭಾನುವಾರ – ಎಲ್ಲ ಜಾಗದಲ್ಲಿಯೂ ಸಹಜವಾಗಿ ಬ್ಯಾಂಕ್‌ಗಳನ್ನು ಮುಚ್ಚಿರುತ್ತವೆ. ಹೀಗಾಗಿ 8, 9 ಮತ್ತು 10 – ಮೂರು ದಿನ ಬ್ಯಾಂಕ್ ಕಾರ್ಯಗಳು ಸ್ಥಗಿತಗೊಳ್ಳುತ್ತವೆ.

ಇದನ್ನೂ ಓದಿ: ಹಳೆಯ ಫೋನ್‌ಗಳನ್ನು ಎಕ್ಸ್ಚೇಂಜ್ ಮಾಡಿದ್ರೆ ಹೊಸ ಫೋನ್! ಬಂಪರ್ ಆಫರ್

ಈ ಹಿನ್ನೆಲೆಯಲ್ಲಿ ದಿನ ನಿತ್ಯ ಬ್ಯಾಂಕ್‌ಗೆ ಅವಲಂಬಿತರಾಗಿರುವವರು, ಸಾಲದ ಇಎಂಐ (Loan EMI), ಚೆಕ್ ಕ್ಲಿಯರಿಂಗ್ ಅಥವಾ ಹಣ ಜಮಾ/ತೆಗೆದುಕೊಳ್ಳುವ ಕೆಲಸಗಳಿಗಾಗಿ ಮುಂಚಿತ ಯೋಜನೆ ಮಾಡಿಕೊಳ್ಳುವುದು ಉತ್ತಮ. ಅ

ಲ್ಲದೇ, ರಾಜ್ಯದ ಆಧಾರಿತ ರಜೆಯ ವಿಷಯದಲ್ಲಿಯೂ ಸ್ಪಷ್ಟತೆ ಇರಬೇಕು. ಏಕೆಂದರೆ RBI ಬಿಡುಗಡೆ ಮಾಡುವ ರಜೆ ಪಟ್ಟಿ ಎಲ್ಲಾ ರಾಜ್ಯಗಳಿಗೆ ಒಂದೇ ರೀತಿಯಾಗಿ ಅನ್ವಯಿಸದೇ ಇರಬಹುದು.

ನಿತ್ಯದ ಅಪ್‌ಡೇಟ್ಸ್‌ಗಾಗಿ ಯಾವಾಗಲೂ Kannada News Today ತಪ್ಪದೆ ವೀಕ್ಷಿಸಿ.

3-Day Bank Holiday Alert in August

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories