ಮಹಿಳೆಯರಿಗಾಗಿ 5 ಅದ್ಭುತ ಪೋಸ್ಟ್ ಆಫೀಸ್ ಯೋಜನೆಗಳು; ಹೂಡಿಕೆ ಮಾಡಿದರೆ ಬಂಪರ್ ಲಾಭ
ನೀವು ಈ ಸರ್ಕಾರಿ ಯೋಜನೆಗಳನ್ನು (Govt Schemes) ಅಂಚೆ ಕಚೇರಿಯಿಂದ (Post Office Savings Scheme) ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಪೋಸ್ಟ್ ಆಫೀಸ್ ಯೋಜನೆಗಳು ಎಂದರೆ ವಿಶ್ವಾಸಾರ್ಹ ಯೋಜನೆಗಳು.
Post Office Schemes : ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಹಲವು ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳೆಯರು ಇವುಗಳಲ್ಲಿ ಯಾವುದಾದರೂ ಖಾತೆಯನ್ನು ತೆರೆಯಬಹುದು. ಒಂದಿಷ್ಟು ಹೂಡಿಕೆ (Investment) ಮಾಡುವ ಮೂಲಕ ತಮ್ಮ ಭವಿಷ್ಯದಲ್ಲಿ ಉತ್ತಮ ಲಾಭ (Income) ಪಡೆದುಕೊಳ್ಳಬಹುದು.
ನೀವು ಈ ಸರ್ಕಾರಿ ಯೋಜನೆಗಳನ್ನು (Govt Schemes) ಅಂಚೆ ಕಚೇರಿಯಿಂದ (Post Office Savings Scheme) ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಪೋಸ್ಟ್ ಆಫೀಸ್ ಯೋಜನೆಗಳು ಎಂದರೆ ವಿಶ್ವಾಸಾರ್ಹ ಯೋಜನೆಗಳು.
ಈ ಪಟ್ಟಿಯಲ್ಲಿ ಪಿಪಿಎಫ್, ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಂತಹ ಯೋಜನೆಗಳನ್ನು ಒಳಗೊಂಡಿದೆ.
ಸರ್ಕಾರದಿಂದ ಸಿಹಿ ಸುದ್ದಿ! ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಈಗ ಕೇವಲ ₹450 ರೂಪಾಯಿ
ಪಿಪಿಎಫ್
ಹೂಡಿಕೆಗೆ ಪಿಪಿಎಫ್ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಸರ್ಕಾರವು 7.1 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಇದರಲ್ಲಿ ಗರಿಷ್ಠ ರೂ.1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಇದಕ್ಕೆ ತೆರಿಗೆ ವಿನಾಯಿತಿಯ ಲಾಭವೂ ಇದೆ.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ
ಕೇಂದ್ರ ಸರ್ಕಾರವು 2023-24ರ ಹಣಕಾಸು ವರ್ಷದ ಕೇಂದ್ರ ಬಜೆಟ್‌ನಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ 2023 ಯೋಜನೆಯನ್ನು ಘೋಷಿಸಿದೆ. 7.5 ರಷ್ಟು ಬಡ್ಡಿಯನ್ನು ಈ ಯೋಜನೆಗೆ ನೀಡಲಾಗುತ್ತದೆ. ಇದರಲ್ಲಿ ಯಾವುದೇ ಮಹಿಳೆ ರೂ. 2 ಲಕ್ಷ ಹೂಡಿಕೆ ಮಾಡಬಹುದು. ಇದರ ಅವಧಿಯು 2 ವರ್ಷ.
ಸಿಹಿ ಸುದ್ದಿ! ಆಧಾರ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಹೊಸ ಸೌಲಭ್ಯ ನೀಡಿದ ಸರ್ಕಾರ
ಸುಕನ್ಯಾ ಸಮೃದ್ಧಿ ಯೋಜನೆ
ಈ ಯೋಜನೆಯನ್ನು ವಿಶೇಷವಾಗಿ ಹೆಣ್ಣುಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ. 10 ವರ್ಷದೊಳಗಿನ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆ ತೆರೆಯಬಹುದು. ಇದರಲ್ಲಿ ರೂ.250 ರಿಂದ ರೂ.1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಸದ್ಯ ಸರ್ಕಾರ ಶೇ 8ರಷ್ಟು ಬಡ್ಡಿ ನೀಡುತ್ತಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ
ಈ ಯೋಜನೆ ಮಹಿಳೆಯರಿಗೂ ಹೆಚ್ಚು ಪ್ರಯೋಜನವಾಗಲಿದೆ. ಇದರಲ್ಲಿ ಕನಿಷ್ಠ ರೂ. 1000 ಮತ್ತು ಯಾವುದೇ ಮೊತ್ತವನ್ನು ಠೇವಣಿ ಮಾಡಬಹುದು. 7.7 ರಷ್ಟು ಬಡ್ಡಿಯನ್ನು ಈ ಠೇವಣಿಗೆ ನೀಡಲಾಗುತ್ತದೆ. ಹೂಡಿಕೆದಾರರು ಐದು ವರ್ಷಗಳವರೆಗೆ ಹೂಡಿಕೆ ಮಾಡಬಹುದು.
ಒಂದು ಲೀಟರ್ ₹100 ರೂಪಾಯಿ; ಈ ತಳಿಯ ಹಸು ಸಾಕಿದ್ರೆ ಗಳಿಸಬಹುದು, ಲಕ್ಷ ಲಕ್ಷ ಹಣ
ಟೈಮ್ ಠೇವಣಿ
ಇದಲ್ಲದೆ, ನೀವು ಪೋಸ್ಟ್ ಆಫೀಸ್ ಟೈಮ್ ಠೇವಣಿ (Time Deposit) ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಇದಕ್ಕೆ ಸರಕಾರ ಶೇ.7.5ರಷ್ಟು ಬಡ್ಡಿ ಪಡೆಯುತ್ತಿದೆ. ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಠೇವಣಿ ಮಾಡಬೇಕು.
5 Best Post Office Schemes for Women