ಸಿಹಿ ಸುದ್ದಿ! ಆಧಾರ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಹೊಸ ಸೌಲಭ್ಯ ನೀಡಿದ ಸರ್ಕಾರ

ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಆಧಾರ್ ಕಾರ್ಡ್ ಎನ್ನುವುದು ಬಹಳ ಮುಖ್ಯವಾಗಿರುವ ದಾಖಲೆಯಾಗಿದೆ, ನಾವು ಯಾವುದೇ ಕೆಲಸ ಮಾಡಿಕೊಳ್ಳುವುದಿದ್ರು ಅದಕ್ಕೆ ಆಧಾರ್ ಕಾರ್ಡ್ (Aadhaar card) ಬೇಕೇ ಬೇಕು.

ಹಣಕಾಸು ವ್ಯವಹಾರಕ್ಕೆ, ತೆರಿಗೆ ಪಾವತಿ (Tax Pay) ಮಾಡುವುದಕ್ಕೆ ಅಷ್ಟೇ ಅಲ್ಲ ಶಾಲಾ-ಕಾಲೇಜುಗಳಿಗೆ (School / College) ಮಕ್ಕಳನ್ನು ಸೇರಿಸುವುದಿದ್ದರೂ ಆಧಾರ್ ಕಾರ್ಡ್ (Aadhaar Card) ಅನ್ನು ಮುಖ್ಯ ದಾಖಲೆಯಾಗಿ ನೀಡಬೇಕಾಗುತ್ತದೆ.

ಜೊತೆಗೆ ಯಾವುದೇ ವಯಕ್ತಿಕ ದಾಖಲೆಯನ್ನು ಮಾಡಿಸಿಕೊಳ್ಳುವುದಕ್ಕೆ ಆಧಾರ್ ಕಾರ್ಡ್ ನೀಡುವುದು ಸಹಜ. ಇದೀಗ ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಆಧಾರ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಹೊಸದೊಂದು ಅಪ್ ಡೇಟ್ ನೀಡಿದೆ.

ಒಂದು ಲೀಟರ್ ₹100 ರೂಪಾಯಿ; ಈ ತಳಿಯ ಹಸು ಸಾಕಿದ್ರೆ ಗಳಿಸಬಹುದು, ಲಕ್ಷ ಲಕ್ಷ ಹಣ

ಆಧಾರ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಹೊಸ ಅಪ್ಡೇಟ್!

ಕೇಂದ್ರ ಸರ್ಕಾರ ಮದುವೆ (Marriage) ಆಗಿರುವ ಮಹಿಳೆಯರಿಗೆ ಮಹತ್ವದ ಆದೇಶ ಒಂದನ್ನು ಹೊರಡಿಸಿದೆ. ಸಾಮಾನ್ಯವಾಗಿ ಮದುವೆಗಿಂತ ಮುಂಚೆ ಹೆಣ್ಣು ಮಕ್ಕಳು ಆಧಾರ್ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುತ್ತಾರೆ

ಆದರೆ ಮದುವೆಯಾದ ಬಳಿಕ ಮಹಿಳೆಯರ ಹೆಸರು ಬದಲಾಗುವುದು ಸಹಜ. ಮಹಿಳೆಯರು ತಮ್ಮ ಹೆಸರಿನ ಜೊತೆಗೆ ಗಂಡನ ಹೆಸರನ್ನು ಕೂಡ ಸೇರಿಸಿಕೊಳ್ಳುತ್ತಾರೆ.

ಕೋಳಿ ಸಾಕಾಣಿಕೆಗೆ ಸರ್ಕಾರವೇ ಕೊಡಲಿದೆ ಅರ್ಧದಷ್ಟು ಹಣ! ಸಬ್ಸಿಡಿ ಪಡೆಯಲು ಅರ್ಜಿ ಸಲ್ಲಿಸಿ

ಹೆಸರು ಸೇರ್ಪಡೆ ಇನ್ನಷ್ಟು ಸುಲಭ!

Aadhaar Cardಮದುವೆಯಾದ ನಂತರ ಮಹಿಳೆ ತನ್ನ ಹೆಸರಿನ ಜೊತೆಗೆ ಗಂಡನ ಉಪನಾಮ ಅಥವಾ ಸರ್ ನೇಮ್ ಸೇರಿಸಲು ಬಯಸಿದರೆ ಸುಲಭವಾಗಿ ಈ ಕೆಲಸ ಮಾಡಿಕೊಳ್ಳಬಹುದು.

ನಿಮ್ಮ ಆಧಾರ್ ಕಾರ್ಡ್ ನಲ್ಲಿ ಗಂಡನ ಹೆಸರನ್ನು (Husband) ಕೂಡ ನಿಮ್ಮ ಹೆಸರಿನ ಜೊತೆಗೆ ಜೋಡಿಸಲು ಬಯಸಿದರೆ ಈ ಕೆಲಸ ಮಾಡಿಕೊಳ್ಳುವುದು ಇನ್ನಷ್ಟು ಸುಲಭ, ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ತಕ್ಷಣವೇ ಈ ಕೆಲಸ ಮಾಡಿಕೊಳ್ಳಿ.

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 35 ಸಾವಿರ ರೂಪಾಯಿಗಳ ಸ್ಕಾಲರ್ಶಿಪ್; ಇಂದೇ ಅಪ್ಲೈ ಮಾಡಿ

ಆಧಾರ್ ನಲ್ಲಿ ಹೆಸರು ಬದಲಾಯಿಸಿಕೊಳ್ಳುವುದು ಹೇಗೆ?

ಮೊದಲನೆಯದಾಗಿ ನೀವು ನಿಮ್ಮ ಹತ್ತಿರದ ಆಧಾರ ಸೇವ ಕೇಂದ್ರಕ್ಕೆ (Aadhaar centre) ಹೋಗಿ ಅಲ್ಲಿ ನಿಮ್ಮ ಹೆಸರಿನ ಜೊತೆಗೆ ಗಂಡನ ಹೆಸರನ್ನು ಸೇರಿಸಿಕೊಳ್ಳಬೇಕು ಎಂದು ಹೇಳಿ.

ಹೆಸರು ತಿದ್ದುಪಡಿ ಮಾಡಿಕೊಳ್ಳುವಾಗ ನಿಮ್ಮ ಜೊತೆಗೆ ನಿಮ್ಮ ಪತಿ ಕೂಡ ಆಧಾರ್ ಕೇಂದ್ರಕ್ಕೆ ಬರಬೇಕಾಗುತ್ತದೆ.

ತಿದ್ದುಪಡಿ ಮಾಡಿಕೊಳ್ಳಲು ಆಧಾರ್ ಕೇಂದ್ರದಲ್ಲಿ ಒಂದು ಫಾರ್ಮ್ ನೀಡಲಾಗುತ್ತದೆ ಅದನ್ನು ಭರ್ತಿ ಮಾಡಬೇಕು.

ನಂತರ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ನಲ್ಲಿ ಬದಲಾಯಿಸಲು ಹೆಸರು ನಿಮ್ಮ ಪತಿಯ ಆಧಾರ್ ಕಾರ್ಡ್ ಹಾಗೂ ಮದುವೆಯ ಪ್ರಮಾಣ ಪತ್ರವನ್ನು (marriage certificate) ಕೂಡ ದಾಖಲೆಯಾಗಿ ನೀಡಬೇಕಾಗುತ್ತದೆ.

10ನೇ ತರಗತಿ ಪಾಸ್ ಆಗಿದ್ರೆ ಸಾಕು, ಸಿಗುತ್ತೆ ಸರ್ಕಾರಿ ಉದ್ಯೋಗ; 63 ಸಾವಿರ ಸಂಬಳ! ಇಂದೇ ಅಪ್ಲೈ ಮಾಡಿ

ಅರ್ಜಿ ಫಾರ್ಮ್ (application form ) ಭರ್ತಿ ಮಾಡಿದ ನಂತರ ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ನಿಮ್ಮ ಫೋಟೋ ಕ್ಲಿಕ್ ಮಾಡಿ, ಬಯೋಮೆಟ್ರಿಕ್ (Biometric) ದಾಖಲೆ ತೆಗೆದುಕೊಳ್ಳಲಾಗುತ್ತದೆ.

ಇಷ್ಟು ಮಾಡಿದರೆ ಆಧಾರ್ ಕಾರ್ಡ್ ನಲ್ಲಿ ನಿಮಗೆ ಬೇಕಾದಂತೆ ಹೆಸರು ಬದಲಾಯಿಸಿಕೊಳ್ಳಬಹುದು. ಈ ತಿದ್ದುಪಡಿಗೆ ನೀವು ನಿಗದಿತ ಶುಲ್ಕವನ್ನು ಕೂಡ ಪಾವತಿಸಬೇಕಾಗುತ್ತದೆ.

Government has given new facilities to women with Aadhaar card

Related Stories