ನಿಮ್ಮ ವ್ಯಾಪಾರಕ್ಕೆ ಬಂಡವಾಳ ಇಲ್ವಾ! ಸರ್ಕಾರವೇ ಕೊಡಲಿದೆ ₹5 ಲಕ್ಷ ನೆರವು

2025 ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ, ಸಣ್ಣ ವ್ಯಾಪಾರಿಗಳಿಗೆ ₹5 ಲಕ್ಷ ಕ್ರೆಡಿಟ್ ಕಾರ್ಡ್ ಸೌಲಭ್ಯ ಏಪ್ರಿಲ್‌ನಿಂದ ದೊರೆಯಲಿದೆ. ಸೂಕ್ಷ್ಮ ಉದ್ಯಮಿಗಳಿಗೆ ಇದು ಹೆಚ್ಚಿನ ಹಣಕಾಸು ನೆರವನ್ನು ಒದಗಿಸಲಿದೆ.

  • ಕ್ರೆಡಿಟ್ ಕಾರ್ಡ್ ಪಡೆಯಲು ಉದ್ಯಮಿಗಳು ಉದ್ಯಮ್ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು
  • ವಾರ್ಷಿಕ ಟರ್ನೋವರ್ ₹10 ಲಕ್ಷದಿಂದ ₹25 ಲಕ್ಷವರೆಗೆ ಇರುವವರು ಅರ್ಹರು
  • ಒಂದು ವರ್ಷದ ಕ್ರೆಡಿಟ್ ಕಾರ್ಡ್ ಮಾನ್ಯತಾ ಅವಧಿ

5 Lakh Credit Card : ಏಪ್ರಿಲ್‌ನಿಂದ ಸಣ್ಣ ವ್ಯಾಪಾರಿಗಳಿಗೆ ಬಂಪರ್! ಕೇಂದ್ರ ಸರ್ಕಾರವು ₹5 ಲಕ್ಷ ಮಿತಿಯ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಪರಿಚಯಿಸುತ್ತಿದೆ. ಉದ್ಯಮ ವಿಸ್ತರಣೆಗೆ ನೆರವಾಗುವ ಈ ಯೋಜನೆ, ಉದ್ಯಮಿಗಳಿಗೆ ಹಣಕಾಸಿನ ಕೊರತೆ ಇಲ್ಲದಂತೆ ನೋಡಿಕೊಳ್ಳಲಿದೆ.

ವಿಶೇಷವಾಗಿ ₹10 ಲಕ್ಷದಿಂದ ₹25 ಲಕ್ಷದ ವಾರ್ಷಿಕ ಟರ್ನೋವರ್ ಹೊಂದಿರುವವರು ಮಾತ್ರ ಈ ಸೌಲಭ್ಯಕ್ಕಾಗಿ ಅರ್ಹರಾಗಿದ್ದಾರೆ. ಈ ಕಾರ್ಡ್‌ ಒಂದಿಷ್ಟು ವಿಶೇಷವಾಗಿದ್ದು, ಒಂದು ವರ್ಷ ಕಾಲ ಮಾನ್ಯವಾಗಿರುತ್ತದೆ.

ಇದನ್ನೂ ಓದಿ: ಲೋನ್ ಮೇಲೆ EMI ನಲ್ಲಿ ಕಾರು ಖರೀದಿ ಮಾಡೋರಿಗೆ ಇನ್ಮುಂದೆ ಹೊಸ ರೂಲ್ಸ್!

ಅರ್ಹತೆ ಕುರಿತ ವಿವರಗಳು

ಆಕರ್ಷಕ ಆಫರ್ ಪಡೆದುಕೊಳ್ಳಲು ಕೆಲವೊಂದು ಮಾನದಂಡಗಳನ್ನು ಪೂರೈಸಬೇಕು. ಉದಾಹರಣೆಗೆ, ಯುಪಿಐ ಟ್ರಾನ್ಸಾಕ್ಷನ್‌ಗಳು, ಬ್ಯಾಂಕ್ ಸ್ಟೇಟ್ಮೆಂಟ್‌ಗಳು (Bank Statement) ಮತ್ತು ವ್ಯಾಪಾರದ ಸ್ಥಿತಿಗೆ ಸಂಬಂಧಿಸಿದ ವಿವರಗಳ ಪರಿಶೀಲನೆ ನಡೆಯಲಿದೆ. ಈ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ, ಕ್ರೆಡಿಟ್ ಕಾರ್ಡ್ (Credit Card) ಸುಲಭವಾಗಿ ಸಿಗಬಹುದು.

ಕ್ರೆಡಿಟ್ ಕಾರ್ಡ್

ನೋಂದಣಿ ಪ್ರಕ್ರಿಯೆ ಹೇಗೆ?

ಇದು ಬಹಳ ಸಿಂಪಲ್! ಭಾರತದೆಲ್ಲೆಡೆಯ ಸಣ್ಣ ವ್ಯಾಪಾರಿಗಳು ಕೇಂದ್ರ ಸರ್ಕಾರದ ಅಧಿಕೃತ ಉದ್ಯಮ್ ಪೋರ್ಟಲ್‌ಗೆ ಹೋಗಿ, ‘ಕ್ವಿಕ್ ಲಿಂಕ್ಸ್’ ವಿಭಾಗದಲ್ಲಿ ‘ಉದ್ಯಮ್ ನೋಂದಣಿ’ ಆಯ್ಕೆಮಾಡಿ, ಸೂಚನೆಗಳನ್ನು ಅನುಸರಿಸಿದರೆ ಸಾಕು. ನಂತರ ಎಂಎಸ್‌ಎಂಇ ಕ್ರೆಡಿಟ್ ಕಾರ್ಡ್ (Get Credit Card) ಅನ್ನು ಪಡೆಯಬಹುದು.

ಇದನ್ನೂ ಓದಿ: ಲೋನ್ ಮೇಳ, ಕಡಿಮೆ ಬಡ್ಡಿಗೆ ಸಾಲ! ಮುಗಿಬಿದ್ದ ಜನ, ಮಾರ್ಚ್ 31ರ ತನಕ ಅವಕಾಶ

Credit Card for Business

ನಿಪುಣರ ಮಾತಿನಲ್ಲಿ:

ಈ ಹೊಸ ಯೋಜನೆಯಿಂದ (Govt Scheme) ಮುಂದಿನ ವರ್ಷಗಳಲ್ಲಿ ₹30,000 ಕೋಟಿ ಹೆಚ್ಚುವರಿ ನಿಧಿ ಮೈಸೂಕ್ಷ್ಮ ಉದ್ಯಮಿಗಳಿಗೆ ಲಭ್ಯವಾಗಲಿದೆ. ಇದು ಬಿಸಿನೆಸ್ ವಿಸ್ತರಣೆಗೆ (Own Business Setup) ಇನ್ನಷ್ಟು ದಾರಿ ತೆರೆದು ಕೊಡಲಿದೆ.

ಇದನ್ನೂ ಓದಿ: ಏನೇ ಮಾಡಿದ್ರು ಈ ಕಾರಣಕ್ಕೆ ನಿಮಗೆ ಕ್ರೆಡಿಟ್ ಕಾರ್ಡ್ ಸಿಗಲ್ಲ! ಬಿಗ್ ಅಪ್ಡೇಟ್

ಕ್ರೆಡಿಟ್ ಕಾರ್ಡ್

ಬಜೆಟ್‌ನ ಇನ್ನಷ್ಟು ಪ್ರಮುಖ ಅಂಶಗಳು:

2025ರ ಬಜೆಟ್‌ನಲ್ಲಿ ಕೇವಲ ಉದ್ಯಮಿಗಳಿಗೆ ಮಾತ್ರವಲ್ಲ, ರೈತರು ಮತ್ತು ಮಧ್ಯಮವರ್ಗದವರಿಗೂ ಹಲವಾರು ರಿಯಾಯಿತಿಗಳನ್ನು ನೀಡಲಾಗಿದೆ. ಇವರ ಅಗತ್ಯಗಳಿಗೆ ತಕ್ಕಂತೆ ವಿವಿಧ ಯೋಜನೆಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ.

5 Lakh Credit Card for Small Businesses

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories