ಲೋನ್ ಮೇಲೆ EMI ನಲ್ಲಿ ಕಾರು ಖರೀದಿ ಮಾಡೋರಿಗೆ ಇನ್ಮುಂದೆ ಹೊಸ ರೂಲ್ಸ್!
ಮಧ್ಯಮವರ್ಗದ ಕುಟುಂಬಗಳಿಗೆ ಮೊದಲ ಕಾರು ಖರೀದಿಸುವುದು ವಿಶೇಷ. ಕಷ್ಟವಿಲ್ಲದೆ ಕಾರು ಖರೀದಿ ಮಾಡಲು 20/4/10 ನಿಯಮವನ್ನು ಪಾಲಿಸಬೇಕು.
- 20/4/10 ನಿಯಮದಿಂದ ಸುರಕ್ಷಿತ ಕಾರು ಖರೀದಿ.
- ತಗ್ಗಿದ ಬಡ್ಡಿದರದ ಕಾರ್ ಲೋನ್ ಆಯ್ಕೆ ಮಾಡುವುದು ಮುಖ್ಯ.
- ಆನ್‌ಲೈನ್ ಅಥವಾ ಬ್ಯಾಂಕ್‌ನಲ್ಲಿ ನೇರವಾಗಿ ಲೋನ್ ಪಡೆಯುವ ಅವಕಾಶ.
Car Loan Tips : ನೀವು ಹೊಸ ಕಾರನ್ನು ಖರೀದಿಸುವ ಯೋಜನೆಯಲ್ಲಿ ಇದ್ದೀರಾ? ಹಾಗಿದ್ದರೆ ಈ ಲೇಖನದ ಟಿಪ್ಸ್ ನಿಜಕ್ಕೂ ನಿಮಗೆ ಒಂದೊಳ್ಳೆ ಪ್ಲಾನ್ ನೀಡೋದಂತೂ ನಿಜ.
ಇನ್ನು, ಮಧ್ಯಮವರ್ಗದ ಕುಟುಂಬಗಳಿಗೆ ಮೊದಲ ಕಾರು ಖರೀದಿಸುವುದು (Buy Car) ನಿಜಕ್ಕೂ ವಿಶೇಷ ಕ್ಷಣ. ಆದರೆ, ಸಾಲದ ಬಾಧೆ ಇಲ್ಲದೆ ಖರೀದಿಸಲು ಕೆಲವೊಂದು ಸರಳ ನಿಯಮಗಳನ್ನು ಪಾಲಿಸಬೇಕಿದೆ. ಅದೆಂದರೆ, 20/4/10 ನಿಯಮ.
ಇದನ್ನೂ ಓದಿ: ಏನೇ ಮಾಡಿದ್ರು ಈ ಕಾರಣಕ್ಕೆ ನಿಮಗೆ ಕ್ರೆಡಿಟ್ ಕಾರ್ಡ್ ಸಿಗಲ್ಲ! ಬಿಗ್ ಅಪ್ಡೇಟ್
ಏನಿದು 20/4/10 ನಿಯಮ?: ಕಾರಿನ ಆನ್-ರೋಡ್ ಬೆಲೆಯ ಕನಿಷ್ಠ 20% ಮೊತ್ತವನ್ನು ಡೌನ್ ಪೇಮೆಂಟ್ (Down Payment) ಆಗಿ ಪಾವತಿಸಬೇಕು. ಲೋನ್ ಅವಧಿ ಹೆಚ್ಚೆಂದರೆ ನಾಲ್ಕು ವರ್ಷಗಳೊಳಗಿರಬೇಕು (Loan Tenur). ಅಲ್ಲದೆ, ನಿಮ್ಮ ತಿಂಗಳ ಆದಾಯದ 10% ಕ್ಕಿಂತ ಹೆಚ್ಚು ಈಎಮ್‌ಐ ಆಗಿರಬಾರದು (Monthly EMI). ಹೀಗೆ ಮಾಡಿದರೆ ನಿಮ್ಮ ಕಾರು ಖರೀದಿಯೂ ಸುಲಭವಾಗುತ್ತದೆ ಮತ್ತು ಹಣಕಾಸು ಒತ್ತಡವೂ ಇರುವುದಿಲ್ಲ.
ಒಂದು ಉದಾಹರಣೆ ನೋಡಿ: ನಿಮ್ಮ ತಿಂಗಳ ವೇತನ ₹1 ಲಕ್ಷವಿದ್ದರೆ, ವರ್ಷದ ಆದಾಯ ₹12 ಲಕ್ಷ. ಹಾಗಿದ್ದರೆ, ನಿಮ್ಮ ಕಾರಿನ ಬೆಲೆ ₹6 ಲಕ್ಷವಿಲ್ಲದಂತೆ ನೋಡಿಕೊಳ್ಳಿ. ಈ ಬೆಲೆಯಲ್ಲಿ 20% ಅಂದರೆ ₹1.2 ಲಕ್ಷವನ್ನು ಡೌನ್ ಪೇಮೆಂಟ್ ಆಗಿ ಕೊಡಿ. ಉಳಿದ ₹4.8 ಲಕ್ಷವನ್ನು ಸಾಲವಾಗಿ ಪಡೆಯಬಹುದು.
ಇದನ್ನೂ ಓದಿ: ಲೋನ್ ಮೇಳ, ಕಡಿಮೆ ಬಡ್ಡಿಗೆ ಸಾಲ! ಮುಗಿಬಿದ್ದ ಜನ, ಮಾರ್ಚ್ 31ರ ತನಕ ಅವಕಾಶ
ಇನ್ನು ಕೆಲವೊಂದು ಬ್ಯಾಂಕುಗಳು (Banks) ಕಡಿಮೆ ಬಡ್ಡಿದರದಲ್ಲಿ ಕಾರ್ ಲೋನ್ (Car Loan) ನೀಡುತ್ತಿವೆ. ಉದಾಹರಣೆಗೆ, 8% ಬಡ್ಡಿದರದಲ್ಲಿ ನಾಲ್ಕು ವರ್ಷ ಅವಧಿಗೆ ₹4.8 ಲಕ್ಷ ಸಾಲವನ್ನು ತೆಗೆದುಕೊಂಡರೆ, ತಿಂಗಳಿಗೆ ನೀವು ಪಾವತಿಸಬೇಕಾದ ಈಎಮ್‌ಐ ಸುಮಾರು ₹11,718. ಈ ನಿಯಮಗಳನ್ನು ಅನುಸರಿಸಿದರೆ ಸಾಲದ ಭಾರದಿಂದ ದೂರವಾಗಬಹುದು.
ಇದನ್ನೂ ಓದಿ: ಮಿಡಲ್ ಕ್ಲಾಸ್ ಫ್ಯಾಮಿಲಿಗಳಿಗೆ ಇವು ಬೆಸ್ಟ್ ಕಾರುಗಳು, ಬೆಲೆ ಕೂಡ ಕಡಿಮೆ!
ಇನ್ನು ಈ ಕಾರ್ ಲೋನ್‌ಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ (Digital Car Loan) ಅಥವಾ ನೇರವಾಗಿ ಬ್ಯಾಂಕ್‌ಗೆ ಹೋಗಿಯೂ ಪಡೆಯಬಹುದು. ಆದರೆ, ಸಾಲ ತೆಗೆದುಕೊಳ್ಳುವ ಮುನ್ನ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ. ಇಲ್ಲವಾದರೆ ಸಾಲದ ಒತ್ತಡದಲ್ಲಿ ಸಿಕ್ಕುಗೊಳ್ಳುವ ಸಾಧ್ಯತೆ ಇದೆ.
Best Car Loan Tips for Middle-Class Families
Our Whatsapp Channel is Live Now 👇