ಸ್ವ-ಉದ್ಯಮಕ್ಕೆ ಸರ್ಕಾರವೇ ಕೊಡುತ್ತೆ 5 ಲಕ್ಷ ರೂ. ಸಹಾಯಧನ; ಇಂದೇ ಅಪ್ಲೈ ಮಾಡಿ!

Story Highlights

Own Business : ಸಾಲ ಮರುಪಾವತಿ ಮಾಡಿದರೆ ಮುಂದಿನ ಹಂತದಲ್ಲಿ 2 ಲಕ್ಷ ರೂ. ಸಾಲ ಸೌಲಭ್ಯ (Loan Facility) ನೀಡಲಾಗುತ್ತದೆ

Own Business : ಎಷ್ಟೋ ಜನ ಯುವಕರಿಗೆ ಸ್ವ-ಉದ್ಯೋಗ (own business) ಮಾಡುವ ಆಸಕ್ತಿ ಹಾಗೂ ಪ್ರತಿಭೆ (talent) ಜೊತೆಗೆ ಪೂರ್ಣ ತಿಳುವಳಿಕೆ ಇರುತ್ತದೆ. ಆದರೆ ಮನೆಯಲ್ಲಿನ ಆರ್ಥಿಕ ಸಮಸ್ಯೆಯಿಂದ ಸ್ವಂತ ಉದ್ಯೋಗ ಮಾಡಲು ಸಾಧ್ಯವಾಗುವುದಿಲ್ಲ.

ಇಂತಹ ಬಡ, ಪ್ರತಿಭಾವಂತ ಯುವಕರಿಗಾಗಿಯೇ ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ರೀತಿ ಜಾರಿಗೆ ತಂದಿರುವ ಯೋಜನೆಗಳಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ (pradhanmantri Vishwakarma Yojana) ಯೂ ಒಂದಾಗಿದೆ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಸಿಗುತ್ತೆ 20,000 ದಿಂದ 20 ಲಕ್ಷ ಪರ್ಸನಲ್ ಲೋನ್

18 ಕ್ಕೂ ಅಧಿಕ ಉದ್ಯೋಗಗಳಿಗೆ ಸಿಗುತ್ತೆ ಸಹಾಯಧನ:

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಸ್ವ-ಉದ್ಯೋಗ ನಡೆಸಲು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ (loan with less interest) ನೀಡಲಾಗುತ್ತದೆ. ಮತ್ತು ಸಹಾಯಧನ (subsidy Loan) ವನ್ನು ನೀಡಲಾಗುತ್ತದೆ. ಟೈಲರಿಂಗ್, ಕಮ್ಮಾರಿಕೆ, ಬೊಂಬೆ ತಯಾರಿಕೆ ಸೇರಿದಂತೆ 18 ಕ್ಕೂ ಅಧಿಕ ಸ್ವ-ಉದ್ಯೋಗ ಮಾಡುವವರು ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಪಡೆಯಬಹುದಾಗಿದೆ.

3 ಲಕ್ಷ ರೂ. ವರೆಗೆ ಸಿಗುತ್ತೆ ಸಾಲ: (get loan up to 3 lakh)

ಈ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಫಲಾನುಭವಿಗೆ ಮೊದಲ ವರ್ಷ ಒಂದು ಲಕ್ಷ ರೂ. ಸಾಲ ನೀಡಲಾಗುತ್ತದೆ. ಇದಕ್ಕೆ ಶೇ.5 ರಷ್ಟು ಬಡ್ಡಿದರ ವಿಧಿಸಲಾಗುತ್ತದೆ. ಮತ್ತು ಸಾಲ ಮರುಪಾವತಿಗೆ 18 ತಿಂಗಳ ಸಮಯಾವಕಾಶ ನೀಡಲಾಗುತ್ತದೆ.

ಈ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದರೆ ಮುಂದಿನ ಹಂತದಲ್ಲಿ 2 ಲಕ್ಷ ರೂ. ಸಾಲ ಸೌಲಭ್ಯ (Loan Facility) ನೀಡಲಾಗುತ್ತದೆ. ಇದನ್ನು ಸಹ ಸರಿಯಾದ ಸಮಯದಲ್ಲಿ ಹಿಂತಿರುಗಿಸಿದರೆ ಮೂರು ಲಕ್ಷ ರೂ. ಸಾಲ ನೀಡಲಾಗುತ್ತದೆ. ಈ ಸಾಲ ಪಡೆದುಕೊಳ್ಳಲು ಯಾವುದೇ ಗ್ಯಾರಂಟಿ ನೀಡುವ ಅವಶ್ಯಕತೆ ಇರುವುದಿಲ್ಲ.

ಇನ್ಮುಂದೆ ಜಮೀನು, ಆಸ್ತಿ ನೋಂದಣಿಗೆ ಈ ದಾಖಲೆ ಸಲ್ಲಿಸುವುದು ಕಡ್ಡಾಯ! ಹೊಸ ನಿಯಮ

ವಿಶ್ವಕರ್ಮ ಯೋಜನೆಯಡಿಯಲ್ಲಿ ಅಗತ್ಯ ಇರುವವರಿಗೆ ತರಬೇತಿಯನ್ನು ನೀಡಲಾಗುತ್ತದೆ, ತರಬೇತಿ (training) ಅವಧಿಯಲ್ಲಿ 500 ರೂಪಾಯಿಗಳ ಸ್ಟೈಫಂಡ್ (stipend) ಪಡೆಯಬಹುದು ಹಾಗೂ 15,000 ರೂಪಾಯಿಗಳನ್ನು ಟೂಲ್ ಕಿಟ್ (tool kit) ಖರೀದಿ ಮಾಡಲು ಸರ್ಕಾರವೇ ಉಚಿತವಾಗಿ ನೀಡುತ್ತದೆ.

ಇನ್ನು ಈ ಯೋಜನೆಯ ಅಡಿಯಲ್ಲಿ ಸಾಂಪ್ರದಾಯಿಕ ಉದ್ಯಮ ಮಾಡುವವರಿಗೆ ಸರ್ಕಾರವೇ ಐಡೆಂಟಿಟಿ ಕಾರ್ಡ್ (identity card) ಕೂಡ ನೀಡುತ್ತದೆ ಈ ಕಾರ್ಡ್ ಇರುವ ಯಾವುದೇ ವ್ಯಾಪಾರಿ ದೇಶಾದ್ಯಂತ ನಡೆಯುವ ಯಾವುದೇ ವಸ್ತು ಪ್ರದರ್ಶನಗಳಲ್ಲಿ ತಮ್ಮ ಕರಕುಶಲ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗುತ್ತದೆ.

Loanಯಾವ ಯಾವ ಉದ್ಯೋಗ ಮಾಡುವವರಿಗೆ ಸಿಗುತ್ತೆ ಸೌಲಭ್ಯ – Loan

ಬಡಿಗ ವೃತ್ತಿ ಮಾಡುವವರು, ದೋಣಿ ತಯಾರಕರು, ಶಸ್ತ್ರ ತಯಾರಕರು, ಕಮ್ಮಾರ ವೃತ್ತಿ ಮಾಡುವವರು, ಕಲ್ಲುಕುಟಿಗ ವೃತ್ತಿ ಮಾಡುವವರು, ಬಟ್ಟೆ, ಚಾಪೆ, ಪೊರಕೆ ತಯಾರಕರು, ಗೊಂಬೆ ಮತ್ತು ಆಟಿಕೆ ತಯಾರಕರು, ಕ್ಷೌರಿಕ ವೃತ್ತಿ ಮಾಡುವರರು, ಸುತ್ತಿಗೆ ಮತ್ತು ಉಪಕರಣ ತಯಾರಿಸುವವರು, ಹೂಮಾಲೆ ಮಾಡುವವರು, ಅಗಸರು, ಆಭರಣ ತಯಾರಕರು, ಶಿಂಪಿಗ( ಬಟ್ಟೆ ಹೊಲಿಯುವವರು), ಕುಂಬಾರ ವೃತ್ತಿ ಮಾಡುವವರು, ಮೀನು ಬಲೆ ಹೆಣೆಯುವವರು, ಶಿಲ್ಪಿಗಳು, ಪಾದರಕ್ಷೆ ತಯಾರಕರು, ಬೀಗ ತಯಾರಕರು ಅರ್ಜಿ ಸಲ್ಲಿಸಬಹುದು.

ಪಿಂಚಣಿ ಪಡೆಯೋಕೆ ರೇಷನ್ ಕಾರ್ಡ್ ಲಿಂಕ್ ಮಾಡಬೇಕು; ಕಾರ್ಡ್ ಇಲ್ಲದವರಿಗೆ ಸಮಸ್ಯೆ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: (documents)

ಅರ್ಜಿದಾರರ ಭಾವಚಿತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ರೇಶನ್ ಕಾರ್ಡ್, ಸ್ವ-ಉದ್ಯೋಗ ಪ್ರಮಾಣ ಪತ್ರ.
ಈ ಎಲ್ಲ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಗೆ ತೆರಳಿ ಅರ್ಜಿ ಸಲ್ಲಿಸಬಹುದು. ಇಲ್ಲವೇ ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.

ಪಾರಂಪರಿಕವಾಗಿ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬಂದ ಉದ್ದಿಮೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ ಯುವಕರು ತಮ್ಮದೇ ಆದ ರೀತಿಯಲ್ಲಿ ಸ್ವ ಉದ್ಯಮದ ಮೂಲಕ ಅಭಿವೃದ್ಧಿ ಹೊಂದಲು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ವರದಾನವಾಗಿದೆ ಎನ್ನಬಹುದು, ಅಗತ್ಯ ಇರುವವರು ತಕ್ಷಣವೇ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ಸೈಟ್ https://pmvishwakarma.gov.in/ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ

5 lakhs Subsidy Loan will be given by the government for self-employment

Related Stories