ಇನ್ಮುಂದೆ ಜಮೀನು, ಆಸ್ತಿ ನೋಂದಣಿಗೆ ಈ ದಾಖಲೆ ಸಲ್ಲಿಸುವುದು ಕಡ್ಡಾಯ! ಹೊಸ ನಿಯಮ
Property Registration : ಈಗ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯ ಉದ್ಯೋಗ (job) ದಲ್ಲಿ ನಿರತರಾಗಿರುತ್ತಾರೆ. ಒಬ್ಬರು ಸರ್ಕಾರಿ ನೌಕರಿ (government job) ಯಲ್ಲಿದ್ದರೆ, ಇನ್ನೊಬ್ಬರು ಖಾಸಗಿ ಕಂಪನಿಯಲ್ಲಿ ಉದ್ಯೋಗ (private company job) ಮಾಡುತ್ತಾರೆ.
ಇನ್ನು ಕೆಲವರು ಸ್ವ-ಉದ್ಯೋಗ (own business) ಮಾಡುತ್ತಾರೆ. ಹೀಗೆ ಉದ್ಯೋಗದಿಂದ ಬಂದ ಹಣವನ್ನು ಜಮೀನಿನ ಮೇಲೆ ಇನ್ವೆಸ್ಟ್ ಮಾಡಲು ಬಯಸುತ್ತಾರೆ. ಯಾಕೆಂದರೆ ಜಮೀನಿನ (Property) ಮೇಲೆ ಹೂಡಿಕೆ ಮಾಡಿದಲ್ಲಿ ಮುಂದಿನ ದಿನದಲ್ಲಿ ಲಾಭ ಹೆಚ್ಚಾಗಿ ಸಿಗುತ್ತದೆ.
ಆದರೆ ಈ ರೀತಿ ಜಮೀನು ಕೊಂಡುಕೊಳ್ಳುವ ವೇಳೆ ಕೆಲವೊಂದು ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಅಲ್ಲದೆ ಸರ್ಕಾರದ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ.
ಜಮೀನು, ಆಸ್ತಿ ಖರೀದಿ ಮಾಡುವವರಿಗೆ ಹೊಸ ನಿಯಮ! ನೋಂದಣಿಗೆ ಹೊಸ ರೂಲ್ಸ್
ಆಸ್ತಿ ಖರೀದಿ (property purchase) ಮಾಡುವುದು ಸಹ ಒಂದು ರೀತಿಯಲ್ಲಿ ಉಳಿತಾಯ ಆಗಿರುವುದರಿಂದ ಹೆಚ್ಚಿನ ಜನರು ಆಸ್ತಿ ಖರೀದಿಸಲು ಬಯಸುತ್ತಾರೆ. ಆಸ್ತಿ ಖರೀದಿಸಿ ತಮ್ಮ ಹಣ ಉಳಿತಾಯ ಮಾಡುವ ಯೋಚನೆ ಹಾಕುತ್ತಾರೆ. ನಮ್ಮ ದೇಶದಲ್ಲಿ ಆಸ್ತಿ ಖರೀದಿಗೆ ಅದರದ್ದೆ ಆದ ಹಲವು ನಿಯಮಗಳಿವೆ.
ನೀವು ಎಷ್ಟೇ ಸಣ್ಣ ಪ್ರಮಾಣದ ಆಸ್ತಿ ಖರೀದಿ ಮಾಡುವುದಿದ್ದರೂ ಕೇಂದ್ರ ಸರ್ಕಾರದ ನಿಯಮ (central government rules) ಗಳನ್ನು ಪಾಲನೆ ಮಾಡಬೇಕಾಗುತ್ತದೆ. ಅಲ್ಲದೆ ಕೆಲವೊಂದು ದಾಖಲೆಗಳನ್ನು ಆ ಸಮಯದಲ್ಲಿ ಒದಗಿಸಬೇಕಾಗುತ್ತದೆ. ಇಲ್ಲದಿದ್ದರೆ ಆಸ್ತಿಯನ್ನು ನಿಮ್ಮ ಹೆಸರಿಗೆ ನೋಂದಣಿ (property registration) ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಆಸ್ತಿ ಖರೀದಿ ಮಾಡುವ ಮುನ್ನ ಈ ದಾಖಲೆ ಸಿದ್ದವಾಗಿಟ್ಟುಕೊಳ್ಳಿ.
ಪಿಂಚಣಿ ಪಡೆಯೋಕೆ ರೇಷನ್ ಕಾರ್ಡ್ ಲಿಂಕ್ ಮಾಡಬೇಕು; ಕಾರ್ಡ್ ಇಲ್ಲದವರಿಗೆ ಸಮಸ್ಯೆ
ಈ ದಾಖಲೆ ಕಡ್ಡಾಯ
ದೇಶದಲ್ಲಿ ಆಸ್ತಿಗೆ ಸಂಬಂಧಪಟ್ಟ ವಂಚನೆ ಪ್ರಕರಣಗಳು (fraud cases) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಒಂದು ನಿರ್ಧಾರಕ್ಕೆ ಬಂದಿದೆ. ಹಾಗಾಗಿ ಆಸ್ತಿ ನೋಂದಣಿ ವಿಚಾರದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಸದ್ಯ ನೀವು ಯಾವುದೇ ಆಸ್ತಿಯನ್ನು ನೋಂದಣಿ ಮಾಡಿಸುವುದಿದ್ದರೂ ಎನ್ಕಂಬರೆನ್ಸ್ ಸರ್ಟಿಫಿಕೇಟ್ (encumbrance certificate mandatory) ಕಡ್ಡಾಯ ಮಾಡಲಾಗಿದೆ.
ಬ್ಯಾಂಕ್ ಚೆಕ್ ವ್ಯವಹಾರ ಮಾಡುವಾಗ ಈ ತಪ್ಪುಗಳು ಮಾಡಿದ್ರೆ ಜೈಲು ಶಿಕ್ಷೆ ಗ್ಯಾರಂಟಿ!
ಎನ್ಕಂಬರೆನ್ಸ್ ಸರ್ಟಿಫಿಕೇಟ್ ಕಡ್ಡಾಯ: (encumbrance certificate mandatory for property registration)
ಎನ್ಕಂಬರೆನ್ಸ್ ಸರ್ಟಿಫಿಕೇಟ್ ಒಂದು ಕಾನೂನು ದಾಖಲೆಯಾಗಿದೆ. ಇದರ ಮೂಲಕ ಆಸ್ತಿಯು ಕಾನೂನು ಬದ್ದವಾಗಿದೆಯೇ? ಆಸ್ತಿಯಲ್ಲಿ ಮೂರನೇ ವ್ಯಕ್ತಿಯ ಹಕ್ಕುಗಳು ಏನಾದರೂ ಇದೆಯೇ? ಆಸ್ತಿಯ ಮೇಲೆ ಸಾಲ ಮಾಡಲಾಗಿದೆಯೇ? ಮಾಡಿದ್ದರೆ ಅದನ್ನು ಮರುಪಾವತಿ ಮಾಡಲಾಗಿದೆಯೇ ಎಲ್ಲವನ್ನು ಎನ್ಕಂಬರೆನ್ಸ್ ಸರ್ಟಿಫಿಕೇಟ್ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಹಾಗಾಗಿ ಎನ್ಕಂಬರೆನ್ಸ್ ಸರ್ಟಿಫಿಕೇಟ್ ಆಸ್ತಿ ನೋಂದಣಿಗೆ ಕಡ್ಡಾಯ ದಾಖಲೆಯಾಗಿದೆ ಎಂದು ಸರ್ಕಾರವು ಆದೇಶ ಹೊರಡಿಸಿದೆ. ಆಸ್ತಿಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದರು ಈ ಸರ್ಟಿಫಿಕೇಟ್ ಅತ್ಯಗತ್ಯ.
it is mandatory to submit this document for land and property registration