ಬ್ಯಾಂಕ್ ಚೆಕ್ ವ್ಯವಹಾರ ಮಾಡುವಾಗ ಈ ತಪ್ಪುಗಳು ಮಾಡಿದ್ರೆ ಜೈಲು ಶಿಕ್ಷೆ ಗ್ಯಾರಂಟಿ!

Bank Cheque Book : ದೊಡ್ಡ ಮೊತ್ತದ ಹಣಕಾಸಿನ ವ್ಯವಹಾರ ಮಾಡುವಾಗ ಬ್ಯಾಂಕಿನ ಚೆಕ್ (bank cheque) ಬರೆಯಬೇಕಾಗುತ್ತದೆ, ಇದಕ್ಕಾಗಿ ನೀವು ಬ್ಯಾಂಕ್ ಗೆ ಹೋಗಲೇಬೇಕು.

Bank Cheque Book : ನಾವು ಈಗಾಗ್ಲೇ ಡಿಜಿಟಲ್ (digital) ಆಗಿ ಮುಂದುವರೆದು ಯುಪಿಐ ಮೂಲಕ ಪೇಮೆಂಟ್ (UPI payment) ಮಾಡುತ್ತೇವೆ ಎಲ್ಲಾ ಬ್ಯಾಂಕ್‍ನ ಹಣಕಾಸಿನ ವ್ಯವಹಾರಗಳನ್ನು ಮೊಬೈಲ್ನಲ್ಲಿ ಮಾಡುತ್ತೇವೆ, ಆದರೆ ಕೆಲವು ವ್ಯವಹಾರಕ್ಕೆ ಬ್ಯಾಂಕ್ ಅನ್ನು ಅವಲಂಬಿಸಿದ್ದು ಅನಿವಾರ್ಯವಾಗಿದೆ.

ಉದಾಹರಣೆಗೆ ದೊಡ್ಡ ಮೊತ್ತದ ಹಣಕಾಸಿನ ವ್ಯವಹಾರ ಮಾಡುವಾಗ ಬ್ಯಾಂಕಿನ ಚೆಕ್ (bank cheque) ಬರೆಯಬೇಕಾಗುತ್ತದೆ, ಇದಕ್ಕಾಗಿ ನೀವು ಬ್ಯಾಂಕ್ ಗೆ ಹೋಗಲೇಬೇಕು.

Phonepe ಬಳಕೆದಾರರಿಗೆ ಸಿಹಿ ಸುದ್ದಿ, ಹೊಸ ಹೊಸ ಫೀಚರ್, ನ್ಯೂ ಅಪ್ಡೇಟ್

ಬ್ಯಾಂಕ್ ಚೆಕ್ ವ್ಯವಹಾರ ಮಾಡುವಾಗ ಈ ತಪ್ಪುಗಳು ಮಾಡಿದ್ರೆ ಜೈಲು ಶಿಕ್ಷೆ ಗ್ಯಾರಂಟಿ! - Kannada News

ಸಾಮಾನ್ಯವಾಗಿ ದೊಡ್ಡ ದೊಡ್ಡ ವ್ಯಾಪಾರಸ್ಥರು ದಿನವೂ ಅತಿ ಹೆಚ್ಚು ಹಣಕಾಸಿನ ವಹಿವಾಟು ಮಾಡುವವರು ಬ್ಯಾಂಕ್ ನ ಚೆಕ್ ಬರೆಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ, ಆದರೆ ನೀವು ಚೆಕ್ ಬರೆಯುವಾಗ ಮಾಡುವ ಸಣ್ಣ ಪುಟ್ಟ ತಪ್ಪುಗಳು ಕೂಡ ನಿಮ್ಮನ್ನು ಬಹಳ ದೊಡ್ಡ ಸಮಸ್ಯೆಗೆ ಗುರಿ ಮಾಡಬಹುದು.

ಹಾಗಾಗಿ ಬ್ಯಾಂಕ್ ನಲ್ಲಿ ಚೆಕ್ ಬರೆಯುವಾಗ ಯಾವ ತಪ್ಪುಗಳನ್ನು ಮಾಡಬಾರದು, ಎನ್ನುವುದರ ಬಗ್ಗೆ ಈ ಲೇಖನದಲ್ಲಿದೆ ಸಂಪೂರ್ಣವಾದ ಮಾಹಿತಿ ಮುಂದೆ ಓದಿ.

ಬ್ಯಾಂಕ್ ಚೆಕ್ ಬರೆಯುವಾಗ ಈ ಎಡವಟ್ಟು ಮಾಡಿದರೆ ನಿಮ್ಮ ಖಾತೆ ಖಾಲಿ ಖಾಲಿ!

ಬ್ಯಾಂಕ್ ನ ಚೆಕ್ ಪುಸ್ತಕ ಪಡೆದು ಬರೆದು ಇನ್ನೊಬ್ಬರಿಗೆ ಕೊಡುವಾಗ ಅಥವಾ ಬ್ಯಾಂಕ್ ಗೆ ಕೊಡುವಾಗ ನೀವು ಬಹಳ ಮುತುವರ್ಜಿಯಿಂದ ಚೆಕ್ ಬರೆಯಬೇಕಾಗುತ್ತದೆ. ಉದಾಹರಣೆಗೆ ನೀವು ಚೆಕ್ ನಲ್ಲಿ ಮೊತ್ತವನ್ನು ನಮೂದಿಸುವಾಗ ಅಮೌಂಟ್ (amount) ಬರೆದ ನಂತರ ಕೇವಲ ಓನ್ಲಿ (only) ಅಥವಾ ಮಾತ್ರ ಎನ್ನುವುದನ್ನು ಸೇರಿಸಿ

ಉದಾಹರಣೆಗೆ 10 ಲಕ್ಷದ ಚೆಕ್ ಬರೆಯುವುದಿದ್ದರೆ ಕೇವಲ 10 ಲಕ್ಷಗಳು ಮಾತ್ರ ಎಂದು ಬರೆಯಿರಿ. ಅದೇ ರೀತಿ ಸಂಖ್ಯೆಗಳಲ್ಲಿ ಬರೆಯುವಾಗ 10,00,000/ ಲೈನ್ ಹಾಕುವುದನ್ನು ಮರೆಯಬೇಡಿ ಅಲ್ಲಿಗೆ ನಿಮ್ಮ ಚೆಕ್ ಅನ್ನು ಯಾರು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಸೊನ್ನೆ ಹೆಚ್ಚುವರಿಯಾಗಿ ಸೇರಿಸಲು ಸಾಧ್ಯವಿಲ್ಲ!

ಕುರಿ ಕೋಳಿ ಮೇಕೆ ಹಸು ಸಾಕಾಣಿಕೆಗೆ ಸರ್ಕಾರವೇ ಕೊಡುತ್ತೆ ಸಬ್ಸಿಡಿ ಸಾಲ; ಅರ್ಜಿ ಸಲ್ಲಿಸಿ!

Cheque rulesಬ್ಲಾಂಕ್ ಚೆಕ್ ಕೊಡುವುದು: (don’t sign blank cheque) ಸಾಕಷ್ಟು ಜನ ಖಾಲಿ ಚೆಕ್ ಮೇಲೆ ಸಹಿ ಮಾಡಿಕೊಡುತ್ತಾರೆ, ಇಂತಹ ತಪ್ಪನ್ನು ಎಂದಿಗೂ ಮಾಡಬೇಡಿ ಇದರ ದುರುಪಯೋಗ ಆಗಬಹುದು, ಹಾಗಾಗಿ ಚೆಕ್ ಬರೆಯುವಾಗ ವ್ಯಕ್ತಿಯ ಹೆಸರು ಮುಕ್ತ ಹಾಗೂ ದಿನಾಂಕವನ್ನು ನಮೂದಿಸಿ.

ಚೆಕ್ ನಲ್ಲಿ ತಪ್ಪು ಸಹಿ ಮಾಡಬೇಡಿ! (Don’t do wrong signature) ನೀವು ಚೆಕ್ ಬರೆಯುವಾಗ ತಪ್ಪಾಗಿ ಸಹಿ ಮಾಡಿದರೆ ಆ ಚೆಕ್ ಬೌನ್ಸ್ (cheque bounce) ಆಗುತ್ತದೆ, ಹಾಗಾಗಿ ನೀವು ಇದುವರೆಗೆ ಯಾವ ಸಹಿ ಮಾಡಿಕೊಂಡು ಬಂದಿದ್ದೀರಿ ಹಾಗೂ ಬ್ಯಾಂಕ್ ನಲ್ಲಿ ಯಾವ ಸಹಿ ಇದೆಯೋ ಅದೇ ರೀತಿ ಸಹಿ ಮಾಡಬೇಕು, ನಿಮ್ಮ ಸಹಿ ಬ್ಯಾಂಕ್ ನಲ್ಲಿ ಇರುವ ಸಹಿಗೆ ಮ್ಯಾಚ್ ಆಗದೆ ಇದ್ದರೆ ಅಂತಹ ಚೆಕ್ ಬೌನ್ಸ್ ಎಂದು ಪರಿಗಣಿಸಲಾಗುತ್ತದೆ.

ಜನವರಿಯಿಂದ ₹500 ರೂಪಾಯಿಗೆ ಸಿಗುತ್ತೆ ಗ್ಯಾಸ್ ಸಿಲಿಂಡರ್! ಈ ರೀತಿ ಪಡೆದುಕೊಳ್ಳಿ

ಸರಿಯಾದ ದಿನಾಂಕ ಬರೆದಿರಿ! (Right date)

ಒಂದು ವೇಳೆ ನೀವು ಚೆಕ್ ಬರೆಯುವಾಗ ತಪ್ಪಾಗಿ ದಿನಾಂಕ ನಮೂದಿಸಿದರು ಕೂಡ ಆ ಚೆಕ್ ಪಾಸ್ ಆಗುವುದಿಲ್ಲ. ನೀವು ಸರಿಯಾಗಿ ದಿನಾಂಕವನ್ನು ಬರೆದಿದ್ದರೆ ಯಾರಿಗೆ ಚೆಕ್ ನೀಡಿರುತ್ತೀರೋ ಅವರು ಬ್ಯಾಂಕ್ ನ ಮೂಲಕ ಹಣವನ್ನು ಹಿಂಪಡೆಯಲು ಕೂಡ ಸಹಾಯವಾಗುತ್ತದೆ.

ಚೆಕ್ ಬರೆಯುವಾಗ ಬಾಲ್ ಪೆನ್ ಬಳಸಿ! (Use ball pen)

ನೀವು ಚೆಕ್ ಮೂಲಕ ಹೆಚ್ಚಿನ ವ್ಯವಹಾರ ಮಾಡುವುದಾದರೆ ನಿಮ್ಮದೇ ಆಗಿರುವ ಪೆನ್ನು ಇಟ್ಟುಕೊಳ್ಳುವುದು ಒಳ್ಳೆಯದು, ಅದರಲ್ಲೂ ಚೆಕ್ ಬರೆಯುವಾಗ ಬಾಲ್ ಪೆನ್ ಬಳಸಿ. ಒಂದು ವೇಳೆ ಇಂಕ್ ಪೆನ್ನು ಅಥವಾ ಬೇರೆ ರೀತಿಯ ಪೆನ್ನು ಬಳಸಿದಾಗ ಆ ಅಕ್ಷರಗಳನ್ನು ಅಳಿಸಲು ಸಾಧ್ಯವಾಗಬಹುದು, ಇದರಿಂದ ಚೆಕ್ ಮತ್ತೆ ದುರುಪಯೋಗ ಆಗಬಹುದು.. ಹಾಗಾಗಿ ಶಾಶ್ವತವಾಗಿ ಅಕ್ಷರಗಳು ಅಳಿಸಿ ಹೋಗದಂತೆ ಇರುವ ಪೆನ್ ನಲ್ಲಿಯೇ ಚೆಕ್ ಬರೆಯಬೇಕು.

ಮನೆ ಬಾಡಿಗೆಗೆ ನೀಡಿರುವ ಮಾಲೀಕರಿಗೆ ಮಹತ್ವದ ಮಾಹಿತಿ! ಇಲ್ಲಿವೆ ಹೊಸ ನಿಯಮಗಳು

ಪೋಸ್ಟ್ ಡೇಟಿಂಗ್ ಚೆಕ್ ಕೊಡುವುದು! (Don’t give post dated cheque)

ಈ ಕೆಲಸವನ್ನು ತಪ್ಪಿಯೂ ಮಾಡಬೇಡಿ, ಕೆಲವು ಬ್ಯಾಂಕುಗಳು ಪೋಸ್ಟ್ ಡೇಟಿಂಗ್ ಚೆಕ್ ಸ್ವೀಕರಿಸುವುದು ಇಲ್ಲ. ನೀವು ಚೆಕ್ ನಲ್ಲಿ ತಪ್ಪಾದ ದಿನಾಂಕ ತಿಂಗಳು ಅಥವಾ ವರ್ಷವನ್ನು ನಮೂದಿಸಿದರೆ ಅದು ಬೌನ್ಸ್ ಆಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಪೋಸ್ಟ್ ಚೆಕ್ ಕೊಡಬೇಡಿ.

ಚೆಕ್ ನಂಬರ್ ನೆನಪಿಡಿ! (Remember the cheque number)

ಸಾಮಾನ್ಯವಾಗಿ ಚೆಕ್ ನ ನಂಬರ್ ಒಂದು ಚೆಕ್ನಿಂದ ಇನ್ನೊಂದು ಚಕ್ ಗೆ ವಿಭಿನ್ನವಾಗಿಯೇ ಇರುತ್ತದೆ ಆದರೂ ಕೂಡ ಯಾವುದೇ ರೀತಿಯ ಸಮಸ್ಯೆಯನ್ನು ತಪ್ಪಿಸಲು ನೀವು ಚೆಕ್ ಬರೆದುಕೊಡುವಾಗ ಆ ಸಂಖ್ಯೆಯನ್ನು ನೆನಪಿಟ್ಟುಕೊಳ್ಳಿ. ಅಥವಾ ಚೆಕ್ ನಂಬರ್ ಅನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ.

ಯಾವುದೇ ಕಾರಣಕ್ಕೂ ತಪ್ಪಾದ ಚೆಕ್ ಸಂಖ್ಯೆಯಿಂದ ನಿಮ್ಮನ್ನು ವಿವಾದದಲ್ಲಿ ಯಾರಾದರೂ ಸಿಲುಕಿಸಲು ಪ್ರಯತ್ನಿಸಿದರೆ ಈ ಟ್ರಿಕ್ಸ್ ಉಪಯೋಗಕ್ಕೆ ಬರುತ್ತದೆ. ಈ ಎಲ್ಲಾ ಸಂಗತಿಗಳನ್ನು ಚೆಕ್ ಬರೆಯುವಾಗ ನೆನಪಿಟ್ಟುಕೊಳ್ಳಿ

ಇದರಿಂದ ಯಾವುದೇ ಸಮಸ್ಯೆ ಆಗುವುದನ್ನು ತಪ್ಪಿಸಿಕೊಳ್ಳಬಹುದು, ಯಾಕೆಂದರೆ ಚೆಕ್ ಬೌನ್ಸ್ ಎನ್ನುವುದು ಬಹಳ ದೊಡ್ಡ ಪ್ರಕರಣವಾಗಿದ್ದು, ಇಂತಹ ಕೇಸ್ನಲ್ಲಿ ಜೈಲು ಶಿಕ್ಷೆ ಹಾಗೂ ಅಪಾರ ಪ್ರಮಾಣದ ದಂಡ ಪಾವತಿಸಬೇಕಾಗುತ್ತದೆ.

Penalty if these mistakes are made while doing bank Cheque transactions

Follow us On

FaceBook Google News

Penalty if these mistakes are made while doing bank Cheque transactions