ಪಿಂಚಣಿ ಪಡೆಯೋಕೆ ರೇಷನ್ ಕಾರ್ಡ್ ಲಿಂಕ್ ಮಾಡಬೇಕು; ಕಾರ್ಡ್ ಇಲ್ಲದವರಿಗೆ ಸಮಸ್ಯೆ

30 ಸಾವಿರ ರೂ. ವಾರ್ಷಿಕ ಆದಾಯ ಇದ್ದರಿಗೆ ಮಾತ್ರ ಪಿಂಚಣಿ ಯೋಜನೆ (Pension Scheme) ಲಾಭ ಸಿಗುತ್ತದೆ. ಇದರಿಂದ ಜನರು ಗೊಂದಲಕ್ಕೆ ಒಳಗಾಗಿದ್ದಾರೆ.

Pension Scheme : ಕುಟುಂಬದ ವಾರ್ಷಿಕ ಆದಾಯ (yearly income) 32 ಸಾವಿರ ರೂ. ಮೀರಿದವರು ಪಿಂಚಣಿಗಾಗಿ ಅರ್ಜಿ ಸಲ್ಲಿಸಿದರೆ (application for pension) ಅದನ್ನು ತಿರಸ್ಕರಿಸುವ ಹಕ್ಕನ್ನು ಸಾಮಾಜಿಕ ಭದ್ರತೆ ಹಾಗೂ ಪಿಂಚಣಿಗಳ ನಿರ್ದೇಶನಾಲಯವೂ ಹೊಂದಿದೆ.

ಈ ಹಿಂದೆ 60 ವರ್ಷ ಮೇಲ್ಪಟ್ಟವರು, ವಿಧವೆಯರು ಮಾತ್ರ ನಾಡಕಚೇರಿಯಲ್ಲಿ ಪಿಂಚಣಿಗಾಗಿ ಅರ್ಜಿ ಸಲ್ಲಿಸುತ್ತಿದ್ದರು. ಈಗ ಸಂಧ್ಯಾ ಸುರಕ್ಷಾ ಯೋಜನೆ ಅಡಿಯಲ್ಲಿ ವಯಸ್ಸಿನ ದೃಢೀಕರಣ ಹಾಗೂ ವಿಧವಾ ವೇತನಕ್ಕೆ ಅರ್ಜಿದಾರರು ಪತಿಯ ಮರಣ ಪ್ರಮಾಣಪತ್ರವನ್ನು ಸಲ್ಲಿಸಬೇಕು.

ಈ ಎರಡು ಪಿಂಚಣಿ ಸೌಲಭ್ಯ ಬೇಕಾದವರು ಪಡಿತರ ಚೀಟಿಯನ್ನು (Ration Card) ಸಹ ಸಲ್ಲಿಸಬೇಕಾಗಿತ್ತು. ಈಗ ಈ ಎಲ್ಲ ದಾಖಲೆಗಳ ಜೊತೆ ಆಧಾರ್ ಕಾರ್ಡ್ (Aadhaar Card) ನಕಲನ್ನು ಸಹ ಸಲ್ಲಿಸಬೇಕಾಗಿದೆ.

ಪಿಂಚಣಿ ಪಡೆಯೋಕೆ ರೇಷನ್ ಕಾರ್ಡ್ ಲಿಂಕ್ ಮಾಡಬೇಕು; ಕಾರ್ಡ್ ಇಲ್ಲದವರಿಗೆ ಸಮಸ್ಯೆ - Kannada News

ಸಿಹಿ ಸುದ್ದಿ! ಕೃಷಿ ಭಾಗ್ಯ ಯೋಜನೆಯ ಹಣ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನ

ಈಗ ಆಧಾರ್ ಕಾರ್ಡ್ (Aadhaar Card), ಪಾನ್ ಕಾರ್ಡ್ (Pan Card) ಜೊತೆ ಲಿಂಕ್ ಆಗಿರುವುದರಿಂದ ಅರ್ಜಿದಾರರ ಆದಾಯ ಎಷ್ಟು ಎನ್ನುವದನ್ನು ಸುಲಭವಾಗಿ ಕಂಡುಹಿಡಿಯಬಹುದಾಗಿದೆ.

ಹೀಗೆ ಹೆಚ್ಚುವರಿ ಆದಾಯ ಇದ್ದೂ ಅರ್ಜಿ ಸಲ್ಲಿಸಿದರೆ ಅಂತಹವರ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ವೃದ್ದಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಹೀಗೆ ಹಲವು ಯೋಜನೆಯಡಿ ಸುಮಾರು 70 ಲಕ್ಷ ಫಲಾನುಭವಿಗಳು ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಅನ್ನಭಾಗ್ಯ, ಗೃಹ ಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಹೀಗೆ ನಾಲ್ಕು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಸರ್ಕಾರಿ ಸೇವೆಗಳಿಗೆ ದಿನಕ್ಕೊಂದು ನಿಯಮಗಳನ್ನು ಜಾರಿ ಮಾಡಲಾಗುತ್ತಿದೆ.

ಎಲ್ಲಾ ಗ್ರಾಮ ಪಂಚಾಯಿತಿ ಖಾಲಿ ಹುದ್ದೆಗಳಿಗೆ ನೇಮಕಾತಿ, ಕೈತುಂಬಾ ಸಂಬಳ! ಅಪ್ಲೈ ಮಾಡಿ

Pension Schemeಈ ವರೆಗೆ 60 ವರ್ಷ ಮೇಲ್ಪಟ್ಟ ಎಲ್ಲರೂ ಸಂಧ್ಯಾ ಸುರಕ್ಷಾ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಪಿಂಚಣಿ ಪಡೆಯಬಹುದಿತ್ತು. ಪಡಿತರ ಚೀಟಿ ಹಾಗೂ ಪಿಂಚಣಿ ಎರಡುನ್ನು ಲಿಂಕ್ ಮಾಡಿರುವುದು ಈಗ ತೊಂದರೆ ತಂದಿಟ್ಟಿದೆ. ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ.ಗಳಿಂತ ಕಡಿಮೆ ಇದ್ದವರು ಬಿಪಿಎಲ್ ಪಡಿತರ ಚೀಟಿ ಹೊಂದಿರುತ್ತಾರೆ.

ಇನ್ನೂ ಗ್ರಹಲಕ್ಷ್ಮಿ ಹಣ ಪಡೆಯದವರಿಗಾಗಿ ಹೊಸ ಮಾರ್ಗಸೂಚಿ ಪ್ರಕಟ! ಇಲ್ಲಿದೆ ಮಾಹಿತಿ

ಆದರೆ 30 ಸಾವಿರ ರೂ. ವಾರ್ಷಿಕ ಆದಾಯ ಇದ್ದರಿಗೆ ಮಾತ್ರ ಪಿಂಚಣಿ ಯೋಜನೆ (Pension Scheme) ಲಾಭ ಸಿಗುತ್ತದೆ. ಇದರಿಂದ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಈ ರೀತಿ ಮಾಡಿದರೆ ನಾವು ಒಂದೋ ಪಿಂಚಣಿ ಯೋಜನೆಯನ್ನು ಬಿಡಬೇಕು, ಇಲ್ಲವೇ ಪಡಿತರ ಚೀಟಿಯನ್ನು ರದ್ದುಪಡಿಸಬೇಕಾಗುತ್ತದೆ. ಹಾಗಾಗಿ ಸರ್ಕಾರದ ಈ ನಿಯಮಕ್ಕೆ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ರಾಜ್ಯ ಸರ್ಕಾರ ನೀಡುವ ಎಲ್ಲ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ನಕಲು ಪ್ರತಿ ನೀಡುವುದು ಕಡ್ಡಾಯ ಮಾಡಲಾಗಿದೆ. ಹೀಗಾಗಿ ಸುಳ್ಳು ಮಾಹಿತಿ ನೀಡಿ ಪಿಂಚಣಿ ಪಡೆಯಲು ಸಾಧ್ಯವಾಗುವುದಿಲ್ಲ.

ವಾರ್ಷಿಕ 30 ಸಾವಿರ ರೂ. ಮೇಲ್ಪಟ್ಟು ಆದಾಯ ಇದ್ದವರು ಪಿಂಚಣಿಗಾಗಿ ಅರ್ಜಿ ಸಲ್ಲಿಸಿದರೆ ಅವರ ಅರ್ಜಿ ತಿರಸ್ಕಾರ ಗೊಳ್ಳಲಿದೆ ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದ ಜಂಟಿ ನಿರ್ದೇಶಕರಾದ ಸವಿತಾ ಅವರು ತಿಳಿಸಿದ್ದಾರೆ.

ರೇಷನ್ ಕಾರ್ಡ್ ಅಕ್ರಮ ತಡೆಯಲು ಮಾಸ್ಟರ್ ಪ್ಲಾನ್! ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್

Ration card must be linked to get pension, problem for those who dont have card

Follow us On

FaceBook Google News

Ration card must be linked to get pension, problem for those who dont have card