ನಿಮ್ಮ ಬಿಡುವಿನ ವೇಳೆ ಕುಳಿತಲ್ಲೇ ಸುಲಭವಾಗಿ ಗಳಿಸಬಹುದು 7 ಲಕ್ಷ ಆದಾಯ! ಯಾವ ಬ್ಯುಸಿನೆಸ್ ಗೊತ್ತಾ?
ಈ ಉದ್ಯೋಗ ಆರಂಭಿಸಲು ಸುಮಾರು 15.6 ಲಕ್ಷ ರೂಪಾಯಿಗಳು ಬೇಕು, ಆದರೆ ನೀವು ಅವಧಿಗೆ ತಕ್ಕಹಾಗೆ 5.17 ಲಕ್ಷ ರೂಪಾಯಿಗಳನ್ನು ಸಾಲ (Business Loan) ಪಡೆಯುತ್ತೀರಿ.
ನಿತ್ಯವೂ ಒಂದೇ ರೀತಿಯ ಕೆಲಸ ಮಾಡಿ ಮಾಡಿ ಬೇಸರವಾಗಿದ್ಯಾ? ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದನೆ ಮಾಡುವುದಕ್ಕೆ ಬಯಸುತ್ತೀರಾ? ಉದ್ಯೋಗ ಬಿಟ್ಟು ಉದ್ದಿಮೆ ಮಾಡಿದ್ರೆ (Start Own Business) ಬೆಸ್ಟ್ ಅಂತ ನಿಮಗೂ ಅನ್ನಿಸುತ್ತಿದೆಯಾ?
ಹಾಗಾದ್ರೆ ಚಿಂತೆ ಬೇಡ ನಿಮಗೋಸ್ಕರ ಅತಿ ಕಡಿಮೆ ಹೂಡಿಕೆ ಮಾಡಿ ಕೈ ತುಂಬಾ ಹಣ ಗಳಿಸುವಂತಹ ಸೂಪರ್ ಡೂಪರ್ ಬ್ಯುಸಿನೆಸ್ ಐಡಿಯಾ (Business Idea) ಜೊತೆಗೆ ನಾವು ಬಂದಿದ್ದೇವೆ ನೀವು ಈ ಲೇಖನ ಓದಿದ್ರೆ ನಿಮಗೆ ಈ ಬ್ಯುಸಿನೆಸ್ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತೆ.
ನಿಮಗೆಲ್ಲಾ ಗೊತ್ತಿರುವ ಹಾಗೆ ಪ್ಲಾಸ್ಟಿಕ್ ಕವರ್ (Plastic Cover) ಗಳನ್ನು ಈಗ ಬಳಸುವಂತಿಲ್ಲ, ಬಹುತೇಕ ಎಲ್ಲಾ ಕಡೆ ಪ್ಲಾಸ್ಟಿಕ್ ಚೀಲ ಮಾರಾಟವನ್ನು ನಿಷೇಧ ಮಾಡಲಾಗಿದೆ. ಹಾಗಾಗಿ ಅದು ಪರಿಸರಕ್ಕೂ ಕೂಡ ಬಹಳ ಹಾನಿ ಉಂಟು ಮಾಡುತ್ತದೆ.
ಸುಲಭವಾಗಿ ನೀವೇ ಎಟಿಎಂ ಪ್ರಾಂಚೈಸಿ ಆರಂಭಿಸಿ, ತಿಂಗಳಿಗೆ ಗಳಿಸಿ 90 ಸಾವಿರ ರೂಪಾಯಿ
ಇದೇ ಕಾರಣಕ್ಕೆ ಸರ್ಕಾರವು ಕೂಡ ಈ ಬಗ್ಗೆ ಹೆಚ್ಚಿನ ಗಮನಹರಿಸಿತು, ಯಾವುದೇ ಅಂಗಡಿಗಳಲ್ಲಿಯೂ ಕೂಡ ಪ್ಲಾಸ್ಟಿಕ್ ಕವರ್ ಮಾರಾಟ ಮಾಡಬಾರದು ಅಥವಾ ಪಾರ್ಸೆಲ್ ಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಕೊಡಬಾರದು ಎಂದು ತಾಕೀತು ಮಾಡಿದೆ.
ಇದೇ ನಿಮಗೆ ಇರುವ ಸುವರ್ಣ ಅವಕಾಶ ಆಗಿದೆ, ಹಾಗಾಗಿ ಕಾಗದ ಚೀಲಗಳನ್ನು ಬಳಸುವುದು ಜನರಿಗೆ ಅನಿವಾರ್ಯವಾಗಿದೆ. ನೀವು ಸುಲಭವಾಗಿ ಪೇಪರ್ ಚೀಲವನ್ನು ತಯಾರಿಸಿ ಬೇಕಾದಷ್ಟು ಹಣ ಸಂಪಾದಿಸುವುದಕ್ಕೆ ಅವಕಾಶವಿದೆ.
ಮರುಬಳಕೆ ಮಾಡಬಹುದಾದ ಕಾಗದದ ಚೀಲಗಳ ಬ್ಯುಸಿನೆಸ್
ಚೀಲಗಳು ಪ್ರತಿಶತ ನೂರರಷ್ಟು ಮರುಬಳಕೆ ಮಾಡಬಹುದು, ಅಲ್ಲದೆ ಅದು ಜೈವಿಕ ವಿಘಟಕವೂ (Biodegradable) ಕೂಡ ಹೌದು. ಹಾಗಾಗಿ ನೀವು ಕಾಗದದ ಚೀಲ ತಯಾರಿಸುವ ಬ್ಯುಸಿನೆಸ್ ಮಾಡಿದರೆ ಪರವಾನಿಗೆ ಪಡೆದುಕೊಳ್ಳುವುದು ಕೂಡ ಸುಲಭ ಜೊತೆಗೆ ಪರಿಸರಕ್ಕೂ ಕೂಡ ಹಾನಿಯಾಗುವುದಿಲ್ಲ.
ಸರ್ಕಾರದ ಮತ್ತೊಂದು ಯೋಜನೆ, ಕೇವಲ 20 ರೂಗಳನ್ನು ಜಮಾ ಮಾಡಿ 2 ಲಕ್ಷ ಪಡೆಯುವ ಅದ್ಭುತ ಸ್ಕೀಮ್
ಎಷ್ಟು ಹೂಡಿಕೆ ಮಾಡಬೇಕು (Investment)
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC) ಕಾಗದ ಚೀಲ ವ್ಯಾಪಾರ ಘಟಕದ ಹೂಡಿಕೆಯ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಈ ಉದ್ಯೋಗ ಆರಂಭಿಸಲು ಸುಮಾರು 15.6 ಲಕ್ಷ ರೂಪಾಯಿಗಳು ಬೇಕು, ಆದರೆ ನೀವು ಅವಧಿಗೆ ತಕ್ಕಹಾಗೆ 5.17 ಲಕ್ಷ ರೂಪಾಯಿಗಳನ್ನು ಸಾಲ (Business Loan) ಪಡೆಯುತ್ತೀರಿ.
KVIC ಮಾರ್ಜಿನ್ ಮೊತ್ತ ಪಡೆದುಕೊಂಡು ನೀವು ಒಟ್ಟಾರೆಯಾಗಿ ಹೂಡಿಕೆ ಮಾಡಬೇಕಾಗಿರುವುದು ಕೇವಲ 3.89 ಲಕ್ಷ ರೂಪಾಯಿಗಳು ಮಾತ್ರ.
ಇನ್ನು ಈ ಉದ್ಯಮ ಆರಂಭಿಸುವುದಕ್ಕೆ ನಿಮ್ಮ ಸ್ವಂತ ಸ್ಥಳವಿದ್ದರೆ ಒಳ್ಳೆಯದು ಅಥವಾ ಗುತ್ತಿಗೆಗೆ ಜಾಗ ಪಡೆದುಕೊಳ್ಳಬಹುದು. ಯಂತ್ರೋಪಕರಣಗಳಿಗೆ 6.49 ಲಕ್ಷಗಳು ಹಾಗೂ ಪೀಠೋಪಕರಣ ಮತ್ತು ಇತರ ಖರ್ಚು 40,000 ರೂ. ಕಾರ್ಯನಿರತ ಬಂಡವಾಳ 8.17 ಲಕ್ಷ… ಈ ಉದ್ದಿಮೆ ಆರಂಭಿಸಲು 15 ಲಕ್ಷ ರೂಪಾಯಿಗಳು ಬೇಕು.
ಬ್ಯಾಂಕ್ ಚೆಕ್ ಬುಕ್ ಇರುವ ಎಲ್ಲರಿಗೂ ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿಗೆ! ಹೊಸ ರೂಲ್ಸ್
ಸಿಬ್ಬಂದಿಗಳು ಬೇಕು
ಇನ್ನು ನೀವು ಸಣ್ಣ ಯೂನಿಟ್ ಸೆಟಪ್ ಮಾಡಿ ಸಣ್ಣ ಪ್ರಮಾಣದಲ್ಲಿ ಯಂತ್ರಗಳನ್ನು ಬಳಸಿ ಈ ಉದ್ಯಮವನ್ನು ಆರಂಭಿಸಬಹುದು, ಇದಕ್ಕೆ ಖರೀದಿಸುವ ಯಂತ್ರಗಳು 4.25 ಲಕ್ಷದಿಂದ 8.50 ಲಕ್ಷ ರೂಪಾಯಿಗಳ ವರೆಗೆ ಇರುತ್ತವೆ.
450ರಿಂದ 500 ಚದರ ಅಡಿ ಜಾಗ ಬೇಕು, ಜೊತೆಗೆ ಚೀಲ ತಯಾರು ಮಾಡುವುದಕ್ಕೆ ಕನಿಷ್ಠ ನಾಲ್ಕು ಸಿಬ್ಬಂದಿಗಳು ಬೇಕಾಗುತ್ತಾರೆ. ಅದೇ ರೀತಿ ಜಿಎಸ್‌ಟಿ ನೋಂದಣಿ (GST Registration) ಮಾಲಿನ್ಯ ಪ್ರಮಾಣ ಪತ್ರ ಮೊದಲಾದ ಪರವಾನಿಗೆಗಳು ಕೂಡ ಕಡ್ಡಾಯ.
ರಾತ್ರೋರಾತ್ರಿ ಚಿನ್ನದ ಬೆಲೆ ಕುಸಿತ! ಬೆಳಗಾಗುವಷ್ಟರಲ್ಲಿ ಚಿನ್ನದ ಅಂಗಡಿ ಮುಂದೆ ಜಮಾಯಿಸಿದ ಜನ
ಎಷ್ಟು ಬರುತ್ತೆ ಗೊತ್ತಾ ಆದಾಯ
ಖಾದಿ ಮತ್ತು ಗ್ರಾಮೋದ್ಯೋಗ ನಿಗಮದ ಪ್ರಕಾರ ಈ ಉದ್ಯಮವನ್ನು ಆರಂಭಿಸಿದ ಮೊದಲ ವರ್ಷದಿಂದ ಆರು ವರ್ಷಗಳಲ್ಲಿ, 2.28 ಲಕ್ಷ ರೂಪಾಯಿಗಳಿಂದ ಏಳು ಲಕ್ಷ ರೂಪಾಯಿಗಳ ವರೆಗೂ ಆಗಬಹುದು.
ಎರಡನೇ ವರ್ಷದಲ್ಲಿ 3.56 ಲಕ್ಷ ಮೂರನೇ ವರ್ಷದಲ್ಲಿ 4.17 ಲಕ್ಷ 4ನೇ ವರ್ಷದಲ್ಲಿ 4.92 ಲಕ್ಷ 5ನೇ ವರ್ಷದಲ್ಲಿ 5.67 ಲಕ್ಷ ಹಾಗೂ 6ನೇ ವರ್ಷದಲ್ಲಿ 7.2 ಲಕ್ಷ ರೂಪಾಯಿಗಳನ್ನು ಗಳಿಸಬಹುದು.
ಹೀಗೆ ವರ್ಷದಿಂದ ವರ್ಷಕ್ಕೆ ಈ ಉದ್ದಿಮೆಯಿಂದ ಬೆಳವಣಿಗೆ ಕಂಡುಕೊಳ್ಳಬಹುದು. ಈ ಮೇಲೆ ಹೇಳಿರುವ ಗಳಿಕೆ ಒಂದು ಅಂದಾಜು ಅಷ್ಟೇ. ನೀವು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಎಫರ್ಟ್ ಹಾಕಿ ಈ ಉದ್ದಿಮೆ ಮಾಡುವುದಾದರೆ ಹೆಚ್ಚಿನ ಲಾಭ ಕೂಡ ಪಡೆದುಕೊಳ್ಳಬಹುದು.
7 lakh income can be easily earned while sitting in spare time
Follow us On
Google News |