Business News

ಈ ಪೋಸ್ಟ್ ಆಫೀಸ್ ಹೂಡಿಕೆಯಲ್ಲಿ ಸಿಗುತ್ತೆ ಪ್ರತಿ ತಿಂಗಳು 9250 ರೂಪಾಯಿ; ಇಂದೇ ಆರಂಭಿಸಿ

Post Office Scheme : ಪ್ರತಿಯೊಬ್ಬ ವ್ಯಕ್ತಿಯು ದುಡಿಯುವುದು (work) ತನ್ನ ಜೀವನ ಕಟ್ಟಿಕೊಳ್ಳುವುದಕ್ಕಾಗಿ, ತನ್ನ ಕುಟುಂಬದವರಿಗಾಗಿ. ಹೀಗೆ ಜೀವನ ಕಟ್ಟಿಕೊಳ್ಳಬೇಕು ಎಂದರೆ ಭವಿಷ್ಯದ ಚಿಂತೆಯು (future plans) ಇರಬೇಕು.

ಅದಕ್ಕಾಗಿಯೇ ಹಲವರು ಹಲವು ಖಾಸಗಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಇನ್ನು ಕೆಲವರು ಜಮೀನಿನ ಮೇಲೆ ಹೂಡಿಕೆ (investment) ಮಾಡುತ್ತಾರೆ. ಆದರೆ ಎಲ್ಲ ಖಾಸಗಿ ಸಂಸ್ಥೆ (private companies) ಗಳನ್ನು ನಂಬಲು ಸಾಧ್ಯವಾಗುವುದಿಲ್ಲ.

how much interest will get for 10,000 rupees fixed Deposit for 5 years at the post office

37 ವರ್ಷಗಳ ಹಿಂದೆ ಬುಲೆಟ್ ಬೈಕ್ ಬೆಲೆ ಎಷ್ಟಿತ್ತು ಗೊತ್ತಾ? ಇಲ್ಲಿದೆ ವೈರಲ್ ಆದ ಹಳೆಯ ಬಿಲ್

ಹಾಗಾಗಿ ಹೆಚ್ಚಿನ ಜನರು ಅಂಚೆ ಕಚೇರಿ (post office) ಯಲ್ಲಿ ಹೂಡಿಕೆ ಮಾಡಲು ಇಷ್ಟ ಪಡುತ್ತಾರೆ. ಯಾಕೆಂದರೆ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದರೆ ನಮ್ಮ ಹಣದ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ. ಇದೀಗ ಅಂಚೆ ಇಲಾಖೆಯು ಹೊಸ ವರ್ಷಕ್ಕೆ ಹೊಸ ಉಳಿತಾಯ ಯೋಜನೆಯನ್ನು ಜಾರಿಗೆ ತಂದಿದೆ.

ಹಾಗಾದರೆ ಈ ಯೋಜನೆ ಏನು? ಇದರಲ್ಲಿ ಹೂಡಿಕೆ (investment) ಮಾಡಲು ಏನು ಮಾಡಬೇಕು ಎನ್ನುವ ಕುರಿತು ಈಗ ತಿಳಿದುಕೊಳ್ಳೊಣ.

ಅಂಚೆ ಕಚೇರಿಯ ಮಾಸಿಕ ಉಳಿತಾಯ ಯೋಜನೆ (post office monthly investment scheme) ಕುರಿತು ಈಗ ಸಾಕಷ್ಟು ಜನರು ಆಸಕ್ತಿ ವಹಿಸುತ್ತಿದ್ದಾರೆ. ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 9250 ರೂ. ಪಿಂಚಣಿ (Pension) ರೂಪದಲ್ಲಿ ಪಡೆದುಕೊಳ್ಳಬಹುದು. ಅಲ್ಲದೆ ಗಂಡ ಹೆಂಡತಿ ಇಬ್ಬರು ಜೊತೆಯಾಗಿ ಜಂಟಿ ಖಾತೆ ಬೇಕಾದರೂ ಆರಂಭಿಸಬಹುದಾಗಿದೆ.

ಸ್ವಂತ ಮನೆ ಕಟ್ಟಿಕೊಳ್ಳಲು ಮಹಿಳೆಯರಿಗೆ ಸಿಗಲಿದೆ ಕಡಿಮೆ ಬಡ್ಡಿಯಲ್ಲಿ ಹೋಂ ಲೋನ್

Post office Schemeಹಣದ ಅವಶ್ಯಕತೆ ಬಿದ್ದರೆ ಅವಧಿ ಮುನ್ನವೆ ಹಿಂಪಡೆಯಬಹುದು:

ನೀವು ಮಾಸಿಕ ಉಳಿತಾಯ ಯೋಜನೆ (POMIS) ಯಲ್ಲಿ ಒಮ್ಮೆ ಹೂಡಿಕೆ ಮಾಡಿದ ನಂತರ ಅದು ಮೆಚುರಿಟಿ ಬರುವ ಮುನ್ನವೇ ಆ ಹಣವನ್ನು ವಾಪಸ್ ಪಡೆಯಲು ಇಚ್ಚಿಸಿದರೆ ನಂತರ ಒಂದು ವರ್ಷದ ವರೆಗೆ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಒಂದು ವರ್ಷದ ನಂತರ ಬೇಕಾದರೆ ನೀವು ಹಣವನ್ನು ಹಿಂಪಡೆದುಕೊಳ್ಳಬಹುದು.

ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಗುಡ್ ನ್ಯೂಸ್, 38 ಸಾವಿರ ರಿಯಾಯಿತಿ!

ಆದರೆ ಈ ರೀತಿ ಹಣ ಹಿಂಪಡೆಯುವುದರಿಂದ ನಿಮಗೆ ನಷ್ಟವಾಗುತ್ತದೆ. ಯಾಕೆಂದರೆ ನಿಮಗೆ ಪೂರ್ಣ ಪ್ರಮಾಣದ ಹಣ ಸಿಗುವುದಿಲ್ಲ. ನೀವು ಎಷ್ಟು ಹಣ ಹೂಡಿಕೆ ಮಾಡಿರುತ್ತೀರೋ ಅದರಲ್ಲಿ ಸ್ವಲ್ಪ ಹಣವನ್ನು ದಂಡ (penalty) ವಾಗಿ ಕಡಿತಗೊಳಿಸಲಾಗುತ್ತದೆ.

ನೀವು ಹೂಡಿಕೆ ಮಾಡಲು ಪ್ರಾರಂಬಿಸಿ ಒಂದು ವರ್ಷದಿಂದ ಮೂರು ವರ್ಷದ ಒಳಗೆ ಹಣ ಹಿಂಪಡೆದರೆ ಶೇ. 2ರಷ್ಟು ಹಣವನ್ನು ದಂಡವಾಗಿ ಕಡಿತಗೊಳಿಸಲಾಗುತ್ತದೆ. ನೀವು ಮೂರು ವರ್ಷದಿಂದ ಐದು ವರ್ಷದ ಒಳಗೆ ಹಣ ವಾಪಸ್ ಪಡೆಯಲು ಇಚ್ಚಿಸಿದರೆ ಶೇ. 1ರಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ.

Post Officeಪ್ರತಿ ತಿಂಗಳು ಎಷ್ಟು ಆದಾಯ?

ಅಂಚೆ ಕಚೇರಿಯು ಜಾರಿಗೆ ತಂದಿರುವ ಮಾಸಿಕ ಉಳಿತಾಯ ಯೋಜನೆ ಅಡಿಯಲ್ಲಿ ನೀವು 9 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ ನಂತರ ಶೇ.7.4 ರಷ್ಟನ್ನು ಬಡ್ಡಿದರ (rate of interest) ದ ರೂಪದಲ್ಲಿ ನೀಡಲಾಗುತ್ತದೆ.

ಹಳೆಯ 100 ರೂಪಾಯಿ ನೋಟುಗಳು ರದ್ದು! ಏನಿದು ವೈರಲ್ ಸುದ್ದಿಯ ಸತ್ಯಾಂಶ

ಅಂದರೆ ಪ್ರತಿ ತಿಂಗಳು 5,5೦೦ ರೂ. ನಿಮಗೆ ಸಿಗಲಿದೆ. ಅದೇ ನೀವು 15 ಲಕ್ಷ ರೂ. ಹೂಡಿಕೆ ಮಾಡಿದಲ್ಲಿ ನಿಮಗೆ ಪ್ರತಿ ತಿಂಗಳು 9250 ರೂ. ಸಿಗಲಿದೆ. ಅಲ್ಲದೆ ನೀವು ಜಂಟಿ (joint account) ಯಾಗಿ ಹೂಡಿಕೆ ಮಾಡಿದಲ್ಲಿ ಇನ್ನು ಹೆಚ್ಚಿನ ಲಾಭ ಗಳಿಸಬಹುದು.

9250 rupees per month in this post office investment

Our Whatsapp Channel is Live Now 👇

Whatsapp Channel

Related Stories