9, 10 ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ ₹75,000 ಸ್ಕಾಲರ್ಶಿಪ್! ಸರ್ಕಾರದಿಂದ ಹೊಸ ಯೋಜನೆ
Education Scholarship : 9, 10, 11 ಮತ್ತು 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಒಂದು ಸೌಲಭ್ಯ ಸಿಗುತ್ತಿದೆ. ವಿದ್ಯಾರ್ಥಿಗಳು ಇದಕ್ಕೆ ಅಪ್ಲೈ ಮಾಡುವ ಮೂಲಕ ಈ ಒಂದು ಸೌಲಭ್ಯವನ್ನು ಪಡೆದುಕೊಳ್ಳಬಹುದು.
Education Scholarship : ಪಿಎಮ್ ನರೇಂದ್ರ ಮೋದಿ ಅವರು ಮೆರಿಟ್ ಪಡೆದಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಲವಾಗಿ ಪಿಎಮ್ ಯಶಸ್ವಿ ಸ್ಕಾಲರ್ಶಿಪ್ 2024 ಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಕಾಯ್ದಿರಿಸಿದ ವರ್ಗಗಳ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗಲಿದೆ, ಆದರೆ ವಿದ್ಯಾರ್ಥಿಗಳು ಮೆರಿಟ್ ನಲ್ಲಿ ಪಾಸ್ ಆಗಬೇಕು.
9, 10, 11 ಮತ್ತು 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಒಂದು ಸೌಲಭ್ಯ ಸಿಗುತ್ತಿದೆ. ವಿದ್ಯಾರ್ಥಿಗಳು (Students) ಇದಕ್ಕೆ ಅಪ್ಲೈ ಮಾಡುವ ಮೂಲಕ ಈ ಒಂದು ಸೌಲಭ್ಯವನ್ನು ಪಡೆದುಕೊಳ್ಳಬಹುದು.
ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಪಡೆಯುವುದಕ್ಕಾಗಿ ಈ ಒಂದು ಸ್ಕಾಲರ್ಶಿಪ್ ಅನ್ನು ಬಳಸಿಕೊಳ್ಳಬಹುದು. ಇದರಲ್ಲಿ 75 ಸಾವಿರ ಇಂದ 1.25 ಲಕ್ಷದವರೆಗೂ ಸ್ಕಾಲರ್ಶಿಪ್ ಲಭ್ಯವಿರುತ್ತದೆ. ಇದಕ್ಕಾಗಿ ಅರ್ಜಿ ಸಲ್ಲಿಕೆ ಜುಲೈ 11ರಿಂದ ಶುರುವಾಗಿದ್ದು, ಆಗಸ್ಟ್ 17 ಕೊನೆಯ ದಿನಾಂಕ ಆಗಿರುತ್ತದೆ.
yet.nta.ac.in ಈ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಸ್ಕಾಲರ್ಶಿಪ್ ಗೆ (Education Scholarship) ಅರ್ಜಿ ಸಲ್ಲಿಸಬಹುದು. ಸ್ಕಾಲರ್ಶಿಪ್ ಗೆ ಆಯ್ಕೆಯಾಗಲು ವಿದ್ಯಾರ್ಥಿಗಳು 2024ರ ಸೆಪ್ಟೆಂಬರ್ 29ರಂದು ನಡೆಯಲಿರುವ ಎಕ್ಸಾಂ ಅಟೆಂಡ್ ಮಾಡಬೇಕಾಗುತ್ತದೆ. ಈ ಸ್ಕಾಲರ್ಶಿಪ್ ಗೆ ಸಂಬಂಧಿಸಿದ ಹಾಗೆ ಪೂರ್ತಿ ಮಾಹಿತಿ ತಿಳಿಯೋಣ..
ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನದಲ್ಲಿ 10ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ? ನಿಜಕ್ಕೂ ನೀವು ನಂಬೋಲ್ಲ
ಪಿಎಮ್ ಯಶಸ್ವಿ ಸ್ಕಾಲರ್ಶಿಪ್ ನ ಅನುಕೂಲಗಳು:
*ಮುಂದಿನ ವಿದ್ಯಾಭ್ಯಾಸಕ್ಕಾಗಿ 15,000 ವಿದ್ಯಾರ್ಥಿಗಳಿಗೆ ಸರ್ಕಾರದ ಕಡೆಯಿಂದ ಸ್ಕಾಲರ್ಶಿಪ್ ಸಿಗಲಿದೆ.
*75 ಸಾವಿರ ಇಂದ 1.25 ಲಕ್ಷದವರೆಗಿನ ಸ್ಕಾಲರ್ಶಿಪ್ ಪಡೆಯಲು OBC, DNT, EBC ವರ್ಗದ ವಿದ್ಯಾರ್ಥಿಗಳು ಅರ್ಹತೆ ಪಡೆಯುತ್ತಾರೆ.
*ಶಿಕ್ಷಣಕ್ಕೆ ಹಣ ಮಾತ್ರವಲ್ಲ, ಇನ್ನು ಹಲವು ಪ್ರಯೋಜನಗಳು ಈ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತದೆ.
*ಸ್ಕಾಲರ್ಶಿಪ್ ಸಿಗಬೇಕು ಎಂದರೆ, ಸೆಪ್ಟೆಂಬರ್ ನಲ್ಲಿ ನಡೆಯುವ ಎಕ್ಸಾಂ ನಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಸ್ ಆಗಬೇಕು.
*ಪರೀಕ್ಷೆಯನ್ನು NTA ಅಧಿಕೃತಗೊಳಿಸಿದೆ, ಹಾಗಾಗಿ ಇಲ್ಲಿ ಎಲ್ಲವೂ ಪಾರದರ್ಶಕವಾಗಿ ನಡೆಯಲಿದೆ.
ಕೇವಲ ₹1000 ರೂಪಾಯಿ ಬಂಡವಾಳ ಹಾಕಿ ₹30 ಸಾವಿರ ಲಾಭ ಪಡೆಯೋ ಬ್ಯುಸಿನೆಸ್ ಇದು! ಟ್ರೈ ಮಾಡಿ
ಸ್ಕಾಲರ್ಶಿಪ್ ಪಡೆಯಲು ಮಾನದಂಡಗಳು:
*ಭಾರತದ ದೇಶದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು
*2024-25ನೇ ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳು ಮಿನಿಮಮ್ 8ನೇ ತರಗತಿಯಲ್ಲಿ ಓದುತ್ತಿದ್ದು, ಉತ್ತಮ ಅಂಕ ಗಳಿಸುವವರಾಗಿರಬೇಕು.
*ಮೇಲೆ ತಿಳಿಸಿರುವ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಮಾತ್ರ ಅಪ್ಲೈ ಮಾಡಬಹುದು..
*ವಿದ್ಯಾರ್ಥಿಯ ಫ್ಯಾಮಿಲಿ ವಾರ್ಷಿಕ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
*2024-25ನೇ ವರ್ಷದಲ್ಲಿ 9, 10, ಅಥವಾ 11ನೇ ತರಗತಿಯಲ್ಲಿ ಓದುತ್ತಿರಬೇಕು.
ಗ್ಯಾಸ್ ಸಿಲಿಂಡರ್, ಕ್ರೆಡಿಟ್ ಕಾರ್ಡ್, ಲೋನ್ ಇಎಂಐ ಸೇರಿದಂತೆ ಆಗಸ್ಟ್ 1ರಿಂದ ಹೊಸ ಹೊಸ ರೂಲ್ಸ್
ಸ್ಕಾಲರ್ಶಿಪ್ ಗೆ ರಿಜಿಸ್ಟರ್ ಮಾಡುವ ಪ್ರಕ್ರಿಯೆ:
*ಮೊದಲಿಗೆ ನೀವು yet.nta.ac.in ಈ ವೆಬ್ಸೈಟ್ ಗೆ ಭೇಟಿ ನೀಡಬೇಕು.
*ಹೋಮ್ ಪೇಜ್ ನಲ್ಲಿ ಪಿಎಮ್ ಯಶಸ್ವಿ ಯೋಜನೆಯ ನೋಂದಣಿ ಪ್ರಕ್ರಿಯೆ ಎನ್ನುವ ಆಪ್ಶನ್ ಕಾಣುತ್ತದೆ, ಅದನ್ನು ಸೆಲೆಕ್ಟ್ ಮಾಡಿ
*ಇಲ್ಲಿ ಹೊಸ ಅಭ್ಯರ್ಥಿಗಳು ಅಪ್ಲೈ ಮಾಡಿ, ಎನ್ನುವ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿ
*ಈಗ ನಿಮ್ಮ ಪರ್ಸನಲ್ ಹಾಗೂ ಇನ್ನಿತರ ಮಾಹಿತಿಗಳನ್ನು ತಪ್ಪಿಲ್ಲದೇ ಎಂಟರ್ ಮಾಡಿ
*ಫಾರ್ಮ್ ಫಿಲ್ ಮಾಡಿದ ನಂತರ Submit ಬಟನ್ ಕ್ಲಿಕ್ ಮಾಡಿ, ಈಗ ನಿಮ್ಮ ಫೋನ್ ಗೆ OTP ಬರುತ್ತದೆ.
*ನಂತರ OTP ಹಾಕಿ, ಈಗ ಅಪ್ಲಿಕೇಶನ್ ಪ್ರಕ್ರಿಯೆ ಮುಗಿಯುತ್ತದೆ.
ಇಲ್ಲಿ ಸಿಗುವ ಲಾಗಿನ್ ಐಡಿ, ಪಾಸ್ವರ್ಡ್ ಬಳಸಿ, ಅಪ್ಲಿಕೇಶನ್ ಚೆಕ್ ಮಾಡಬಹುದು.
9th, 10th and PUC students will get 75,000 Education scholarship, New scheme from Govt