ನಿಮ್ಮ ಡ್ರೈವಿಂಗ್ ಲೈಸೆನ್ಸ್ ಗೂ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು! ಇಲ್ಲಿದೆ ಸುಲಭ ವಿಧಾನ

ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳುವ (Aadhar Card link) ಪ್ರಕ್ರಿಯೆ ಕೇವಲ ಬ್ಯಾಂಕ್ ಖಾತೆಗೆ ಮಾತ್ರವಲ್ಲ ನಿಮ್ಮ ಬಳಿ ಇರುವ ಚಾಲನ ಪರವಾನಿಗೆಯ (driving licence) ಜೊತೆಗೆ ಕೂಡ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದು ಕಡ್ಡಾಯ.

ದೇಶದಲ್ಲಿ ನೀವು ಯಾವುದೇ ವಾಹನವನ್ನು (vehicle) ತೆಗೆದುಕೊಂಡು ರಸ್ತೆಗೆ ಇಳಿಯುತ್ತೀರಿ ಎಂದಾದರೆ ನಿಮ್ಮ ಬಳಿ ಪರವಾನಿಗೆ ಪತ್ರ ಇರಲೇಬೇಕು. ಚಾಲನಾ ಪರವಾನಗಿ ಪತ್ರ (driving licence-DL) ನಿಮ್ಮ ಬಳಿ ಇಲ್ಲದಿದ್ದರೆ ನೀವು ವಾಹನ ಚಲಾಯಿಸುವಂತಿಲ್ಲ

ಆ ನಿಯಮ ಮೀರಿ ವಾಹನ ಚಲಾಯಿಸಿ ಪೊಲೀಸರ (police) ಕೈಗೆ ಸಿಕ್ಕಿ ಬಿದ್ದರೆ ಮುಂದೆಂದೂ ಚಾಲನಾ ಪರವಾನಗಿ ಸಿಗದೇ ಇರುವಂತೆ ಬ್ಲಾಕ್ಮಾರ್ಕ್ ಆಗುವ ಸಾಧ್ಯತೆ ಇದೆ.

ಈ ಬ್ಯಾಂಕುಗಳಲ್ಲಿ ಖಾತೆ ಇದ್ದವರಿಗೆ ಗುಡ್ ನ್ಯೂಸ್! ಇನ್ಮುಂದೆ ಈ ಸೌಲಭ್ಯಕ್ಕೆ ಯಾವುದೇ ಶುಲ್ಕ ಇಲ್ಲ

ನಿಮ್ಮ ಡ್ರೈವಿಂಗ್ ಲೈಸೆನ್ಸ್ ಗೂ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು! ಇಲ್ಲಿದೆ ಸುಲಭ ವಿಧಾನ - Kannada News

ಇನ್ನು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳುವ (Aadhar Card link) ಪ್ರಕ್ರಿಯೆ ಕೇವಲ ಬ್ಯಾಂಕ್ ಖಾತೆಗೆ ಮಾತ್ರವಲ್ಲ ನಿಮ್ಮ ಬಳಿ ಇರುವ ಚಾಲನ ಪರವಾನಿಗೆಯ (driving licence) ಜೊತೆಗೆ ಕೂಡ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದು ಕಡ್ಡಾಯ.

ಈ ಎರಡು ವಿಷಯಗಳ ಲಿಂಕ್ ಆಗಿದ್ದರೆ ನಿಮ್ಮ ವೈಯಕ್ತಿಕ ಮಾಹಿತಿಗಳು ಸುಲಭವಾಗಿ ಆನ್ಲೈನ್ (online) ನಲ್ಲಿಯೇ ಸಿಗುತ್ತದೆ ಎನ್ನಬಹುದು.

ಆಧಾರ್ ಕಾರ್ಡ್ ಲಿಂಕ್ online ನಲ್ಲೆ ಮಾಡಿಕೊಳ್ಳಿ

Aadhaar Card Link with Driving Licenceನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಜೊತೆಗೆ ನಿಮ್ಮ ಆಧಾರ್ ಸಂಖ್ಯೆಯನ್ನು ಆನ್ಲೈನ್ (online) ಅಥವಾ ಆಫ್ ಲೈನ್ (offline) ಮೂಲಕ ಮಾಡಿಕೊಳ್ಳಬಹುದಾಗಿದೆ, ಆನ್ಲೈನ್ ನಲ್ಲಿ ನಿಮ್ಮ ಲೈಸೆನ್ಸ್ ಜೊತೆಗೆ ಆಧಾರ್ ಲಿಂಕ್ ಮಾಡುವುದು ಹೇಗೆ ನೋಡೋಣ!

ಮೊದಲಿಗೆ ಡ್ರೈವಿಂಗ್ ಲೈಸೆನ್ಸ್ ನೀಡುವ ರಸ್ತೆ ಸಾರಿಗೆ ಅಧಿಕೃತ ವೆಬ್ಸೈಟ್ (official website) ತೆರೆಯಿರಿ. ನಂತರ ಅದರಲ್ಲಿ ಆಧಾರ್ ಲಿಂಕ್ “Aadhaar link” ಎನ್ನುವ ಆಯ್ಕೆಯನ್ನು ಮುಖಪುಟದಲ್ಲಿ ಆಯ್ದುಕೊಳ್ಳಿ.

ನಂತರ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಹಾಗೂ ಆಧಾರ್ ಕಾರ್ಡ್ ವಿವರಗಳನ್ನು ನೀಡಿ ಲಿಂಕ್ ಮಾಡಬಹುದು. ಸಬ್ಮಿಟ್ (submit) ಎಂದು ಕೊಟ್ಟ ತಕ್ಷಣ ನಿಮ್ಮ ಮೊಬೈಲ್ಗೆ ಒಂದು ಓಟಿಪಿ ಬರುತ್ತದೆ. ಅದನ್ನು ನೀವು ನಮೂದಿಸಿದರೆ ನಿಮ್ಮ ಆಧಾರ್ ಕಾರ್ಡ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಲಿಂಕ್ ಆಗಿದೆ ಎನ್ನುವ ಸಂದೇಶವನ್ನು ಸ್ವೀಕರಿಸುತ್ತೀರಿ.

ಹೀಗೆ ಲಿಂಕ್ ಮಾಡುವಾಗ ಆಧಾರ್ ಸಂಖ್ಯೆ ಡ್ರೈವಿಂಗ್ ಲೈಸೆನ್ಸ್ ಮಾಹಿತಿ ಯಾವುದೂ ಕೂಡ ತಪ್ಪಾಗದಂತೆ ನೋಡಿಕೊಳ್ಳಿ, ಒಂದು ವೇಳೆ ತಪ್ಪಾದರೆ ನೀವು ಮತ್ತೆ ಪುನಃ ಆರಂಭದಿಂದ ಲಿಂಕ್ ಪ್ರಕ್ರಿಯೆಯನ್ನು ಮಾಡಬೇಕು.

ಕೇವಲ ₹16 ಸಾವಿರಕ್ಕೆ ಮಾರಾಟಕ್ಕಿದೆ ಹೀರೊ ಬೈಕ್, ಸಿಂಗಲ್ ಓನರ್, 70Km ಮೈಲೇಜ್

ಆಫ್ಲೈನ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ಜೊತೆಗೆ ಆಧಾರ್ ಲಿಂಕ್ ಮಾಡುವುದು ಹೇಗೆ!

ಇದಕ್ಕೆ ನೀವು ಮೊದಲನೆಯದಾಗಿ ನೀವು ಎಲ್ಲಿ ಡ್ರೈವಿಂಗ್ ಲೈಸೆನ್ಸ್ ಸ್ವೀಕರಿಸಿದ್ದೀರೋ ಅದೇ ಆರ್ ಟಿ ಓ (RTO office) ಆಫೀಸ್ ಗೆ ಹೋಗಬೇಕು. ಅಲ್ಲಿ ಡ್ರೈವಿಂಗ್ ಲೈಸೆನ್ಸ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಒಂದು ಅರ್ಜಿ ನಮೂನೆಯನ್ನು (application form) ಪಡೆದುಕೊಂಡು ಅದರಲ್ಲಿ ಕೇಳಲಾದ ಎಲ್ಲಾ ದಾಖಲೆಗಳನ್ನು ಸರಿಯಾಗಿ ಓದಿ ನಮೂದಿಸಿ.

ಯಾವುದೇ ಕಾರಣಕ್ಕೂ ಆಧಾರ ಸಂಖ್ಯೆ ಹಾಗೂ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಮಾಹಿತಿ ತಪ್ಪಾಗದಂತೆ ಎಚ್ಚರಿಕೆವಹಿಸಿ. ಲಿಂಕ್ ಮಾಡುವಾಗ ನಿಮ್ಮ ಆಧಾರ್ ಕಾರ್ಡ್ ಪ್ರತಿ, ಡ್ರೈವಿಂಗ್ ಲೈಸೆನ್ಸ್ ನ ಸ್ವಯಂ ದೃಢೀಕರಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.

ನೀವು ಭರ್ತಿ ಮಾಡಿರುವ ಫಾರಂ ತೆಗೆದುಕೊಂಡು ಆರ್ ಟಿ ಓ ಪರಿಶೀಲನೆ ನಡೆಸುತ್ತಿದೆ. ಪರಿಶೀಲನೆಯ ನಂತರ ಡ್ರೈವಿಂಗ್ ಲೈಸೆನ್ಸ್ ಹಾಗೂ ಆಧಾರ್ ಲಿಂಕ್ ಮಾಡಲಾಗುತ್ತದೆ. ಲಿಂಕ್ ಆದ ಮಾಹಿತಿಯನ್ನು ನೀವು ಎಸ್ಎಂಎಸ್ (SMS) ಮೂಲಕ ಸ್ವೀಕರಿಸಬಹುದು. ನಿಮ್ಮ ಡ್ರೈವಿಂಗ್ ಲೈಸೆನ್ಸ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ.

ಈ ಬ್ಯಾಂಕ್‌ಗಳಲ್ಲಿ ಹೋಮ್ ಲೋನ್ ಹಾಗೂ ಕಾರ್ ಲೋನ್ ಮೇಲೆ ದೀಪಾವಳಿ ಕೊಡುಗೆಗಳು

Aadhaar card should be linked to your driving license, Here’s an easy way

Follow us On

FaceBook Google News

Aadhaar card should be linked to your driving license, Here's an easy way