ದೇಶದ ಎಲ್ಲಾ ರೈತರಿಗೂ ಸಿಗಲಿದೆ ಕಿಸಾನ್ ಕ್ರೆಡಿಟ್ ಕಾರ್ಡ್! ಸುಲಭ ಸಾಲ ಸೌಲಭ್ಯ

Story Highlights

Kisan Credit Card : ಕಿಸಾನ್ ಕ್ರೆಡಿಟ್ ಕಾರ್ಡ್ ರೈತರ ಬಳಿ ಇದ್ದರೆ ಕೇವಲ 2 ರಿಂದ 4% ಬಡ್ಡಿ ದರದಲ್ಲಿ ಸಾಲ ಸೌಲಭ್ಯ (Loan) ಪಡೆಯಬಹುದು

Kisan Credit Card : ರೈತರ ಅಭಿವೃದ್ಧಿ (farmers development) ಗಾಗಿ ಸದಾ ಶ್ರಮಿಸುವ ಸರ್ಕಾರ ಇದೀಗ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (National Agriculture and Rural development Bank) ಸಹಯೋಗದಲ್ಲಿ ರೈತರಿಗೆ ಅನುಕೂಲವಾಗುವಂತಹ ಮಹತ್ವದ ಯೋಜನೆ ಒಂದನ್ನು ಆರಂಭಿಸಿದೆ.

ಇದರಿಂದ ಪ್ರಯೋಜನ ಏನು? ಯಾರಿಗೆ ಲಾಭ ಆಗಲಿದೆ? ಎನ್ನುವುದರ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಕೇವಲ ₹600 ರೂಪಾಯಿಗೆ ಗ್ಯಾಸ್ ಸಿಲಿಂಡರ್! ಹೊಸ ಸಬ್ಸಿಡಿ ಪಟ್ಟಿ ಬಿಡುಗಡೆ

ಕಿಸಾನ್ ಕ್ರೆಡಿಟ್ ಕಾರ್ಡ್! (Kisan credit card)

ಹೆಸರು ಸೂಚಿಸುವಂತೆ ಇದು ಭಾರತದ ಕಿಸಾನ್ ಅಥವಾ ರೈತರಿಗಾಗಿಯೇ ಆರಂಭವಾಗಿರುವ ಯೋಜನೆ ಆಗಿದ್ದು, ರೈತರು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಅಗತ್ಯ ಇರುವ ಉಪಕರಣಗಳ ಖರೀದಿಗೆ ಹಾಗೂ ಬೆಳೆ ಬೆಳೆಯುವುದಕ್ಕೆ ಅಗತ್ಯ ಇರುವ ವಸ್ತು ಖರೀದಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸುಲಭ ಸಾಲ ಸೌಲಭ್ಯ (Loan) ಪಡೆಯಬಹುದು.

ಕಿಸಾನ್ ಕ್ರೆಡಿಟ್ ಕಾರ್ಡ್ ರೈತರ ಬಳಿ ಇದ್ದರೆ ಕೇವಲ 2 ರಿಂದ 4% ಬಡ್ಡಿ ದರದಲ್ಲಿ ಸಾಲ ಸೌಲಭ್ಯ (Loan) ಪಡೆಯಬಹುದು. ಅಷ್ಟೇ ಅಲ್ಲದೆ ಸರ್ಕಾರದಿಂದ ನೀಡಲ್ಪಡುವ ಬೆಳೆ ಸಾಲ, ರಸಗೊಬ್ಬರ ಸಾಲ, ಕೃಷಿ ಸಾಲ ಮೊದಲಾದ ಸಾಲ ಸೌಲಭ್ಯಗಳನ್ನು ಸುಲಭವಾಗಿ ತೆಗೆದುಕೊಳ್ಳಬಹುದು.

ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್ ಮೊದಲಾದ ದಾಖಲೆಗಳು ಎಷ್ಟು ಮುಖ್ಯವೋ ರೈತರು ಕೂಡ ತಮ್ಮನ್ನ ತಾವು ರೈತರು ಎಂದು ಘೋಷಿಸಿಕೊಳ್ಳಲು ಕಿಸಾನ್ ಕ್ರೆಡಿಟ್ ಕಾರ್ಡ್ ಕೂಡ ಅಷ್ಟೇ ಮಹತ್ವದ್ದಾಗಿರುತ್ತದೆ. ಕಿಸಾನ್ ಕ್ರೆಡಿಟ್ ವಿಶೇಷವಾಗಿ ಪರಿಶೀಲಿಸುವ ಅಗತ್ಯ ಇರುವುದಿಲ್ಲ. ಹಾಗೂ ಸುಲಭವಾಗಿ ಸಾಲವನ್ನು ಕೂಡ ಮಂಜೂರು ಮಾಡಬಹುದು.

ನಿಮಗೆ ಬ್ಯಾಂಕ್ ಲೋನ್ ಸಿಗುತ್ತೋ ಇಲ್ವೋ ಈ ರೀತಿ ಚೆಕ್ ಮಾಡಿಕೊಳ್ಳಿ

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಬೇಕಾಗಿರುವ ದಾಖಲೆಗಳು!

Kisan Credit Card ರೈತರ ಜಮೀನು ಅಥವಾ ಪಹಣಿ ಪತ್ರ
ಆದಾಯ ಪ್ರಮಾಣ ಪತ್ರ
ಆಧಾರ್ ಕಾರ್ಡ್
ರೇಷನ್ ಕಾರ್ಡ
ವಿಳಾಸದ ಪುರಾವೆ
ಮೊಬೈಲ್ ಸಂಖ್ಯೆ
ಮೊದಲಾದ ಬೇಸಿಕ್ ದಾಖಲೆಗಳನ್ನು ನೀಡಬೇಕಾಗುತ್ತದೆ.

ಮನೆ, ಆಸ್ತಿ, ಜಮೀನು ಖರೀದಿ ಮಾಡುವವರಿಗೆ ಕೇಂದ್ರ ಸರ್ಕಾರದ ಮಹತ್ವದ ಸೂಚನೆ

ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply for Kisan credit card)

ನೀವು ಆನ್ಲೈನ್ ಮೂಲಕ ಹಾಗೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಆನ್ಲೈನ್ ಮೂಲಕ ಪಡೆಯಲು, ನೀವು ಯಾವ ಬ್ಯಾಂಕ್ ನ ಗ್ರಾಹಕರಾಗಿದ್ದಿರೋ, ಅಥವಾ ಯಾವ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಳ್ಳಲು ಬಯಸುತ್ತೀರೋ ಆ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಅಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ನಂತರ ಸರಿಯಾದ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿ. ಬ್ಯಾಂಕ್ ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡುತ್ತದೆ ಹಾಗೂ ನೀವು ಅರ್ಹರಾಗಿದ್ದರೆ ನಿಮಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಿಗುತ್ತದೆ.

ಈ 2 ರೂಪಾಯಿ ಕಾಯಿನ್ ನಿಮ್ಮತ್ರ ಇದ್ರೆ ನೀವೇ ಲಕ್ಷಾಧಿಪತಿ; ಲಕ್ಷ ಗಳಿಸೋದು ಹೇಗೆ ಗೊತ್ತಾ?

ಇನ್ನು ನೀವು ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದಾದರೆ, ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಬಯಸುವ ಬ್ಯಾಂಕ್ ನ ವೆಬ್ಸೈಟ್ಗೆ ಹೋಗಿ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು, ಅದೇ ಬ್ಯಾಂಕ್ ಬ್ರಾಂಚ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು. ಅಥವಾ ನೇರವಾಗಿ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.

All the farmers of the country will get a Kisan credit card Easy loan facility

Related Stories