ಉಚಿತ ಮನೆ ಪಡೆಯಲು ಅರ್ಜಿ ಆಹ್ವಾನ; ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಿರಿ
ನಿಮಗೆ ಬಾಡಿಗೆ ಮನೆಯಲ್ಲಿ ಇದ್ದು ಇದ್ದು ಸಾಕಾಗಿದೆಯಾ? ನಿಮ್ಮದೇ ಆಗಿರುವ ಸ್ವಂತ ಮನೆ (own house ) ಇರಬೇಕು ಅಂತ ಅನ್ನಿಸ್ತಾ ಇದೆಯಾ? ಸಣ್ಣ ಮನೆ ಆದರೆ ಸಾಕು ನಾವೇ ಒಂದು ಮನೆಯನ್ನು ಕಟ್ಟಿಕೊಂಡರೆ ಚೆನ್ನಾಗಿರುತ್ತೆ ಎನ್ನುವ ಭಾವನೆ ಇದೆಯಾ? ಹಾಗಾದ್ರೆ ಚಿಂತೆ ಬೇಡ. ಪ್ರಧಾನ ಮಂತ್ರಿ ಆವಾಸ್ ಯೋಜನೆ (pradhanmantri aawas Yojana) 2024 ನಿಮಗೆ ಈ ಸೌಲಭ್ಯವನ್ನು ಒದಗಿಸಿ ಕೊಡಲಿದೆ.
ಪ್ರಧಾನ್ ಮಂತ್ರಿ ಆವಾಸ್ ಯೋಜನೆ 2024- ನೋಂದಣಿ ಆರಂಭ!
ಪ್ರಧಾನ ಮಂತ್ರಿ ಆವಾಸ್ ಯೋಜನೆ 25, 2015ರಲ್ಲಿ ಆರಂಭವಾಯಿತು. ಇಲ್ಲಿಯವರೆಗೆ ಈ ಯೋಜನೆಯ ಅಡಿಯಲ್ಲಿ ಕೋಟ್ಯಾಂತರ ಮನೆ ನಿರ್ಮಾಣ ಮಾಡಿಕೊಡಲಾಗಿದೆ. ನೀವು ನಿಮ್ಮ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಹೋಂ ಲೋನ್ (Home Loan) ತೆಗೆದುಕೊಂಡರೆ ಅದಕ್ಕೆ ಪ್ರಧಾನಮಂತ್ರಿ ಅವಾಸ ಯೋಜನೆ ಅಡಿಯಲ್ಲಿ ಸಬ್ಸಿಡಿಯನ್ನು ಪಡೆದುಕೊಳ್ಳಬಹುದು. ಸಬ್ಸಿಡಿ (subsidy) ಪಡೆದುಕೊಳ್ಳುವುದಕ್ಕೆ ಡಿಸೆಂಬರ್ 31 2024 ಕೊನೆಯ ದಿನಾಂಕವಾಗಿದ್ದು ಅರ್ಹರು ತಕ್ಷಣ ಅರ್ಜಿ ಸಲ್ಲಿಸಿ.

ಈ ಬ್ಯಾಂಕುಗಳಲ್ಲಿ ಸಾಲ ಮಾಡಿರುವವರಿಗೆ ಸಿಹಿ ಸುದ್ದಿ; ಸಾಲದ ಮೇಲಿನ ಬಡ್ಡಿ ಇಳಿಕೆ
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಗ್ರಾಮೀಣ ಭಾಗದ (rural area) ಜನರು ಮಾತ್ರವಲ್ಲದೆ ನಗರ ಪ್ರದೇಶದಲ್ಲಿ ವಾಸಿಸುವವರು ಕೂಡ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ (Loan) ಸೌಲಭ್ಯವನ್ನು ನೀಡಲಾಗುವುದು.
ಯೋಜನೆಯ ಅಡಿಯಲ್ಲಿ 200 ಮಿಲಿಯನ್ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿರುವ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕೋಟ್ಯಂತರ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ಯೋಜನೆಗೆ ಯಾರು ಅರ್ಹರು? (Who can apply)
*ಕನಿಷ್ಠ 15 ವರ್ಷ ವಯಸ್ಸಾಗಿರಬೇಕು
*ಭಾರತದ ನಿವಾಸಿ ಆಗಿರಬೇಕು
*ಸರ್ಕಾರದ ಯಾವುದೇ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವವರಾಗಿರಬಾರದು
*ಕಡಿಮೆ ಆದಾಯದ ಗುಂಪು (LIG), ಆರ್ಥಿಕವಾಗಿ ದುರ್ಬಲರಾಗಿರುವವರು (EWS), ಮಧ್ಯಮ ಆದಾಯದ ಗುಂಪು (MIG) ಸೇರಿದವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು.
ಚಿನ್ನದ ಬೆಲೆ ಇಳಿಕೆ! ಚಿನ್ನಾಭರಣ ಪ್ರಿಯರಿಗೆ ಬಿಗ್ ರಿಲೀಫ್; ಇಲ್ಲಿದೆ ಡೀಟೇಲ್ಸ್
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಸಕ್ಷಮ ಪ್ರಾಧಿಕಾರದಿಂದ ನಿರಕ್ಷೇಪಣಾ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ಎಂದು ತೋರಿಸುವ ಅಫಿಡವಿಟ್
ಮತದಾರರ ಗುರುತಿನ ಚೀಟಿ
ವಿಳಾಸ ಪುರಾವೆ
ಬ್ಯಾಂಕ ಖಾತೆಯ ವಿವರ ( ಈ ಕೆ ವೈ ಸಿ ಕಡ್ಡಾಯ
ಅರ್ಜಿದಾರರ ಪಾಸ್ಪೋರ್ಟ್ ಅಳತೆಯ ಫೋಟೋ
ಅರ್ಜಿದಾರರ ಮೊಬೈಲ್ ಸಂಖ್ಯೆ.
ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡೋಕು ಮುನ್ನ ತಿಳಿದಿರಬೇಕಾದ ವಿಚಾರಗಳಿವು
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಇದು ಮುಖಪುಟದಲ್ಲಿ ನಾಗರಿಕರ ಮೌಲ್ಯಮಾಪನ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗ ನಿಮಗೆ ಆಯ್ಕೆ ಕಾಣಿಸುತ್ತದೆ ಅಲ್ಲಿ ನಾಲ್ಕು ವಿಧದ ಆಯ್ಕೆಗಳು ಇರುತ್ತವೆ. ಆಯ್ದುಕೊಳ್ಳಿ.
ಪಿ ಎಂ ಎ ವೈ 2024 ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಇನ್ ಸೀಟು ಸ್ಲಂ ಪುನರಾಭಿವೃದ್ಧಿ ಎನ್ನುವ ಆಯ್ಕೆ ಇರುತ್ತದೆ ಅದನ್ನು ಕ್ಲಿಕ್ ಮಾಡಿ.
ಹಳೆ ಮನೆ ರಿಪೇರಿಗೂ ಸಿಗುತ್ತೆ ಲೋನ್! ಟಾಪ್-ಅಪ್ ಹೋಮ್ ಲೋನ್ ಬಗ್ಗೆ ತಿಳಿಯಿರಿ
ಮುಂದಿನ ಹಂತದಲ್ಲಿ ನಿಮ್ಮ ಹೆಸರು ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಈಗ ಒಂದು ಅರ್ಜಿ ಫಾರ್ಮ್ ಕಾಣಿಸುತ್ತದೆ ಅದನ್ನು ಸಂಪೂರ್ಣವಾಗಿ ಸರಿಯಾಗಿ ಭರ್ತಿ ಮಾಡಿ. ಭರ್ತಿ ಮಾಡಿದ ನಂತರ ಕ್ಯಾಪ್ಚ ಕೋಡ್ ನಮೂದಿಸಬೇಕು. ನಂತರ ಸಲ್ಲಿಸು ಎಂದು ಕ್ಲಿಕ್ ಮಾಡಿ.
ಈಗ ಪಿ ಎಂ ಅವಾಸ್ ಯೋಜನೆ 2024ರಲ್ಲಿ ನೀವು ಕೂಡ ನೋಂದಣಿ ಆಗಿರುತ್ತೀರಿ. ನೀವು ಅರ್ಹರಾಗಿದ್ರೆ ನೀವು ಮಾಡುವ ಹೋಂ ಲೋನ್ ಗೆ ಸರ್ಕಾರದಿಂದ ಆವಾಸ್ ಯೋಜನೆ ಅಡಿಯಲ್ಲಿ ಸಬ್ಸಿಡಿ ನೀಡಲಾಗುತ್ತದೆ. ಇರುತ್ತೆ ನೀವು ಈ 2024ರ ಹೊಸ ವರ್ಷಕ್ಕೆ ಹೊಸ ಮನೆ ನಿರ್ಮಾಣ ಮಾಡಿಕೊಳ್ಳಲು ತಕ್ಷಣ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.
apply for free housing Scheme, Take advantage of the government scheme