ಕೇವಲ ₹10 ಸಾವಿರಕ್ಕೆ ಎಲೆಕ್ಟ್ರಿಕ್ ಸ್ಕೂಟರ್, ಬ್ಬರೊಬ್ಬರಿ 160 ಕಿ.ಮೀ ಮೈಲೇಜ್ ಕೊಡುತ್ತೆ - Electric Scooter

ಸ್ಟೈಲಿಷ್ ಡಿಸೈನ್, ಉನ್ನತ ಮೈಲೇಜ್ ಮತ್ತು ಹೆಚ್ಚು ಸ್ಟೋರೇಜ್‌ ಹೊಂದಿರುವ ಅಥರ್ ರಿಜ್ಟಾ ಈಗ ಕೇವಲ ₹10 ಸಾವಿರ ಡೌನ್ ಪೇಮೆಂಟ್‌ನಲ್ಲಿ ಲಭ್ಯ. ಫೀಚರ್ಸ್ ಮತ್ತು ಫೈನಾನ್ಸ್ ಆಯ್ಕೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

  • ಅಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ – 160 ಕಿ.ಮೀ ರೇಂಜ್
  • ₹10 ಸಾವಿರ ಡೌನ್ ಪೇಮೆಂಟ್‌ನಲ್ಲಿ ಫೈನಾನ್ಸ್ ಸೌಲಭ್ಯ
  • 56 ಲೀಟರ್ ಸ್ಟೋರೇಜ್, 7 ಇಂಚಿನ TFT ಡಿಸ್‌ಪ್ಲೇ

Electric Scooter : ಬಜಾರಿನಲ್ಲಿ ಸ್ಟೈಲಿಷ್ ಹಾಗೂ ಹೈ-ಪರ್ಫಾರ್ಮೆನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಹುಡುಕುತ್ತಿರುವವರಿಗೆ ಅಥರ್ ರಿಜ್ಟಾ ಆಕರ್ಷಕ ಆಯ್ಕೆ. ದೊಡ್ಡ ಸೀಟು, ವಿಶಾಲ ಸ್ಟೋರೇಜ್, ಹಾಗೂ ಸುಧಾರಿತ ತಂತ್ರಜ್ಞಾನಗಳಿಂದ ಇದು ಈಗ ಗ್ರಾಹಕರ ಗಮನ ಸೆಳೆಯುತ್ತಿದೆ.

ಈ ಸ್ಕೂಟರ್‌ ಬೆಲೆ (Ather Rizta Electric Scooter) ಎಕ್ಸ್‌ಶೋ ರೂಮ್‌ನಲ್ಲಿ ₹1.15 ಲಕ್ಷದಿಂದ ಪ್ರಾರಂಭವಾಗುತ್ತದೆ. ದೆಹಲಿಯಲ್ಲಿ ಇದರ ಆನ್-ರೋಡ್ ಬೆಲೆ ಸುಮಾರು ₹1.22 ಲಕ್ಷ. ಕೇವಲ ₹10,000 ಡೌನ್ ಪೇಮೆಂಟ್ ನೀಡಿ ಉಳಿದ ₹1.12 ಲಕ್ಷ ಬ್ಯಾಂಕ್‌ ಲೋನ್ (Bank Loan) ಮೂಲಕ ಪಾವತಿಸಬಹುದು.

9% ಬಡ್ಡಿ ದರದಲ್ಲಿ 3 ವರ್ಷದ ಅವಧಿಗೆ ಲೋನ್ ಪಡೆದರೆ ತಿಂಗಳಿಗೆ ಸುಮಾರು ₹4,000 EMI ಆಗುತ್ತದೆ. ಈ ಅವಧಿಯಲ್ಲಿ ಒಟ್ಟು ₹30,000 ಬಡ್ಡಿ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ಹೊಸ ಲುಕ್‌ನಲ್ಲಿ ಹೀರೋ ಗ್ಲಾಮರ್ 125 ಬೈಕ್ ಎಂಟ್ರಿ! ಖರೀದಿಗೆ ಮುಗಿಬಿದ್ದ ಜನ

ಅಥರ್ ರಿಜ್ಟಾದಲ್ಲಿ ಎರಡು ಬ್ಯಾಟರಿ ಆಯ್ಕೆಗಳು ಇವೆ – 2.9 kWh ಬ್ಯಾಟರಿ (ರೇಂಜ್ 123 ಕಿ.ಮೀ) ಮತ್ತು 3.7 kWh ಬ್ಯಾಟರಿ (ರೇಂಜ್ 160 ಕಿ.ಮೀ). ಗರಿಷ್ಠ ವೇಗ 80 ಕಿ.ಮೀ/ಗಂ ಆಗಿದ್ದು, 0 ರಿಂದ 40 ಕಿ.ಮೀ ವೇಗವನ್ನು ಕೇವಲ 4.7 ಸೆಕೆಂಡುಗಳಲ್ಲಿ ತಲುಪುತ್ತದೆ.

15 ಡಿಗ್ರಿ ಗ್ರೇಡಬಿಲಿಟಿ ಇರುವುದರಿಂದ ಇಳಿಜಾರಿನ ಪ್ರದೇಶಗಳಲ್ಲಿ ಸುಲಭವಾಗಿ ಸವಾರಿ ಮಾಡಬಹುದು. 400 ಮಿಮೀ ಆಳದ ನೀರಿನಲ್ಲೂ ತೊಂದರೆ ಇಲ್ಲದೆ ಓಡಿಸಬಹುದಾಗಿದೆ.

ಇದನ್ನೂ ಓದಿ: ಖುಷಿ ಸುದ್ದಿ, ಚಿನ್ನದ ಒಡವೆ ಖರೀದಿ ಪ್ಲಾನ್ ಮಾಡಿ, ಚಿನ್ನ ಬೆಳ್ಳಿ ಬೆಲೆ ಭಾರೀ ಕುಸಿತ!

ಫೀಚರ್ಸ್‌ ಕಡೆ ನೋಡಿದರೆ, ವೇರಿಯಂಟ್‌ ಪ್ರಕಾರ 7 ಇಂಚಿನ ಬಣ್ಣದ TFT ಡಿಸ್‌ಪ್ಲೇ, ಬ್ಲೂಟೂತ್, ನಾವಿಗೇಷನ್, ಸ್ಮಾರ್ಟ್ ಕನೆಕ್ಟಿವಿಟಿ ಸೌಲಭ್ಯ ದೊರೆಯುತ್ತದೆ. ವಾಟ್ಸಪ್ ನೋಟಿಫಿಕೇಶನ್, ಲೈವ್ ಲೊಕೇಶನ್ ಟ್ರ್ಯಾಕಿಂಗ್, ಮಲ್ಟಿ-ಡಿವೈಸ್ ಚಾರ್ಜರ್, 56 ಲೀಟರ್ ಸ್ಟೋರೇಜ್ (ಸೀಟಿನ ಕೆಳಗೆ 34 ಲೀಟರ್, ಮುಂಭಾಗ 22 ಲೀಟರ್) ಹೊಂದಿದೆ. ಭದ್ರತೆಗೆ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್ (CBS) ನೀಡಲಾಗಿದೆ.

ಆದರೆ ಬೆಲೆ, EMI, Loan ಶರತ್ತುಗಳು ನಗರ, ಬ್ಯಾಂಕ್ ಪಾಲಿಸಿ ಹಾಗೂ ವೇರಿಯಂಟ್‌ ಪ್ರಕಾರ ಬದಲಾಗಬಹುದು. ಆದ್ದರಿಂದ ಖರೀದಿಸುವ ಮೊದಲು ಸಮೀಪದ ಡೀಲರ್ ಹಾಗೂ ಬ್ಯಾಂಕ್‌ನಿಂದ ವಿವರಗಳನ್ನು ಪರಿಶೀಲಿಸುವುದು ಸೂಕ್ತ.

Ather Rizta Electric Scooter, 160 km Range, 10K Down Payment

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories